Munawar Faruqui ಹಿಂದೂ ದೇವತೆಗಳು ಮತ್ತು ಅಮಿತ್ ಶಾ ನಿಂದನೆ ಆರೋಪ ಹೊತ್ತ ಮುನಾವರ್ ಫಾರೂಖಿಗೆ ಮಧ್ಯಂತರ ಜಾಮೀನು
Munawar Faruqui: ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಫರೂಖಿಗೆ ಇಂದು ಸರ್ವೋಚ್ಛ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ. ಜೊತೆಗೆ, ಮಧ್ಯಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ದೆಹಲಿ: ಹಿಂದೂ ದೇವತೆಗಳನ್ನು ಅವಹೇಳನ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರೂಖಿಗೆ ಇಂದು ಸರ್ವೋಚ್ಛ ನ್ಯಾಯಾಲಯ (Supreme Court) ಮಧ್ಯಂತರ ಜಾಮೀನು (Interim Bail) ನೀಡಿದೆ. ಜೊತೆಗೆ, ಮಧ್ಯಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಉತ್ತರ ಪ್ರದೇಶ ಸರ್ಕಾರ ಮುನಾವರ್ ವಿರುದ್ಧ ಹೊರಡಿಸಿದ್ದ ವಾರಂಟ್ಗೆ ತಡೆಯೊಡ್ಡಿದೆ. ಈ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿಯಲ್ಲಿ ಜನವರಿ 2, 2021ರಂದು ಇಂದೋರ್ನಲ್ಲಿ ಬಂಧನಕ್ಕೊಳಗಾಗಿದ್ದ ಮುನಾವರ್ ಫಾರೂಖಿಗೆ ಕೊಂಚ ನೆಮ್ಮದಿ ಸಿಕ್ಕಿದೆ.
ಇಂದೋರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿಂದೂ ದೇವತೆಗಳನ್ನು ಹಾಗೂ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ನಿಂದಿಸಿದ ಆರೋಪದಡಿಯಲ್ಲಿ ಫಾರೂಖಿ ಸೇರಿದಂತೆ ಐವರನ್ನು ಬಂಧಿಸಲಾಗಿತ್ತು. ತದನಂತರ ಮಧ್ಯಪ್ರದೇಶದ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿತ್ತು. ಆದರೆ, ಇದೀಗ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.
ಹಿಂದೂ ದೇವರು ಮತ್ತು ಅಮಿತ್ ಶಾ ಬಗ್ಗೆ ಹಾಸ್ಯ ಮಾಡಿದ ಸ್ಟ್ಯಾಂಡ್ಅಪ್ ಕಲಾವಿದ ಮುನಾವರ್ ಫರೂಖಿ ಬಂಧನ
Published On - 1:52 pm, Fri, 5 February 21