ಮುಂಬೈನ ಮಂಖೂರ್ದ್ ಪ್ರದೇಶದ ಗುಜರಿಯಲ್ಲಿ ಬೆಂಕಿ ಆಕಸ್ಮಿಕ
ಪ್ರಾಥಮಿಕ ವರದಿಗಳ ಪ್ರಕಾರ ಶುಕ್ರವಾರ ಮಧ್ಯಾಹ್ನ 2.30ರ ಹೊತ್ತಿಗೆ ಇಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಸಾವುನೋವುಗಳು ವರದಿ ಆಗಿಲ್ಲ. ಸುತ್ತಲೂ ದಟ್ಟವಾದ ಹೊಗೆ ಆವರಿಸಿದೆ.
ಮುಂಬೈ: ಮಂಖೂರ್ದ್ ಪ್ರದೇಶದ ಮಾಂಡಲ್ ಎಂಬಲ್ಲಿ ಹಳೇ ವಸ್ತುಗಳನ್ನು ಶೇಖರಿಸಿಟ್ಟಿದ್ದ ಗುಜರಿಯಲ್ಲಿ ಶುಕ್ರವಾರ ಮಧ್ಯಾಹ್ನ ಬೆಂಕಿ ಅವಘಡ ಸಂಭವಿಸಿದೆ.
ಪ್ರಾಥಮಿಕ ವರದಿಗಳ ಪ್ರಕಾರ ಶುಕ್ರವಾರ ಮಧ್ಯಾಹ್ನ 2.30ರ ಹೊತ್ತಿಗೆ ಇಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಸಾವು ನೋವುಗಳು ವರದಿ ಆಗಿಲ್ಲ. ಸುತ್ತಲೂ ದಟ್ಟವಾದ ಹೊಗೆ ಆವರಿಸಿದ್ದು ಬೆಂಕಿ ನಂದಿಸಲು ಅಗ್ನಿಶಾಮಕ ದಳದ ವಾಹನಗಳು ದೌಡಾಯಿಸಿವೆ.
VIDEO | Mumbai Fire | मुंबईत मानखुर्दमध्ये केमिकल कंपनीला भीषण आग, परिसरात धुराचे मोठे लोट#mumbaiFire #mankhurd #mankhurdfire pic.twitter.com/M2j6OBJVWy
— TV9 Marathi (@TV9Marathi) February 5, 2021
ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗಿದೆ.
ಮುಂಬೈನಲ್ಲಿ ಹೊತ್ತಿ ಉರಿದ ಪ್ರಭಾಸ್ ನಟನೆಯ ಆದಿ ಪುರುಷ್ ಸಿನಿಮಾ ಸೆಟ್!
Published On - 4:14 pm, Fri, 5 February 21