ಬೆಂಗಳೂರು ಏರ್ ಶೋ ಯಶಸ್ವಿ, ರಕ್ಷಣಾ ಸಾಮರ್ಥ್ಯ ವೃದ್ಧಿ: ರಾಜನಾಥ್ ಸಿಂಗ್
ಏರ್ ಶೋದಲ್ಲಿ ₹ 203 ಕೋಟಿ ಮೊತ್ತದ ವಹಿವಾಟು ಆಗಿದೆ. ಏರ್ ಶೋಗಳಿಂದ ಭಾರತೀಯ ರಕ್ಷಣಾ ಸಾಮರ್ಥ್ಯ ಹೆಚ್ಚಳವಾಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟರು.
ಬೆಂಗಳೂರು: ಭಾರತದ ರಕ್ಷಣಾ ಸಾಮರ್ಥ್ಯ ವೃದ್ಧಿಗೆ ಏರ್ ಶೋ ಸಹಕಾರಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, 2021ರ ಎರ್ ಶೋ ಯಶಸ್ವಿಯಾಗಿದೆ ಎಂದರು.
‘ಎಲ್ಲರಿಗೂ ನಮಸ್ಕಾರ’ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ರಾಜನಾಥ್ ಸಿಂಗ್, 2020ರಲ್ಲಿ ಇಡೀ ವಿಶ್ವವೇ ಕೊರೊನಾದಿಂದ ಬಳಲುತ್ತಿತ್ತು. ಆರ್ಥಿಕ ಸಂಕಷ್ಟ ಎದುರಿಸುವ ಸ್ಥಿತಿಯೂ ನಿರ್ಮಾಣವಾಗಿತ್ತು. ಆದರೆ ಇದೀಗ ಚೇತರಿಕೆ ಕಾಣುತ್ತಿದೆ. ಏರ್ ಶೋದಲ್ಲಿ ₹ 203 ಕೋಟಿ ಮೊತ್ತದ ವಹಿವಾಟು ಆಗಿದೆ. ಏರ್ ಶೋಗಳಿಂದ ಭಾರತೀಯ ರಕ್ಷಣಾ ಸಾಮರ್ಥ್ಯ ಹೆಚ್ಚಳವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
5 ಲಕ್ಷಕ್ಕೂ ಹೆಚ್ಚು ಜನ ಏರ್ ಶೋ ವೀಕ್ಷಣೆ ಮಾಡಿದ್ದಾರೆ. 120 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ಮಾಹಿತಿ ನೀಡಿದರು. ರಕ್ಷಣಾ ಇಲಾಖೆ ಮತ್ತು ಮೂರೂ ಸಶಸ್ತ್ರಪಡೆಗಳ ಹಿರಿಯ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ, ಮಾರ್ಚ್ 9ರ ಬಳಿಕ ಹೊಸ ದಿನಾಂಕ ನಿಗದಿ: ಅರವಿಂದ ಲಿಂಬಾವಳಿ
Published On - 4:50 pm, Fri, 5 February 21