ಪಶ್ಚಿಮ ಬಂಗಾಳದಲ್ಲಿ ಗೆಲ್ಲಲು ಬಿಜೆಪಿ ರಥಯಾತ್ರೆ ತಂತ್ರ: ಕೋರ್ಟ್ನಿಂದಲೂ ಸಿಕ್ತು ಅನುಮತಿ
ಈ ರಥಯಾತ್ರೆಯಿಂದ ಕೋಮು ಸೌಹಾರ್ದತೆ ಹಾಳಾಗುತ್ತದೆ. ಹೀಗಾಗಿ ಇದಕ್ಕೆ ತಡೆ ನೀಡಬೇಕು ಎಂದು ಕೋಲ್ಕತ್ತಾ ಹೈಕೋರ್ಟ್ನಲ್ಲಿ ಕೋರಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಕೋಲ್ಕತ್ತಾ ಹೈಕೋರ್ಟ್ ಬಿಜೆಪಿ ರಥಯಾತ್ರೆಗೆ ಸಮ್ಮತಿಸಿದೆ
ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕು ಎನ್ನುವ ಹಟಕ್ಕೆ ಬಿಜೆಪಿ ಬಿದ್ದಿದೆ. ದೊಡ್ಡದೊಡ್ಡ ರೋಡ್ಶೋಗಳನ್ನು ಬಿಜೆಪಿ ನಡೆಸುತ್ತಿದೆ. ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ ಪಶ್ಚಿಮ ಬಂಗಾಳದ ಐದು ಕಡೆಗಳಲ್ಲಿ ರಥಯಾತ್ರೆ ಮಾಡಲು ಸಿದ್ಧತೆ ಮಾಡಿಕೊಂಡಿದೆ.
ಫೆಬ್ರವರಿ 6ರಂದು ಪಶ್ಚಿಮ ಬಂಗಾಳದ ನವದ್ವೀಪದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಚಾಲನೆ ನೀಡಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆಬ್ರವರಿ 11ರಂದು ಕೂಚ್ ಬೇಹರ್ನಲ್ಲಿ ಈ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ. ಉಳಿದ ಮೂರು ರಥಯಾತ್ರೆಗಳನ್ನು ಜಾರ್ಗ್ರಾಮ್, ಕಾಕ್ದ್ವೀಪ್ ಮತ್ತು ತಾರಪಿತ್ನಲ್ಲಿ ಪ್ರಾರಂಭಿಸಲಾಗುತ್ತಿದೆ. ಒಟ್ಟು 25 ದಿನ ರಥಯಾತ್ರೆ ನಡೆಯಲಿದ್ದು, 294 ಕ್ಷೇತ್ರಗಳನ್ನು ರಥಯಾತ್ರೆ ಕ್ರಮಿಸಲಿದೆ.
ಇನ್ನು,ಈ ರಥಯಾತ್ರೆಗೆ ಅಪಸ್ವರ ಕೇಳಿ ಬಂದಿತ್ತು. ಈ ರಥಯಾತ್ರೆಯಿಂದ ಕೋಮು ಸೌಹಾರ್ದತೆ ಹಾಳಾಗುತ್ತದೆ. ಹೀಗಾಗಿ ಇದಕ್ಕೆ ತಡೆ ನೀಡಬೇಕು ಎಂದು ಕೋಲ್ಕತ್ತಾ ಹೈಕೋರ್ಟ್ನಲ್ಲಿ ಕೋರಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಕೋಲ್ಕತ್ತಾ ಹೈಕೋರ್ಟ್ ಬಿಜೆಪಿ ರಥಯಾತ್ರೆಗೆ ಸಮ್ಮತಿಸಿದೆ.
ವಿರೋಧ ಪಕ್ಷದವರಿಗೆ ಜನರ ಬಳಿ ಹೋಗಲು ಪ್ರಜಾಪ್ರಭುತ್ವದಲ್ಲಿ ಅವಕಾಶ ಇದೆ. ಆದರೆ, ಮಮತಾ ಬ್ಯಾನರ್ಜಿ ಸರ್ಕಾರ ನಮ್ಮ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಕೈಲಾಶ್ ವಿಜಯವಾರ್ಗೀಯ ಹೇಳಿದ್ದಾರೆ.
Mamata Banerjee ಚುನಾವಣಾ ಟೆನ್ಷನ್ ಮರೆತು ನೃತ್ಯ ಮಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ