Startup Manthan-2021 ಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್ ಮಂಥನ-2021ಕ್ಕೆ ಚಾಲನೆ
Startup Manthan-2021 ಏರೋ ಇಂಡಿಯಾ 2021 ಕಾರ್ಯಕ್ರಮದಲ್ಲೇ ಡಿಫೆನ್ಸ್ ಸ್ಟಾರ್ಟಪ್ಸ್ ಮಂಥನ್-2021 Startup Manthan-2021ಕ್ಕೆ ರಕ್ಷಣಾ ಸಚಿವ ರಾಜನಾಥ್ಸಿಂಗ್ ಚಾಲನೆ ನೀಡಿದ್ದಾರೆ.
ಬೆಂಗಳೂರು: ಏರೋ ಇಂಡಿಯಾ 2021 ಕಾರ್ಯಕ್ರಮದಲ್ಲೇ ಡಿಫೆನ್ಸ್ ಸ್ಟಾರ್ಟಪ್ಸ್ ಮಂಥನ್-2021 Startup Manthan-2021ಕ್ಕೆ ರಕ್ಷಣಾ ಸಚಿವ ರಾಜನಾಥ್ಸಿಂಗ್ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಸಿಡಿಎಸ್ ಬಿಪಿನ್ ರಾವತ್ ಸೇರಿದಂತೆ ರಕ್ಷಣಾ ಇಲಾಖೆ ಪ್ರಮುಖರು ಭಾಗಿಯಾಗಿದ್ದಾರೆ. ಈ ವೇಳೆ ಮಾತನಾಡಿದ ಸಿಡಿಎಸ್ ಬಿಪಿನ್ ರಾವತ್ “ಸ್ಟಾರ್ಟ್ ಅಪ್ಗಳು ನಮ್ಮ ಆರ್ಥಿಕತೆ ಮುನ್ನಡೆಸುತ್ತವೆ. 41,000 ಸ್ಟಾರ್ಟ್ ಅಪ್ಗಳಿಂದ 4.71 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತೆ. ಸ್ಟಾರ್ಟ್ ಅಪ್ಗಳನ್ನು ಉತ್ತೇಜಿಸಲು ಐ ಡೆಕ್ಸ್ ಸ್ಥಾಪನೆ ಮಾಡಲಾಗುತ್ತೆ. 1200ಕ್ಕೂ ಹೆಚ್ಚು ಸ್ಟಾರ್ಟ್ ಅಪ್ಗಳು ಮಂಥನದಲ್ಲಿ ಭಾಗಿಯಾಗಿ 60ಕ್ಕೂ ಹೆಚ್ಚು ಸ್ಟಾರ್ಟ್ ಅಪ್ಗಳಿಗೆ ಹೂಡಿಕೆಯಾಗಿದೆ ಎಂದು ಹೇಳಿದ್ರು.
ಇನ್ನು ಮಾತು ಮುಂದುವರೆಸುತ್ತ.. ಪ್ರತಿ ಸ್ಟಾರ್ಟ್ ಅಪ್ಗೆ ಇಲಾಖೆಯಿಂದ 1.5 ಕೋಟಿ ರೂ. ಹೂಡಿಕೆ ನೀಡಲಾಗುತ್ತೆ. ಏರೋ ಸ್ಪೇಸ್ ವಲಯದಲ್ಲಿ 300ಕ್ಕೂ ಹೆಚ್ಚು ಸ್ಟಾರ್ಟ್ ಅಪ್, 10ಕ್ಕೂ ಹೆಚ್ಚು ಸಂಸ್ಥೆಗಳು 10 ಕೋಟಿ ಬಂಡವಾಳ ಹೂಡಿವೆ. 45 MSMEಗಳು ವಿದೇಶಿ ಸಂಸ್ಥೆಗಳೊಂದಿಗೆ 203 ಕೋಟಿ ರೂಪಾಯಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಬಿಪಿನ್ ರಾವತ್ ತಿಳಿಸಿದ್ದಾರೆ.
34 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಸ್ಟಾರ್ಟ್ ಅಪ್ಗಳ ಆವಿಷ್ಕಾರಗಳು ಹೆಮ್ಮೆ ತರುತ್ತದೆ. ಇಂದು ಐಟಿ ಸೇವೆಗಳಲ್ಲಿ ಮಾತ್ರವಲ್ಲದೆ ಎಲ್ಲಾ ಕ್ಷೇತ್ರದಲ್ಲಿ ಜಗತ್ತನ್ನು ಸಮಾನ ಮಾಡಿದೆ. ಐ ಡೆಕ್ಸ್ ಸಂಸ್ಥೆ ಎಲ್ಲ ಸ್ಟಾರ್ಟ್ ಅಪ್ಗಳನ್ನು ಉತ್ತೇಜಿಸಿ ಜಗತ್ತಿನ ಗಮನ ಸೆಳೆದಿದೆ. ಪ್ರಸ್ತುತವಾಗಿ 1,200 ಸ್ಟಾರ್ಟ್ ಅಪ್ಗಳು ರಕ್ಷಣಾ ಇಲಾಖೆಗೆ ಕೆಲಸ ಮಾಡುತ್ತಿದೆ. ಎಲ್ಲರಿಗೂ 2020 ವರ್ಷ ಸವಾಲುಗಳನ್ನು ಎದುರಿಸುತ್ತಿದ್ದರೆ ಸ್ಟಾರ್ಟ್ ಅಪ್ ಯುವಕರು ಆವಿಷ್ಕಾರಕ್ಕೆ ಒತ್ತು ನೀಡಿದರು. 34 ಬಿಲಿಯನ್ ಡಾಲರ್ ಡೀಲ್ಗಳನ್ನ 2020 ರಲ್ಲಿ ಸ್ಟಾರ್ಟ್ ಅಪ್ಗಳ ಜೊತೆ ರಕ್ಷಣಾ ಇಲಾಖೆ ಒಪ್ಪಂದಗಳಿಗೆ ಸಹಿಹಾಕಿದೆ. ಆತ್ಮ ನಿರ್ಭರ ಭಾರತ ಯೋಜನೆ ಅಡಿಯಲ್ಲಿ ಐ ಡೆಕ್ಸ್ನಿಂದ ಒಪ್ಪಿಗೆ ಪಡೆದ ಎಲ್ಲಾ ಉಪಕರಣಗಳನ್ನ ರಕ್ಷಣಾ ಇಲಾಖೆ ಖರೀದಿಸಬಹುದು ಎಂದು ಬೆಂಗಳೂರಿನಲ್ಲಿ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಹೇಳಿದ್ರು.
‘ಚೀನೀ ಆ್ಯಪ್ಗಳಿಗೆ ಕೊಕ್.. ಶೀಘ್ರವೇ ಬರಲಿವೆ ದೇಶೀಯ Startup App ಗಳು!’