ಆನ್​ಲೈನ್​ನಲ್ಲಿ ರಮ್ಮಿ ಆಡಿದರೆ ಬೀಳತ್ತೆ ಭಾರೀ ದಂಡ, ಜೈಲು ಶಿಕ್ಷೆ!

ಆನ್​ಲೈನ್​ನಲ್ಲಿ ರಮ್ಮಿ ಆಡಿದರೆ ಬೀಳತ್ತೆ ಭಾರೀ ದಂಡ, ಜೈಲು ಶಿಕ್ಷೆ!
ಸಾಂದರ್ಭಿಕ ಚಿತ್ರ

ತಮಿಳುನಾಡಿನಲ್ಲಿ ಯಾರೂ ಕಂಪ್ಯೂಟರ್​ ಅಥವಾ ಮೊಬೈಲ್​ ಬಳಕೆ ಮಾಡಿಕೊಂಡು ರಮ್ಮಿಯಂಥ ಆಟ ಆಡಬಾರದು. ನಿಯಮ ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ

Rajesh Duggumane

| Edited By: Ghanashyam D M | ಡಿ.ಎಂ.ಘನಶ್ಯಾಮ

Feb 04, 2021 | 8:28 PM

ಚೆನ್ನೈ: ರಮ್ಮಿ ಹಾಗೂ ಪೋಕರ್​ನಂಥ ಆನ್​ಲೈನ್​ ಜೂಜಾಡಿದರೆ ಜೈಲು ಶಿಕ್ಷೆ ವಿಧಿಸುವ ಕಾನೂನನ್ನು ತಮಿಳುನಾಡು ರೂಪಿಸಿದೆ. ಹೊಸ ಕಾಯ್ದೆ ಅಡಿಯಲ್ಲಿ ಆನ್​ಲೈನ್ ಜೂಜುಗಳನ್ನು ಆಡಿದರೆ ಎರಡು ವರ್ಷ ಜೈಲು, 10 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ತಮಿಳುನಾಡಿನಲ್ಲಿ ಆನ್​ಲೈನ್​ ಜೂಜು ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ವರದಿಯಾಗಿತ್ತು. ಹೀಗಾಗಿ, ಈ ಕುರಿತು ತಿದ್ದುಪಡಿ ಕಾಯ್ದೆಯನ್ನು ತಮಿಳುನಾಡು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಇದರ ಅನ್ವಯ ತಮಿಳುನಾಡಿನಲ್ಲಿ ಯಾರೂ ಕಂಪ್ಯೂಟರ್​ ಅಥವಾ ಮೊಬೈಲ್​ ಬಳಕೆ ಮಾಡಿಕೊಂಡು ರಮ್ಮಿಯಂಥ ಆಟ ಆಡಬಾರದು. ನಿಯಮ ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ.

ಇತ್ತೀಚೆಗೆ ಕೇರಳದಲ್ಲಿ ಇದೇ ಮಾದರಿಯ ಪ್ರಕರಣವೊಂದು ಹೈಕೋರ್ಟ್​ನಲ್ಲಿ ವಿಚಾರಣೆಗೆ ಬಂದಿತ್ತು. ತಿರುವನಂತಪುರದ ಕುಟ್ಟಿಚಾಲ್​ನಲ್ಲಿ 27 ವರ್ಷದ ವಿನೀತ್​ ಎಂಬುವವರು ಆನ್​ಲೈನ್​ ರಮ್ಮಿಯಲ್ಲಿ ₹ 21 ಲಕ್ಷ ಕಳೆದುಕೊಂಡು, ಆತ್ಮಹತ್ಯೆ ಮಾಡಿಕೊಂಡಿದ್ದರು.

ಅರ್ಜಿದಾರರು ಈ ಪ್ರಕರಣವನ್ನು ಉಲ್ಲೇಖಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆನ್​ಲೈನ್​ ರಮ್ಮಿಯ ವ್ಯಸನಿಯಾಗಲು ಬ್ರ್ಯಾಂಡ್​ ಅಂಬಾಸಿಡರ್​ಗಳು ಕಾರಣ ಎಂದು ಅರ್ಜಿದಾರರು ಹೇಳಿದ್ದರು. ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ನಟರಾದ ತಮನ್ನಾ ಭಾಟಿಯಾ ಮತ್ತು ಅಜು ವರ್ಗೀಸ್ ಅವರಿಗೆ ನೋಟಿಸ್​ ನೀಡಿದೆ. ಕೊಹ್ಲಿ, ತಮನ್ನಾ ಮತ್ತು ವರ್ಗೀಸ್ ಆನ್‌ಲೈನ್ ರಮ್ಮಿಯ ಬ್ರ್ಯಾಂಡ್ ಅಂಬಾಸಿಡರ್​ಗಳಾಗಿದ್ದಾರೆ.

ಇಂಗ್ಲೆಂಡ್​ ಸರಣಿಗೂ ಮುನ್ನವೇ ವಿರಾಟ್​ ಕೊಹ್ಲಿಗೆ ನೋಟಿಸ್​: ಸಂಕಷ್ಟದಲ್ಲಿ ಟೀಂ ಇಂಡಿಯಾ ನಾಯಕ

Follow us on

Related Stories

Most Read Stories

Click on your DTH Provider to Add TV9 Kannada