ತೀರಾ ಸಂಕಷ್ಟದಲ್ಲಿದ್ದೀರಾ? ಮುಕ್ಕಾಲು ಪಾಲು PF ಮೊತ್ತ ಪಡೆಯಿರಿ! ಹೇಗೆ..

ಬೆಂಗಳೂರು: ಹಣವಿಲ್ಲದೆ ನೀವು ತೀರಾ ಸಂಕಷ್ಟದಲ್ಲಿದ್ದೀರಾ? ಇಂತಹ ಸಮಯದಲ್ಲಿ ನಿಮಗೆ ಹಣದ ಅವಶ್ಯಕತೆ ತುಂಬಾ ಇದೆಯಾ? ಸಂಕಷ್ಟದ ಸಂದರ್ಭದಲ್ಲಿ ನಿಮ್ಮ PF ಹಣವನ್ನು ಹೇಗೆ ಪಡೆಯಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಾದ್ರೆ ಚಿಂತೆ ಬಿಡಿ ಈಗ ನೀವು ಶೇ.75ರಷ್ಟು PF ಹಣವನ್ನು ಪಡೆಯಬಹುದು. ಉದಾಹರಣೆಗೆ ನಿಮ್ಮ ಪಿಎಫ್ ಹಣ 1 ಲಕ್ಷ ಇದ್ರೆ, ಅದರಲ್ಲಿ ನೀವು 75 ಸಾವಿರ ರೂಪಾಯಿಯನ್ನು ಪಡೆಯಬಹುದಾಗಿದೆ. ಇದು ಕೊರೊನಾ ಕ್ರಿಮಿ ತಂದಿಟ್ಟಿರುವ ಸಂಕಷ್ಟ ಕಾಲದ ಆರ್ಥಿಕ ನೆರವಾಗಿದೆ. ಗಮನಾರ್ಹವೆಂದರೆ, ಚಂದಾದಾರರು ಏಪ್ರಿಲ್ ತಿಂಗಳ […]

ತೀರಾ ಸಂಕಷ್ಟದಲ್ಲಿದ್ದೀರಾ? ಮುಕ್ಕಾಲು ಪಾಲು PF ಮೊತ್ತ ಪಡೆಯಿರಿ! ಹೇಗೆ..
ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್​ಒ)
Follow us
ಸಾಧು ಶ್ರೀನಾಥ್​
|

Updated on:May 11, 2020 | 6:49 AM

ಬೆಂಗಳೂರು: ಹಣವಿಲ್ಲದೆ ನೀವು ತೀರಾ ಸಂಕಷ್ಟದಲ್ಲಿದ್ದೀರಾ? ಇಂತಹ ಸಮಯದಲ್ಲಿ ನಿಮಗೆ ಹಣದ ಅವಶ್ಯಕತೆ ತುಂಬಾ ಇದೆಯಾ? ಸಂಕಷ್ಟದ ಸಂದರ್ಭದಲ್ಲಿ ನಿಮ್ಮ PF ಹಣವನ್ನು ಹೇಗೆ ಪಡೆಯಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಾದ್ರೆ ಚಿಂತೆ ಬಿಡಿ ಈಗ ನೀವು ಶೇ.75ರಷ್ಟು PF ಹಣವನ್ನು ಪಡೆಯಬಹುದು. ಉದಾಹರಣೆಗೆ ನಿಮ್ಮ ಪಿಎಫ್ ಹಣ 1 ಲಕ್ಷ ಇದ್ರೆ, ಅದರಲ್ಲಿ ನೀವು 75 ಸಾವಿರ ರೂಪಾಯಿಯನ್ನು ಪಡೆಯಬಹುದಾಗಿದೆ.

ಇದು ಕೊರೊನಾ ಕ್ರಿಮಿ ತಂದಿಟ್ಟಿರುವ ಸಂಕಷ್ಟ ಕಾಲದ ಆರ್ಥಿಕ ನೆರವಾಗಿದೆ. ಗಮನಾರ್ಹವೆಂದರೆ, ಚಂದಾದಾರರು ಏಪ್ರಿಲ್ ತಿಂಗಳ ವರೆಗೆ ಈ ಬಾಬತ್ತಿನಲ್ಲಿ Employees Provident Fund Organisation (EPFO) ಸಂಸ್ಥೆಯಿಂದ 3,200 ಕೋಟಿ ರೂಪಾಯಿ ವಾಪಸ್ ಪಡೆದಿದ್ದಾರೆ.

ಪಿಎಫ್ ಹಣವನ್ನು ಪಡೆಯಲು ನೀವು ಮಾಡಬೇಕಿರುವುದು ಇಷ್ಟೆ. ಮೊದಲು ನಿಮ್ಮ ಬ್ಯಾಂಕ್ ಖಾತೆ ವಿವರಗಳು ಸರಿಯಾಗಿದೆಯಾ ಇಲ್ಲವೇ ಎಂದು ತಿಳಿದುಕೊಳ್ಳಿ. ಒಂದು ವೇಳೆ ಬ್ಯಾಂಕ್ ಖಾತೆಯ ವಿವರಗಳು ತಪ್ಪಾಗಿದ್ದರೆ ಇಪಿಎಫ್‌ಒ ತಿರಸ್ಕರಿಸುತ್ತದೆ. ಹಾಗಾಗಿ ಮೊದಲು ನಿಮ್ಮ ಬ್ಯಾಂಕ್ ಡೀಟೇಲ್ಸ್ ಸರಿಯಾಗಿದೆಯಾ ಎಂದು ಪರಿಶೀಲಿಸಿಕೊಳ್ಳಿ.

EPFO ದಾಖಲೆಗಳಲ್ಲಿ ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ನವೀಕರಿಸಬಹುದಾಗಿದೆ. ಆದರೆ ಅದನ್ನ ನೀವು ಕೆಲಸ ಮಾಡುತ್ತಿರುವ ಕಚೇರಿಯೂ ಸಹ ಆನ್​ಲೈನ್​ನಲ್ಲಿ ಅನುಮೋದನೆ ನೀಡಬೇಕಿದೆ.

EPF ಖಾತೆಯಲ್ಲಿ ಬ್ಯಾಂಕ್ ಖಾತೆ ಮಾಹಿತಿಯನ್ನ ಹೀಗೆ ಅಪ್ಡೇಟ್ ಮಾಡಬೇಕು: 1. EPFO ವೆಬ್​ಸೈಟ್​ಗೆ ಭೇಟಿ ನೀಡಿ, ಯೂಸರ್ ನೇಮ್ ಮತ್ತು ಪಾಸ್​ವರ್ಡ್ ಎಂಟ್ರಿ ಮಾಡಿ ಲಾಗಿನ್ ಆಗಿ 2. ಮ್ಯಾನೇಜ್ ಟ್ಯಾಬ್ ಅನ್ನು ಕ್ಲಿಕ್ ಮಾಡಿ 3. ಕೆಳಗಿನ ಮೆನುವಿನಲ್ಲಿ KYC ಯನ್ನು ಆಯ್ಕೆ ಮಾಡಿ 4. ಬ್ಯಾಂಕ್ ಸೆಲೆಕ್ಟ್ ಮಾಡಿಕೊಂಡು ಹೆಸರು, ಬ್ಯಾಂಕ್ ಖಾತೆ ಸಂಖ್ಯೆ, IFSC ಕೋಡ್ ನಮೂದಿಸಿ ನಂತರ ಸೇವ್ ಮಾಡಿ 5. ನಿಮ್ಮ ಕಂಪನಿಯವರು ಒಮ್ಮೆ ಅಂಗೀಕರಿಸಿದ ನಂತರ, ನವೀಕರಣಗೊಂಡ ಬ್ಯಾಂಕ್ ಖಾತೆ ವಿವರಗಳು KYC ವಿಭಾಗದಲ್ಲಿ ಕಾಣಿಸಿಕೊಳ್ಳುತ್ತೆ

ಆನ್​ಲೈನ್​ನಲ್ಲಿ PFಗೆ ಅಪ್ಲೆ ಮಾಡುವ ಮುನ್ನ ಮತ್ತೊಮ್ಮೆ ನಿಮ್ಮ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ, IFSC ಕೋಡ್ ಸರಿಯಾಗಿದೆಯಾ ಎಂದು ಕಡ್ಡಾಯವಾಗಿ ಪರಿಶೀಲಿಸಿಕೊಳ್ಳಿ. ಬದಲಿಗೆ ನೀವು ಬ್ಯಾಂಕ್ ಪಾಸ್‌ಬುಕ್‌ನ ಮೊದಲ ಪುಟ ಅಥವಾ ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು ಸಹ ಅಪ್‌ಲೋಡ್ ಮಾಡಬಹುದಾಗಿದೆ. ಎಲ್ಲಾ ಆದ ನಂತರ ಒಂದು ತಿಂಗಳಲ್ಲಿ ನಿಮ್ಮ PF ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆ.

Published On - 7:44 pm, Sun, 10 May 20

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ