Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗವಿಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಸ್ಪರ್ಶಿಸದಕ್ಕೆ ಗಂಡಾಂತರ ಇದ್ಯಾ? ಅರ್ಚಕರು ಹೇಳಿದ್ದೇನು?

ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯ (Makar Sankranti) ದಿನವಾದ ಇಂದು ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯ (Gavi Gangadhareshwara Temple) ವಿಶೇಷ ವಿಸ್ಮಯಕ್ಕೆ ಮೋಡ ಅಡ್ಡಿ ಪಡಿಸಿದ್ದಾನೆ. ಈ ಬಾರಿ ಗವಿಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಸ್ಪರ್ಶವಾಗಿಲ್ಲ. ಇದರಿಂದ ಭಕ್ತರಿಗೆ ನಿರಾಸೆಯಾಗಿದೆ. ಇನ್ನು ಸೂರ್ಯರಶ್ಮಿ ಸ್ಪರ್ಶವಾಗದಿದ್ದಕ್ಕೆ ಮುಂದೆ ಗಂಡಾಂತರ ಕಾದಿದ್ಯಾ ಎನ್ನುವ ಆತಂಕ ಭಕ್ತರಲ್ಲಿ ಮನೆ ಮಾಡಿದೆ. ಇನ್ನು ಈ ಬಗ್ಗೆ ದೇವಸ್ಥಾನದ ಅರ್ಚಕರು ಪ್ರತಿಕ್ರಿಯಿಸಿದ್ದಾರೆ.

Follow us
ರಮೇಶ್ ಬಿ. ಜವಳಗೇರಾ
|

Updated on: Jan 14, 2025 | 7:00 PM

ಬೆಂಗಳೂರು, (ಜನವರಿ 14): ಮಕರ ಸಂಕ್ರಾಂತಿಯದಂದು ಇಂದು (ಜನವರಿ 14) ಸಂಜೆ 5:14 ರಿಂದ 5:17ರ ವರೆಗೆ ಬೆಂಗಳೂರಿನ ಗವಿಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಸ್ಪರ್ಶಿಸಬೇಕಿತ್ತು. ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ನೂರಾರು ಭಕ್ತರು ಆಗಮಿಸಿದ್ದರು. ಆದರೆ ಮೋಡ ಕವಿದ ವಾತಾವರಣದಿಂದ ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶ ಸಾಧ್ಯವಾಗಲಿಲ್ಲ. ಈ ರೀತಿ ಆಗುತ್ತಿರುವುದು ಇದು ಮೊದಲಲ್ಲ. ಈ ಹಿಂದೆಯೂ ಎರಡೂ ಬಾರಿ ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶಿಸಿರಲಿಲ್ಲ. ಇದೀಗ ಇತಿಹಾಸದಲ್ಲೇ 3ನೇ ಬಾರಿಗೆ ಗವಿ ಗಂಗಾಧರೇಶ್ವರನ ಮೇಲೆ ಸೂರ್ಯ ರಶ್ಮಿ ಸ್ಪರ್ಶ ಬಿದ್ದಿಲ್ಲ. ಹೀಗಾಗಿ ಸಹಜವಾಗಿ ಭಕ್ತರಿಗೆ ನಿರಾಸೆಯಾಗಿದ್ದು, ಮುಂದೆ ಏನಾದರೂ ಗಂಡಾಂತರ ಕಾದಿದ್ಯಾ ಎನ್ನುವ ಚರ್ಚೆಗಳು ಸಹ ನಡೆದಿವೆ.

ಯಾಕಂದ್ರೆ ಹಿಂದೆ ಅಷ್ಟಾಗಿ ಸೂರ್ಯರಶ್ಮಿ ಬೀಳದಿದ್ದಕ್ಕೆ ಕೋವಿಡ್​ ಬಂದು ಸಾವು ನೋವುಗಳು ಸಂಭವಿಸಿತ್ತು. ಇದರಿಂದ ಈ ಬಾರಿಯೂ ಸಹ ಸೂರ್ಯ ಸ್ಪರ್ಶವಾಗದಿದ್ದರಿಂದ ಮುಂದೆ ಗಂಡಾಂತರ ಕಾದಿದೆಯಾ ಎನ್ನುವ ಆತಂಕ ಭಕ್ತರಲ್ಲಿ ಮನೆ ಮಾಡಿದ್ದು, ಇದೀಗ ಇದಕ್ಕೆ ದೇವಸ್ಥಾನದ ಅರ್ಚಕರು ಪ್ರಕ್ರಿಯಿಸಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಗವಿಗಂಗಾಧರೇಶ್ವರನಿಗೆ ಸ್ಪರ್ಶಿಸದ ಸೂರ್ಯ ರಶ್ಮಿ, ಈ ಬಾರಿ ಕಾದಿದ್ಯಾ ಗಂಡಾಂತರ?

ಸೂರ್ಯರಶ್ಮಿ ಸ್ಪರ್ಶಿಸದಕ್ಕೆ ಅರ್ಚಕರು ಹೇಳಿದ್ದೇನು?

ಗವಿಗಂಗಾಧರೇಶ್ವರ ದೇಗುಲದ ಅರ್ಚಕ ಸೋಮಸುಂದರ್ ದೀಕ್ಷಿತ್ ಪ್ರತಿಕ್ರಿಯಿಸಿದ್ದು, ಗಂಗಾಂಧರೇಶ್ವರ ಸ್ವಾಮಿಗೆ ಸೂರ್ಯ ಪೂಜೆಯಾಗಿದೆ. ಆದ್ರೆ ಪ್ರಕೃತಿ ಕಾರಣದಿಂದ ನಮಗೆ ಗೋಚರವಾಗಿಲ್ಲ. ಆದ್ರೆ ಗಂಗಾಂಧರಸ್ವಾಮೀ ಎಲ್ಲರಿಗೂ ದರ್ಶನ ನೀಡುತ್ತಾನೆ. ಖಂಡಿತವಾಗಲೂ ಸೂರ್ಯ ರಶ್ಮಿ ಶಿವಲಿಂಗಕ್ಕೆ ಸ್ಪರ್ಶಿಸಿದೆ. ಎಷ್ಟು ನಿಮಿಷಗಳ ಕಾಲ ಸೂರ್ಯ ರಶ್ಮಿ ಸ್ಪರ್ಶಿಸಿದೆ ಎಂದು ಗೊತ್ತಾಗಿಲ್ಲ. ಮೋಡ ಕವಿದ ವಾತಾವಾರಣ ಹಿನ್ನೆಲೆಯಲ್ಲಿ ಸೂರ್ಯ ರಶ್ಮಿ ಕಂಡುಬಂದಿಲ್ಲ. ಪ್ರಸಕ್ತ ವರ್ಷ ಜನರಿಗೆ ಯಾವುದೇ ರೀತಿಯ ತೊಂದರೆ ಆಗಲ್ಲ ಎಂದು ಸ್ಪಷ್ಟಪಡಿಸಿದರು.

ಓಂಕಾರ ತತ್ವದಲ್ಲಿ ಸಾಕಷ್ಟು ವಿಶೇಷತೆಗಳಿವೆ . ನಾಭಿಯಿಂದ ಬಂದ ತತ್ವವೇ ಓಂ ನಮಶಿವಾಯ. ಸೂರ್ಯ ಭಗವಂತನ ಅನುಮತಿ ಪಡೆದೂ ಉತ್ತರಾಯಣ ಪ್ರವೇಶ ಮಾಡುತ್ತಾನೆ. ಯಜ್ಞ ಯಾಗ, ದೇವತಾ ದರ್ಶನ ಎಲ್ಲಾ ದಕ್ಷಿಣಾಯಣ ಕಾಲದಲ್ಲಿ ಮಾಡುತ್ತೇವೆ. ಈಶ್ವರನ ದರ್ಶನ ಮಾಡಿ ಉತ್ತರಾಯಣ ಪ್ರವೇಶ ಸೂರ್ಯ ಮಾಡುತ್ತಾನೆ. ಪ್ರಕೃತಿ ವಿಕೋಪದಿಂದ ಸೂರ್ಯ ರಶ್ಮಿ ನಮಗೆ ಕಾಣಿಸಿಲ್ಲ. ನಾಳೆಯಿಂದ ಪರಮೇಶ್ವರ ಎಲ್ಲರಿಗೂ ಅನುಗ್ರಹ ಮಾಡುತ್ತಾನೆ. ಖಂಡಿತ ಸೂರ್ಯ ಪ್ರವೇಶ ಮಾಡಿ ಹೋಗಿದ್ದಾನೆ . ಈಶ್ವರನಿಗೆ ಸೂರ್ಯ ಪೂಜೆ ಮಾಡಿದ್ದಾನೆ ಅನ್ನೋದು ನಮಗೆ ಗೊತ್ತಿದೆ . ಈಶ್ವರನ ಅನುಗ್ರಹ ನಾಳೆಯಿಂದ ಎಲ್ಲರಿಗೂ ಸಿಗುತ್ತೆ . ಸ್ವಾಮಿ ಇವತ್ತು ದರ್ಶನ ಕೊಟ್ಟಿಲ್ಲ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ