ಡಾಟ್ಸನ್ ಗೋ ಪ್ಲಸ್, ರೆನೋ ಕಾರಿನ ಮೇಲೆ ಕಂಪೆನಿಗಳಿಂದ ಭಾರೀ ಡಿಸ್ಕೌಂಟ್; 45000 ರೂಪಾಯಿ ತನಕ ಉಳಿತಾಯ

Datsun Go Plus (ಡಾಟ್ಸನ್ ಗೋ ಪ್ಲಸ್) ಮತ್ತು ಎರಡನೆಯದು Renault Triber (ರೆನೋ ಟ್ರೈಬರ್)- ಈ ಎರಡು ಕಾರಿನ ಮೇಲೆ ಭಾರೀ ಡಿಸ್ಕೌಂಟ್ ನೀಡುತ್ತಿದ್ದು, ಗ್ರಾಹಕರು 45,000 ರೂಪಾಯಿ ತನಕ ಉಳಿತಾಯ ಮಾಡಬಹುದು.

ಡಾಟ್ಸನ್ ಗೋ ಪ್ಲಸ್, ರೆನೋ ಕಾರಿನ ಮೇಲೆ ಕಂಪೆನಿಗಳಿಂದ ಭಾರೀ ಡಿಸ್ಕೌಂಟ್; 45000 ರೂಪಾಯಿ ತನಕ ಉಳಿತಾಯ
ರೆನಾಲ್ಟ್ ಟ್ರೈಬರ್
Follow us
Srinivas Mata
|

Updated on: Apr 30, 2021 | 6:25 PM

ನಮ್ಮ ಹತ್ತಿರ ತುಂಬ ಜಾಸ್ತಿ ಬಜೆಟ್ ಇಲ್ಲ. ಆದರೆ ಕುಟುಂಬಕ್ಕೆ ಆಗುವಂಥದ್ದೊಂದು ಕಾರು ಖರೀದಿಸಬೇಕು. -ಇಂಥದ್ದೊಂದು ಆಲೋಚನೆಯಲ್ಲಿ ಇರುವವರಿಗೆ ನಮ್ಮ ಕಡೆಯಿಂದ ಎರಡು ಕಾರುಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗುತ್ತಿದೆ. ಈ ಎರಡು ಕಾರುಗಳ ಮೇಲೆ ಆ ಕಂಪೆನಿಗಳಿಂದ ಭಾರೀ ರಿಯಾಯಿತಿ ಕೂಡ ನೀಡಲಾಗುತ್ತಿದೆ. ನಿಮಗೆ ಹತ್ತಿರದ ಕಾರಿನ ಡೀಲರ್​ಗಳ ಬಳಿ ಇನ್ನೊಮ್ಮೆ ಈ ಬಗ್ಗೆ ಇನ್ನೊಮ್ಮೆ ಪರೀಕ್ಷಿಸಿಕೊಳ್ಳಿ. ಆ ಎರಡು ಕಾರಿಗಳಲ್ಲಿ ಮೊದಲನೆಯದು Datsun Go Plus (ಡಾಟ್ಸನ್ ಗೋ ಪ್ಲಸ್) ಮತ್ತು ಎರಡನೆಯದು Renault Triber (ರೆನೋ ಟ್ರೈಬರ್). ಈ ಎರಡು ಕಾರಿನ ಮೇಲೆ ಭಾರೀ ಡಿಸ್ಕೌಂಟ್ ನೀಡುತ್ತಿದ್ದು, ಗ್ರಾಹಕರು 45,000 ರೂಪಾಯಿ ತನಕ ಉಳಿತಾಯ ಮಾಡಬಹುದು.

Renault Triber (ರೆನೋ ಟ್ರೈಬರ್) ಇದು ಏಳು ಸೀಟರ್ ಕಾರು. ನಾಲ್ಕು ವೇರಿಯಂಟ್​ಗಳಲ್ಲಿ ಬರುತ್ತದೆ. ಅವುಗಳನ್ನು RXE, RXL, RXT ಮತ್ತು RXZ ಹೀಗೆ ವಿಂಗಡಿಸಲಾಗಿದೆ. ಇದರಲ್ಲಿ ಕಂಪೆನಿಯಿಂದ 1.0 ಲೀಟರ್ ಪೆಟ್ರೋಲ್ ಎಂಜಿನ್ ಇದೆ. 72PS ಪವರ್ ಮತ್ತು 96Nm ಟಾರ್ಕ್ ಜನರೇಟ್ ಮಾಡುತ್ತದೆ. ಇದು 5 ಸ್ಪೀಡ್ ಮ್ಯಾನ್ಯುಯೆಲ್ ಮತ್ತು ಆಟೋಮೆಟಿಕ್ ಗೇರ್ ಬಾಕ್ಸ್ ಜತೆ ಬರುತ್ತದೆ. ಇನ್ನೊಂದು ವೇರಿಯಂಟ್​ನಲ್ಲಿ ಕಂಪೆನಿಯಿಂದ 1.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಬರುತ್ತದೆ. 100PS ಪವರ್ ಮತ್ತು 160Nm ಟಾರ್ಕ್ ಸೃಷ್ಟಿಸುತ್ತದೆ.

ರೆನೋ ಟ್ರೈಬರ್ ಗ್ರಾಹಕರಿಗೆ 45,000 ರೂಪಾಯಿ ತನಕ ಭಾರೀ ರಿಯಾಯಿತಿ ಸಿಗುತ್ತಿದೆ. ರೆನೋ ತನ್ನ ಬಹಳ ಅಗ್ಗದ ಎಂಪಿವಿ ಮೇಲೆ 15,000 ರೂಪಾಯಿ ನಗದು ರಿಯಾಯಿತಿ, 20,000 ರೂಪಾಯಿ ತನಕ ಎಕ್ಸ್​ಚೇಂಜ್ ಬೋನಸ್, 10,000 ರೂಪಾಯಿ ಕಾರ್ಪೊರೇಟ್ ಡಿಸ್ಕೌಂಟ್ ಸಹ ನೀಡುತ್ತಿದೆ.

ಬೆಲೆ ಎಷ್ಟು? 2021ರ Renault Triber (ರೆನೋ ಟ್ರೈಬರ್) ಆರಂಭಿಕವಾಗಿ ದೆಹಲಿಯಲ್ಲಿ ಎಕ್ಸ್​ ಶೋ ರೂಮ್ ಬೆಲೆ 5.30 ಲಕ್ಷ ರೂಪಾಯಿ ಇದೆ. ಇದರ ಟಾಪ್ ಎಂಡ್ ವೇರಿಯೆಂಟ್ 7.65 ಲಕ್ಷ ರೂಪಾಯಿ ತನಕ ಇದೆ. ನಿಮಗೆ ಗೊತ್ತಿರಲೇಬೇಕಾದ ಸಂಗತಿ ಏನೆಂದರೆ, ಹೊಸ Renault Triber (ರೆನೋ ಟ್ರೈಬರ್) ಬೆಲೆಯಲ್ಲಿ ಕಂಪೆನಿಯು ಯಾವುದೇ ಏರಿಕೆ ಮಾಡಿಲ್ಲ.

Datsun Go Plus (ಡಾಟ್ಸನ್ ಗೋ ಪ್ಲಸ್) ಇದು ಜಪಾನ್ ಮೂಲದ ಕಂಪೆನಿ ನಿರ್ಮಿಸಿರುವ ಕಾರು. 7 ಸೀಟರ್​ಗಳ ಎಂಪಿವಿ. ಮಾರುಕಟ್ಟೆಯಲ್ಲಿ ಇದು ಐದು ವೇರಿಯಂಟ್​ನಲ್ಲಿ ಲಭ್ಯ ಇದೆ. ಈ ಕಾರಿನಲ್ಲಿ 1.2 ಲೀಟರ್ ಕ್ಷಮತೆಯ 3 ಸಿಲಿಂಡರ್​ಯುಕ್ತ ಪೆಟ್ರೋಲ್ ಎಂಜಿನ್ ಇದೆ. 68PSನಿಂದ 77PS ಪವರ್ ಸೃಷ್ಟಿಸುತ್ತದೆ. ಈ ಕಾರು 5 ಸ್ಪೀಡ್ ಮ್ಯಾನ್ಯುಯೆಲ್ ಮತ್ತು ಸಿವಿಟಿ ಟ್ರಾನ್ಸ್​ಮಿಷನ್ ಗೇರ್​ಬಾಕ್ಸ್ ಜತೆಗೆ ಬರುತ್ತದೆ.

ಈ ಕಾರು ಕಂಪೆನಿಯಿಂದ ಗ್ರಾಹಕರಿಂದ 40,000 ರೂಪಾಯಿ ತನಕ ಭಾರೀ ರಿಯಾಯಿತಿ ದೊರೆಯುತ್ತಿದೆ. 20,000 ರೂಪಾಯಿ ತನಕ ನಗದು ರಿಯಾಯಿತಿ, ಇನ್ನು ಹಳೇ ಕಾರು ಎಕ್ಸ್​ಚೇಂಜ್​ ಮಾಡುವವರಿಗೆ 20,000 ರೂಪಾಯಿ ತನಕ ಉಳಿತಾಯ ಮಾಡುವ ಅವಕಾಶ ಇದೆ.

ಬೆಲೆ ಎಷ್ಟು? Datsun Go Plus (ಡಾಟ್ಸನ್ ಗೋ ಪ್ಲಸ್) ದೆಹಲಿಯಲ್ಲಿನ ಎಕ್ಸ್​ ಶೋ ರೂಮ್ ಬೆಲೆ 4.25 ಲಕ್ಷ ರೂಪಾಯಿ ಇದೆ. ಇದರ ಟಾಪ್ ಎಂಡ್ ವೇರಿಯಂಟ್ 6.99 ಲಕ್ಷ ರೂಪಾಯಿ ತನಕ ಇದೆ.

ಇದನ್ನೂ ಓದಿ: Top 5 automatic cars: ಭಾರತದಲ್ಲಿ ಖರೀದಿಸಬಹುದಾದ 10 ಲಕ್ಷ ರೂಪಾಯಿ ಒಳಗಿನ ಟಾಪ್ 5 ಆಟೋಮೆಟಿಕ್ ಕಾರುಗಳಿವು

(Discount of up to Rs 45,000 on Renault Triber and Datsun Go Plus MPV. Here is the details)

ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು