Home loan: ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾದಿಂದ ಗೃಹ ಸಾಲ ಶೇ 6.70ಗೆ ಇಳಿಕೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಶೇ 6.70ಗೆ ಇಳಿಕೆ ಮಾಡಲಾಗಿದೆ. ಇತರ ವಿವರಗಳ ಮಾಹಿತಿ ಇಲ್ಲಿದೆ.

Home loan: ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾದಿಂದ ಗೃಹ ಸಾಲ ಶೇ 6.70ಗೆ ಇಳಿಕೆ
ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಎಸ್‌ಬಿಐ ಎರಡು ಖಾತೆಗಳನ್ನು ಒದಗಿಸುತ್ತದೆ - ಪೆಹ್ಲಾಕದಮ್ ಮತ್ತು ಪೆಹ್ಲಿಉಡಾನ್. ಇವೆರಡನ್ನು ವಿಶೇಷವಾಗಿ ಮಕ್ಕಳಿಗಾಗಿಯೇ ರೂಪಿಸಲಾಗಿದೆ. ಪೆಹ್ಲಾಕದಮ್ ಉಳಿತಾಯ ಖಾತೆಯನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಮಗು ತೆರೆಯಬಹುದು. ಈ ಉಳಿತಾಯ ಖಾತೆಯು ಪೋಷಕರು ಮತ್ತು ಮಗುವಿನ ಜಂಟಿ ಖಾತೆಯಾಗಿದ್ದು, ಅಲ್ಲಿ ಪೋಷಕರು ಸೆಕೆಂಡರಿ ಖಾತೆದಾರರಾಗಿರುತ್ತಾರೆ ಮತ್ತು ಮಗು ಪ್ರಾಥಮಿಕ ಹೋಲ್ಡರ್ ಆಗಿರುತ್ತದೆ. ಸಾಮಾನ್ಯ ಉಳಿತಾಯ ಖಾತೆಯಂತೆ, ಈ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಮಾನದಂಡಗಳಿಲ್ಲ. ಮೊಬೈಲ್ ಬ್ಯಾಂಕಿಂಗ್ ಮತ್ತು ಚೆಕ್ ಪುಸ್ತಕಗಳ ವಿತರಣೆಯಂತಹ ವೈಶಿಷ್ಟ್ಯಗಳು ಎರಡರಲ್ಲೂ ಲಭ್ಯವಿವೆ. ಓವರ್ ಡ್ರಾಫ್ಟ್, ಎಟಿಎಂ ಸೌಲಭ್ಯ ಮತ್ತು ಇತರ ಹೂಡಿಕೆ ಆಯ್ಕೆಗಳನ್ನು ಈ ಖಾತೆಗಳೊಂದಿಗೆ ಸೇರಿಸಲಾಗಿದೆ.
Follow us
Srinivas Mata
|

Updated on:May 01, 2021 | 6:43 PM

ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾ (ಎಸ್​ಬಿಐ) ಶನಿವಾರ ಘೋಷಣೆ ಮಾಡಿದ ಪ್ರಕಾರ, ಗೃಹ ಸಾಲ ಬಡ್ಡಿ ದರವನ್ನು ಶೇ 6.70ಗೆ ಇಳಿಕೆ ಮಾಡಿದೆ. ಇದರ ಜತೆಗೆ ಮಹಿಳಾ ಅರ್ಜಿದಾರರು ಹೆಚ್ಚುವರಿಯಾಗಿ ವಿಶೇಷ ವಿನಾಯಿತಿ 5 ಬಿಪಿಎಸ್​ ಪಡೆಯುತ್ತಾರೆ ಎಂದು ಬ್ಯಾಂಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸದ್ಯದ ಸನ್ನಿವೇಶದಲ್ಲಿ ಗ್ರಾಹಕರಿಗೆ ಸುಲಭವಾಗಿ ಕೈಗೆಟುಕುತ್ತಿದೆ. ಈ ಗೃಹ ಸಾಲದ ಬಡ್ಡಿ ದರದಲ್ಲಿ ಇಎಂಐ ಮೊತ್ತವು ಸಾಕಷ್ಟು ಕಡಿಮೆ ಆಗುತ್ತದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ರೀಟೇಲ್ ಮತ್ತು ಡಿಜಿಟಲ್ ಬ್ಯಾಂಕಿಂಗ್ ಮ್ಯಾನೇಜಿಂಗ್ ಡೈರೆಕ್ಟರ್ ಸಿ.ಎಸ್.ಶೆಟ್ಟಿ ಹೇಳಿದ್ದಾರೆ.

ಈಗಿನ ಇಳಿಕೆಯೊಂದಿಗೆ ಸ್ಟೇಟ್ ಬ್ಯಾಂಕ್​ ಆಫ್ ಇಂಡಿಯಾದ ಬಡ್ಡಿ ದರವು 30 ಲಕ್ಷ ರೂಪಾಯಿ ತನಕದ ಸಾಲಕ್ಕೆ ಶೇ 6.70ಯಿಂದ ಶುರುವಾಗುತ್ತದೆ. 30 ಲಕ್ಷ ರೂಪಾಯಿ ಮೇಲ್ಪಟ್ಟು 75 ಲಕ್ಷ ರೂಪಾಯಿ ತನಕ ಶೇ 6.95 ಇದೆ. 75 ಲಕ್ಷ ಮೇಲ್ಪಟ್ಟ ಸಾಲಕ್ಕೆ ಶೇ 7.05 ಆಗುತ್ತದೆ ಎಂದು ಬ್ಯಾಂಕ್​ ಹೇಳಿದೆ. ಯಾವ ಗ್ರಾಹಕರು YONO ಆ್ಯಪ್ ಮೂಲಕ ಗೃಹ ಸಾಲಕ್ಕೆ ಅರ್ಜಿ ಹಾಕಿಕೊಳ್ಳುತ್ತಾರೋ ಅಂಥವರಿಗೆ ಹೆಚ್ಚುವರಿಯಾಗಿ 5 ಬಿಪಿಎಸ್ ವಿನಾಯಿತಿ ಇದೆ. ಈ ಹಿಂದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಮಾರ್ಚ್ 31ರ ತನಕ ಶೇ 6.7ಕ್ಕೆ ಗೃಹ ಸಾಲ ಬಡ್ಡಿ ದರ ನಿಗದಿ ಮಾಡಿತ್ತು. ಅದಾದ ಮೇಲೆ ಏಪ್ರಿಲ್ 1ರಿಂದ ಶೇ 6.95ಕ್ಕೆ ತರಲಾಗಿತ್ತು.

ಆಸ್ತಿ, ಠೇವಣಿ, ಶಾಖೆಗಳು, ಗ್ರಾಹಕರು ಮತ್ತು ಉದ್ಯೋಗಿಗಳ ಸಂಖ್ಯೆ ಈ ಎಲ್ಲ ಲೆಕ್ಕದಲ್ಲೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಅತಿ ದೊಡ್ಡ ವಾಣಿಜ್ಯ ಬ್ಯಾಂಕ್. ಇದರ ಜತೆಗೆ ದೇಶದಲ್ಲೇ ಅತಿ ದೊಡ್ಡ ಅಡಮಾನ ಬ್ಯಾಂಕ್​ ಕೂಡ ಹೌದು. ಬ್ಯಾಂಕ್​ನ ಗೃಹಸಾಲದ ಪೋರ್ಟ್​ಫೋಲಿಯೋ 5 ಲಕ್ಷ ಕೋಟಿ ರೂಪಾಯಿ ಮೈಲುಗಲ್ಲನ್ನು ದಾಟಿದೆ. ಇನ್ನು ವಾಹನಗಳ ಸಾಲದ ಲೆಕ್ಕ ಡಿಸೆಂಬರ್ 31, 2020ರ ಕೊನೆಗೆ ರೂ.75,937 ಕೋಟಿ ಇದೆ. ಠೇವಣಿಗಳು 35 ಲಕ್ಷ ಕೋಟಿಗೂ ಹೆಚ್ಚಿದ್ದರೆ, ಅಡ್ವಾನ್ಸಸ್ 26 ಲಕ್ಷ ಕೋಟಿ ರೂಪಾಯಿಗೂ ಜಾಸ್ತಿ ಇದೆ.

ಗೃಹ ಸಾಲದಲ್ಲಿ ಸ್ಟೇಟ್ ಬ್ಯಾಂಕ್​ ಆಫ್ ಇಂಡಿಯಾದ ಮಾರುಕಟ್ಟೆ ಪಾಲು ಶೇ 34ಕ್ಕೂ ಹೆಚ್ಚಿದೆ. ವಾಹನ ಸಾಲದ ಸೆಗ್ಮೆಂಟ್​ನಲ್ಲಿ ಶೇ 33ರಷ್ಟು ಪಾಲನ್ನು ಹೊಂದಿದೆ. ಬ್ಯಾಂಕ್​ಗೆ ಭಾರತದಲ್ಲಿ 22,000 ಶಾಖೆಗಳಿದ್ದು, ಎಟಿಎಂ/ಸಿಡಿಎಂ ನೆಟ್​ವರ್ಕ್ 58,000ದಷ್ಟಿದೆ. ಒಟ್ಟಾರೆ ವ್ಯವಹಾರದ ಔಟ್​ಲೆಟ್​ಗಳು 71,000ಕ್ಕೂ ಹೆಚ್ಚಿವೆ.

ಇದನ್ನೂ ಓದಿ: ಡಿಜಿಟಲ್​ ಪೇಮೆಂಟ್​ನಲ್ಲಿ ಕ್ಯೂಆರ್​ ಕೋಡ್​ ಸ್ಕ್ಯಾನ್ ಮಾಡಲೇಬೇಡಿ; ಗ್ರಾಹಕರನ್ನು ಎಚ್ಚರಿಸಿದ ಎಸ್​ಬಿಐ

(India’s leading bank State Bank Of India reduced housing loan rate of interest to 6.70% per annum. Here is the details)

Published On - 4:44 pm, Sat, 1 May 21

ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ