ಡಿಜಿಟಲ್​ ಪೇಮೆಂಟ್​ನಲ್ಲಿ ಕ್ಯೂಆರ್​ ಕೋಡ್​ ಸ್ಕ್ಯಾನ್ ಮಾಡಲೇಬೇಡಿ; ಗ್ರಾಹಕರನ್ನು ಎಚ್ಚರಿಸಿದ ಎಸ್​ಬಿಐ

ಆದರೆ ಇ-ಪೇಮೆಂಟ್​ ವಿಧಾನದಲ್ಲಿ ಅಪಾಯವೂ ಸಾಕಷ್ಟಿದೆ. ಅದೆಷ್ಟೋ ಗ್ರಾಹಕರು ಡಿಜಿಟಲ್​ ಪೇಮೆಂಟ್ ಮಾಡುವಾಗ ವಂಚನೆಗೆ ಒಳಗಾದ ಘಟನೆಗಳ ಬಗ್ಗೆ ಈಗಾಗಲೇ ಅನೇಕ ವರದಿಗಳನ್ನೂ ಓದಿದ್ದೇವೆ.

ಡಿಜಿಟಲ್​ ಪೇಮೆಂಟ್​ನಲ್ಲಿ ಕ್ಯೂಆರ್​ ಕೋಡ್​ ಸ್ಕ್ಯಾನ್ ಮಾಡಲೇಬೇಡಿ; ಗ್ರಾಹಕರನ್ನು ಎಚ್ಚರಿಸಿದ ಎಸ್​ಬಿಐ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on: Apr 28, 2021 | 1:26 PM

ಡಿಜಿಟಲ್ ಪೇಮೆಂಟ್​ನಲ್ಲಿ ಈ ಕ್ಯೂಆರ್ ಕೋಡ್​ ಅತ್ಯಂತ ವ್ಯಾಪಕವಾಗಿ ಬಳಕೆಯಾಗುತ್ತದೆ. ಕ್ಯೂಆರ್​ (ತ್ವರಿತ ಪ್ರತಿಕ್ರಿಯೆ ಕೋಡ್​) ಕೋಡ್ ಒಂದು ರೀತಿಯ ಬಾರ್​ ಕೋಡ್​ ಆಗಿದ್ದು, ಡಾಟಾ ಸಂಗ್ರಹ ಮಾಡುತ್ತದೆ. ಈಗಂತೂ ಡಿಜಿಟಲ್​ ಪಾವತಿಯಲ್ಲಿ ಅತ್ಯಂತ ಹೆಚ್ಚಾಗಿ ಬಳಕೆಯಾಗುತ್ತದೆ. ಈ ಕೋಡ್​ ಸ್ಕ್ಯಾನ್ ಮಾಡುವ ಮೂಲಕ ಹಣ ಪಾವತಿ ಮಾಡಬಹುದಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಡಿಜಿಟಲ್​ ಪಾವತಿ ಪ್ರಕ್ರಿಯೆ ಹೆಚ್ಚಾಗುತ್ತಿದೆ. ಅದರಲ್ಲೂ ಕೊವಿಡ್ 19 ಸಾಂಕ್ರಾಮಿಕ ಬಂದ ಮೇಲಂತೂ ನಗದನ್ನು ಮುಟ್ಟಲು ಎಲ್ಲರೂ ಭಯಪಡುತ್ತಿದ್ದಾರೆ. ಹಾಗಾಗಿ ಡಿಜಿಟಲ್ ಪೇಮೆಂಟ್​ಗೆ ಮತ್ತಷ್ಟು ಒತ್ತು ಸಿಕ್ಕಿದೆ. ಇದನ್ನು ಇ-ಪೇಮೆಂಟ್​ ಎಂದೂ ಕರೆಯಲಾಗುತ್ತದೆ. ಅಂದರೆ ಇಲ್ಲಿ ಹಣವನ್ನು ಕೈಯಲ್ಲಿ ಮುಟ್ಟುವ ಅವಶ್ಯಕತೆ ಇರುವುದಿಲ್ಲ. ನೇರವಾಗಿ ಅಕೌಂಟ್​​ಗೇ ಹಣ ಪಾವತಿ ಮಾಡುವ ವಿಧಾನ ಇದು.

ಆದರೆ ಇ-ಪೇಮೆಂಟ್​ ವಿಧಾನದಲ್ಲಿ ಅಪಾಯವೂ ಸಾಕಷ್ಟಿದೆ. ಅದೆಷ್ಟೋ ಗ್ರಾಹಕರು ಡಿಜಿಟಲ್​ ಪೇಮೆಂಟ್ ಮಾಡುವಾಗ ವಂಚನೆಗೆ ಒಳಗಾದ ಘಟನೆಗಳ ಬಗ್ಗೆ ಈಗಾಗಲೇ ಅನೇಕ ವರದಿಗಳನ್ನೂ ಓದಿದ್ದೇವೆ. ಕ್ಯೂಆರ್ ಕೋಡ್​​ನ್ನು ಸ್ಕ್ಯಾನ್​ ಮಾಡಿ ಸಾವಿರಾರು ರೂಪಾಯಿ ಕಳೆದುಕೊಂಡವರೂ ಇದ್ದಾರೆ. ಹಾಗಾಗಿ ಬ್ಯಾಂಕ್​ಗಳು ಕೂಡ ಆಗಾಗ ಗ್ರಾಹಕರನ್ನು ಎಚ್ಚರಿಸುವ ಕೆಲಸ ಮಾಡುತ್ತವೆ. ಹಾಗೇ ಇತ್ತೀಚೆಗೆ ಎಸ್​ಬಿಐ ಕೂಡ ಮತ್ತೊಮ್ಮೆ ಗ್ರಾಹಕರಿಗೆ ಎಚ್ಚರಿಕೆ ನೀಡಿ, ಯಾರ್ಯಾರೋ ನೀಡುವ ಕ್ಯೂಆರ್​ ಕೋಡ್​ ಸ್ಕ್ಯಾನ್ ಮಾಡಬೇಡಿ ಎಂದು ಸಲಹೆ ನೀಡಿದೆ. ಟ್ವೀಟ್ ಮಾಡಿರುವ SBI, ನೀವು ಕ್ಯೂಆರ್​ ಕೋಡ್ ಸ್ಕ್ಯಾನ್ ಮಾಡಿದಾಗ ನಿಮ್ಮ ಅಕೌಂಟ್​ಗೆ ಹಣ ಬರುವುದಿಲ್ಲ. ಬದಲಿಗೆ ನಿಮ್ಮ ಅಕೌಂಟ್​ನಿಂದ ಇಂತಿಷ್ಟು ಹಣ ಕಟ್​ ಆಗಿದೆ ಎಂಬ ಸಂದೇಶ ಬರುತ್ತದೆ. ಹಾಗಿದ್ದಾಗ ಎಲ್ಲೆಲ್ಲೋ ನೀಡುವ ಕ್ಯೂಆರ್ ಕೋಡ್​ ಸ್ಕ್ಯಾನ್ ಮಾಡಿ ಹಣ ಪಾವತಿಸುವುದು ಸರಿಯಲ್ಲ ಎಂದು ತಿಳಿಸಿದೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ