17 ದೇಶಗಳಲ್ಲಿ ಭಾರತದ ಕೊರೊನಾ ರೂಪಾಂತರಿ ವೈರಾಣು ಪತ್ತೆ: ವಿಶ್ವ ಆರೋಗ್ಯಸಂಸ್ಥೆ
WHO: ಕೊವಿಡ್-19ನ B.1.617 ಪ್ರಬೇಧವು ಮೊದಲ ಬಾರಿ ಭಾರತದಲ್ಲಿ ಪತ್ತೆಯಾಗಿತ್ತು. ಈ ರೂಪಾಂತರಿ ವೈರಾಣು ಕನಿಷ್ಠ 17 ರಾಷ್ಟ್ರಗಳಲ್ಲಿ ಪತ್ತೆಯಾಗಿದೆ ಎಂದು GISAID ಡೇಟಾಬೇಸ್ ಅಂಕಿ ಅಂಶಗಳಿಂದ ಪತ್ತೆಯಾಗಿದೆ
ಜಿನೀವಾ: ಭಾರತದಲ್ಲಿ ಕೊವಿಡ್ ಪ್ರಕರಣಗಳು ಏರಿಕೆಯಾಗಲು ಕಾರಣವಾಗಿರುವ ಕೊವಿಡ್-19 ರೂಪಾಂತರಿ ವೈರಾಣು 12ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ಕಂಡು ಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ಕೊವಿಡ್-19ನ B.1.617 ಪ್ರಭೇದವು ಮೊದಲ ಬಾರಿ ಭಾರತದಲ್ಲಿ ಪತ್ತೆಯಾಗಿತ್ತು. ಈ ರೂಪಾಂತರಿ ವೈರಾಣು ಕನಿಷ್ಠ 17 ರಾಷ್ಟ್ರಗಳಲ್ಲಿ ಪತ್ತೆಯಾಗಿದೆ ಎಂದು GISAID ಡೇಟಾಬೇಸ್ ಅಂಕಿ ಅಂಶಗಳಿಂದ ಪತ್ತೆಯಾಗಿದೆ. GISAID ಡೇಟಾಬೇಸ್ ಪ್ರಕಾರ ಈ ರೂಪಾಂತರಿ ವೈರಾಣು ಭಾರತ, ಬ್ರಿಟನ್, ಅಮೆರಿಕ ಮತ್ತು ಸಿಂಗಪೂರ್ನಲ್ಲಿ ಕಾಣಿಸಿಕೊಂಡಿದೆ.
ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ B.1.617 ಸ್ವಲ್ಪ ವಿಭಿನ್ನ ರೂಪಾಂತರಿ ಆಗಿದ್ದು ವಿಭಿನ್ನ ಗುಣಲಕ್ಷಣಗನ್ನು ಹೊಂದಿದೆ ಎಂದು ಹೇಳಿದೆ. ಆದಾಗ್ಯೂ ಇದನ್ನು ಆಸಕ್ತಿದಾಯಕ ರೂಪಾಂತರಿ ಎಂದು ಪಟ್ಟಿಮಾಡಿತ್ತು.ಆದರೆ ಇತ್ತೀಚೆಗೆ ಇದನ್ನು ಕಳಕಳಿಯ ರೂಪಾಂತರಿ ಎಂದು ಘೋಷಿಸುವುದನ್ನು ನಿಲ್ಲಿಸಿದೆ. ಅಂದರೆ ಈ ಪ್ರಬೇಧವು ಹೆಚ್ಚು ನಿಜವಾದ ಪ್ರಬೇಧಕ್ಕಿಂತ ಹೆಚ್ಚು ಅಪಾಯಕಾರಿ ಹಾಗೂ ಸಾಂಕ್ರಾಮಿಕವಾಗಿದ್ದು, ಮಾರಕ ಅಥವಾ ಲಸಿಕೆ ವಿರುದ್ಧ ಹೋರಾಡಲು ಸಮರ್ಥವಾಗಿರುವವುಗಳಾಗಿವೆ.
ಭಾರತದಲ್ಲಿ ಹೊಸ ಕೊವಿಡ್ ಪ್ರಕರಣ ಮತ್ತು ಸಾವಿನ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದ್ದು,ಈ ರೂಪಾಂತರಿ ವೈರಾಣು ದುರಂತಕ್ಕೆ ಕಾರಣವಾಗಬಹುದೇ ಎಂಬ ಆತಂಕವನ್ನುಂಟು ಮಾಡಿದೆ.
ಮಂಗಳವಾರ ಭಾರತದಲ್ಲಿ 3.50 ಲಕ್ಷಕ್ಕಿಂತಲೂ ಹೆಚ್ಚು ಹೊಸ ಪ್ರಕರಣಗಳು ವರದಿ ಆಗಿದ್ದು, ವಿಶ್ವದಲ್ಲಿ ಕೊರಾನಾ ಪ್ರಕರಣಗಳ ಸಂಖ್ಯೆ 14.77 ಕೋಟಿಗೇರಿದೆ. ವಿಶ್ವದಲ್ಲಿ ಕೊವಿಡ್ ನಿಂದ ಸಾವಿಗೀಡಾದವರ ಸಂಖ್ಯೆ 31 ಲಕ್ಷ ಆಗಿದೆ. GISAID ಗೆ ಸಲ್ಲಿಸಿದ ಅನುಕ್ರಮಗಳ ಆಧಾರದ ಮೇಲೆ ಅದರ ಪ್ರಾಥಮಿಕ ಮಾದರಿ ಇತರ ಪ್ರಸರಣ ರೂಪಾಂತರಿಗಳಿಗಿಂತ B.1.617 ಹೆಚ್ಚಿನ ಬೆಳವಣಿಗೆಯ ದರವನ್ನು ಹೊಂದಿದೆ ಎಂದು ಸೂಚಿಸುತ್ತದೆ, ಇದು ಸಂಭಾವ್ಯ ಪ್ರಸರಣ ಸಾಮರ್ಥ್ಯವನ್ನು ಸೂಚಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಕೊಂಡಿದೆ.
ಅದೇ ಸಮಯದಲ್ಲಿ ಪ್ರಸರಣವಾಗುವ ಇತರ ರೂಪಾಂತರಿಗಳು ಸಹ ಹೆಚ್ಚಿನ ಪ್ರಸರಣತೆಯನ್ನು ತೋರಿಸುತ್ತಿವೆ. ಇವುಗಳ ಸಂಯೋಜನೆಯು ದೇಶದಲ್ಲಿ ಪ್ರಸ್ತುತ ಪ್ರಕರಣ ಏರಿಕೆ ಆಗುವಲ್ಲಿ ಪಾತ್ರ ವಹಿಸುತ್ತಿರಬಹುದು ಎಂದು ಅದು ಒತ್ತಿ ಹೇಳಿತು. ವಾಸ್ತವವಾಗಿ, ಅಧ್ಯಯನಗಳು ಎರಡನೇ ಅಲೆ ಹರಡುವಿಕೆಯು ಮೊದಲನೆಯದಕ್ಕಿಂತ ಹೆಚ್ಚು ವೇಗವಾಗಿದೆ ಎಂದು ಎತ್ತಿ ತೋರಿಸಿದೆ ಎಂಬುದಾಗಿ ವಿಶ್ವ ಆರೋಗ್ಯಸಂಸ್ಥೆ ಹೇಳಿದೆ.
ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಪಾಲಿಸದೇ ಇರುವುದು ಮತ್ತು ಗುಂಪು ಸೇರುವುದು ಮೊದಲಾದ ಸೇರಿದಂತೆ ಇತರ ವಾಹಕರು ರೋಗ ಉಲ್ಬಣಕ್ಕೆ ಕಾರಣವಾಗಬಹುದು ಎಂದು ಅದು ಎತ್ತಿ ತೋರಿಸಿದೆ. ಈ ಅಂಶಗಳನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ಅದು ಹೇಳಿದೆ.
ಪ್ರಸರಣ, ತೀವ್ರತೆ ಮತ್ತು ಮತ್ತೆ ಮತ್ತೆ ಸೋಂಕು ತಗಲುವ ಅಪಾಯ ಸೇರಿದಂತೆ ಬಿ .1.617 ಮತ್ತು ಇತರ ರೂಪಾಂತರಿಗಳ ಗುಣಲಕ್ಷಣಗಳ ಬಗ್ಗೆ ಮತ್ತಷ್ಟು ದೃಢವಾದ ಅಧ್ಯಯನಗಳು ತುರ್ತಾಗಿ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಇದನ್ನೂ ಓದಿ: ರೂಪಾಂತರಿ ಕೊರೊನಾ ವೈರಸ್ ವಿರುದ್ಧವೂ ಕೊವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿ: ಐಸಿಎಂಆರ್
Explainer: ಏನಿದು B.1.617 ಡಬಲ್ ರೂಪಾಂತರಿ ವೈರಾಣು?
Published On - 12:23 pm, Wed, 28 April 21