ಲಾಕ್​ಡೌನ್​ ಮಧ್ಯೆಯೂ ಮುಂದುವರಿದ ಹೊಸ ಸಂಸತ್ ಭವನ ನಿರ್ಮಾಣ ಕಾಮಗಾರಿ; ಕಾರ್ಮಿಕರ ಅನುಕೂಲಕ್ಕಾಗಿ ಪೊಲೀಸರಿಗೆ ಪತ್ರ

ಕೇಂದ್ರದ ವಿಸ್ತಾ ಯೋಜನೆಯಡಿ ವಿವಿಧ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಪ್ರಾರಂಭದಿಂದಲೂ ಟೀಕೆಗೆ ಗುರಿಯಾಗಿದೆ. ಈ ಯೋಜನೆಯಿಂದ ಅರಣ್ಯಕ್ಕೆ ಹಾನಿಯಾಗುತ್ತದೆ. ಪರಿಸರ ನಾಶವಾಗುತ್ತದೆ ಎಂಬಿತ್ಯಾದಿ ಆರೋಪಗಳನ್ನು ಮಾಡಿ ಆರಂಭದಲ್ಲೇ ಹಲವರು ಸುಪ್ರೀಂಕೋರ್ಟ್​ಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರು.

ಲಾಕ್​ಡೌನ್​ ಮಧ್ಯೆಯೂ ಮುಂದುವರಿದ ಹೊಸ ಸಂಸತ್ ಭವನ ನಿರ್ಮಾಣ ಕಾಮಗಾರಿ; ಕಾರ್ಮಿಕರ ಅನುಕೂಲಕ್ಕಾಗಿ ಪೊಲೀಸರಿಗೆ ಪತ್ರ
ಹೊಸ ಸಂಸತ್​ ಭವನದ ಚಿತ್ರ
Follow us
Lakshmi Hegde
| Updated By: Digi Tech Desk

Updated on:Apr 28, 2021 | 2:21 PM

ದೆಹಲಿ: ದೇಶದಲ್ಲಿ ಕೊವಿಡ್ 19 ಕಾರಣದಿಂದ ಆರೋಗ್ಯ ವ್ಯವಸ್ಥೆ ಹದಗೆಟ್ಟಿದೆ. ಸೋಂಕು ಮಿತಿಮೀರುತ್ತಿರುವ ಕಾರಣ, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬಹುತೇಕ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಈ ಮಧ್ಯೆ ಕೇಂದ್ರದ ವಿಸ್ತಾ ಯೋಜನೆ ಇನ್ನೂ ಮುಂದುವರಿದಿದೆ. ಅಂದರೆ ಈ ಯೋಜನೆಯಡಿ ನೂತನ ಸಂಸತ್​ ಭವನ, ಸಚಿವಾಲಯದ ಸಾಮಾನ್ಯ ಕೇಂದ್ರ, ವಿವಿಧ ಸರ್ಕಾರಿ ಕಚೇರಿಗಳನ್ನು ಹೊಂದಿರುವ ಕಟ್ಟಡ, ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್​ವರೆಗಿನ 3 ಕಿಮೀ ದೂರದ ರಾಜ್​ಪಥ್​ನ ಪುನರ್​ ನಿರ್ಮಾಣ ಕಾರ್ಯ ಕೊವಿಡ್​ ಬಿಕ್ಕಟ್ಟಿನ ನಡುವೆಯೂ ಮುಂದುವರಿಯಲಿದೆ.

ವಿಸ್ತಾ ಯೋಜನೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಇದರ ವೆಚ್ಚ ಸುಮಾರು 20 ಕೋಟಿ ರೂಪಾಯಿ. ಸದ್ಯ ದೆಹಲಿಯಲ್ಲಿ ಕೊವಿಡ್ 19 ಬಿಕ್ಕಟ್ಟು ಹೆಚ್ಚಾಗಿದ್ದು ಅಗತ್ಯ ಸೇವೆಗಳ ಹೊರತಾಗಿ ಉಳಿದಲ್ಲೆವೂ ಬಂದ್ ಆಗಿವೆ. ಈ ಕಠಿಣ ನಿಯಮವನ್ನು ಮತ್ತೊಂದು ವಾರಕ್ಕೆ ವಿಸ್ತರಿಸಿದ ದೆಹಲಿ ಸರ್ಕಾರ ಆದೇಶವನ್ನೂ ಹೊರಡಿಸಿದೆ. ಹೀಗಿದ್ದಾಗ್ಯೂ ಕೇಂದ್ರಸರ್ಕಾರದ ಈ ಯೋಜನೆ ಮಾತ್ರ ಸ್ಥಗಿತಗೊಂಡಿಲ್ಲ. ಇನ್ನು ವಿಸ್ತಾ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿರುವ ಕೇಂದ್ರ ಲೋಕೋಪಯೋಗಿ ಇಲಾಖೆ ಈ ಕುರಿತು ದೆಹಲಿ ಪೊಲೀಸರಿಗೆ ಪತ್ರ ಬರೆದಿದ್ದು, 2021ರ ನವೆಂಬರ್ 30ರೊಳಗೆ ನಮಗೆ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕಾಗಿದೆ. ಈ ಬಗ್ಗೆ ಗುತ್ತಿಗೆ ಪಡೆದ ಕಂಪನಿಗೂ ನಿರ್ದೇಶನ ನೀಡಲಾಗಿದ್ದು, ಅದರಂತೆ ಮೂರು ಪಾಳಿಯಲ್ಲಿ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಕಂಪನಿಯ ಕೆಲಸಗಾರರು ತಮ್ಮ ಕಾರ್ಮಿಕ ಶಿಬಿರಗಳಿಂದ ಕಟ್ಟಡಗಳ ನಿರ್ಮಾಣ ನಡೆಯುತ್ತಿರುವ ಸ್ಥಳಕ್ಕೆ ಸಂಚಾರ ಮಾಡುವುದು ಅನಿವಾರ್ಯವಾಗಿದೆ. ಹೀಗಾಗಿ ಕಂಪನಿ ತನ್ನದೇ ಬಸ್​ಗಳ ಮೂಲಕ ಇವರನ್ನು ಕರೆದುಕೊಂಡು ಹೋಗಿ-ಬರಲು ಅನುಮತಿ ನೀಡಬೇಕು ಎಂದು ಕೇಳಿದೆ.

ವಿಸ್ತಾ ಯೋಜನೆಯಡಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಅಗತ್ಯ ವ್ಯವಸ್ಥೆ ಮಾಡಿದ್ದೇವೆ. ಒಂದಷ್ಟು ಜನರಿಗೆ ಮಾತ್ರ ಸ್ಥಳದಲ್ಲೇ ತಂಗಲು ಅವಕಾಶ ನೀಡಿದ್ದೇವೆ. ಇನ್ನು ಹಲವರಿಗಾಗಿ ಕಾರ್ಮಿಕ ಶಿಬಿರಗಳನ್ನು ಮಾಡಿಕೊಡಲಾಗಿದೆ. ಅಲ್ಲಿಂದ ಕೆಲಸ ನಡೆಯುತ್ತಿರುವ ಸ್ಥಳಕ್ಕೆ ಓಡಾಡಲು ದೆಹಲಿ ಪೊಲೀಸರಿಂದ ಅನುಮತಿ ಕೇಳಿದ್ದೇವೆ ಎಂದು ಪಿಡಬ್ಲ್ಯೂಡಿ ವಕ್ತಾರ ತಿಳಿಸಿದ್ದಾರೆ.

ಕೇಂದ್ರದ ವಿಸ್ತಾ ಯೋಜನೆಯಡಿ ವಿವಿಧ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಪ್ರಾರಂಭದಿಂದಲೂ ಟೀಕೆಗೆ ಗುರಿಯಾಗಿದೆ. ಈ ಯೋಜನೆಯಿಂದ ಅರಣ್ಯಕ್ಕೆ ಹಾನಿಯಾಗುತ್ತದೆ. ಪರಿಸರ ನಾಶವಾಗುತ್ತದೆ ಎಂಬಿತ್ಯಾದಿ ಆರೋಪಗಳನ್ನು ಮಾಡಿ ಆರಂಭದಲ್ಲೇ ಹಲವರು ಸುಪ್ರೀಂಕೋರ್ಟ್​ಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಕೊನೆಗೂ ಯೋಜನೆ ಅನುಷ್ಠಾನಕ್ಕೆ ಅನುಮತಿ ನೀಡಿತ್ತು.

ಇದನ್ನೂ ಓದಿ: ಅಮೆರಿಕದಲ್ಲಿ ಇನ್ನು ಮಾಸ್ಕ್ ಧರಿಸಬೇಕಾಗಿಲ್ಲ ಆದರೆ ಗುಂಪಿನಲ್ಲಿದ್ದಾಗ ಮಾಸ್ಕ್ ಇರಲಿ! ಅಧ್ಯಕ್ಷ ಜೋ ಬೈಡೆನ್ ಘೋಷಣೆ

ಆಸ್ಪತ್ರೆಯಲ್ಲಿ ಸಿಕ್ತಿಲ್ಲ ಬೆಡ್; ಮನೆಯಲ್ಲೇ ಪತಿ, ಹೆಣ್ಣುಮಕ್ಕಳ ಮುಂದೆ ನರಳಿ ನರಳಿ ಕಣ್ಣು ಮುಚ್ಚಿದ ಮಹಿಳೆ

Central Vista Project continue amid of Covid 19 crisis in Delhi

Published On - 11:21 am, Wed, 28 April 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್