ಚುನಾವಣಾ ಕೆಲಸಕ್ಕೆ ಹಾಜರಾಗಿದ್ದ ನೂರಾರು ಶಿಕ್ಷಕರ ಸಾವು, ಚುನಾವಣಾ ಆಯೋಗಕ್ಕೆ ಅಲಹಾಬಾದ್ ಹೈಕೋರ್ಟ್ ನೋಟಿಸ್
ಚುನಾವಣಾ ಕೆಲಸಕ್ಕೆ ಹಾಜರಾಗಿದ್ದ 135 ಶಿಕ್ಷಕರ ಸಾವು! ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿದ ಅಲಹಾಬಾದ್ ಹೈಕೋರ್ಟ್
ಅಲಹಾಬಾದ್: ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಪಂಚಾಯತ್ ಚುನಾವಣಾ ಕೆಲಸಕ್ಕೆ ಹಾಜರಾಗಿದ್ದ 135 ಶಿಕ್ಷಕರು ಸಾವಿಗೀಡಾಗಿದ್ದಾರೆ. ಮತದಾನದ ವೇಳೆ ಕೊವಿಡ್ ನಿಯಮ ಪಾಲಿಸದ ಆರೋಪ ಇದೀಗ ಕೇಳಿಬಂದಿದೆ. ಮಾಧ್ಯಮಗಳ ವರದಿ ಆಧರಿಸಿ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡ ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ. ನಿಮ್ಮ ವಿರುದ್ಧ ಏಕೆ ಕ್ರಮಕೈಗೊಳ್ಳಬಾರದು? ಎಂದು ಪ್ರಶ್ನೆ ಮಾಡಿ, ನೋಟಿಸ್‌ಗೆ ಉತ್ತರ ನೀಡುವಂತೆ ಆಯೋಗಕ್ಕೆ ಸೂಚನೆ ನೀಡಿದೆ.
ಸೋಮವಾರ ಮುಕ್ತಾಯಗೊಂಡ 10 ದಿನಗಳ ಪಂಚಾಯತ್ ಚುನಾವಣೆಗಳ ಬಳಿಕ ಚುನಾವಣಾ ಡ್ಯೂಟಿಯಲ್ಲಿದ್ದ ನೂರಾರು ಶಿಕ್ಷಕರು ಮತ್ತು ಶಿಕ್ಷಣ ಮಿತ್ರರು ಕೋವಿಡ್ ಸೋಂಕಿನಂತಹ ರೋಗದ ಲಕ್ಷಣಗಳಿಂದ ಅಸುನೀಗಿದ್ದಾರೆ. ಸಾವಿರಾರು ಶಿಕ್ಷಕರು ಕಾಯಿಲೆಯಿಂದ ಬಳಲುತ್ತಿದ್ದಾರೆ. ಮೇ 2 ರಂದು ಈ ಪಂಚಾಯತ್ ಚುನಾವಣೆಗಳ ಫಲಿತಾಂಶ ದಿನವಾಗಿದ್ದು, ಅಂದು ಮತ ಎಣಿಕೆ ಕಾರ್ಯದಲ್ಲಿ ಸಾವಿರಾರು ಮಂದಿ ಭಾಗವಹಿಸಬೇಕಾಗಿದೆ.
(Uttar Pradesh 135 Teachers Died of COVID-like Symptoms After Panchayat Election Duty Allahabad High Court sends notice to election commission)
Published On - 9:43 am, Wed, 28 April 21