Coronavirus India Update: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,293 ಕೊವಿಡ್ ರೋಗಿಗಳು ಸಾವು, ದೆಹಲಿಯಲ್ಲಿ ಆಕ್ಸಿಜನ್​ಗಾಗಿ ಪರದಾಟ

Covid 19 Cases: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ 96,505 ಸಕ್ರಿಯ ಪ್ರಕರಣಗಳು ವರದಿ ಆಗಿದ್ದು ಪ್ರಕರಣಗಳ ಸಂಖ್ಯೆ 29,78,709ಕ್ಕೇರಿದೆ. ಹೊಸ ಕೊವಿಡ್ ಪ್ರಕರಣಗಳ ಸಂಖ್ಯೆ 3,60,960 (3.60 ಲಕ್ಷ) ಆಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1,79,97,267ಕ್ಕೇರಿದೆ.

Coronavirus India Update: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,293 ಕೊವಿಡ್ ರೋಗಿಗಳು ಸಾವು, ದೆಹಲಿಯಲ್ಲಿ ಆಕ್ಸಿಜನ್​ಗಾಗಿ ಪರದಾಟ
ರಾಂಚಿಯ ಆಸ್ಪತ್ರೆಯೊಂದರ ಮುಂದೆ ಕಂಡ ದೃಶ್ಯ
Follow us
ರಶ್ಮಿ ಕಲ್ಲಕಟ್ಟ
|

Updated on:Apr 28, 2021 | 8:14 PM

ದೆಹಲಿ: ಸೆಂಟ್ರಲ್ ದೆಹಲಿಯ ಆಸ್ಪತ್ರೆಯೊಂದರ ತುರ್ತು ನಿಗಾ ಘಟಕದಲ್ಲಿ ದಾಖಲಾಗುವ ರೋಗಿಗಳ ಸಂಖ್ಯೆ ಏರಿಕೆ ಆಗುತ್ತಲೆ ಇದೆ. ಅಲ್ಲಿ ಬರುವ ರೋಗಿಗಳ ಒಂದೇಒಂದು ಬೇಡಿಕೆ ಆಕ್ಸಿಜನ್ ಕೊಡಿ ಎಂದು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೊರೊನಾ ಎರಡನೇ ಅಲೆ ಬರುತ್ತದೆ ಎಂಬುದು ಗೊತ್ತಿತ್ತು. ಆದರೆ ಅದು ಇಷ್ಟೊಂದು ತೀವ್ರವಾಗಿರುತ್ತದೆ ಎಂದು ಊಹಿಸಿರಲಿಲ್ಲ ಅಂತಾರೆ ಮೂಲ್ ಚಂದ್ ಆಸ್ಪತ್ರೆಯ ಎಮರ್ಜೆನ್ಸಿ ಮತ್ತು ಟ್ರಾಮಾ ಸೆಂಟರ್ ನ ನಿರ್ದೇಶಕ ಅಲಿ ರಾಜಾ. ಉಸಿರಾಟದ ಸಮಸ್ಯೆಯಿಂದ ಬಳಲಿ ಬರುವ ಈ ರೋಗಿಗಳಿಗೆ ಆಕ್ಸಿಜನ್ ನೀಡಲೇ ಬೇಕು. ಆದರೆ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ತೀವ್ರವಾಗಿದೆ ಅಂತಾರೆ ರಾಜಾ.

ದೇಶದಲ್ಲಿ ಕೊವಿಡ್ ರೋಗಿಗಳ ಸಂಖ್ಯೆ ದಿನೇ ದೀನೇ ಏರಿಕೆಯಾಗುತ್ತಲೇ ಇದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ 96,505 ಸಕ್ರಿಯ ಪ್ರಕರಣಗಳು ವರದಿ ಆಗಿದ್ದು ಪ್ರಕರಣಗಳ ಸಂಖ್ಯೆ 29,78,709ಕ್ಕೇರಿದೆ. ಹೊಸ ಕೊವಿಡ್ ಪ್ರಕರಣಗಳ ಸಂಖ್ಯೆ 3,60,960 (3.60 ಲಕ್ಷ) ಆಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1,79,97,267ಕ್ಕೇರಿದೆ. ಒಂದೇ ದಿನ ಕೊವಿಡ್ ನಿಂದ 3,293 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 20,11,87ಕ್ಕೇರಿದೆ. ಇಲ್ಲಿಯವರೆಗೆ 1,48,17,371 ಮಂದಿ ಚೇತರಿಸಿಕೊಂಡಿದ್ದಾರೆ. 14,78,27,367 ಮಂದಿ ಕೊವಿಡ್ ಲಸಿಕೆ ಪಡೆದಿದ್ದಾರೆ.

ವರ್ಲ್ಡೊ ಮೀಟರ್ ಅಂಕಿ ಅಂಶಗಳ ಪ್ರಕಾರ ಮಹಾರಾಷ್ಟ್ರದಲ್ಲಿ 900 ಮಂದಿ ಸಾವಿಗೀಡಾಗಿದ್ದಾರೆ.66, 358 ಹೊಸ ಕೊವಿಡ್ ಪ್ರಕರಣಗಳು ಇಲ್ಲಿ ಪತ್ತೆಯಾಗಿದೆ.ಅದೇ ವೇಳೆ ಉತ್ತರ ಪ್ರದೇಶದಲ್ಲಿ 32,921,ಕೇರಳದಲ್ಲ 32 , 819 ಮತ್ತು ಕರ್ನಾಟಕದಲ್ಲಿ 31 ,830 ಪ್ರಕರಣಗಳು ಪತ್ತೆಯಾಗಿವೆ. ದೆಹಲಿಯಲ್ಲಿ 24,149 ಹೊಸ ಕೊವಿಡ್ ಪ್ರಕರಣ ಪತ್ತೆಯಾಗಿದ್ದು,ಸತತ 6ನೇ ದಿನವೂ ಸಾವಿನ ಸಂಖ್ಯೆ 300 ದಾಟಿದೆ.

ಅತೀ ಹೆಚ್ಚು ಕೊವಿಡ್ ಪ್ರಕರಣ ವರದಿಯಾಗಿರುವ 6 ರಾಜ್ಯಗಳು ಮಹಾರಾಷ್ಟ್ರ (4,410,085), ಕೇರಳ (1,405,655), ಕರ್ನಾಟಕ (1,400,775), ಉತ್ತರ ಪ್ರದೇಶ (1,086,625), ತಮಿಳುನಾಡು (1,081,988), ಮತ್ತು ದೆಹಲಿ (1,047,916).

18-45 ವರ್ಷದ 3.25 ಕೋಟಿ ಜನರು ರಾಜ್ಯದಲ್ಲಿದ್ದಾರೆ. ಹಾಗಾಗಿ ನಮಗೆ 7 ಕೋಟಿ ಡೋಸ್ ಲಸಿಕೆ ಬೇಕಿದೆ. ಸೆರಂ ಇನ್ಸಿಟ್ಯೂಟ್ ಆಫ್ ಇಂಡಿಯಾ ಜತೆ ನಮ್ಮ ಅಧಿಕಾರಿಗಳು ಮಾತನಾಡಿ 3.75 ಕೋಟಿ ಡೋಸ್ ಮುಂಗಡವಾಗಿ ಕಾಯ್ದಿರಿಸಿದ್ದಾರೆ. ಮೇ 15 ರ ಒಳಗೆ ಅಷ್ಟೊಂದು ಡೋಸ್ ಲಸಿಕೆ ಸರಬರಾಜು ಮಾಡಲು ಸಾಧ್ಯವಿಲ್ಲ ಎಂದು ಸೆರಂ ಇನ್ಸಿಟ್ಯೂಟ್ ಹೇಳಿದೆ ಎಂದು ರಾಜಸ್ಥಾನದ ಆರೋಗ್ಯ ಸಚಿವರು ಹೇಳಿದ್ದಾರೆ.

ಮೇ 15ರ ಹೊತ್ತಿಗೆ ಒಡಿಶಾದಲ್ಲಿ ಪ್ರತಿದಿನ ಕೊವಿಡ್ ಪ್ರಕರಣಗಳ ಸಂಖ್ಯೆ 13,000 ದಾಟಬಹುದು ಎಂದು ತಜ್ಞರು ಹೇಳಿದ್ದಾರೆ.

ಜಾರ್ಖಂಡ್​ನ ಬೊಕಾರೊದಿಂದ ಭೋಪಾಲದ ಮಂಡೀದೀಪ್ ರೈಲ್ವೆ ನಿಲ್ದಾಣಕ್ಕೆ 6 ಆಕ್ಸಿಜನ್ ಟ್ಯಾಂಕರ್ ಗಳನ್ನು ಹೊತ್ತು ಆಕ್ಸಿಜನ್ ಎಕ್ಸ್ ಪ್ರೆಸ್ ತಲುಪಿದೆ. ತಲಾ ಎರಡು ಟ್ಯಾಂಕರ್​ಗಳನ್ನು ಮಂಡೀದೀಪ್ ಮತ್ತು ಸಾಗರ್ ಗೆ ಕಳುಹಿಸಲಿದ್ದು, ಒಂದು ಟ್ಯಾಂಕರ್ ಅನ್ನು ಜಬಲ್ ಪುರ್​ಗೆ ಕಳುಹಿಸಲಾಗುವುದು.

ದೆಹಲಿ ಸೇರಿದಂತೆ 6 ರಾಜ್ಯಗಳಲ್ಲಿ ಏಪ್ರಿಲ್30ರ ಹೊತ್ತಿಗೆ ಆಕ್ಸಿಜನ್ ಬೇಡಿಕೆ ಹೆಚ್ಚಲಿದೆ. ಏಪ್ರಿಲ್ 30ರ ಹೊತ್ತಿಗೆ ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯ ಪ್ರದೇಶ, ತಮಿಳುನಾಡು, ಗುಜರಾತ್,ದೆಹಲಿ ಮತ್ತು ಛತ್ತೀಸಗಡದಲ್ಲಿ ಆಕ್ಸಿಜನ್ ಬೇಡಿಕೆ ಗಣನೀಯವಾಗಿ ಹೆಚ್ಚಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್​ನಲ್ಲಿ ಹೇಳಿದೆ. ಕೇಂದ್ರ ಸರ್ಕಾರದ ಪ್ರಕಾರ ಮಹಾರಾಷ್ಟ್ರಕ್ಕೆ 2,000 ಟನ್ (ಏಪ್ರಿಲ್ 20ಕ್ಕೆ 1,500 ಅಗತ್ಯ ಬಿದ್ದಿತ್ತು) ಅಗತ್ಯವಿದೆ.ಅದೇ ರೀತಿ ಗುಜರಾತ್ 1,200 MT (1,000 MT), ಉತ್ತರಪ್ರದೇಶ 800 MT (400 MT), ಮಧ್ಯ ಪ್ರದೇಶ 700 MT (445 MT), ದೆಹಲಿ445 MT (300 MT), ಛತ್ತೀಸಗಡ 382 MT (215 MT) ಮತ್ತು ತಮಿಳುನಾಡು 465 MT (200 MT) ಆಕ್ಸಿಜನ್ ಅಗತ್ಯವಿದೆ.

ಭಾರತದಲ್ಲಿ ಕೋವಿಡ್ ಪ್ರಕರಣಗಳು ಏಪ್ರಿಲ್ 26 ರಂದು ಬಿಹಾರದಲ್ಲಿ 12,604 ಹೊಸ ಕೊವಿಡ್  ಪ್ರಕರಣಗಳು ವರದಿಯಾಗಿವೆ; ಸಕ್ರಿಯ ಪ್ರಕರಣಗಳು 94,275. ಮಧ್ಯಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 13,417 ಹೊಸ ಪ್ರಕರಣಗಳು (ಪಾಸಿಟಿವಿಟಿ ದರ – ಶೇ 22.), 11,577 ಮಂದಿ ಚೇತರಿಸಿಕೊಂಡಿದ್ದು,98 ಸಾವು ವರದಿ ಆಗದೆ ಗುಜರಾತ್ ನಲ್ಲಿ  ಕಳೆದ 24 ಗಂಟೆಗಳಲ್ಲಿ 14,352 ಹೊಸ  ಪ್ರಕರಣಗಳು ದಾಖಲಾಗಿದ್ದು, 170 ಸಾವು ಸಂಭವಿಸಿದೆ  7,803  ಮಂದಿ ಚೇತರಿಸಿದ್ದಾರೆ. ಕೇರಳದಲ್ಲಿ ಕಳೆದ 24 ಗಂಟೆಗಳಲ್ಲಿ 32,819 ಹೊಸ  ಪ್ರಕರಣಗಳು ವರದಿ ಆಗಿದ್ದು  32  ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳು 2,47,181, ಸಾವಿನ ಸಂಖ್ಯೆ 5,170 ಕರ್ನಾಟಕದಲ್ಲಿ  ಕಳೆದ 24 ಗಂಟೆಗಳಲ್ಲಿ 31830 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು  180 ಮಂದಿ ಮೃತಪಟ್ಟಿದ್ದಾರೆ. ಉತ್ತರಾಖಂಡದಲ್ಲಿ  5,703 ಹೊಸ ಕೊವಿಡ್  19 ಪ್ರಕರಣಗಳು ವರದಿ ಆಗಿದ್ದು ಮತ್ತು 96 ಸಾವುಗಳು ಸಂಭವಿಸಿದೆ. ಇಲ್ಲಿ  ಸಕ್ರಿಯ ಪ್ರಕರಣಗಳ ಸಂಖ್ಯೆ 43,032 ರಾಜಸ್ಥಾನದಲ್ಲಿ  16,089 ಹೊಸ ಪ್ರಕರಣಗಳು ಮತ್ತು 121 ಸಾವುಗಳು ವರದಿಯಾಗಿವೆ; 1,55,182 ಸಕ್ರಿಯ ಪ್ರಕರಣಗಳು ಸೇರಿದಂತೆ 5,46,964 ಪ್ರಕರಣಗಳು ಇಲ್ಲಿವೆ. ಕಳೆದ 24 ಗಂಟೆಗಳಲ್ಲಿ ಜಮ್ಮು ಕಾಶ್ಮೀರದಲ್ಲಿ 3164 ಕೊವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು  25 ಸಾವು ಸಂಭವಿಸಿದೆ. ಕಳೆದ 24 ಗಂಟೆಗಳಲ್ಲಿ ಹಿಮಾಚಲ ಪ್ರದೇಶದಲ್ಲಿ 2,157 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿದ್ದು, 1,305 ಚೇತರಿಕೆ ಮತ್ತು 24 ಮಂದಿ ಮೃತಪಟ್ಟಿರುವುದಾಗಿ ವರದಿ ಆಗಿದೆ. ಪುದುಚೇರಿಯಲ್ಲಿ  24 ಗಂಟೆಗಳಲ್ಲಿ 1,021 ಹೊಸ ಕೊರೊನಾವೈರಸ್ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳಸಂಖ್ಯೆ  55,047 ಕ್ಕೆ ತಲುಪಿದೆ ಮಣಿಪುರದಲ್ಲಿ  175 ಹೊಸ ಪ್ರಕರಣಗಳು, 50 ಚೇತರಿಕೆ ಮತ್ತು 3 ಸಾವುಗಳು ದಾಖಲಾಗಿವೆ ಸಕ್ರಿಯ ಪ್ರಕರಣಗಳು 1,032 ಆಗಿದೆ.

ಇದನ್ನೂ ಓದಿ: ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಕಣಗಾಲ್ ಕೊವಿಡ್​ 19 ಸೋಂಕಿನಿಂದ ಸಾವು

ಪಂಚತಾರಾ ಹೋಟೆಲ್​ನಲ್ಲಿ ನ್ಯಾಯಾಧೀಶರಿಗೆ ಕೊವಿಡ್​ ಆರೈಕೆ ಕೇಂದ್ರ ಕೇಳಿಲ್ಲವೆಂದ ದೆಹಲಿ ಹೈಕೋರ್ಟ್​, ದೆಹಲಿ ಸರ್ಕಾರಕ್ಕೆ ಛೀಮಾರಿ

(Coronavirus Update India reports 360960 new cases and 3293 deaths in last 24 hours)

Published On - 10:54 am, Wed, 28 April 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್