ಪಂಚತಾರಾ ಹೋಟೆಲ್​ನಲ್ಲಿ ನ್ಯಾಯಾಧೀಶರಿಗೆ ಕೊವಿಡ್​ ಆರೈಕೆ ಕೇಂದ್ರ ಕೇಳಿಲ್ಲವೆಂದ ದೆಹಲಿ ಹೈಕೋರ್ಟ್​, ದೆಹಲಿ ಸರ್ಕಾರಕ್ಕೆ ಛೀಮಾರಿ

ನ್ಯಾಯಮೂರ್ತಿ ವಿಪಿನ್ ಸಾಂಘಿ ಮತ್ತು ರೇಖಾ ಪಲ್ಲಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಅದೇಶದಲ್ಲಿ ಹೇಳಿರುವುದಕ್ಕೆ ತದ್ವಿರುದ್ಧವಾಗಿ ದೆಹಲಿ ಹೈಕೊರ್ಟ್ ಅಂಥ ಯಾವುದೇ ಮನವಿಯನ್ನು ಮಾಡಿಲ್ಲವೆಂದು ಹೇಳಿತು. ಅದೇಶಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದ್ದಿದ್ದರೆ ತಾನೇ ಆದೇಶವನ್ನು ತೊಡೆದುಹಾಕುವುದಾಗಿ ಪೀಠವು ಎಚ್ಚರಿಸಿದೆ.

ಪಂಚತಾರಾ ಹೋಟೆಲ್​ನಲ್ಲಿ ನ್ಯಾಯಾಧೀಶರಿಗೆ ಕೊವಿಡ್​ ಆರೈಕೆ ಕೇಂದ್ರ ಕೇಳಿಲ್ಲವೆಂದ ದೆಹಲಿ ಹೈಕೋರ್ಟ್​, ದೆಹಲಿ ಸರ್ಕಾರಕ್ಕೆ ಛೀಮಾರಿ
ದೆಹಲಿ ಹೈಕೋರ್ಟ್
Follow us
|

Updated on:Apr 28, 2021 | 1:41 AM

ನವದೆಹಲಿಯ ಅಶೋಕ ಹೋಟೆಲ್​ನಲ್ಲಿ ಕೋವಿಡ್ ಕೇರ್ ಸೌಲಭ್ಯ ಕೇಂದ್ರವನ್ನು ಸ್ಥಾಪಿಸಿ, ಹೈಕೋರ್ಟಿನ ನ್ಯಾಯಾಧೀಶರು. ನ್ಯಾಯಾಲಯದಲ್ಲಿ ಕೆಲಸ ಮಾಡುವ ಇತರ ಅಧಿಕಾರಿಗಳು ಮತ್ತು ಅವರ ಕುಟುಂಬಗಳಿಗಾಗಿ 100 ರೂಮುಗಳನ್ನು ಮೀಸಲಿಡಲು ದೆಹಲಿ ಸರ್ಕಾರವು ಇತ್ತೀಚಿಗೆ ಹೊರಡಿಸಿರುವ ಅದೇಶ ಹಿನ್ನೆಲೆಯಲ್ಲಿ ಮಂಗಳವಾರದಂದು ಹೈಕೋರ್ಟ್​ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.ನ್ಯಾಯಮೂರ್ತಿ ವಿಪಿನ್ ಸಾಂಘಿ ಮತ್ತು ರೇಖಾ ಪಲ್ಲಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಅದೇಶದಲ್ಲಿ ಹೇಳಿರುವುದಕ್ಕೆ ತದ್ವಿರುದ್ಧವಾಗಿ ದೆಹಲಿ ಹೈಕೊರ್ಟ್ ಅಂಥ ಯಾವುದೇ ಮನವಿಯನ್ನು ಮಾಡಿಲ್ಲವೆಂದು ಹೇಳಿತು. ಅದೇಶಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದ್ದಿದ್ದರೆ ತಾನೇ ಆದೇಶವನ್ನು ತೊಡೆದುಹಾಕುವುದಾಗಿ ಪೀಠವು ಎಚ್ಚರಿಸಿದೆ.

ವಿಚಾರಣೆ ಸಮಯದಲ್ಲಿ ನ್ಯಾಯಾಧೀಶರಿಗೆ 100 ಬೆಡ್​ಗಳ ಕೊವಿಡ್​ ಸೌಲಭ್ಯ ಕುರಿತ ಸುದ್ದಿಯು ಎಲ್ಲ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದೆ ಎಂದು ಪೀಠವು ಹೇಳಿತು.

‘ಇದು ನ್ಯಾಯಾಲಯ ಮತ್ತು ನ್ಯಾಯಾಧೀಶರ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವಂಥ ಸಂಗತಿಯಾಗಿದೆ, ಹೈಕೋರ್ಟ್​ ಈ ವಿಷಯಕ್ಕೆ ಸಮಬಂಧಿಸಿದಂತೆ ಯಾವುದೆ ಮನವಿ ಸಲ್ಲಿಸಿಲ್ಲ ಮತ್ತು ಪತ್ರ ವ್ಯವಹಾರವನ್ನೂ ಮಾಡಿಲ್ಲ,’ ಎಂದು ನ್ಯಾಯಮೂರ್ತಿ ಸಾಂಘ್ವಿ ಹೇಳಿದರು.

ಚಾಣಕ್ಯಪುರಿಯ ಎಸ್​ಡಿಎಮ್ ಗೀತಾ ಗ್ರೋವರ್ ಅವರು ಏಪ್ರಿಲ್ 25ರಮದು ಈ ಆದೇಶವನ್ನು ಜಾರಿಮಾಡಿದ್ದು ಆದೇಶದ 6ನೇ ಪ್ಯಾರಾದಲ್ಲಿ ಕೊವಿಡ್​ ಸೌಲಭ್ಯಕ್ಕಾಗಿ ದೆಹಲಿ ಹೈಕೋರ್ಟ್​ನಿಂದ ಮನವಿ ಬಂದಿದೆ ಎಂದು ಹೇಳಿರುವ ಸಂಗತಿಯು ನ್ಯಾಯಾಲಯದ ಬಗ್ಗೆ ಆಪಾರ್ಥ ಮೂಡಿಸುವಂತಾಗಿದೆ ಎಂದು ಹೇಳಿರುವ ಪೀಠವು, ‘ಈ ಹೋಟೆಲ್ ಆಗಲೀ ಅಥವಾ ಬೇರೆ ಯಾವುದೇ ಹೋಟೆಲ್​ನಲ್ಲಾಗಲೀ ಸೌಲಭ್ಯವನ್ನು ಮಾಡಿಕೊಂಡಬೇಕೆಂದು ಹೈಕೋರ್ಟ್​ನಿಂದ ಮನವಿ ಹೋಗಿಲ್ಲ. ನಾವು ಮೀಟಿಂಗ್ ಮಾಡಿದ ಉದ್ದೇಶವೇನೆಂದರೆ ನ್ಯಾಯಾಂಗಕ್ಕೆ ಸಂಬಂಧಿಸಿದ ಮತ್ತು ನಿರ್ದಿಷ್ಟವಾಗಿ ಹೇಳುವುದಾದರೆ ಕೆಳ ಹಂತದ ಕೋರ್ಟುಗಳ ನ್ಯಾಯಾಧೀಶರು ಮತ್ತು ಅಧಿಕಾರಿಗಳು ಸೋಂಕಿಗೊಳಗಾಗಿದ್ದಾರೆ ಮತ್ತು ಅವರ ಕುಟುಂಬದ ಸದಸ್ಯರಿಗೂ ಸೋಂಕು ತಗುಲಿದೆ. ಈಗಾಗಲೇ ನಾವು ಇಬ್ಬರು ಅಧಿಕಾರಿಗಳನ್ನು ಕಳೆದುಕೊಂಡಿದ್ದೇವೆ,’ ಎಂದು ಹೇಳಿತು.

‘ಇಷ್ಟಕ್ಕೂ ನಮಗೆ ಬೇಕಾಗಿರುವುದೇನೆಂದರೆ, ನಮ್ಮಲ್ಲಿ ಯಾರಿಗಾದರೂ ಆಸ್ಪತ್ರೆಯಲ್ಲಿ ದಾಖಲಿಸುವ ಪ್ರಸಂಗ ಎದುರಾದರೆ ಅದಕ್ಕೊಂದು ವ್ವವಸ್ಥೆ ಬೇಕು ಹಾಗೂ ನಮಗದು ಲಭ್ಯವಾಗಬೇಕು. ನಾವು ಹೇಳಿದ್ದು ಇದು, ಆದರೆ ಸರ್ಕಾರದ ಆದೇಶದಲ್ಲಿ ಬೇರೇನೋ ಇದೆ.’ ಎಂದು ಕೋರ್ಟ್ ಹೇಳಿತು.

‘ನಿಮಗೆ ಆನ್ಲಜನಕ ಪೂರೈಸುವುದು ಸಾಧ್ಯವಾಗುತ್ತಿಲ್ಲ ಅದರೆ ನಮಗೆ 100 ಬೆಡ್​​ಗಳ ಸೌಲಭ್ಯ ಒದಗಿಸುವ ಮಾತನ್ನು ಆಡುತ್ತೀರಿ. ಬಹಳ ದುರದೃಷ್ಟಕರ ಸಂಗತಿ ಇದು,’ ಅಂತ ನ್ಯಾಯಮೂರ್ತಿ ರೇಖಾ ಪಲ್ಲಿ ಹೇಳಿದರು.

‘ನಿಮ್ಮ ಸಮಸ್ಯೆಯೇನೆಂದರೆ ಯಾವುದೇ ಪೂರ್ವಾಲೋಚನೆ ಇಲ್ಲದೆ, ನೀವು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಯಾವ ಪರಿಣಾಮ ಬೀರುತ್ತವೆ ಅಂತ ಯೋಚಿಸದೆ ಮನಸ್ಸಿಗೆ ತೋಚಿದಂತೆ ನಿರ್ಧಾರಗಳನ್ನು ಪ್ರಕಟಿಸುತ್ತಿರುವಿರಿ. ನಾವು ಕೇಳದೆ ಇದ್ದರೂ ನಮಗಾಗಿ ಕೊವಿಡ್​ ಅರೈಕೆಗೆ ವ್ಯವಸ್ಥೆ ಮಾಡುವ ನಿರ್ಧಾರ ತೆಗೆದುಕೊಂಡು ಆದೇಶವನ್ನೂ ಜಾರಿ ಮಾಡುತ್ತೀರಿ. ಸಿಬ್ಬಂದಿ, ವೈದ್ಯರು, ಅಮ್ಲಜನಕ, ವೆಂಟಿಲೇಟರ್ ಮತ್ತು ಇತರ ವೈದ್ಯಕೀಯ ಉಪಕರಣಗಳಿಲ್ಲದ ಆಸ್ಪತ್ರೆಯನ್ನು ಆದೇಶದಲ್ಲಿ ಉಲ್ಲೇಖಿಸುತ್ತೀರಿ.’ ಎಂದು ನ್ಯಾಯಮೂರ್ತಿ ಸಾಂಘ್ವಿ ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

‘ಕೊರ್ಟ್​ ತನ್ನ ಲಾಭಕ್ಕಾಗಿ ಸರ್ಕಾರವನ್ನು ಬಳಸಿಕೊಂಡಿದೆ ಇಲ್ಲವೇ ಸರ್ಕಾರ ನ್ಯಾಯಲಯವನ್ನು ಸಂತೃಪ್ತಿಗೊಳಿಸುವುದಕ್ಕಾಗಿ ಇದನ್ನು ಮಾಡುತ್ತಿದೆ ಎಂಬ ಅರ್ಥ ಈ ಆದೇಶ ಕಲ್ಪಿಸುತ್ತದೆ,’ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.

ವಕೀಲರಾಗಿರರುವ ರಾಹುಲ್ ಮೆಹ್ರಾ, ಮಾಧ್ಯಮದ ಗ್ರಹಿಕೆಯನ್ನು ಯಾರೂ ನಿಯಂತ್ರಿಸುವುದು ಸಾಧ್ಯವಿಲ್ಲ, ವಿಷಯಗಳನ್ನು ಅವು ತಮ್ಮ ಮನಸ್ಸಿಗೆ ತೋಚಿದ ಹಾಗೆ ತಿರುಚಿ ಬಿತ್ತರಿಸುತ್ತವೆ ಎಂದು ಹೇಳಿದರು. ‘ಒಂದು ಸಂಸ್ಥೆಯಾಗಿ ನಮಗಾಗಿ ಒಂದ ವಿಶೇಷ ವ್ಯವಸ್ಥೆ ಮಾಡಿ ಎಂದು ಹೇಳುವುದು ಸಾಧ್ಯವೇ? ಜನರಿಗೆ ಬೆಡ್ ಸಿಗದಿರುವಂಥ ಪರಿಸ್ಥಿತಿಯಲ್ಲಿ ನಮಗಾಗಿ ಪಂಚತಾರಾ ಹೋಟೆಲ್​ನಲ್ಲಿ 100 ಬೆಡ್​ಗಳ ವ್ಯವಸ್ಥೆ ಮಾಡಿ ಅಂತ ಕೇಳುವುದು ವಿವೇಚನೆಹೀನ ಅನಿಸಲಾರದೇ,’ ಎಂದು ಪೀಠ ಸರ್ಕಾರವನ್ನು ಪ್ರಶ್ನಿಸಿತು.

‘ಮಾಧ್ಯದವರ ಗ್ರಹಿಕೆ ದೇವರಿಗೆ ಮಾತ್ರ ಗೊತ್ತಾಗಬೇಕು,’ ಎಂದು ಮೆಹ್ರಾ ಹೇಳಿದರು.

‘ಈ ಆದೇಶ ತಪ್ಪು ಅಂಥ ಹೇಳಿ ಮಾಧ್ಯಮ ತಪ್ಪೇನೂ ಮಾಡುತ್ತಿಲ್ಲ. ನೀವು ಹೀಗೆ ಒಂದು ವಿಶೇಷವಾದ ವ್ಯವಸ್ಥೆಯನ್ನು ಮಾಡುವುದು ತರವಲ್ಲ,’ ಎಂದು ಪೀಠ ಹೇಳಿತು.

ಆದೇಶವನ್ನು ಮತ್ತೊಮ್ಮೆ ನೋಡಿ ಕೋರ್ಟ್​ಗೆ ಪ್ರತಿಕ್ರಿಯೆ ಸಲ್ಲಿಸಲಾಗುವುದೆಂದು ಮೆಹ್ರಾ ಹೇಳಿದರು. ‘ವಕೀಲರಿಗಾಗಿ ಕೊವಿಡ್​ ಆರೈಕೆಗೆ ವ್ಯವಸ್ಥೆ ಮಾಡುವಂತೆ ಮನವಿಯೊಂದನ್ನು ಭಾರತದ ಮುಖ್ಯ ನ್ಯಾಯಾಧೀಶರಿಗೆ ಸಲ್ಲಿಸಿರುವುದು ನನಗೆ ಗೊತ್ತಿದೆ. ಅದೇನಾದರೂ ಅಸ್ತಿತ್ವಕ್ಕೆ ಬಂದರೆ ಕೇವಲ ವಕೀಲರಿಗೆ ಮಾತ್ರ ಯಾಕೆ ಪ್ರತ್ಯೇಕ ವ್ಯವಸ್ಥೆ ಎಂದು ಮಾಧ್ಯಮದವರು ಕೇಳುತ್ತಾರೆ,’ ಎಂದು ಮೆಹ್ರಾ ಹೇಳಿದರು.

‘ಪ್ರತಿವಾದಿಗಳ ಪರವಾಗಿ ತ್ರಿಪಾಥಿ ಅವರು ನೋಟೀಸನ್ನು ಅಂಗೀಕರಿಸಿದ್ದಾರೆ ಮತ್ತು ಉತ್ತರವನ್ನು ಸಲ್ಲಿಸಲು ಬಯಸಿದ್ದಾರೆ. ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಈ ತರಹದ ಆದೇಶಗಳನ್ನು ಹಿಂಪಡೆಯಬೇಕು, ಇಲ್ಲದೇ ಹೋದ ಪಕ್ಷದಲ್ಲಿ ನ್ಯಾಯಾಲಯವೇ ಈ ಆದೇಶವನ್ನು ರದ್ದು ಮಾಡುತ್ತದೆ,’ ಎಂದು ಪೀಠವು ನಿರ್ದೇಶನ ನೀಡಿತು.

ಚಾಣಕ್ಯಪುರಿ ಸಬ್-ಡಿವಿಜನ್​ನ ಎಸ್​ಡಿಎಮ್ ಸದರಿ ವಿಷಯಕ್ಕೆ ಸಂಬಂಧಿಸಿದಂತೆ ನೋಟಿಫಿಕೇಶನ್ ಜಾರಿಮಾಡಿದ್ದಾರೆ. ನೋಟಿಫಿಕೇಶನ್ ಪ್ರಕಾರ ಕೊವಿಡ್ ಆರೈಕೆ ಕೇಂದ್ರವನ್ನು ಪ್ರೈಮಸ್ ಆಸ್ಪತ್ರೆ ನಡೆಸುತ್ತದೆ ಮತ್ತು ದೆಹಲಿ ಸರ್ಕಾರ ಹೇಳಿರುವ ಕೆಳಕೊಂಡ ಅಂಶಗಳನ್ನು ಆಸ್ಪತ್ರೆ ಪಾಲಿಸಬೇಕು.

-ವೈದ್ಯಕೀಯ ತ್ಯಾಜ್ಯ ವಿಲೇವಾರಿಯ ಹೊಣೆಗಾರಿಕೆ ಅಸ್ಪತ್ರೆಯದಾಗಿರುತ್ತದೆ.

-ಹೋಟೆಲ್ ಸಿಬ್ಬಂದಿಗೆ ರಕ್ಷಣಾ ಕವಚವನ್ನು ಒದಗಿಸಲಾಗಿವುದು ಮತ್ತು ಅಗತ್ಯವಿರುವ ತರಬೇತಿಯನ್ನು ನೀಡಲಾಗುವುದು.

-ಅಂಬ್ಯುಲೆನ್ಸ್ ಸೇವೆಯನ್ನು ಪ್ರೈಮಸ್ ಅಸ್ಪತ್ರೆ ಒದಗಿಸುತ್ತದೆ.

-ಹೋಟೆಲ್ ಸಿಬ್ಬಂದಿಯ ಕೊರೆತೆ ಎದುರಾದರೆ ಅದನ್ನು ಅಸ್ಪತ್ರೆಯೇ ನೀಗಿಸಿಕೊಳ್ಳಬೇಕು

-ರೂಮ್ ಸರ್ವಿಸ್, ಹೌಸ್​ಕೀಪಿಂಗ್, ರೂಮುಗಳನ್ನು ಸ್ಯಾನಿಟೈಸ್ ಮಾಡುವುದು, ರೋಗಿಗಳಿಗೆ ಆಹಾರ ಒದಗಿಸುವುದು ಮುಂತಾದವುಗಳನ್ನು ಹೋಟೆಲ್ ನೋಡಿಕೊಳ್ಳುತ್ತದೆ.

-ಎಲ್ಲ ಚಾರ್ಜುಗಳನ್ನು ಆಸ್ಪತ್ರೆಯೇ ಸಂಗ್ರಹಿಸಿ ಹೋಟೆಲಿನ ಬಾಬತ್ತನ್ನು ಚುಕ್ತಾ ಮಾಡಬೇಕು.

-ಹೋಟೆಲ್ ಮತ್ತು ಆಸ್ಪತ್ರೆ ನಡುವೆ ಆಗುವ ದರಗಳ ಒಪ್ಪಿಗೆಯ ಮೇರೆಗೆ ಆಸ್ಪತ್ರೆಯ ವೈದ್ಯರು, ನರ್ಸ್​ಗಳು ಅಥವಾ ಇತರ ಪ್ಯಾರಾ ಮೆಡಿಕಲ್ ಸ್ಟಾಫ್​ನವರು ಹೋಟಲ್ ರೂಮುಗಳಲ್ಲಿ ತಮ್ಮ ಸ್ವಂತ ವೆಚ್ಚದಲ್ಲಿ ತಂಗಬಹುದು.

ಇದನ್ನೂ ಓದಿ: ಸರಿಯಾಗಿ ಕೆಲಸ ಮಾಡದಿದ್ದರೆ ಅಧಿಕಾರ ವಹಿಸಿಕೊಳ್ಳಲು ಕೇಂದ್ರಕ್ಕೆ ಸೂಚಿಸಬೇಕಾಗುತ್ತೆ: ದೆಹಲಿ ಸರ್ಕಾರಕ್ಕೆ ಹೈಕೋರ್ಟ್ ಚಾಟಿ

Published On - 1:39 am, Wed, 28 April 21