ಕೊವಿಡ್ ಲಸಿಕೆಗೆ ಹೆಚ್ಚಿದ ಬೇಡಿಕೆ; ಕೊವ್ಯಾಕ್ಸ್ ಮೂಲಕ ಎಲ್ಲ ದೇಶಗಳಿಗೆ ಲಸಿಕೆ ಪೂರೈಕೆ: ವಿಶ್ವ ಆರೋಗ್ಯ ಸಂಸ್ಥೆ

COVID-19 Vaccine: 2021ರ ಮೊದಲ ಭಾಗದಲ್ಲಿಯೇ ಎಲ್ಲ ದೇಶಗಳು ಲಸಿಕೆಗಾಗಿ ಮನವಿ ಮಾಡಿದ್ದವು. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನಿಗದಿತ ಸಮಯಕ್ಕೆ ಲಸಿಕೆ ತಲುಪಿಸಲಾಗದೆ ವಿಳಂಬವಾಗಿತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ ಹೇಳಿದೆ.

ಕೊವಿಡ್ ಲಸಿಕೆಗೆ ಹೆಚ್ಚಿದ ಬೇಡಿಕೆ; ಕೊವ್ಯಾಕ್ಸ್ ಮೂಲಕ ಎಲ್ಲ ದೇಶಗಳಿಗೆ ಲಸಿಕೆ ಪೂರೈಕೆ: ವಿಶ್ವ ಆರೋಗ್ಯ ಸಂಸ್ಥೆ
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on:Apr 09, 2021 | 4:42 PM

ಜಿನೇವಾ: ಭಾರತದಲ್ಲಿ ಕೊವಿಡ್ ಲಸಿಕೆಗೆ ಬೇಡಿಕೆ ಹೆಚ್ಚುತ್ತಿದ್ದು ಶೀಘ್ರದಲ್ಲೇ ಕೊವ್ಯಾಕ್ಸ್ ಯೋಜನೆಯಡಿಯಲ್ಲಿ ಎಲ್ಲ ದೇಶಗಳಿಗೆ ಲಸಿಕೆಗಳನ್ನು ಪೂರೈಸಲಿದ್ದೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಜಗತ್ತಿನ ಎಲ್ಲ ದೇಶಗಳಿಗೆ ಕೊವಿಡ್-19 ಲಸಿಕೆ ಲಭ್ಯವಾಗುವಂತೆ ಮಾಡುವ ವಿಶ್ವ ಆರೋಗ್ಯ ಸಂಸ್ಥೆಯ ಉಪಕ್ರಮವಾಗಿದೆ ಕೊವ್ಯಾಕ್ಸ್. 2021 ಫೆಬ್ರವರಿ 24ರಂದು ಘಾನಾ ದೇಶಕ್ಕೆ ಮೊದಲ ಬಾರಿ ಕೊವಿಡ್ ಲಸಿಕೆ ಕಳುಹಿಸಿದ್ದ ಕೊವ್ಯಾಕ್ಸ್ ಇಲ್ಲಿಯವರೆಗೆ 100ಕ್ಕಿಂತಲೂ ಹೆಚ್ಚು ದೇಶಗಳಿಗೆ ಲಸಿಕೆ ಸರಬರಾಜು ಮಾಡಿದೆ. 6 ಖಂಡಗಳಿಗೆ 38 ದಶಲಕ್ಷಕ್ಕಿಂತಲೂ ಹೆಚ್ಚು ಡೋಸ್ ಲಸಿಕೆಗಳನ್ನು ಕೊವ್ಯಾಕ್ಸ್ ನೀಡಿದೆ. ಆಸ್ಟ್ರಾಜೆನಿಕಾ, ಫೈಜರ್- ಬಯೋಎನ್​ಟೆಕ್ ಮತ್ತು ಸೆರಂ ಇನ್ಸಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ತಯಾರಿಸಿದ ಲಸಿಕೆಗಳನ್ನು ವಿತರಿಸಲಾಗಿದೆ.

2021ರ ಮೊದಲ ಭಾಗದಲ್ಲಿಯೇ ಎಲ್ಲ ದೇಶಗಳು ಲಸಿಕೆಗಾಗಿ ಮನವಿ ಮಾಡಿದ್ದವು. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನಿಗದಿತ ಸಮಯಕ್ಕೆ ಲಸಿಕೆ ತಲುಪಿಸಲಾಗದೆ ವಿಳಂಬವಾಗಿತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ ಹೇಳಿದೆ.

ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಲಸಿಕೆ ಸರಬರಾಜು ಕಡಿಮೆಯಾಗಿದ್ದರೂ ಲಸಿಕೆ ಉತ್ಪಾದನಾ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಉತ್ತಮಗೊಳಿಸುವ ಕಾರ್ಯದಲ್ಲಿ ತೊಡಗಿದ್ದವು. ಅದೇ ವೇಳೆ ಭಾರತದಲ್ಲಿ ಕೊವಿಡ್ 19 ಲಸಿಕೆಗೆ ಬೇಡಿಕೆ ಹೆಚ್ಚಾಗಿದ್ದು, ವರ್ಷದ ಮೊದಲ ಆರು ತಿಂಗಳಲ್ಲಿ ಎಲ್ಲ ದೇಶಗಳಿಗೆ ಲಸಿಕೆ ವಿತರಣೆ ಮಾಡುವ ನಿರೀಕ್ಷೆಯನ್ನು ಕೊವ್ಯಾಕ್ಸ್ ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಟಣೆ ಹೇಳಿದೆ.

44 ದೇಶಗಳಿಗೆ ಉಚಿತವಾಗಿ ಲಸಿಕೆ ನೀಡಲಾಗಿದೆ- ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿಕೆ 25 ದೇಶಗಳಿಗೆ 3.58 ಕೋಟಿ ಡೋಸ್ ಮಾರಾಟ ಮಾಡಲಾಗಿದ್ದು, 39 ದೇಶಗಳಿಗೆ 1.82 ಕೋಟಿ ಡೋಸ್  ನೀಡಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.  ವಿಶ್ವ ಆರೋಗ್ಯ ಸಂಸ್ಥೆಯ  ಕೊವ್ಯಾಕ್ಸ್ ಯೋಜನೆಯಡಿ ಲಸಿಕೆ ನೀಡಿದ್ದೇವೆ ಎಂದಿದ್ದಾರೆ ಸಚಿವರು. 89 ಲಕ್ಷ  ಆರೋಗ್ಯ ಕಾರ್ಯಕರ್ತರಿಗೆ  ಮೊದಲ ಡೋಸ್,  54 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ 2ನೇ ಡೋಸ್,  98 ಲಕ್ಷ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್, 45 ಲಕ್ಷ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ 2ನೇ ಡೋಸ್ ನೀಡಲಾಗಿದೆ  ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.

ಭಾರತದ ಸಂಗ್ರಹದಲ್ಲಿರುವುದು 5 ದಿನಕ್ಕಾಗುವಷ್ಟು ಕೊವಿಡ್ ಲಸಿಕೆ

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಮುಂದಿನ 5 ದಿನಗಳಿಗಾಗುವಷ್ಟು ಕೊವಿಡ್ ಲಸಿಕೆ ಸಂಗ್ರಹದಲ್ಲಿದೆ. ದೇಶದಾದ್ಯಂತ ಲಸಿಕೆ ನೀಡುವ ಪ್ರಕ್ರಿಯೆ ಮುಂದುವರಿದಿದ್ದು, ಲಸಿಕ ಕೊರತೆ ನೀಗಿಸುವಂತೆ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ. ಮುಂದಿನ ಒಂದು ವಾರದಲ್ಲಿ ಹೆಚ್ಚಿನ ಲಸಿಕೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಆಂಧ್ರ ಪ್ರದೇಶ ಮತ್ತು ಬಿಹಾರದಲ್ಲಿ ಸದ್ಯ ಎರಡು ದಿನಗಳಿಗಾಗುವಷ್ಟು ಲಸಿಕೆ ಉಳಿದಿದೆ. ಒಡಿಶಾದಲ್ಲಿ ನಾಲ್ಕು ದಿನಗಳಿಗಾಗುವಷ್ಟು ಲಸಿಕೆ ಬಾಕಿ ಇದೆ. ಏಪ್ರಿಲ್ ತಿಂಗಳಲ್ಲಿ ದೇಶದಾದ್ಯಂತ 3.6 ದಶಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ಒಟ್ಟು 19.6 ದಶಲಕ್ಷ ಡೋಸ್ ಈಗ ಸಂಗ್ರಹದಲ್ಲಿದ್ದು ಇದು ಐದೂವರೆ ದಿನಕ್ಕಾಗುವಷ್ಟಾಗಿದೆ. ಮುಂದಿನ ವಾರದಲ್ಲಿ 24.5 ದಶಲಕ್ಷ ಡೋಸ್ ಲಸಿಕೆ ತಯಾರಾಗಲಿದ್ದು ಒಂದು ವಾರಕ್ಕಾಗುವಷ್ಟಿದೆ.

ಆಂಧ್ರ ಪ್ರದೇಶದಲ್ಲಿ ಕೇವಲ 1.4 ಲಕ್ಷ ಡೋಸ್ ಲಸಿಕೆ ಸಂಗ್ರಹದಲ್ಲಿದ. ಏಪ್ರಿಲ್ 1ರಿಂದ ಇಲ್ಲಿ ಪ್ರತಿ ದಿನ ಇಲ್ಲಿ ಸರಾಸರಿ 1.1 ಲಕ್ಷಕ್ಕಿಂತ ಡೋಸ್ ಲಸಿಕೆ ವಿತರಣೆ ನಡೆಯುತ್ತದೆ. 14.6 ಲಕ್ಷ ಡೋಸ್ ಲಸಿಕೆ ಆದಷ್ಟು ಬೇಗ ತಲುಪಲಿ ಎಂದು ಆಂಧ್ರ ಸರ್ಕಾರ ಕಾಯುತ್ತಿದೆ. ಬಿಹಾರದಲ್ಲಿಯೂ ಇದೇ ಪರಿಸ್ಥಿತಿ ಇದೆ. ಪ್ರತಿದಿನವೂ ಸರಾಸರಿ 1.7ಲಕ್ಷ ಡೋಸ್ ಲಸಿಕೆ ವಿತರಣೆಯಾಗುತ್ತಿದ್ದು 2.6 ಲಕ್ಷ ಡೋಸ್ ಲಸಿಕೆ ಸಂಗ್ರಹದಲ್ಲಿದೆ. ಅತೀ ಹೆಚ್ಚು ಜನಸಂಖ್ಯೆಯಿರುವ ತಮಿಳುನಾಡಿನಲ್ಲಿ ಕಳೆದ ವಾರ ಇ ಲಸಿಕೆ ವಿತರಣೆ ಅತೀ ಕಡಿಮೆ ಎಂದರೆ 37,000 ಆಗಿದ್ದು, ಈಗಲೂ 17 ಡೋಸ್ ಲಸಿಕೆ ಸಂಗ್ರಹದಲ್ಲಿದೆ. ಇತರ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು ವಾರಕ್ಕಾಗುವಷ್ಟೇ ಲಸಿಕೆ ಬಾಕಿ ಉಳಿದೆ.

ಇದನ್ನೂ ಓದಿ: ಲಸಿಕೆ ಪಡೆಯಲು ಹಿಂದೇಟು ಹಾಕಿದ ಜನ; ಮುಸ್ಲಿಂ ಧರ್ಮಗುರುಗಳಿಗೆ ಮನವೊಲಿಸಿ ಲಸಿಕೆ ನೀಡಿದ ಜಿಲ್ಲಾಡಳಿತ

Vaccine Utsav: ಭಾರತೀಯರೆಲ್ಲರಿಗೂ ಕೊರೊನಾ ಲಸಿಕೆ ನೀಡಬೇಕು; ಪ್ರಧಾನಿ ಮೊದಿಗೆ ಪತ್ರ ಬರೆದ ರಾಹುಲ್ ಗಾಂಧಿ

Published On - 4:38 pm, Fri, 9 April 21