ಕೊರೊನಾ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ನಿಂದ ಕೆಳಗಿಳಿದು ಕಬ್ಬಿನಹಾಲು ಕುಡಿದ ಆರೋಗ್ಯ ಕಾರ್ಯಕರ್ತ; ಸ್ಥಳದಲ್ಲಿದ್ದವರಿಗೆಲ್ಲ ಆತಂಕ
ನೀವು ಕೊರೊನಾ ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೀರಿ, ಆದರೂ ಮಾಸ್ಕ್ ಕೂಡ ಸರಿಯಾಗಿ ಧರಿಸಿಲ್ಲವಲ್ಲ ಎಂದು ವಿಡಿಯೋ ಮಾಡುತ್ತಿದ್ದವರು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಈ ಆರೋಗ್ಯ ಕಾರ್ಯಕರ್ತ, ಕೊರೊನಾ ಇರುವುದು ನನಗಲ್ಲ.. ಅವನಿಗೆ ಎಂದು ರೋಗಿಯ ಕಡೆ ಕೈ ತೋರಿಸಿದ್ದಾರೆ.
ಭೋಪಾಲ್: ಕೊವಿಡ್ 19 ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಆಂಬುಲೆನ್ಸ್ನಿಂದ ಆರೋಗ್ಯ ಕಾರ್ಯಕರ್ತನೊಬ್ಬ ಕೆಳಗಿಳಿದು ಜ್ಯೂಸ್ ಕುಡಿದ ವಿಡಿಯೋ ವೈರಲ್ ಆಗುತ್ತಿದೆ. ಇದು ಮಧ್ಯಪ್ರದೇಶದ್ದು ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಕೊವಿಡ್-19 ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ, ಆಂಬುಲೆನ್ಸ್ ಚಾಲಕ, ಅವರ ಜತೆಗಿರುವ ಆರೋಗ್ಯ ಸಿಬ್ಬಂದಿ ಪಿಪಿಇ ಕಿಟ್ ಹಾಕಿಕೊಳ್ಳಬೇಕು. ಕೊರೊನಾ ಸಾಂಕ್ರಾಮಿಕ ರೋಗವಾಗಿದ್ದರಿಂದ ಅವರಿಗೆ ರೋಗಿಗಳಿ ಚಿಕಿತ್ಸೆ ನೀಡುವಾಗ, ಅವರೊಂದಿಗೆ ವ್ಯವಹರಿಸುವಾಗ ತುಂಬ ಜಾಗರೂಕತೆಯಿಂದ ಇರಬೇಕಾಗುತ್ತದೆ. ಅಂಥದ್ದರಲ್ಲಿ ಈ ಆರೋಗ್ಯ ಕಾರ್ಯಕರ್ತ ಪಿಪಿಇ ಕಿಟ್ ಹಾಕಿಕೊಂಡು, ಆಂಬುಲೆನ್ಸ್ನಿಂದ ಕೆಳಗಿಳಿದು ಜ್ಯೂಸ್ ಕುಡಿದಿದ್ದಾರೆ.
ಇದು ಮಧ್ಯಪ್ರದೇಶದ ಶಾಹ್ದೋಲ್ ಜಿಲ್ಲೆಯಲ್ಲಿ ಚಿತ್ರೀಕರಿಸಲಾದ ವಿಡಿಯೋ. ಕೊರೊನಾ ರೋಗಿಯನ್ನು ಕರೆದುಕೊಂಡು ಹೋಗಲಾಗುತ್ತಿದ್ದ ಆಂಬುಲೆನ್ಸ್ನಲ್ಲಿ ಇಬ್ಬರು ಆರೋಗ್ಯ ಕಾರ್ಯಕರ್ತರು ಇದ್ದರು. ಅದರಲ್ಲಿ ಒಬ್ಬ ಕೆಳಗೆ ಇಳಿದು, ರಸ್ತೆ ಪಕ್ಕ ಇರುವ ಕಬ್ಬಿನ ಹಾಲಿನ ಅಂಗಡಿ ಬಳಿ ನಿಂತು ಕಬ್ಬಿನ ಹಾಲನ್ನು ನೀಡುವಂತೆ ಕೇಳಿದ್ದಾರೆ. ಅವರು ಪಿಪಿಇ ಕಿಟ್ ಧರಿಸಿದ್ದರೂ, ಮಾಸ್ಕ್ ಗಲ್ಲದ ಮೇಲೆ ಇತ್ತು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಎಂದು ನಿಯಮವೇ ಇದೆ. ಹಾಗಿರುವಾಗ ಆಂಬುಲೆನ್ಸ್ನಲ್ಲಿ ಕೊರೊನಾ ರೋಗಿಯನ್ನು ಕರೆದುಕೊಂಡು ಹೋಗುವಾಗ, ಅದನ್ನು ನಿಲ್ಲಿಸಿ ಕೆಳಗಳಿದಿದ್ದೇ ನಿಯಮ ಉಲ್ಲಂಘನೆ. ಅದರಲ್ಲೂ ಮಾಸ್ಕ್ ಧರಿಸಿದೆ ಇರುವುದು ಎಳ್ಳಷ್ಟೂ ಸರಿಯಲ್ಲ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ನೀವು ಕೊರೊನಾ ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೀರಿ, ಆದರೂ ಮಾಸ್ಕ್ ಕೂಡ ಸರಿಯಾಗಿ ಧರಿಸಿಲ್ಲವಲ್ಲ ಎಂದು ವಿಡಿಯೋ ಮಾಡುತ್ತಿದ್ದವರು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಈ ಆರೋಗ್ಯ ಕಾರ್ಯಕರ್ತ, ಕೊರೊನಾ ಇರುವುದು ನನಗಲ್ಲ.. ಅವನಿಗೆ. ನಾನು ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇನೆ ಅಷ್ಟೇ. ನಾನು ಜ್ಯೂಸ್ ಕುಡಿಯಲು ಬಿಡಿ ಎಂದು ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ವಿಡಿಯೋ ಮಾಡುತ್ತಿದ್ದಾರೆ ಎಂದು ಗೊತ್ತಾದ ತಕ್ಷಣ ಮತ್ತೆ ಮಾಸ್ಕ್ ಧರಿಸಿದ್ದಾರೆ.
ಸದ್ಯ ದೇಶದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರಿಸುತ್ತಿದ್ದು, ದಿನವೊಂದಕ್ಕೆ ಲಕ್ಷದಷ್ಟು ಪ್ರಕರಣಗಳು ದಾಖಲಾಗುತ್ತಿವೆ. ಅದರಲ್ಲಿ ಶೇ.84ರಷ್ಟು ಪಾಲು 10 ರಾಜ್ಯಗಳದ್ದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಈ 10 ರಾಷ್ಟ್ರಗಳ ಪೈಕಿ ಮಧ್ಯಪ್ರದೇಶವೂ ಒಂದು. ಇಂದು ಒಂದೇ ದಿನ ಭಾರತದಲ್ಲಿ 1,31,968 ಸೋಂಕಿನ ಪ್ರಕರಣಗಳು ದಾಖಲಾಗಿವೆ.
शहडोल में कुछ स्वास्थ्यकर्मी एक #कोरोना संक्रमित को लेकर खुलेआम शहर के बीच घूमते नजर आए, यही नही कोरोना संक्रमित को लेकर शहर के बीच गन्ने के जूस का आनंद लेते रहे @ndtv @ndtvindia #COVID19India pic.twitter.com/Qg07TcR6ei
— Anurag Dwary (@Anurag_Dwary) April 9, 2021
ಇದನ್ನೂ ಓದಿ: Karnataka Bus Strike Live: ಸಾರಿಗೆ ನೌಕರರ ಮುಷ್ಕರಕ್ಕೆ ಮೂರನೇ ದಿನ.. ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ ಸಿಬ್ಬಂದಿ
ಮಾರ್ಸ್ ಪರ್ಸಿವರೆನ್ಸ್ ರೋವರ್ ಕಳುಹಿಸಿದೆ ನೋಡಿ.. ಚೊಚ್ಚಲ ಬಾಟ್ ಸೆಲ್ಫಿ!
Published On - 2:56 pm, Fri, 9 April 21