ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ನಿರಂತರ ಮಳೆ (Rain) ಸುರಿಯುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕುಸಮಳಿ ಗ್ರಾಮದ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿದೆ. ಇದರಿಂದ ಬೆಳಗಾವಿ-ಗೋವಾ (Belagavi-Goa) ರಸ್ತೆ ಸಂಚಾರ ಮತ್ತೆ ಬಂದ್ ಆಗಿದೆ. ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಇದಾಗಿದ್ದು, ಈ ಸೇತುವೆ ಕುಸಿಯುವ ಕೆಲವೇ ಸೆಕೆಂಡ್ ಹಿಂದೆ ಬಸ್ ಪಾಸ್ ಆಗಿದೆ. ಅದೃಷ್ಟವಶಾತ್ ಬಸ್ ದಾಟಿದ ಬಳಿಕ ಸೇತುವೆ ನದಿಗೆ ಕೊಚ್ಚಿ ಹೋಗಿದೆ.
ಬೆಳಗಾವಿ, (ಜೂನ್ 15): ನಿರಂತರ ಮಳೆ (Rain) ಸುರಿಯುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕುಸಮಳಿ ಗ್ರಾಮದ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿದೆ. ಇದರಿಂದ ಬೆಳಗಾವಿ-ಗೋವಾ (Belagavi-Goa) ರಸ್ತೆ ಸಂಚಾರ ಮತ್ತೆ ಬಂದ್ ಆಗಿದೆ. ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಇದಾಗಿದ್ದು, ಈ ಸೇತುವೆ ಕುಸಿಯುವ ಕೆಲವೇ ಸೆಕೆಂಡ್ ಹಿಂದೆ ಬಸ್ ಪಾಸ್ ಆಗಿದೆ. ಅದೃಷ್ಟವಶಾತ್ ಬಸ್ ದಾಟಿದ ಬಳಿಕ ಸೇತುವೆ ನದಿಗೆ ಕೊಚ್ಚಿ ಹೋಗಿದೆ. ಇನ್ನು ಈ ಸೇತುವೆ ಕೊಚ್ಚಿಕೊಂಡು ಹೋಗಿದ್ದರಿಂದ ಜಾಂಬೋಟಿ, ಕಣಕುಂಬಿ ಸೇರಿ ಹಲವು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಇದರಿಂದ ಅಕ್ಕಪಕ್ಕದ ಗ್ರಾಮಸ್ಥರು, ಸವಾರರು ಪರದಾಡುತ್ತಿದ್ದಾರೆ.
Latest Videos