ಜಾನ್ಸನ್ & ಜಾನ್ಸನ್ ಕಂಪನಿಯ ಲಸಿಕೆ ಪ್ರಯೋಗಕ್ಕೆ ಅನುಮತಿ ನೀಡಿದ ಭಾರತ ಸರ್ಕಾರ

ಅಮೆರಿಕ ಮೂಲದ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಗೆ ಭಾರತದಲ್ಲಿ ಎರಡು ಹಂತದ ಪ್ರಯೋಗ ನಡೆಸಲು ಅನುಮತಿ ಸಿಕ್ಕಿದೆ. ಭಾರತದಲ್ಲಿ ಕೋವಿಡ್ ಲಸಿಕೆಗಳು ದೊರೆಯುವ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಇದು ಮಹತ್ವದ ಕ್ರಮ ಎನಿಸಿದೆ.

ಜಾನ್ಸನ್ & ಜಾನ್ಸನ್ ಕಂಪನಿಯ ಲಸಿಕೆ ಪ್ರಯೋಗಕ್ಕೆ ಅನುಮತಿ ನೀಡಿದ ಭಾರತ ಸರ್ಕಾರ
ಜಾನ್ಸನ್ ಅಂಡ್ ಜಾನ್ಸನ್ ಲಸಿಕೆ (ಸಂಗ್ರಹ ಚಿತ್ರ)
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on: Apr 09, 2021 | 4:42 PM

ದೆಹಲಿ: ಜಾನ್ಸನ್ & ಜಾನ್ಸನ್​ ಕಂಪನಿಯ ಸಿಂಗಲ್ ಡೋಸ್ ಕೊವಿಡ್ ತಡೆ ಲಸಿಕೆ ಪ್ರಯೋಗಕ್ಕೆ ಭಾರತ ಸರ್ಕಾರವು ಅನುಮತಿ ನೀಡಿದೆ. ಅಮೆರಿಕ ಮೂಲದ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಗೆ ಭಾರತದಲ್ಲಿ ಎರಡು ಹಂತದ ಪ್ರಯೋಗ ನಡೆಸಲು ಅನುಮತಿ ಸಿಕ್ಕಿದೆ. ಭಾರತದಲ್ಲಿ ಕೋವಿಡ್ ಲಸಿಕೆಗಳು ದೊರೆಯುವ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಇದು ಮಹತ್ವದ ಕ್ರಮ ಎನಿಸಿದೆ. ಈ ಸಂಬಂಧ ಔಷಧ ಮಹಾ ನಿಯಂತ್ರಕರ (DGCA) ಸೂಚನೆಗೆ ಪ್ರತಿಕ್ರಿಯಿಸಿರುವ ಜಾನ್ಸನ್ & ಜಾನ್ಸನ್, ಭಾರತದಲ್ಲಿ ಶೀಘ್ರ ಲಸಿಕೆ ಪ್ರಯೋಗ ಆರಂಭಿಸಲಾಗುವುದು ಎಂದು ತಿಳಿಸಿದೆ.

ದೇಶದಲ್ಲಿ ಕೊರೊನಾ 2ನೇ ಅಲೆ ಕಾಣಿಸಿಕೊಂಡ ನಂತರ ಲಸಿಕೆಗಳಿಗೆ ವ್ಯಾಪಕ ಬೇಡಿಕೆ ವ್ಯಕ್ತವಾಗಿದೆ. ನಮ್ಮಲ್ಲಿ ಲಸಿಕೆ ಸಂಗ್ರಹ ಮುಗಿದಿದೆ ಎಂದು ಕೆಲ ರಾಜ್ಯಗಳು ಹೇಳಿಕೊಂಡಿದ್ದವು. ಸಕಾಲಕ್ಕೆ ಲಸಿಕೆ ಪೂರೈಸಲು ತುಂಬಾ ಕಷ್ಟಪಡುತ್ತಿದ್ದೇವೆ ಎಂದು ಆಸ್ಟ್ರಾಜೆನೆಕಾ ಲಸಿಕೆ ಉತ್ಪಾದಿಸುತ್ತಿರುವ ಪುಣೆಯ ಸೀರಮ್ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾ ಹೇಳಿತ್ತು.

ಜಾನ್ಸನ್​ ಅಂಡ್ ಜಾನ್ಸನ್ ಸಂಸ್ಥೆಯ ಸಿಂಗಲ್ ಶಾಟ್ ಲಸಿಕೆಗೆ ಮುಂದಿನ ದಿನಗಳಲ್ಲಿ ಅನುಮತಿ ದೊರೆತರೆ ಲಸಿಕೆ ಹೆಚ್ಚು ಜನರಿಗೆ ಒದಗಿಸಲು ಸರ್ಕಾರಗಳಿಗೆ ಸಾಧ್ಯವಾಗುತ್ತದೆ. ಆರಂಭದಲ್ಲಿ 1000 ಮಂದಿಯನ್ನು ಲಸಿಕೆ ಪ್ರಯೋಗಕ್ಕಾ ಕಂಪನಿಯು ಗುರುತಿಸಿಕೊಳ್ಳಬೇಕಾಗುತ್ತದೆ. ಇವರಿಗೆ ಲಸಿಕೆ ನೀಡಿ, ಅವರ ದೇಹದಲ್ಲಿ ಆಗುವ ಪರಿಣಾಮಗಳನ್ನು ಆಮೂಲಾಗ್ರ ದಾಖಲಿಸಿ ಹಿಂದಿನ ದತ್ತಾಂಶಗಳ ಜೊತೆಗೆ ಹೋಲಿಸಿ ನೋಡಬೇಕಿದೆ. ಸಮಾಧಾನಕರ ಫಲಿತಾಂಶಗಳು ಬಂದರೆ ಲಸಿಕೆ ಬಳಕೆಗೆ ಅನುಮತಿ ಸಿಗಲಿದೆ.

ಭಾರತದಲ್ಲಿ ಜಾನ್ಸನ್ ಅಂಡ್​ ಜಾನ್ಸನ್ ಕಂಪನಿಯು ‘ಬಯಲಾಜಿಕಲ್ ಇ’ ಕಂಪನಿಯ ಜೊತೆಗೆ ಲಸಿಕೆ ಉತ್ಪಾದನಾ ತಂತ್ರಜ್ಞಾನ ಹಂಚಿಕೊಳ್ಳುವ ಮತ್ತು ಉತ್ಪಾದನೆಗೆ ಬೇಕಾದ ವ್ಯವಸ್ಥೆ ರೂಪಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ. ಕಳೆದ ಫೆಬ್ರುವರಿಯಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಗೆ ಅಮೆರಿಕದಲ್ಲಿ ತುರ್ತುಬಳಕೆ ಅನುಮತಿ ಸಿಕ್ಕಿತ್ತು.

ಭಾರತದಲ್ಲಿ ಲಸಿಕೆ ಸಂಗ್ರಹ ವಿವರ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಮುಂದಿನ 5 ದಿನಗಳಿಗಾಗುವಷ್ಟು ಕೊವಿಡ್ ಲಸಿಕೆ ಸಂಗ್ರಹದಲ್ಲಿದೆ. ದೇಶದಾದ್ಯಂತ ಲಸಿಕೆ ನೀಡುವ ಪ್ರಕ್ರಿಯೆ ಮುಂದುವರಿದಿದ್ದು, ಲಸಿಕ ಕೊರತೆ ನೀಗಿಸುವಂತೆ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ. ಮುಂದಿನ ಒಂದು ವಾರದಲ್ಲಿ ಹೆಚ್ಚಿನ ಲಸಿಕೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಆಂಧ್ರ ಪ್ರದೇಶ ಮತ್ತು ಬಿಹಾರದಲ್ಲಿ ಸದ್ಯ ಎರಡು ದಿನಗಳಿಗಾಗುವಷ್ಟು ಲಸಿಕೆ ಉಳಿದಿದೆ. ಒಡಿಶಾದಲ್ಲಿ ನಾಲ್ಕು ದಿನಗಳಿಗಾಗುವಷ್ಟು ಲಸಿಕೆ ಬಾಕಿ ಇದೆ. ಏಪ್ರಿಲ್ ತಿಂಗಳಲ್ಲಿ ದೇಶದಾದ್ಯಂತ 3.6 ದಶಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ಒಟ್ಟು 19.6 ದಶಲಕ್ಷ ಡೋಸ್ ಈಗ ಸಂಗ್ರಹದಲ್ಲಿದ್ದು ಇದು ಐದೂವರೆ ದಿನಕ್ಕಾಗುವಷ್ಟಾಗಿದೆ. ಮುಂದಿನ ವಾರದಲ್ಲಿ 24.5 ದಶಲಕ್ಷ ಡೋಸ್ ಲಸಿಕೆ ತಯಾರಾಗಲಿದ್ದು ಒಂದು ವಾರಕ್ಕಾಗುವಷ್ಟಿದೆ.

ಆರೋಗ್ಯ ಸಚಿವಾಲಯದ ಅಧಿಕಾರಿಗಳ ಮಾಹಿತಿ ಪ್ರಕಾರ ಲಸಿಕೆ ಸಂಗ್ರಹ ಮತ್ತು ಲಸಿಕೆ ವಿತರಣೆಯ ಕಾರ್ಯಕ್ಕೆ 4ರಿಂದ 8 ದಿನಗಳು ಬೇಕಾಗುತ್ತವೆ. ಪ್ರತಿದಿನವೂ ಎಲ್ಲ ರಾಜ್ಯಗಳೊಂದಿಗೆ ಮಾತುಕತೆ ನಡೆಸಿ ಅಲ್ಲಿನ ಲಸಿಕೆ ವಿತರಣೆ, ಲಸಿಕೆ ಸಂಗ್ರಹದ ಅಂಕಿ ಅಂಶಗಳನ್ನು ಪರಿಶೀಲಿಸಲಾಗುತ್ತದೆ.

ಲಸಿಕೆ ಪಡೆದ 176 ಮಂದಿ ಸಾವು ದೇಶದಲ್ಲಿ ಕೊವಿಡ್ ಲಸಿಕೆ ವಿತರಣೆ ಪ್ರಕ್ರಿಯೆ ಮುಂದುವರಿಯುತ್ತಿದ್ದು 71 ದಿನಗಳ ಅವಧಿಯಲ್ಲಿ ಕೊವಿಡ್ ಲಸಿಕೆ ಸ್ವೀಕರಿಸಿದ 176 ಮಂದಿ ಮೃತಪಟ್ಟಿದ್ದಾರೆ. ಜ.16ರಿಂದ ಮಾರ್ಚ್ 27ರ ಅವಧಿಯಲ್ಲಿ ಇಷ್ಟು ಸಾವು ಸಂಭವಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳನ್ನು ಆಧರಿಸಿ ದಿ ಪ್ರಿಂಟ್ ವರದಿ ಮಾಡಿದೆ. ಆದಾಗ್ಯೂ ಲಸಿಕೆ ಸ್ವೀಕರಿಸಿರುವುದರಿಂದಲೇ ಸಾವು ಸಂಭವಿಸಿದೆ ಎಂದು ಹೇಳಲು ಯಾವುದೇ ಸಾಕ್ಷ್ಯ ಇಲ್ಲ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿ ಹೇಳಿದ್ದಾರೆ. ಜ.16ರಿಂದ ಮಾರ್ಚ್ 27ರ ಅವಧಿಯಲ್ಲಿ 6 ಕೋಟಿಗಿಂತಲೂ ಹೆಚ್ಚು (6,11,13,354) ಕೊವಿಡ್ ಲಸಿಕೆ ನೀಡಲಾಗಿದೆ. ಈ ಪೈಕಿ 176 ಮಂದಿ ಸಾವನ್ನಪ್ಪಿದ್ದಾರೆ.

(Johnson Johnson set to begin India trial of its single shot vaccine soon)

ಇದನ್ನೂ ಓದಿ: ಕೊವಿಡ್ ಲಸಿಕೆಗೆ ಹೆಚ್ಚಿದ ಬೇಡಿಕೆ; ಕೊವ್ಯಾಕ್ಸ್ ಮೂಲಕ ಎಲ್ಲ ದೇಶಗಳಿಗೆ ಲಸಿಕೆ ಪೂರೈಕೆ: ವಿಶ್ವ ಆರೋಗ್ಯ ಸಂಸ್ಥೆ

ಇದನ್ನೂ ಓದಿ: ಲಸಿಕೆ ಪಡೆಯಲು ಹಿಂದೇಟು ಹಾಕಿದ ಜನ; ಮುಸ್ಲಿಂ ಧರ್ಮಗುರುಗಳಿಗೆ ಮನವೊಲಿಸಿ ಲಸಿಕೆ ನೀಡಿದ ಜಿಲ್ಲಾಡಳಿತ

ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು
Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್