ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ: ಪೊಲೀಸ್ ಮುಂದೆಯೇ ಯುವಕನಿಗೆ ಮನಸೋ ಇಚ್ಚೇ ಥಳಿತ
ಮೊಬೈಲ್ ಕದ್ದ ಆರೋಪದಲ್ಲಿ ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಗಳು ಯುವಕನ ಮೇಲ ಅಮಾನುಷ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಕೋಲು ಮುರಿಯುವಂತೆ ಮನಸ್ಸೋ ಇಚ್ಛೆ ಥಳಿಸಿದ್ದಾರೆ. ಹೊಡೆತಕ್ಕೆ ತಡೆಯದೇ ಬಿದ್ದು ಗೋಳಾಡಿದರೂ ಸಹ ಬಿಡದೆ ಹೊಡೆದಿದ್ದಾರೆ. ಇನ್ನು ಖಾಸಗಿ ವ್ಯಕ್ತಿಗಳು ಅಮಾನುಷ ದಾಳಿ ಮಾಡಿದ್ರೂ ಸಹ ಪೊಲೀಸ್ ಸಿಬ್ಬಂದಿ ಸುಮ್ಮನೆ ನೋಡುತ್ತಾ ನಿಂತಿದ್ದಾರೆ.
ಹಾಸನ, (ಜೂನ್ 15): ಮೊಬೈಲ್ ಕದ್ದ ಆರೋಪದಲ್ಲಿ ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಗಳು ಯುವಕನ ಮೇಲ ಅಮಾನುಷ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಕೋಲು ಮುರಿಯುವಂತೆ ಮನಸ್ಸೋ ಇಚ್ಛೆ ಥಳಿಸಿದ್ದಾರೆ. ಹೊಡೆತಕ್ಕೆ ತಡೆಯದೇ ಬಿದ್ದು ಗೋಳಾಡಿದರೂ ಸಹ ಬಿಡದೆ ಹೊಡೆದಿದ್ದಾರೆ. ಇನ್ನು ಖಾಸಗಿ ವ್ಯಕ್ತಿಗಳು ಅಮಾನುಷ ದಾಳಿ ಮಾಡಿದ್ರೂ ಸಹ ಪೊಲೀಸ್ ಸಿಬ್ಬಂದಿ ಸುಮ್ಮನೆ ನೋಡುತ್ತಾ ನಿಂತಿದ್ದಾರೆ. ಮಳೆಯ ನಡುವೆ ರಸ್ತೆಯಲ್ಲಿ ಬಿದ್ದು ಒದ್ದಾಡಿದರೂ ಕರುಣೆ ತೋರದ ಕ್ರೂರಿಗಳು, ಸಮೀಪವೇ ಪೊಲೀಸ್ ಠಾಣೆ ಇದ್ದರೂ ಮಾಹಿತಿ ನೀಡದೆ ತಾವೇ ನೈತಿಕ ಪೊಲೀಸ್ ಗಿರಿ ತೋರಿಸಿದ್ದಾರೆ. ಮೊದಲು ರೂಮ್ ನಲ್ಲಿ ಚೆನ್ನಾಗಿ ಹೊಡೆದಿದ್ದಾರೆ. ಬಳಿಕ ಹೊರಗೆ ಸಹ ಮನಸ್ಸೋ ಇಚ್ಛೇ ಆಕಡೆ ಈ ಕಡೆಯಿಂದ ಸೇರಿಕೊಂಡು ಹೊಡೆದಿದ್ದಾರೆ. ಇನ್ನೆಂದು ಹೀಗೆ ಮಾಡಲ್ಲಾ ಬಿಡಿ ಸಾರ್ ಎಂದು ಕಾಲು ಹಿಡಿದು ಬೇಡಿಕೊಂಡರೂ ಸಹ ಬಿಡದೇ ಹಲ್ಲೆ ಮಾಡಿದ್ದಾರೆ. ಅಮಾನವೀಯವಾಗಿ ನಡೆದುಕೊಂಡಿರುವ ದೃಶ್ಯ ಇಲ್ಲಿದೆ ನೋಡಿ. ತಪ್ಪು ಮಾಡಿದರೆ ಪೊಲೀಸ್, ಕಾನೂನು ಇದೆ. ಆದ್ರೆ, ಈ ರೀತಿ ಅಮಾನುಷವಾಗಿ ನಡೆದಿದ್ದುಕೊಂಡಿದ್ದು ಎಷ್ಟು ಎನ್ನುವ ಪ್ರಶ್ನೆ ಉದ್ಭವಿಸಿದೆ.
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು

