AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೋಬ್ಬರಿ 11 ಸಿಕ್ಸ್​: IPLನಲ್ಲಿ ಅಟ್ಟರ್ ಫ್ಲಾಪ್, MLCಯಲ್ಲಿ ಸಿಡಿಲಬ್ಬರ

ಬರೋಬ್ಬರಿ 11 ಸಿಕ್ಸ್​: IPLನಲ್ಲಿ ಅಟ್ಟರ್ ಫ್ಲಾಪ್, MLCಯಲ್ಲಿ ಸಿಡಿಲಬ್ಬರ

ಝಾಹಿರ್ ಯೂಸುಫ್
|

Updated on: Jun 15, 2025 | 10:49 AM

Share

MLC ಟಿ20 ಲೀಗ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿರುವ ಜೇಕ್ ಪ್ರೇಸರ್ ಮೆಕ್​ಗುರ್ಕ್​ ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಈ ಬಾರಿಯ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 6 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಮೆಕ್​ಗುರ್ಕ್​ ಕಲೆಹಾಕಿದ್ದು ಕೇವಲ 55 ರನ್​ಗಳು ಮಾತ್ರ. ಅಂದರೆ ಕೇವಲ 9.17 ಸರಾಸರಿಯಲ್ಲಿ ಮಾತ್ರ ರನ್ ಗಳಿಸಿದ್ದರು.

ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಜೇಕ್ ಪ್ರೇಸರ್ ಮೆಕ್​ಗುರ್ಕ್​ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಲಾಸ್ ಏಂಜಲೀಸ್ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಮೆಕ್​ಗುರ್ಕ್ 38 ಎಸೆತಗಳಲ್ಲಿ 88 ರನ್ ಚಚ್ಚಿದರು.

ಈ 88 ರನ್​ಗಳಲ್ಲಿ ಮೆಕ್​​ಗುರ್ಕ್ ಬ್ಯಾಟ್​ನಿಂದ ಮೂಡಿಬಂದ ಸಿಕ್ಸರ್​ಗಳ ಸಂಖ್ಯೆ ಬರೋಬ್ಬರಿ 11. ಅಂದರೆ ಸಿಕ್ಸರ್​ಗಳ ಮೂಲಕವೇ 66 ರನ್ ಕಲೆಹಾಕಿದ್ದರು. ಇನ್ನು 2 ಫೋರ್​ಗಳನ್ನು ಸಹ ಬಾರಿಸಿದ್ದರು. ಜೇಕ್ ಪ್ರೇಸರ್ ಮೆಕ್​ಗುರ್ಕ್​ ಅವರ ಈ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ತಂಡವು 20 ಓವರ್​ಗಳಲ್ಲಿ 219 ರನ್ ಕಲೆಹಾಕಿದ್ದರು.

ಈ ಕಠಿಣ ಗುರಿಯನ್ನು ಬೆನ್ನತ್ತಿದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡವು 19.5 ಓವರ್​ಗಳಲ್ಲಿ 187 ರನ್​ಗಳಿಸಿ ಆಲೌಟ್ ಆಗುವ ಮೂಲಕ 32 ರನ್​ಗಳಿಂದ ಸೋಲೊಪ್ಪಿಕೊಂಡಿತು.

IPLನಲ್ಲಿ ಅಟ್ಟರ್ ಫ್ಲಾಪ್:

MLC ಟಿ20 ಲೀಗ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿರುವ ಜೇಕ್ ಪ್ರೇಸರ್ ಮೆಕ್​ಗುರ್ಕ್​ ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಈ ಬಾರಿಯ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 6 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಮೆಕ್​ಗುರ್ಕ್​ ಕಲೆಹಾಕಿದ್ದು ಕೇವಲ 55 ರನ್​ಗಳು ಮಾತ್ರ. ಅಂದರೆ ಕೇವಲ 9.17 ಸರಾಸರಿಯಲ್ಲಿ ಮಾತ್ರ ರನ್ ಗಳಿಸಿದ್ದರು.

ಇನ್ನು 6 ಪಂದ್ಯಗಳಲ್ಲಿ ಬಾರಿಸಿದ ಸಿಕ್ಸರ್​ಗಳ ಸಂಖ್ಯೆ ಕೇವಲ ಎರಡು. ಹಾಗೆಯೇ 7 ಫೋರ್​ಗಳನ್ನು ಮಾತ್ರ ಸಿಡಿಸಿದ್ದರು. ಆದರೆ ಇದೀಗ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಜೇಕ್ ಪ್ರೇಸರ್ ಮೆಕ್​ಗುರ್ಕ್ ಸಿಡಿಲಬ್ಬರ ಪ್ರದರ್ಶಿಸಿದ್ದಾರೆ. ಮೊದಲ ಪಂದ್ಯದಲ್ಲೇ 11 ಸಿಕ್ಸರ್ ಸಿಡಿಸುವ ಮೂಲಕ ಗಮನ ಸೆಳೆದಿರುವುದು ವಿಶೇಷ.