ಫೀನಿಕ್ಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ; ಪ್ರಾಣಾಪಾಯದಿಂದ ಪಾರಾದ ನಟ ಭಾಸ್ಕರ್ ಶೆಟ್ಟಿ
ಕನಕಪುರ ರಸ್ತೆಯ ವಡೇರಹಳ್ಳಿ ಬಳಿ ‘ಫೀನಿಕ್ಸ್’ ಸಿನಿಮಾದ ಚಿತ್ರೀಕರಣ ಮಾಡುವಾಗ ಈ ಘಟನೆ ನಡೆದಿದೆ. ನಟ ಭಾಸ್ಕರ್ ಶೆಟ್ಟಿ ಅವರಿಗೆ ಬೆಂಕಿ ತಗುಲಿದೆ. ಇದರಿಂದ ಅವರ ಕಾಲಿಗೆ ಸುಟ್ಟ ಗಾಯಗಳಾಗಿವೆ. ಇದು ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ ಆ್ಯಕ್ಷನ್-ಕಟ್ ಹೇಳುತ್ತಿರುವ ಸಿನಿಮಾ.
ಓಂ ಪ್ರಕಾಶ್ ರಾವ್ ಅವರು ‘ಫೀನಿಕ್ಸ್’ (Phoenix) ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ವೇಳೆ ಅವಘಡ ಸಂಭವಿಸಿದೆ. ಆ್ಯಕ್ಷನ್ ದೃಶ್ಯದ ವೇಳೆ ನಟ ಭಾಸ್ಕರ್ ಶೆಟ್ಟಿ ಕಾಲಿಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಚಿತ್ರೀಕರಣದ ಸೆಟ್ನಲ್ಲಿ ಕೆಲವು ಕಾಲ ಆತಂಕ ಸೃಷ್ಟಿ ಆಗಿತ್ತು. ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದರಿಂದ ಅನಾಹುತ ತಪ್ಪಿಹೋಗಿದೆ. ಭಾಸ್ಕರ್ ಶೆಟ್ಟಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ಕಾಲಿಗೆ ಸುಟ್ಟ ಗಾಯಗಳಾಗಿವೆ. ಈ ಬಗ್ಗೆ ಭಾಸ್ಕರ್ ಶೆಟ್ಟಿ (Bhaskar Shetty) ಪ್ರತಿಕ್ರಿಯೆ ನೀಡಿದ್ದಾರೆ. ‘ಯಾವುದೇ ಗಂಭೀರ ಗಾಯ ಆಗಿಲ್ಲ. ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೆವು. ಆದರೂ ಸಣ್ಣ ಗಾಯ ಆಯಿತು. ಈಗ ವಾಸಿ ಆಗಿದೆ. ಯಾವ ಸಮಸ್ಯೆಯೂ ಇಲ್ಲ. ಆರಾಮಾಗಿದ್ದಿನಿ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.