ಮಂಗಳೂರು: ಧಾರಾಕಾರ ಮಳೆಗೆ ಕಾಂಪೌಂಡ್ ಗೋಡೆ ಕುಸಿತ, ಎದೆನಡುಗಿಸುತ್ತೆ ಭಯಾನಕ ದೃಶ್ಯ!
ಮಂಗಳೂರಿನ ಕಂಕನಾಡಿಯ ಸುವರ್ಣ ಲೇನ್ನಲ್ಲಿ ಭಾರೀ ಮಳೆಗೆ ಖಾಸಗಿ ಆಸ್ಪತ್ರೆಯ ಗೋಡೆ ಕುಸಿದಿದ್ದು, ಕೂದಳೆಲೆ ಅಂತರದಲ್ಲಿ ಜೋಕಿಂ ಡಿಸೋಜಾರ ಕುಟುಂಬ ಪಾರಾಗಿದೆ. ಕಾಂಪೌಂಡ್ ಗೋಡೆ ಕುಸಿತದ ರಣಭೀಕರ ದೃಶ್ಯ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಈ ಘಟನೆ ಎಲ್ಲರಲ್ಲೂ ಭಯ ಹುಟ್ಟಿಸಿದೆ.
ಮಂಗಳೂರು, ಜೂನ್ 15: ಮಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಅಲ್ಪ ಬಿಡುವು ಕೊಟ್ಟಿದ್ದ ಮಳೆರಾಯ (Rain) ನಿನ್ನೆ ಸಂಜೆ ಮತ್ತೆ ಅಬ್ಬರಿಸಿ ಬೊಬ್ಬರಿದಿದ್ದಾನೆ. ನಗರದ ಯಾವ ರಸ್ತೆಗೆ ಹೋದರೂ ನೀರೇ ನೀರು. ಈ ಮಧ್ಯೆ ಖಾಸಗಿ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಅವಘಡ ಸಂಭವಿಸಿರುವಂತಹ ಘಟನೆ ಕಂಕನಾಡಿ ಬಳಿಯ ಸುವರ್ಣ ಲೇನ್ನಲ್ಲಿ ನಡೆದಿದೆ. ಕೂದಳೆಲೆ ಅಂತರದಲ್ಲಿ ಜೋಕಿಂ ಡಿಸೋಜಾ ಕುಟುಂಬದ 6 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಂಪೌಂಡ್ ಕುಸಿಯುವ ರಣಭೀಕರ ದೃಶ್ಯ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎದೆನಡುಗಿಸುತ್ತಿದೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Jun 15, 2025 09:28 AM