ಕೆಲವು ನೋವು ನಿವಾರಕ ಔಷಧಿಗಳು ಕೊವಿಡ್ ರೋಗ ಮತ್ತಷ್ಟು ಉಲ್ಬಣವಾಗುವಂತೆ ಮಾಡುತ್ತವೆ, ಎನ್‌ಎಸ್‌ಎಐಡಿ ಬಳಸಬೇಡಿ: ಐಸಿಎಂಆರ್ ಸಲಹೆ

ICMR: ಹೃದ್ರೋಗ, ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ಬೇಗನೆ ಸೋಂಕಿಗೊಳಗಾಗುತ್ತಾರೆಯೇ ಎಂಬುದರ ಬಗ್ಗೆ ಪ್ರತಿಕ್ರಿಯಿಸಿದ ಐಸಿಎಂಆರ್, ಇಲ್ಲ, ಅಧಿಕ ರಕ್ತದೊತ್ತಡ, ಮಧುಮೇಹ ಅಥವಾ ಹೃದ್ರೋಗ ಹೊಂದಿರುವ ಜನರು ಸೋಂಕಿಗೊಳಗಾಗುವ ಅಪಾಯ ಎಲ್ಲರಿಗಿಂತ ಹೆಚ್ಚಿಲ್ಲ ಎಂದು ಹೇಳಿದೆ.

ಕೆಲವು ನೋವು ನಿವಾರಕ ಔಷಧಿಗಳು ಕೊವಿಡ್ ರೋಗ ಮತ್ತಷ್ಟು ಉಲ್ಬಣವಾಗುವಂತೆ ಮಾಡುತ್ತವೆ, ಎನ್‌ಎಸ್‌ಎಐಡಿ ಬಳಸಬೇಡಿ: ಐಸಿಎಂಆರ್ ಸಲಹೆ
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on:Apr 28, 2021 | 3:33 PM

ದೆಹಲಿ: ಐಬುಪ್ರೊಫೇನ್‌ನಂತಹ ಕೆಲವು ನೋವು ನಿವಾರಕಗಳು ಕೊವಿಡ್ 19 ರೋಗ ಮತ್ತಷ್ಟು ಉಲ್ಬಣವಾಗುವಂತೆ ಮಾಡುತ್ತದೆ. ಇದು ಹೃದಯ ವೈಫಲ್ಯದ ರೋಗಿಗಳಿಗೆ ಹಾನಿಕಾರಕವೆಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ ಮೂತ್ರಪಿಂಡದ ಹಾನಿಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR) ಹೇಳಿದೆ. ರೋಗ ಬಾಧಿತರಾಗಿರುವಾಗ ಸ್ಟಿರಾಯ್ಡ ಅಲ್ಲದ, ಉರಿಯೂತದ ಔಷಧಗಳು (NSAID) ತೆಗೆದುಕೊಳ್ಳಬೇಡಿ ಎಂದು ಹೇಳಿದ ಐಸಿಎಂಆರ್ ಅಗತ್ಯವಿದ್ದರೆ ಪ್ಯಾರಸಿಟಮಾಲ್ ತೆಗೆದುಕೊಳ್ಳುವಂತೆ ಹೇಳಿದೆ.

ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದ್ರೋಗ ಹೊಂದಿರುವ ರೋಗಿಗಳಿಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳ (FAQ ) ಪಟ್ಟಿಮಾಡಿರುವ ಐಸಿಎಂಆರ್,ಎರಡು ಗುಂಪು ಔಷಧಿಗಳಾದ ACE ಪ್ರತಿರೋಧಕಗಳು ಮತ್ತು ಆಂಜಿಯೋಟೆನ್ಸಿನ್ ರಿಸೆಪ್ಟರ್ ಬ್ಲಾಕರ್‌ಗಳು (ARBs) ಕೊವಿಡ್ ರೋಗದ ಸೂಕ್ಷ್ಮತೆ ಅಥವಾ ತೀವ್ರತೆಯನ್ನು ಹೆಚ್ಚಿಸುತ್ತದೆ. ಆದರೆ ಪ್ರಸ್ತುತ ರಕ್ತದೊತ್ತದ ಔಷಧಿಗಳಿಗೆ ಯಾವುದೇ ಪುರಾವೆಗಳಿಲ್ಲ ಎಂದಿದೆ.

ಬಿಪಿ ಔಷಧಿಗಳು ರೋಗದ ತೀವ್ರತೆಯನ್ನು ಹೆಚ್ಚಿಸುತ್ತವೆ ಎಂಬ ವರದಿ ಬಗ್ಗೆ ಪ್ರತಿಕ್ರಿಯಿಸಿದ ಐಸಿಎಂಆರ್, ಲಭ್ಯವಿರುವ ಮಾಹಿತಿಯ ಪರಿಶೀಲನೆಯ ನಂತರ, ವಿವಿಧ ವೈಜ್ಞಾನಿಕ ಸಮಾಜಗಳು ಮತ್ತು ಹೃದ್ರೋಗ ತಜ್ಞರ ತಜ್ಞರ ಗುಂಪುಗಳು ಪ್ರಸ್ತುತ ಎರಡು ಗುಂಪು ಔಷಧಿಗಳ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದಿವೆ. ಎಸಿಇ ಪ್ರತಿರೋಧಕಗಳು (ಉದಾ. ರಾಮಿಪ್ರಿಲ್, ಎನಾಲಾಪ್ರಿಲ್ ಮತ್ತು ಹೀಗೆ) ಮತ್ತು ಆಂಜಿಯೋಟೆನ್ಸಿನ್ ರಿಸೆಪ್ಟರ್ ಬ್ಲಾಕರ್‌ಗಳು (ಎಆರ್‌ಬಿಗಳು) (ಉದಾ. ಲೊಸಾರ್ಟನ್, ಟೆಲ್ಮಿಸಾರ್ಟನ್ ಮತ್ತು ಹೀಗೆ) ಕೊವಿಡ್ -19ರ ಸೂಕ್ಷ್ಮತೆ ಅಥವಾ ತೀವ್ರತೆಯನ್ನು ಹೆಚ್ಚಿಸುತ್ತದೆ ಎಂದಿದೆ .

ಈ ಔಷಧಿಗಳು ಹೃದಯದ ಚಟುವಟಿಕೆ ಬೆಂಬಲಿಸುವ ಮೂಲಕ ಮತ್ತು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಮೂಲಕ ಹೃದಯ ವೈಫಲ್ಯಕ್ಕೆ ಬಹಳ ಪರಿಣಾಮಕಾರಿ. ಈ ಔಷಧಿಗಳನ್ನು ನೀವೇ ನಿಲ್ಲಿಸುವುದು ಹಾನಿಕಾರಕ. ಇದು ನಿಮ್ಮ ಹೃದಯದ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಐಸಿಎಂಆರ್ ಹೇಳಿದೆ.

ಕೊವಿಡ್ ರೋಗ ದೃಢಪಟ್ಟಿರುವ ಬಹುಪಾಲು (80 ಪ್ರತಿಶತ) ಜನರು ಉಸಿರಾಟದ ಸೋಂಕಿನ (ಜ್ವರ, ನೋಯುತ್ತಿರುವ ಗಂಟಲು, ಕೆಮ್ಮು) ಕಡಿಮೆ ಗುಣ ಲಕ್ಷಣಗಳನ್ನು ಹೊಂದಿರುತ್ತಾರೆ ಮತ್ತು ಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ ಎಂದು ಅದು ಹೇಳಿದೆ.

ಹೃದ್ರೋಗ, ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ಬೇಗನೆ ಸೋಂಕಿಗೊಳಗಾಗುತ್ತಾರೆಯೇ ಎಂಬುದರ ಬಗ್ಗೆ ಪ್ರತಿಕ್ರಿಯಿಸಿದ ಐಸಿಎಂಆರ್, ಇಲ್ಲ, ಅಧಿಕ ರಕ್ತದೊತ್ತಡ, ಮಧುಮೇಹ ಅಥವಾ ಹೃದ್ರೋಗ ಹೊಂದಿರುವ ಜನರು ಸೋಂಕಿಗೊಳಗಾಗುವ ಅಪಾಯ ಎಲ್ಲರಿಗಿಂತ ಹೆಚ್ಚಿಲ್ಲ ಎಂದು ಹೇಳಿದೆ.

ಹೃದಯ ವೈಫಲ್ಯ (ದುರ್ಬಲ ಹೃದಯ) ಸೇರಿದಂತೆ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗ ಹೊಂದಿರುವ ಕೆಲವು ಜನರಲ್ಲಿ ಹೆಚ್ಚು ತೀವ್ರವಾದ ಲಕ್ಷಣಗಳು ಮತ್ತು ಸಮಸ್ಯೆಗಳು ಕಾಣಬಹುದು. ಈ ರೋಗಿಗಳಿಗೆ ಹೆಚ್ಚಿನ ಕಾಳಜಿ ನೀಡಬೇಕಾಗುತ್ತದೆ ಎಂದು ಅದು ಹೇಳಿದೆ.

ಮಧುಮೇಹ ಇರುವವರು ಕೊವಿಡ್​ಗೆ ಹೆಚ್ಚು ಒಳಗಾಗುತ್ತಾರೆಯೇ ಎಂಬುದರ ಬಗ್ಗೆ ಪ್ರತಿಕ್ರಿಯಿಸಿದ ಐಸಿಎಂಆರ್ ಸಾಮಾನ್ಯವಾಗಿ, ಅನಿಯಂತ್ರಿತ ಮಧುಮೇಹ ಹೊಂದಿರುವ ಜನರು ಎಲ್ಲಾ ಸೋಂಕುಗಳ ಅಪಾಯವನ್ನು ಹೊಂದಿರುತ್ತಾರೆ ಎಂದಿದೆ. ಮಧುಮೇಹದಿಂದ ಬಳಲುತ್ತಿರುವ ಜನರು ಬೇಗನೆ ಸೋಂಕಿಗೊಳಗಾಗುತ್ತಾರೆ ಎನ್ನುವಂತಿಲ್ಲ. ಆದರೆ ಕೆಲವು ವ್ಯಕ್ತಿಗಳು ಹೆಚ್ಚು ತೀವ್ರವಾದ ಕಾಯಿಲೆಗೆ ಗುರಿಯಾಗುತ್ತಾರೆ ಮತ್ತು ಸೋಂಕಿಗೊಳಗಾದರೆ ಆರೋಗ್ಯ ಹದಗೆಡುತ್ತದೆ ಎಂದಿದ್ದಾರೆ.

ಆದಾಗ್ಯೂ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಮಿತ  ಆಹಾರ ಮತ್ತು ದಿನಾ ವ್ಯಾಯಾಮ ಮಾಡಿ. ನಿಯಮಿತವಾಗಿ ಔಷಧಿಗಳನ್ನು ತೆಗೆದುಕೊಳ್ಳುವುದರ ಜತೆಗೆ ಸಕ್ಕರೆ ಮಟ್ಟವನ್ನು ಪರೀಕ್ಷಿಸಲು ಐಸಿಎಂಆರ್ ಸಲಹೆ ನೀಡಿದೆ.

ಮಧುಮೇಹ ರೋಗಿಗಳು ಅನಾರೋಗ್ಯಕ್ಕೆ ಒಳಗಾದಾಗ, ಅವರಿಗೆ ರಕ್ತದಲ್ಲಿನ ಗ್ಲೂಕೋಸ್‌ನ ನಿಗಾ ಇರಿಸಬೇಕಾಗುತ್ತದೆ.ಇನ್ಸುಲಿನ್, ಆಗಾಗ ಸಣ್ಣ ಪ್ರಮಾಣದಲ್ಲಿ ಊಟ ಮತ್ತು ಸಾಕಷ್ಟು ದ್ರವಾಹಾರ ಸೇರಿದಂತೆ ಔಷಧಿಗಳು ಬೇಕಾಗುತ್ತದೆ ಎಂದಿದೆ ಐಸಿಎಂಆರ್.

ಸ್ವಲ್ಪ ರೋಗಲಕ್ಷಣಗಳಿದ್ದರೂ ಸಹ, ಮೊದಲಿನಂತೆ ನಿಯಮಿತವಾಗಿ ಸೂಚಿಸಲಾದ ಎಲ್ಲಾ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಐಸಿಎಂಆರ್ ಹೇಳಿದೆ.

ನಿಮ್ಮ ವೈದ್ಯರ ಸಲಹೆಯ ಹೊರತು ಯಾವುದೇ ಔಷಧಿಗಳನ್ನು ನಿಲ್ಲಿಸಬೇಡಿ. ನಿಮ್ಮ ವೈದ್ಯರನ್ನು ಭೇಟಿ ಮಾಡಲು ನಿಮಗೆ ಸಾಧ್ಯವಾಗದಿದ್ದಲ್ಲಿ ನಿಮ್ಮ ರಕ್ತದೊತ್ತಡ, ಮಧುಮೇಹ ಮತ್ತು ಹೃದ್ರೋಗ ಔಷಧಿಗಳನ್ನು ಮುಂದುವರಿಸಿ. ಕೊಲೆಸ್ಟ್ರಾಲ್ (ಸ್ಟ್ಯಾಟಿನ್) ಗಳನ್ನು ನಿಯಂತ್ರಿಸುವ ಔಷಧಿಗಳನ್ನು ಮುಂದುವರಿಸಬೇಕು.

ಅಪಾಯಕಾರಿ ಅಂಶಗಳ ಮಟ್ಟವನ್ನು ನಿಯಂತ್ರಿಸುವುದು ಸಹ ಮುಖ್ಯವಾಗಿದೆ. ಧೂಮಪಾನ ಮತ್ತು ಮದ್ಯ ಸೇವನೆ ತಪ್ಪಿಸಿ. ಬಿಪಿ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ದೈಹಿಕ ಅಂತರ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಕೆಲವು ರೀತಿಯ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ವೈದ್ಯರ ಸಲಹೆಯಂತೆ ಆಹಾರ ಮತ್ತು ಉಪ್ಪು ಬಳಕೆ ಮೇಲೆ ಹಿಡಿತವಿರಲಿ. ರೋಗಿಯು ಮಾಂಸಾಹಾರಿಯಾಗಿದ್ದರೆ ಆಹಾರ ಕ್ರಮಗಳನ್ನು ಬದಲಾಯಿಸುವ ಅಗತ್ಯವಿಲ್ಲ.

ಆಹಾರದಲ್ಲಿ ಫೈಬರ್ (ನಾರಿನಂಶ ) ಮತ್ತು ಪ್ರೋಟೀನ್ ಅಂಶ ಇರುವ ಮತ್ತು ಹೆಚ್ಚಿನ ಪ್ರಮಾಣದಲ್ಲಿ ತರಕಾರಿಗಳು ಮತ್ತು ಹಣ್ಣುಗಳನ್ನು ಸೇರಿಸುವುದು ಉತ್ತಮ. ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಮತ್ತು ಕಡಿಮೆ ಗಾಳಿ ಇರುವ ಕೋಣೆಗಳಲ್ಲಿ  ಮಾಸ್ಕ್ ಧರಿಸಬೇಕು,ಇದನ್ನು ದಿನಚರಿಯಾಗಿರಿಸಿ.ಮಾಸ್ಕ್ ಮೂಗು, ಬಾಯಿ ಮತ್ತು ಗಲ್ಲ  ಮುಚ್ಚುವಂತಿರಬೇಕು ಎಂದು ಐಸಿಎಂಆರ್ ಹೇಳಿದೆ. ಮಾಸ್ಕ್  ಧರಿಸಿದ ನಂತರ ಅದನ್ನು ಆಗಾಗ್ಗೆ ಸ್ಪರ್ಶಿಸಬಾರದು. ಕನಿಷ್ಠ ಒಂದು ಮೀಟರ್ ದೈಹಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿತು.

ನಿಮ್ಮ ಮನೆಯ ಸದಸ್ಯರಲ್ಲದ ನಿಮ್ಮ ಮನೆಗೆ ಸಂದರ್ಶಕರು ಬಂದರೆ ಮಾಸ್ಕ್ ಧರಿಸಿ. ಮಾಸ್ಕ್ ಬಳಸುವ ಮೊದಲು ಮತ್ತು ನಂತರ ಮತ್ತು ಬಳಕೆಯಲ್ಲಿರುವಾಗ ಅದನ್ನು ಸ್ಪರ್ಶಿಸುವ ಮೊದಲು ನಿಮ್ಮ ಕೈಗಳನ್ನು ಸ್ವಚ್ಛಗೊಳಿಸಿ. ಮಾಸ್ಕ್ ಮಣ್ಣಾಗಿದ್ದರೆ ಅಥವಾ ಒದ್ದೆಯಾಗಿದ್ದರೆ ಅದನ್ನು ಬದಲಾಯಿಸಿ, ಮತ್ತು ಅದನ್ನು ಕಸದ ತೊಟ್ಟಿಯಲ್ಲಿ ಸರಿಯಾಗಿ ವಿಲೇವಾರಿ ಮಾಡಿ ಎಂದು ಐಸಿಎಂಆರ್ ತಮ್ಮ ಪ್ರಕಟಣೆಯಲ್ಲಿ ಹೇಳಿದೆ.

ಸಾಮಾಜಿಕ ಅಂತರ ಕಾಪಾಡಿ, ಶೀತ ಅಥವಾ ಕೆಮ್ಮು ಅಥವಾ ಜ್ವರ ಇರುವ ಅಥವ ಕೊವಿಡ್ ಲಕ್ಷಣಗಳಿರುವ ವ್ಯಕ್ತಿಗಳಿಂದ ದೂರಿವಿರಿ.ಅನಿವಾರ್ಯವಲ್ಲದ ಪ್ರಯಾಣ ಮತ್ತು ಸಾರ್ವಜನಿಕ ಸಾರಿಗೆಯ ಬಳಕೆಯನ್ನು ತಪ್ಪಿಸುವುದು, ಸಾರ್ವಜನಿಕ ಸ್ಥಳಗಳು, ಜನಸಂದಣಿ ಮತ್ತು ಗುಂಪು ಸೇರುವುದನ್ನು ಮಾಡಲೇಬೇಡಿ

ಫೋನ್, ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮವನ್ನು ಬಳಸುವ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಸಂಪರ್ಕದಲ್ಲಿರಿ. ಆಸ್ಪತ್ರೆಗಳು / ಪ್ರಯೋಗಾಲಯಗಳಿಗೆ ದಿನನಿತ್ಯದ ಭೇಟಿಗಳನ್ನು ತಪ್ಪಿಸಿ ಎಂದು ಐಸಿಎಂಆರ್ ಹೇಳಿದೆ. ಪರಸ್ಪರ ಕೈ ಕುಲುಕುವುದು ಮತ್ತು ಕೈಗಳಿಂದ ಮುಖವನ್ನು ಸ್ಪರ್ಶಿಸುವುದನ್ನು ತಪ್ಪಿಸಿ. ಕೈಗಳನ್ನು ಕನಿಷ್ಠ 20-30 ಸೆಕೆಂಡುಗಳ ಕಾಲ ಆಗಾಗ್ಗೆ ಸೋಪ್ ಮತ್ತು ನೀರಿನಿಂದ ತೊಳೆಯಬೇಕು ಮತ್ತು ಕೈಯ ಎಲ್ಲಾ ಭಾಗಗಳನ್ನು ವ್ಯವಸ್ಥಿತವಾಗಿ ಸ್ವಚ್ಛಗೊಳಿಸಬೇಕು. ಕಲುಷಿತ ಪ್ರದೇಶಗಳು ಮತ್ತು ಸಾರ್ವಜನಿಕ ಶೌಚಾಲಯದ ಬಾಗಿಲುಗಳು, ಬಾಗಿಲು ಹಿಡಿಕೆಗಳು ಮುಂತಾದ ವಸ್ತುಗಳನ್ನು ಸ್ಪರ್ಶಿಸುವುದನ್ನು ತಪ್ಪಿಸಿ.

ಕೊವಿಡ್ ರೋಗ ಲಕ್ಷಣ ಕಂಡು ಬಂದರೆ ತಕ್ಷಣ ಫೋನ್‌ನಲ್ಲಿ ವೈದ್ಯರ ಸಲಹೆ ಪಡೆಯಬೇಕು, ಹತ್ತಿರದ ಪ್ರಯೋಗಾಲಯಗಳನ್ನು ಸಂಪರ್ಕಿಸಿ ಮತ್ತು ಪರೀಕ್ಷೆಗೊಳಪಡಬೇಕು. ಪರೀಕ್ಷಾ ಫಲಿತಾಂಶಗಳಿಗಾಗಿ ಕಾಯುತ್ತಿರುವಾಗ, ಒಬ್ಬರು ಮನೆಯಲ್ಲಿಯೇ ಇರಬೇಕು ಮತ್ತು ಕುಟುಂಬ ಸದಸ್ಯರೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಬೇಕು. ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು ಮತ್ತು ವೈದ್ಯಕೀಯ ಮಾಸ್ಕ್ ಸರಿಯಾಗಿ ಧರಿಸಬೇಕು.

ಕೊವಿಡ್ ದೃಢಪಟ್ಟರೆ ಆರೋಗ್ಯ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ರೋಗಿಯು ಐಸೋಲೇಟ್ (ಪ್ರತ್ಯೇಕವಾಸ) ಆಗಿರಬೇಕು. ರೋಗಲಕ್ಷಣಗಳು ಹೆಚ್ಚಾಗಿ ಆರೋಗ್ಯ ಹದಗೆಡುತ್ತಿದ್ದರೆ, ಹೆಚ್ಚಿನ ಸಲಹೆಗಾಗಿ ವೈದ್ಯರನ್ನು ಸಂಪರ್ಕಿಸಬೇಕು ಎಂದು ಐಸಿಎಂಆರ್ ಹೇಳಿದೆ.

ಇದನ್ನೂ ಓದಿ:  ರೂಪಾಂತರಿ ಕೊರೊನಾ ವೈರಸ್​ ವಿರುದ್ಧವೂ ಕೊವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿ: ಐಸಿಎಂಆರ್

Published On - 3:29 pm, Wed, 28 April 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ