Used car loans: ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಯಾವ ಬ್ಯಾಂಕ್ನಲ್ಲಿ ಬಡ್ಡಿ ದರ ಕಡಿಮೆ?
ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡಬೇಕು ಎಂದಿರುವವರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಬ್ಯಾಂಕ್ಗಳ ಪಟ್ಟಿ ಇಲ್ಲಿದೆ.
ಸೆಕೆಂಡ್ ಹ್ಯಾಂಡ್ ಕಾರುಗಳ ಖರೀದಿ ಮಾಡುವುದಕ್ಕೆ ಸಾಲ ಮಾಡಬೇಕು ಎನ್ನುವ ಆಲೋಚನೆ ನಿಮಗಿದ್ದಲ್ಲಿ ಈ ಲೇಖನವನ್ನು ಖಂಡಿತಾ ಓದಬೇಕು. ಏಕೆಂದರೆ ಆ ರೀತಿಯ ಕಾರುಗಳ ಖರೀದಿ ಮೇಲಿನ ಸಾಲಕ್ಕೆ ಯಾವ ಬ್ಯಾಂಕ್ನಲ್ಲಿ ಎಷ್ಟಿದೆ ಬಡ್ಡಿ ದರ ಎಂಬ ಮಾಹಿತಿ ನಿಮಗಾಗಿ ಇಲ್ಲಿದೆ. ಸರ್ಕಾರಿ ಬ್ಯಾಂಕ್ಗಳಲ್ಲಂತೂ ಬಡ್ಡಿ ದರ ಕಡಿಮೆ ಇದ್ದೇ ಇದೆ. ಆದರೆ ಬಹುತೇಕ ಬ್ಯಾಂಕ್ಗಳು ಈಗಾಗಲೇ ಇರುವ ಗ್ರಾಹಕರಿಗೆ ಸಾಲವನ್ನು ಒದಗಿಸುತ್ತವೆ. ಇನ್ನು ಖಾಸಗಿ ಬ್ಯಾಂಕ್ಗಳು ಅಂದರೆ, ಡೀಲರ್ಗಳ ಜತೆಗೆ ಸಹಭಾಗಿತ್ವ ಹೊಂದಿದ್ದಲ್ಲಿ ಸಾಲ ನೀಡುತ್ತವೆ. ಯಾವ ಡೀಲರ್ ಜತೆಗೆ ಸಹಭಾಗಿತ್ವ ಇದೆಯೋ ಅಲ್ಲಿಯೇ ಗ್ರಾಹಕರು ಕಾರಿನ ಸಾಲ ಪಡೆಯುತ್ತಿದ್ದಲ್ಲಿ ಖಾಸಗಿ ಬ್ಯಾಂಕ್ಗಳಿಂದ ಅಂಥ ಗ್ರಾಹಕರಿಗೆ ಆದ್ಯತೆ ದರದಲ್ಲಿ ನೀಡಲಾಗುತ್ತದೆ.
ಯಾವ ಬ್ಯಾಂಕ್ನಲ್ಲಿ ಸಾಲ ಪಡೆಯಬೇಕು ಅನ್ನೋದನ್ನ ನಿರ್ಧರಿಸುವ ಪ್ರಮುಖ ಅಂಶ ಅಂದರೆ, ಅದು ಲೋನ್ ಟು ವ್ಯಾಲ್ಯೂ (ಎಲ್ಟಿವಿ) ಪ್ರಮಾಣ. ಕಾರಿನ ಮೌಲ್ಯ ಅಳೆದು, ಅದಕ್ಕೆ ಎಷ್ಟು ಪರ್ಸೆಂಟ್ನಷ್ಟು ಮೊತ್ತವನ್ನು ಸಾಲವಾಗಿ ನೀಡಲಾಗುತ್ತದೆ ಎಂಬುದು ಬಹಳ ಮುಖ್ಯವಾಗುತ್ತದೆ. ಒಂದು ವೇಳೆ ಬ್ಯಾಂಕ್ಗಳಿಂದ ಕಡಿಮೆ ಬಡ್ಡಿಯ ಸಾಲವನ್ನೇ ನೀಡಬಹುದು. ಆದರೆ ಆ ಕಾರಿನ ಮೌಲ್ಯಕ್ಕೆ ಕಡಿಮೆ ಪ್ರಮಾಣದ ಸಾಲ ಸಿಗುತ್ತದೆ. ಪೈಸಾಬಜಾರ್.ಕಾಮ್ ಮಾಹಿತಿ ಪ್ರಕಾರ, ಕೆನರಾ ಬ್ಯಾಂಕ್ ಬಹಳ ಕಡಿಮೆ ದರಕ್ಕೆ ನೀಡುತ್ತದೆ. ಎಲ್ಟಿವಿ ಶೇ 60ರ ತನಕ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಅದೇ ಎಲ್ಟಿವಿಗೆ ನೀಡುತ್ತದೆ.
ನೀವು ಒಂದು ಸೆಕೆಂಡ್ ಹ್ಯಾಂಡ್ ಖರೀದಿ ಮಾಡಬೇಕು ಅಂದುಕೊಂಡಿದ್ದೀರಿ. ಅದರ ಬೆಲೆ 5 ಲಕ್ಷ ರೂಪಾಯಿ ಆದಲ್ಲಿ ನಿಮಗೆ ಸಾಲ ನೀಡುವ ಬ್ಯಾಂಕ್ ಶೇ 60ರಷ್ಟು ಮಾತ್ರ, ಅಂದರೆ 3 ಲಕ್ಷ ರೂಪಾಯಿ ನೀಡುತ್ತದೆ. ಇದರಲ್ಲಿ ಖಾಸಗಿ ವಲಯದ ಎಚ್ಡಿಎಫ್ಸಿ ಬ್ಯಾಂಕ್ ಶೇ 100ರ ತನಕ ಹಣಕಾಸು ಸೌಲಭ್ಯ ನೀಡುತ್ತದೆ. ಆಕ್ಸಿಸ್ ಬ್ಯಾಂಕ್ ಶೇ 85ರ ತನಕ ನೀಡುತ್ತದೆ. ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಶೇ 80ರ ತನಕ ಹಣಕಾಸು ಸೌಲಭ್ಯ ಸಿಗುತ್ತದೆ. ಸೆಕೆಂಡ್ ಹ್ಯಾಂಡ್ ಕಾರುಗಳಾದಲ್ಲಿ ಅದು ಅಪಾಯ ಹೆಚ್ಚಿರುವ ಆಸ್ತಿ ಎಂಬುದು ಸಾಲ ನೀಡುವ ಬ್ಯಾಂಕ್ಗಳ ಆಲೋಚನೆ. ಏಕೆಂದರೆ, ಥರ್ಡ್ ಪಾರ್ಟಿಯಿಂದ ಆಗುವ ಗುಣಮಟ್ಟದ ಪರಿಶೀಲನೆ ಮೇಲೆ ಪೂರ್ಣವಾಗಿ ನಂಬಿಕೆ ಇಡಲು ಸಾಧ್ಯವಾಗಲ್ಲ.
ಯಾವ ಬ್ಯಾಂಕ್ನಲ್ಲಿ ಎಷ್ಟಿದೆ ದರ ಎಂಬ ಮಾಹಿತಿ ಇಲ್ಲಿದೆ. ಪ್ರೊಸೆಸಿಂಗ್ ಶುಲ್ಕ ಮತ್ತು ಸಾಲ ಮರುಪಾವತಿ ಅವಧಿಯನ್ನು ನಿಮಗೆ ಹತ್ತಿರದ ಶಾಖೆಯಲ್ಲಿ ಪರಿಶೀಲಿಸಿಕೊಳ್ಳಿ. 1) ಕೆನರಾ ಬ್ಯಾಂಕ್- ಶೇ 7.30- ಶೇ 9.90 2) ಬ್ಯಾಂಕ್ ಆಫ್ ಇಂಡಿಯಾ- ಶೇ 7.45- ಶೇ 8.55 3) ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ- ಶೇ 8.90-10.50 4) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ- ಶೇ 9.50- ಶೇ 10.50 5) ಸೌತ್ ಇಂಡಿಯನ್ ಬ್ಯಾಂಕ್- ಶೇ 13.30- ಶೇ 13.75 6) ಎಚ್ಡಿಎಫ್ಸಿ ಬ್ಯಾಂಕ್- ಶೇ 13.75- ಶೇ 16.00 7) ಫೆಡರಲ್ ಬ್ಯಾಂಕ್- ಶೇ 13.80 8) ಆಕ್ಸಿಸ್ ಬ್ಯಾಂಕ್- ಶೇ 14.45- ಶೇ 16.45
(ಈ ಬಡ್ಡಿ ದರಗಳು ಏಪ್ರಿಲ್ 30, 2021ಕ್ಕೆ ಅನ್ವಯ ಆಗುವಂತೆ ತೆಗೆದುಕೊಳ್ಳಲಾಗಿದೆ. ಮಾಹಿತಿ ಮೂಲ- ಪೈಸಾಬಜಾರ್.ಕಾಮ್)
ಇದನ್ನೂ ಓದಿ: Home loan: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಗೃಹ ಸಾಲ ಶೇ 6.70ಗೆ ಇಳಿಕೆ
(Here is the list of interest rate for used cars in Indian banks)