Jan-dhan account: ಸಾಮಾನ್ಯ ಉಳಿತಾಯ ಖಾತೆಯನ್ನು ಜನ್-ಧನ್ ಖಾತೆಗೆ ಬದಲಾಯಿಸುವುದು ಹೇಗೆ?

ಸಾಮಾನ್ಯ ಉಳಿತಾಯ ಖಾತೆಯನ್ನು ಜನ್ ಧನ್ ಖಾತೆಯಾಗಿ ಬದಲಾವಣೆ ಮಾಡಿಕೊಳ್ಳುವುದು ಹೇಗೆ ಎಂಬುದು ನಿಮಗೆ ಗೊತ್ತಾ? ಇಲ್ಲಿದೆ ಆ ಬಗೆಗಿನ ಉಪಯುಕ್ತವಾದ ಮಾಹಿತಿ

Jan-dhan account: ಸಾಮಾನ್ಯ ಉಳಿತಾಯ ಖಾತೆಯನ್ನು ಜನ್-ಧನ್ ಖಾತೆಗೆ ಬದಲಾಯಿಸುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: May 10, 2021 | 3:51 PM

ಸಾಮಾನ್ಯ ಉಳಿತಾಯ ಖಾತೆಗಳು ದೊರಕಿಸದ ಕೆಲವು ಸೌಲಭ್ಯಗಳನ್ನು ಜನ್ ಧನ್ ಖಾತೆಯು ನೀಡುತ್ತದೆ. ಕನಿಷ್ಠ ಬ್ಯಾಲೆನ್ಸ್ ಇಡಬೇಕು ಅಂತಿಲ್ಲ, ಉಚಿತ ಲೈಫ್ ಇನ್ಷೂರೆನ್ಸ್, ವಿಸ್ತೃತ ಬಡ್ಡಿ ದರ, ಓವರ್ ಡ್ರಾಫ್ಟ್ ವ್ಯವಸ್ಥೆ ಇತ್ಯಾದಿ ದೊರೆಯುತ್ತದೆ. ನಿಮಗೆ ಗೊತ್ತಾ, ಯಾರು ಬೇಕಾದರೂ ತಮ್ಮ ಸಾಮಾನ್ಯ ಉಳಿತಾಯ ಖಾತೆಯನ್ನು ಪ್ರಧಾನಮಂತ್ರಿ ಜನ್-ಧನ್ ಯೋಜನಾ ಖಾತೆಯಾಗಿ ಬದಲಾಯಿಸಿಕೊಳ್ಳಬಹುದು. ಅದಕ್ಕೆ ಕೆಲಸವು ಸರಳ ಹಂತಗಳನ್ನು ಅನುಸರಿಸಿದರೆ ಸಾಕು.

ಪ್ರಾಥಮಿಕ ಮಾನದಂಡಗಳು ಪ್ರಧಾನಮಂತ್ರಿ ಜನ್ ಧನ್ ಯೋಜನಾ (PMJDY)ಗೆ ಅಪ್ಲೈ ಮಾಡಲು ಅರ್ಜಿಯನ್ನು ಭರ್ತಿ ಮಾಡಬೇಕು. ಈ ಯೋಜನೆ ಅಡಿಯಲ್ಲಿ ಖಾತೆಯನ್ನು ತೆರೆಯಲು ಭಾರತದ ನಾಗರಿಕರಾಗಿರಬೇಕು. 10 ವರ್ಷದ ಮೇಲ್ಪಟ್ಟ ಅಪ್ರಾಪ್ತರು ಜನ್-ಧನ್ ಖಾತೆಯನ್ನು ತೆರೆಯಬಹುದು.

ಸಾಮಾನ್ಯ ಖಾತೆಯನ್ನು ಜನ್-ಧನ್ ಖಾತೆಯಾಗಿ ಬದಲಾವಣೆ ಮಾಡಿಕೊಳ್ಳುವುದು ಬ್ಯಾಂಕಿಂಗ್ ನಿಯಮಗಳದೇ ಭಾಗವಾಗಿದೆ. ಗ್ರಾಹಕರು ಎಲ್ಲಿ ಖಾತೆಯನ್ನು ಹೊಂದಿರುತ್ತಾರೋ ಆ ಬ್ಯಾಂಕ್ ಶಾಖೆಗೆ ತೆರಳಬೇಕು. ಲಿಖಿತ ಅರ್ಜಿಯನ್ನು, ಜತೆಗೆ ಕೆವೈಸಿ ದಾಖಲಾತಿಗಳನ್ನು ಸಲ್ಲಿಸಿ, ರುಪೇ ಕಾರ್ಡ್ ವಿತರಿಸುವಂತೆ ಹಾಗೂ ಪ್ರಸ್ತುತ ಉಳಿತಾಯ ಖಾತೆಯನ್ನು ವರ್ಗಾವಣೆ ಮಾಡುವಂತೆ ಮನವಿ ಮಾಡಿಕೊಳ್ಳಬೇಕು. ಈ ಅರ್ಜಿಯನ್ನು ಸಲ್ಲಿಸಿದ ನಂತರ, ರುಪೇ ಡೆಬಿಟ್ ಕಾರ್ಡ್ ವಿತರಿಸಿದ ಮೇಲೆ ಮೂರರಿಂದ- ನಾಲ್ಕು ವರ್ಕಿಂಗ್ ಡೇಗಳಲ್ಲಿ ಉಳಿತಾಯ ಖಾತೆಯು ತಾನಾಗಿಯೇ ಜನ್- ಧನ್ ಖಾತೆಯಾಗಿ ಮಾರ್ಪಾಟಾಗುತ್ತದೆ.

ಅಗತ್ಯ ದಾಖಲಾತಿಗಳು ಖಾತೆದಾರರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಬ್ಯಾಂಕ್​ನ ಶಾಖೆ ಹೆಸರು, ಉದ್ಯಮ/ಉದ್ಯೋಗ ಮಾಹಿತಿ, ಅವಲಂಬಿತರ ಸಂಖ್ಯೆ, ವಾರ್ಷಿಕ ಆದಾಯ, ನಾಮಿನಿ, ಹಳ್ಳಿಯ ಕೋಡ್ ಅಥವಾ ಪಟ್ಟಣದ ಕೋಡ್ ಇತ್ಯಾದಿ ಮಾಹಿತಿಗಳನ್ನು ಅರ್ಜಿಯಲ್ಲಿ ಭರ್ತಿ ಮಾಡಬೇಕು. ಭರ್ತಿ ಮಾಡಿದ ಅರ್ಜಿಯೊಂದಿಗೆ ಆಧಾರ್ ಸಲ್ಲಿಸಬೇಕು. ಜತೆಗೆ ಪ್ಯಾನ್ ಕಾರ್ಡ್, ಪಾಸ್​ಪೋರ್ಟ್, ನರೇಗಾ ಜಾಬ್​ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಈ ಪೈಕಿ ಯಾವುದಾದರೂ ನೀಡಬೇಕು.

ಜನ್-ಧನ್ ಅಂಕಿ-ಅಂಶ ದೇಶದಲ್ಲಿ ಜನ್-ಧನ್ ಖಾತೆ ಫಲಾನುಭವಿಗಳ ಸಂಖ್ಯೆ 2020-21ರ ಹಣಕಾಸು ವರ್ಷದ ಕೊನೆಗೆ 42.20 ಕೋಟಿ ಇದೆ. ಆ ಸಂಖ್ಯೆ ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್ ತಿಂಗಳಲ್ಲಿ 11 ಲಕ್ಷ ಹೆಚ್ಚಾಗಿ 42.31 ಲಕ್ಷ ಮುಟ್ಟಿದೆ. ಆದರೂ ಜನ್-ಧನ್ ಖಾತೆಯ ಠೇವಣಿ ಸರಾಸರಿ ಮೊತ್ತ ಮಾರ್ಚ್ ಕೊನೆಗೆ 3,449 ರೂಪಾಯಿ ಇದ್ದದ್ದು ಏಪ್ರಿಲ್ ಕೊನೆಗೆ ರೂ. 3,386.85ಕ್ಕೆ ಕುಸಿತವಾಗಿದೆ.

ಇದನ್ನೂ ಓದಿ: Jan Dhan account: ಜನ್​ಧನ್ ಖಾತೆಯ ಫಲಾನುಭವಿಗಳ ಸಂಖ್ಯೆ ಏಪ್ರಿಲ್​ನಲ್ಲಿ 11 ಲಕ್ಷ ಹೆಚ್ಚಳ

(How to convert normal savings account to Jan Dhan scheme account. Here is the procedure to follow)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್