Petrol Diesel Rate Today: ಮೇ 10ರಂದು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ; ಎಷ್ಟು ಹೆಚ್ಚಳ? ಇಲ್ಲಿದೆ ದರ ವಿವರ
Petrol Diesel Price Today: ಸತತವಾಗಿ ಎರಡು ದಿನಗಳ ಕಾಲ ಸ್ಥಿರತೆ ಹೊಂದಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಇಂದು ಸೋಮವಾರ ಮತ್ತೆ ಏರಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 26 ಪೈಸೆಯಷ್ಟು ಏರಿಕೆಯಾಗಿದ್ದರೆ, ಪ್ರತಿ ಲೀಟರ್ ಡೀಸೆಲ್ ದರದಲ್ಲಿ 35 ಪೈಸೆ ಹೆಚ್ಚಳವಾಗಿದೆ.
ದೆಹಲಿ: ಸತತವಾಗಿ ಎರಡು ದಿನಗಳ ಕಾಲ ಸ್ಥಿರತೆ ಹೊಂದಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಇಂದು ಸೋಮವಾರ ಮತ್ತೆ ಏರಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 26 ಪೈಸೆಯಷ್ಟು ಏರಿಕೆಯಾಗಿದ್ದರೆ, ಪ್ರತಿ ಲೀಟರ್ ಡೀಸೆಲ್ ದರದಲ್ಲಿ 35 ಪೈಸೆ ಹೆಚ್ಚಳವಾಗಿದೆ. ತದನಂತರ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 91.53 ರೂಪಾಯಿಗೆ ಏರಿಕೆಯಾಗಿದೆ. ಹಾಗೂ ವಾಣಿಜ್ಯ ನಗರಿ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದು 98.86 ರೂಪಾಯಿಗೆ ತಲುಪಿದೆ. ಇನ್ನು, ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 93.38 ರೂಪಾಯಿ ಆಗಿದ್ದು, ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 91.66 ರೂಪಾಯಿ ಆಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 94.57 ರೂಪಾಯಿ ಆಗಿದ್ದು, ಪ್ರತಿ ಲೀಟರ್ ಡೀಸೆಲ್ ದರ 86.99 ರೂಪಾಯಿ ಆಗಿದೆ.
ಇಂದು ತೈಲ ದರ ಏರಿಕೆಯ ಬಳಿಕ ಹೈದರಾಬಾದ್ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 95.13 ರೂಪಾಯಿ ಆಗಿದೆ. ಜೈಪುರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 97.92 ರೂಪಾಯಿ ಆಗಿದೆ. ಪಾಟ್ನಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 93.77 ರೂಪಾಯಿ, ಹಾಗೆಯೇ ಲಕ್ನೋದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 89.56 ರೂಪಾಯಿ ಆಗಿದೆ. ನೋಯ್ಡಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 89.64 ರೂಪಾಯಿ ಆಗಿದೆ.
Price of petrol & diesel in #Delhi at Rs 91.53 per litre and Rs 82.06 per litre respectively today
Petrol & diesel prices per litre – Rs 97.86 & Rs 89.17 in #Mumbai, Rs 93.38 & Rs 86.96 in #Chennai and Rs 91.66 & Rs 84.90 in #Kolkata
— ANI (@ANI) May 10, 2021
ತೈಲ ಮಾರುಕಟ್ಟೆ ಕಂಪನಿಗಳು ಡೀಸೆಲ್ ದರದಲ್ಲಿ 35 ಪೈಸೆ ಹೆಚ್ಚಿಸಿದ್ದು, ದೆಹಲಿಯಲ್ಲಿ ಪ್ರತಿ ಲೀಟರ್ ಡೀಸೆಲ್ ದರ 82.06 ರೂಪಾಯಿ ಆಗಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಡೀಸೆಲ್ ದರ 89.17 ರೂಪಾಯಿಗೆ ಏರಿಕೆ ಮಾಡಲಾಗಿದೆ. ಭಾರತದಲ್ಲಿ ಪ್ರತಿನಿತ್ಯ ಬೆಳಿಗ್ಗೆ 6 ಗಂಟೆಗೆ ತೈಲ ಬೆಲೆಯನ್ನು ಪರಿಷ್ಕರಿಸಲಾಗುತ್ತದೆ. ಅಂತರಾಷ್ಟ್ರೀಯ ಕಚ್ಚಾ ಬೆಲೆಗಳು, ಮತ್ತು ವಿದೇಶಿ ಮಿನಿಮಯ ದರದ ಆಧಾರದ ಮೇಲೆ ಇಂಧನ ದರದ ಮೌಲ್ಯ ನಿರ್ಧಾರವಾಗುತ್ತದೆ. ಜೊತೆಗೆ ವ್ಯಾಟ್, ಸರಕು ಶುಲ್ಕಗಳಂತಹ ಸ್ಥಳೀಯ ತೆರಿಗೆಗಳನ್ನು ಆಧರಿಸಿ ಬೆಲೆ ನಿರ್ಧಾರ ಮಾಡಲಾಗುತ್ತದೆ.
ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಡೀಸೆಲ್ ದರ 84.90 ರೂಪಾಯಿ ಆಗಿದೆ. ಹಾಗೆಯೇ ಚೆನ್ನೈನಲ್ಲಿ ಪ್ರತಿ ಲೀಟರ್ ಡೀಸೆಲ್ ದರ 86.96 ರೂಪಾಯಿಗೆ ಏರಿಕೆ ಆಗಿದೆ. ಹೈದರಾಬಾದ್ನಲ್ಲಿ ಪ್ರತಿ ಲೀಟರ್ ಡೀಸೆಲ್ ದರ 89.47 ರೂಪಾಯಿ, ಜೈಪುರದಲ್ಲಿ 90.61 ರೂಪಾಯಿ, ಪಾಟ್ನಾದಲ್ಲಿ 87.27 ರೂಪಾಯಿ, ಲಕ್ನೋದಲ್ಲಿ 82.43 ರೂಪಾಯಿ, ನೋಯ್ಡಾದಲ್ಲಿ 82.51 ರೂಪಾಯಿಗೆ ಪ್ರತಿ ಲೀಟರ್ ಡೀಸೆಲ್ ದರವನ್ನು ಏರಿಕೆ ಮಾಡಲಾಗಿದೆ.
Published On - 9:21 am, Mon, 10 May 21