ಕೊವಿಡ್ ವಿರುದ್ಧದ ಹೋರಾಟದಲ್ಲಿ ಬಳಸುವ ವಸ್ತುಗಳ ತೆರಿಗೆ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

ಕೊವಿಡ್ ವಿರುದ್ಧದ ಹೋರಾಟದಲ್ಲಿ ಬಳಸುವ ವಸ್ತುಗಳ ತೆರಿಗೆ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ
ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)

Nirmala Sitharaman On Covid Vaccine Tax: ಈಗಾಗಲೇ ವಿದೇಶಗಳಿಂದ ಆಮದಾಗುವ ಕೊವಿಡ್ ಔಷಧಗಳ ಮೇಲಿನ ತೆರಿಗೆಗೆ ವಿನಾಯತಿ ನೀಡಲಾಗಿದೆ. ಈ ಮೂಲಕ ಲಸಿಕೆ, ಮೆಡಿಕಲ್ ಆಕ್ಸಿಜನ್ ಮುಂತಾದ ಉತ್ಪನ್ನಗಳ ಬೆಲೆ ಇಳಿಕೆ ಮಾಡುವಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ ಎಂದು ಅವರು ಟ್ವೀಟ್​ನಲ್ಲಿ ವಿವರಿಸಿದ್ದಾರೆ.

guruganesh bhat

|

May 09, 2021 | 11:04 PM

ದೆಹಲಿ: ಕೊವಿಡ್ 19ರ ಹೋರಾಟಕ್ಕೆ ಬಳಸುತ್ತಿರುವ ವಸ್ತುಗಳ ಬೆಲೆ ಕಡಿಮೆ ಇರಲು ಲಸಿಕೆಗೆ ಶೇಕಡಾ 5ರಷ್ಟು ಮತ್ತು ಔಷಧ ಮತ್ತು ಆಕ್ಸಿಜನ್ ಕಾನ್ಸ್​ಟ್ರೇಟರ್​ಗಳ ಮೇಲೆ ಶೇಕಡಾ 12ರಷ್ಟು ತೆರಿಗೆ ಅನಿವಾರ್ಯ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೊವಿಡ್ ಸಂಬಂಧಿತ ಔಷಧ, ಆಮ್ಲಜನಕದ ಸಿಲಿಂಡರ್​ಗಳ ಮೇಲಿನ ಜಿಎಸ್​ಟಿ ಮತ್ತು ಕಸ್ಟಮ್ ಸುಂಕ ರದ್ದುಗೊಳಿಸುವಂತೆ ಮಾಡಿರುವ ಮನವಿಗೆ ಕೇಂದ್ರ ಹಣಕಾಸು ಸಚಿವೆ 16 ಸರಣಿ ಟ್ವೀಟ್​ಗಳ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.

ಕೊವಿಡ್ ವಿರುದ್ಧದ ಹೋರಾಟಕ್ಕೆ ಬಳಸುತ್ತಿರುವ ಈ ಉತ್ಪನ್ನಗಳಿಗೆ ಜಿಎಸ್​ಟಿಯಿಂದ (ಸರಕು ಮತ್ತು ಸೇವಾ ತೆರಿಗೆ) ಸಂಪೂರ್ಣ ವಿನಾಯಿತಿ ನೀಡಿದರೆ, ಈ ಉತ್ಪನ್ನಗಳ ದೇಶೀಯ ಉತ್ಪಾದಕರು ತಮ್ಮ ಒಳಹರಿವಿನ ಸೇವೆಗಳಿಗೆ ಪಾವತಿಸುವ ತೆರಿಗೆಯನ್ನು ಸರಿದೂಗಿಸಲು ಸಾಧ್ಯವಾಗುವುದಿಲ್ಲ. ಹಾಗಾದಲ್ಲಿ ಅಂತಿಮವಾಗಿ ವಸ್ತುವಿನ ಬೆಲೆ ಹೆಚ್ಚಿಸಬೇಕಾಗುತ್ತದೆ. ಇದು ಗ್ರಾಹಕರ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಈಗಾಗಲೇ ವಿದೇಶಗಳಿಂದ ಆಮದಾಗುವ ಕೊವಿಡ್ ಔಷಧಗಳ ಮೇಲಿನ ತೆರಿಗೆಗೆ ವಿನಾಯತಿ ನೀಡಲಾಗಿದೆ. ಈ ಮೂಲಕ ಲಸಿಕೆ, ಮೆಡಿಕಲ್ ಆಕ್ಸಿಜನ್ ಮುಂತಾದ ಉತ್ಪನ್ನಗಳ ಬೆಲೆ ಇಳಿಕೆ ಮಾಡುವಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ ಎಂದು ಅವರು ಟ್ವೀಟ್​ನಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ದಕ್ಷಿಣ ಭಾಗದವರು ಆಕ್ಸಿಜನ್ ಬೇಕಿದ್ದಲ್ಲಿ 080- 61914960ಕ್ಕೆ ಕರೆ ಮಾಡಿ: ಸಂಸದ ತೇಜಸ್ವಿ ಸೂರ್ಯ

Mamata Banerjee Swearing-in Ceremony: ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮಮತಾ ಬ್ಯಾನರ್ಜಿ

(After Mamata Banerjee letter FM Nirmala Sitharaman explain tax on covid vaccines)

Follow us on

Related Stories

Most Read Stories

Click on your DTH Provider to Add TV9 Kannada