Mamata Banerjee Swearing-in Ceremony: ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮಮತಾ ಬ್ಯಾನರ್ಜಿ

West Bengal Election 2021 Results: ವಿಧಾನಸಭಾ ಚುನಾವಣೆಯಲ್ಲಿ  ಟಿಎಂಸಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಲು ಕಾರಣವಾದ  ಮಮತಾ ಬ್ಯಾನರ್ಜಿ ಮೂರನೇ  ಬಾರಿ  ಮುಖ್ಯಮಂತ್ರಿ ಗದ್ದುಗೆಗೇರುತ್ತಿದ್ದಾರೆ.  ರಾಜಭವನದಲ್ಲಿ ನಡೆದ  ಸರಳ ಸಮಾರಂಭದಲ್ಲಿ ಮಮತಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Mamata Banerjee Swearing-in Ceremony: ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ   ಪ್ರಮಾಣ ವಚನ ಸ್ವೀಕರಿಸಿದ ಮಮತಾ ಬ್ಯಾನರ್ಜಿ
Mamata Banerjee
Follow us
ರಶ್ಮಿ ಕಲ್ಲಕಟ್ಟ
| Updated By: Digi Tech Desk

Updated on:May 05, 2021 | 12:06 PM

ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್   ಪಕ್ಷದ ನಾಯಕಿ  ಮಮತಾ ಬ್ಯಾನರ್ಜಿ ಅವರು ಇಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ  ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ  ಟಿಎಂಸಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಲು ಕಾರಣವಾದ  ಮಮತಾ ಬ್ಯಾನರ್ಜಿ ಮೂರನೇ  ಬಾರಿ  ಮುಖ್ಯಮಂತ್ರಿ ಗದ್ದುಗೆಗೇರುತ್ತಿದ್ದಾರೆ. ರಾಜಭವನದಲ್ಲಿ ನಡೆದ  ಸರಳ ಸಮಾರಂಭದಲ್ಲಿ ಮಮತಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಕಾರ್ಯಕ್ರಮದ ಆಹ್ವಾನ ಸದನದ ಪ್ರತಿಪಕ್ಷದ ನಾಯಕ ಅಬ್ದುಲ್ ಮನ್ನನ್ ಮತ್ತು ಸಿಪಿಐ (ಎಂ) ಹಿರಿಯ ನಾಯಕ ಬಿಮನ್ ಬೋಸ್ , ಬುದ್ಧದ್ದೇಬ್ ಭಟ್ಟಾಚಾರ್ಜಿ ಅವರಿಗೆ ಕಳುಹಿಸಲಾಗಿದೆ ಎಂದು  ಮಂಗಳವಾರ ಮಮತಾ ಬ್ಯಾನರ್ಜಿ ಅವರ ಆಪ್ತರು ಹೇಳಿದ್ದಾರೆ.

ಮಮತಾ  ಬ್ಯಾನರ್ಜಿ ಅವರ ಟ್ರೇಡ್ ಮಾರ್ಕ್ ಆಗಿರುವ ಬಿಳಿ ಸೀರೆಯುಟ್ಟು,ಶಾಲು ಹೊದ್ದು ಬಂಗಾಳಿ  ಭಾಷೆಯಲ್ಲಿ ಮಮತಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ.  ನೂತನ  ಶಾಸಕರು  ರಬೀಂದ್ರನಾಥ  ಟಾಗೋರರ ಜಯಂತಿಯಂದು  ಮೇ 9ಕ್ಕೆ ಪ್ರಮಾಣವ ವಚನ ಸ್ವೀಕರಿಸಲಿದ್ದಾರೆ

ಎರಡು ದಿನಗಳಲ್ಲಿ ಕನಿಷ್ಠ 14 ಜೀವಗಳನ್ನು ಬಲಿ ಪಡೆದ ಚುನಾವಣೋತ್ತರ ಹಿಂಸಾಚಾರದ ಬಗ್ಗೆ ಟಿಎಂಸಿ ಸರ್ಕಾರದ ಮೇಲೆ ಹೆಚ್ಚುತ್ತಿರುವ ಒತ್ತಡದ ಮಧ್ಯೆ ಈ ಸಮಾರಂಭ ನಡೆದಿದೆ . ಹಿಂಸಾಚಾರವನ್ನು  ನಿಯಂತ್ರಿಸಲು ಬ್ಯಾನರ್ಜಿ ಆದೇಶಿಸಿದ್ದಾರೆ . ಮಂಗಳವಾರ, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಪಾಲರಾದ ವರದಿಯನ್ನು ಕೋರಿ ರಾಜ್ಯಪಾಲ ಜಗದೀಪ್ ಧನ್ಕರ್ ಅವರಿಗೆ  ಕರೆ ಮಾಡಿದ್ದರು. ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾದರು.

ರಾಜ್ಯದಲ್ಲಿ ಕಾನೂನು ವ್ಯವಸ್ಥೆ  ಕಾಪಾಡಿ:  ರಾಜ್ಯಪಾಲ  ಧನ್ಕರ್ 

 ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ  ಅಭಿನಂದನೆ  ಸಲ್ಲಿಸಿದ  ರಾಜ್ಯಪಾಲ  ಜಗದೀಪ್ ಧನ್ಕರ್ , ರಾಜ್ಯದಲ್ಲಿ ಕಾನೂನು ವ್ಯವಸ್ಥೆ  ಕಾಪಾಡುವಂತೆ ಮನವಿ ಮಾಡಿದ್ದಾರೆ.  ಮೂರನೇ ಬಾರಿ ಮುಖ್ಯಮಂತ್ರಿಯಾದ ಮಮತಾ  ಬ್ಯಾನರ್ಜಿಗೆ ಅಭಿನಂದನೆಗಳು. ಸಮಾಜದ ಮೇಲೆ ಪರಿಣಾಮ  ಬೀರಿರುವವ  ಹಿಂಸಾಚಾರವನ್ನು ನಿಲ್ಲಿಸುವುದು ನಮ್ಮ ಆದ್ಯತೆಯಾಗಿರಬೇಕು.  ಈ ಹಿಂಸಾಚಾರ ತಡೆಯಲು ಮುಖ್ಯಮಂತ್ರಿ ಶೀಘ್ರವೇ ಕ್ರಮಕೈಗೊಳ್ಳಲಿದ್ದು  ರಾಜ್ಯ ದಲ್ಲಿ ಕಾನೂನು ವ್ಯವಸ್ಥೆ ಉತ್ತಮವಾಗಲಿ ಎಂದು  ನಾನು ಆಶಿಸುತ್ತೇನೆ ಎಂದಿದ್ದಾರೆ.

ಬಡತನದಲ್ಲಿ ನೊಂದಿದ್ದ ಮಮತಾ ಬ್ಯಾನರ್ಜಿಗೆ ಹೋರಾಟದ ರಾಜಕೀಯ ರಕ್ತಗತ

ಸಿಎಂ ಮಮತಾ ಬ್ಯಾನರ್ಜಿಗೆ ಹೋರಾಟಗಳು ಹೊಸತಲ್ಲ. ‘ಸ್ಟ್ರೀಟ್ ಫೈಟರ್’ ಎಂದೇ ಮಮತಾ ಖ್ಯಾತರಾದವರು. ಹಳ್ಳಿಯೇ ಇರಲಿ, ಕೋಲ್ಕತ್ತಾದ ಬೀದಿಯೇ ಇರಲಿ, ದಿಲ್ಲಿಯೇ ಇರಲಿ, ಮಮತಾ ಬೀದಿಗಿಳಿದು ಹೋರಾಟ ಮಾಡಲು ಹಿಂಜರಿದವರಲ್ಲ. 34 ವರ್ಷಗಳ ಕಾಲ ನಿರಂತರವಾಗಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿದ್ದ ಎಡಪಕ್ಷವನ್ನು ಸೋಲಿಸಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವನ್ನು 2011ರಲ್ಲಿ ಅಧಿಕಾರಕ್ಕೆ ತಂದವರು ಮಮತಾ ಬ್ಯಾನರ್ಜಿ. ಹೋರಾಟಗಳನ್ನೇ ಚುನಾವಣಾ ತಂತ್ರವಾಗಿ ಬಳಸಿ ಗೆದ್ದವರು ಮಮತಾ. ನಂದಿಗ್ರಾಮ, ಸಿಂಗೂರ್ ಕ್ಷೇತ್ರಗಳಲ್ಲಿ ಭೂಸ್ವಾಧೀನ ವಿರೋಧಿ ಹೋರಾಟಗಳು ಎಡಪಕ್ಷದ ಸುದೀರ್ಘ ಆಳ್ವಿಕೆಯ ಸರ್ಕಾರದ ಪತನಕ್ಕೆ ಟಿಎಂಸಿ ಬಲವರ್ಧನೆಗೆ ಕಾರಣವಾದವು.

ಮಮತಾ ಬದುಕು ಸಾಗಿ ಬಂದ ಹಾದಿ ಟಿಎಂಸಿ ಪಕ್ಷದ ಅಧಿನಾಯಕಿಯಾಗಿರುವ ಮಮತಾ ಬ್ಯಾನರ್ಜಿ ರಾಜಕೀಯ ಜೀವನ ಆರಂಭಿಸಿದ್ದು ಕಾಂಗ್ರೆಸ್ ಪಕ್ಷದಿಂದ. 1970ರಲ್ಲಿ ಮಮತಾ ಬ್ಯಾನರ್ಜಿ ಬಂಗಾಳದ ಯುವ ಕಾಂಗ್ರೆಸ್ ನಾಯಕಿಯಾಗಿದ್ದರು. ಬಂಗಾಳದ ಮಹಿಳಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಬಳಿಕ ಅಖಿಲ ಭಾರತ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದರು. 1984ರಲ್ಲಿ 8ನೇ ಲೋಕಸಭೆಗೆ ಆಯ್ಕೆಯಾಗುವ ಮೂಲಕ ಕಿರಿಯ ವಯಸ್ಸಿಗೆ ಲೋಕಸಭಾ ಸದಸ್ಯೆಯಾದರು. 1984ರ ಲೋಕಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಪ್ರಣವ್ ಮುಖರ್ಜಿ ವಿರೋಧಿಸಿದ್ದರು. ಆದರೂ, ಮಮತಾ ಬ್ಯಾನರ್ಜಿಗೆ ಆಗ ಟಿಕೆಟ್ ನೀಡಲಾಗಿತ್ತು.

ತಮಗೆ ಲೋಕಸಭಾ ಟಿಕೆಟ್ ನೀಡಿಕೆಗೆ ವಿರೋಧಿಸಿದ್ದ ಬಂಗಾಳದವರೇ ಆದ ಪ್ರಣವ್ ಮುಖರ್ಜಿ ಮುಂದಿನ ದಿನಗಳಲ್ಲಿ ಯುಪಿಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾದರು. ಆಗ ಪ್ರಣವ್ ದಾದಾ ಅಭ್ಯರ್ಥಿಯಾಗುವುದುನ್ನು ವಿರೋಧಿಸಿ ಮಮತಾ ಮತ ಚಲಾಯಿಸಿದ್ದರು. ಪಶ್ಚಿಮ ಬಂಗಾಳದ ಪ್ರಣವ್ ಮುಖರ್ಜಿ ದೇಶದ ರಾಷ್ಟ್ರಪತಿ ಆಗೋದು ಬಂಗಾಳಕ್ಕೆ ಹೆಮ್ಮೆಯ ವಿಷಯ ಎಂದು ಮಮತಾ ಹೇಳಬಹುದಿತ್ತು. ಆದರೇ, ಹಾಗೆ ಮಮತಾ ಹೇಳಲಿಲ್ಲ. 1984ರಲ್ಲಿ ತಮ್ಮ ರಾಜಕೀಯ ಮೆಟ್ಟಿಲು ಹತ್ತುವಾಗ ಪ್ರಣವ್ ವಿರೋಧಿಸಿದ್ದನ್ನು ಮಮತಾ ಮರೆತಿರಲಿಲ್ಲ.

ಕಾಂಗ್ರೆಸ್ ಪಕ್ಷದೊಂದಿಗಿನ ಭಿನ್ನಾಭಿಪ್ರಾಯ, ನಾಯಕತ್ವದ ಗೊಂದಲದಿಂದಾಗಿ ಮಮತಾ ಬ್ಯಾನರ್ಜಿ 1997ರಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಸ್ಥಾಪಿಸಿದ್ದರು. ಮಮತಾ ಬ್ಯಾನರ್ಜಿ ಮೂವರು ಪ್ರಧಾನಮಂತ್ರಿಗಳ ಜೊತೆಗೆ ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದಾರೆ. ಪಿ.ವಿ.ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಸರ್ಕಾರದಲ್ಲಿ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಯುಪಿಎ ಮತ್ತು ಎನ್‌ಡಿಎ ಸರ್ಕಾರಗಳೆರೆಡರಲ್ಲೂ ಮಮತಾ ಬ್ಯಾನರ್ಜಿ ಕ್ಯಾಬಿನೆಟ್ ಸಚಿವೆಯಾಗಿ ಕೆಲಸ ಮಾಡಿದ್ದಾರೆ. ಕೇಂದ್ರದಲ್ಲಿ ಮಾನವ ಸಂಪನ್ಮೂಲ, ಯುವಜನಸೇವಾ ಖಾತೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ, ಗಣಿ, ರೈಲ್ವೆ ಖಾತೆಯಂಥ ಪ್ರಮುಖ ಖಾತೆಗಳನ್ನು ಮಮತಾ ಬ್ಯಾನರ್ಜಿ ನಿರ್ವಹಿಸಿದ್ದಾರೆ. ಭಾರತದಲ್ಲಿ ರೈಲ್ವೆ ಇಲಾಖೆ ಸಚಿವರಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಮಮತಾ ದೀದಿಗೆ ಸಲ್ಲುತ್ತೆ. 2012ರಲ್ಲಿ ಟೈಮ್ಸ್ ಮ್ಯಾಗಜೀನ್ ಮಾಡಿದ್ದ ವಿಶ್ವದ ನೂರು ಪ್ರಭಾವಿ ವ್ಯಕ್ತಿಗಳಲ್ಲಿ ಪಟ್ಟಿಯಲ್ಲಿ ಮಮತಾ ಬ್ಯಾನರ್ಜಿ ಅವರ ಹೆಸರೂ ಸೇರಿತ್ತು.

ಮಮತಾ ಜೀವನದ ಕಲ್ಲುಮುಳ್ಳಿನ ಹಾದಿ ಮಮತಾ ಬ್ಯಾನರ್ಜಿ ಜೀವನ ಹೂವಿನ ಹಾಸಿಗೆ ಆಗಿರಲಿಲ್ಲ. ಕಲ್ಲುಮುಳ್ಳಿನ ಹಾದಿಯಲ್ಲಿ ನಡೆದು ಬಂದಿದ್ದಾರೆ. ಕೋಲ್ಕತ್ತಾದ ಕೆಳ ಮಧ್ಯಮ ವರ್ಗದಲ್ಲಿ ಹುಟ್ಟಿದವರು ಮಮತಾ ಬ್ಯಾನರ್ಜಿ. ತಂದೆ ಬಡತನದ ಕೂಪಕ್ಕೆ ಸಿಲುಕಿ ನಲುಗಿ ಹೋಗಿದ್ದರು. ಬಡತನದಿಂದ ಹೊರಬರಲು ಹಾಲು ಮಾರುತ್ತಿದ್ದರು. ಮಮತಾ ಬ್ಯಾನರ್ಜಿ 17 ವರ್ಷದವರಿದ್ದಾಗ ಅವರ ತಂದೆ ಅನಾರೋಗ್ಯಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದರು. ಆದರೆ, ಮಮತಾ ಬ್ಯಾನರ್ಜಿಯ ಅಂತರಾಳದಲ್ಲಿ ಹೋರಾಟದ ಮನೋಭಾವ ಇದ್ದೇ ಇತ್ತು. ತಮ್ಮ ಶಿಕ್ಷಣ ಮುಂದುವರೆಸಿದ ಮಮತಾ ಬ್ಯಾನರ್ಜಿ ಪದವಿ ಪಡೆದರು. ಬಳಿಕ ಇಸ್ಲಾಮಿಕ್ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಜೊತೆಗೆ ಕೋಲ್ಕತ್ತಾ ವಿಶ್ವವಿದ್ಯಾಲಯದಿಂದ ಕಾನೂನು ವಿಷಯದಲ್ಲೂ ಪದವಿ ಪೂರೈಸಿದ್ದರು. ರಾಜಕೀಯ ಪ್ರವೇಶಿಸುವ ಮೊದಲು ಮಮತಾ ಬ್ಯಾನರ್ಜಿ ಜೀವನ ನಿರ್ವಹಣೆಗಾಗಿ ಸ್ಟೆನೋಗ್ರಾಫರ್ ಆಗಿದ್ದರು. ಹಣ ಸಂಪಾದನೆಗಾಗಿ ಮಕ್ಕಳಿಗೆ ಟ್ಯೂಷನ್ ಮಾಡುತ್ತಿದ್ದರು.

ಮಮತಾ ಬ್ಯಾನರ್ಜಿ ಅವಿವಾಹಿತೆ. ಅವರ ಲೈಫ್ ಸ್ಟೈಲ್ ಇಡೀ ದೇಶದ ಜನರ ಗಮನ ಸೆಳೆದಿದೆ. ಯಾವಾಗಲೂ ಬಿಳಿ ಕಾಟನ್ ಸೀರೆ ಮತ್ತು ಚಪ್ಪಲಿ ಧರಿಸುತ್ತಾರೆ. ಇದು ಮಮತಾ ದೀದಿಯ ಸ್ಟೈಲ್​ನ ಬ್ರಾಂಡ್. ಮಮತಾ ಬ್ಯಾನರ್ಜಿ ಸರಳತೆಗೆ ಒತ್ತು ಕೊಡ್ತಾರೆ. ಅದ್ದೂರಿ, ಅಡಂಬರದ ಜೀವನ ಶೈಲಿಗೆ ಮೊರೆ ಹೋಗಿಲ್ಲ. ಕಳೆದ ಹತ್ತು ವರ್ಷಗಳಿಂದ ಪಶ್ಚಿಮ ಬಂಗಾಳದಂಥ ದೊಡ್ಡ ರಾಜ್ಯದ ಸಿಎಂ ಆಗಿದ್ದಾರೆ. ಕೋಲ್ಕತ್ತಾದ ಐಷಾರಾಮಿ ಬಡಾವಣೆಯ ಐಷಾರಾಮಿ ಬಂಗಲೆಯಲ್ಲಿ ಮಮತಾ ವಾಸಿಸಬಹುದಿತ್ತು. ಐಷಾರಾಮಿತನಕ್ಕೆ ಗುಡ್ ಬೈ ಹೇಳಿರುವ ಮಮತಾ, ತಮ್ಮ ಪೂರ್ವಜರ ಹಳೆಯ ಹೆಂಚಿನ ಮನೆಯಲ್ಲೇ ಇಂದಿಗೂ ವಾಸ ಇದ್ದಾರೆ.

ಕೋಲ್ಕತ್ತಾದ ಹರೀಶ್ ಚಟರ್ಜಿ ರಸ್ತೆಯು ನಮ್ಮ ಬೆಂಗಳೂರಿನ ಸ್ಲಂನಂಥ ಏರಿಯಾ. ಅಂಥ ಏರಿಯಾದಲ್ಲೇ ಈಗಲೂ ಅವರ ಜೀವನ ನಡೆಯುತ್ತಿದೆ. ಚಿತ್ರಗಳನ್ನು ಬರೆಯುವ ಮಮತಾ ಸ್ವತಃ ಕವಯತ್ರಿ, ಬರಹಗಾರ್ತಿಯೂ ಹೌದು. ನೂರಕ್ಕೂ ಹೆಚ್ಚು ಪುಸ್ತಕ ಬರೆದಿದ್ದಾರೆ. ಮಮತಾ ದೀದಿ ಕಾಲಕ್ಕೆ ತಕ್ಕಂತೆ ಟೆಕ್ಸ್ಯಾವಿ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿರುತ್ತಾರೆ. ದೀದಿ, ಹತ್ತಾರು ಕಿಲೋಮೀಟರ್ ವಾಕಿಂಗ್ ಮಾಡಲು ಕೂಡ ರೆಡಿ. ಮನೆಯಲ್ಲಿ ಟ್ರೆಡ್ ಮಿಲ್ ನಲ್ಲಿ ನಿತ್ಯ ಐದಾರು ಕಿಲೋಮೀಟರ್​ಗಳಷ್ಟು ನಡೆಯುತ್ತಾರೆ. ಮಮತಾ ಬ್ಯಾನರ್ಜಿಗೆ ಸಂಜೆ ಹೊತ್ತು ಸ್ನಾಕ್ಸ್ ಗೆ ಟೀ, ಆಲೂಗೆಡ್ಡೆ ಅಂದರೆ ಇಷ್ಟ.

ಇದನ್ನೂ ಓದಿ:  ‘ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ನನಗೆ ಕರೆ ಮಾಡಲಿಲ್ಲ.. ಬಹುಶಃ ತುಂಬ ಕೆಲಸ ಇರಬೇಕು’ -ಮಮತಾ ಬ್ಯಾನರ್ಜಿ

ಒಂದು ದೇಶ, ಒಂದು ಪಕ್ಷ ಎಂದು ಹೇಳುವ ಬಿಜೆಪಿ ಕೊವಿಡ್ ಲಸಿಕೆಗೆ ಒಂದೇ ಬೆಲೆ ಇಟ್ಟಿಲ್ಲ ಯಾಕೆ: ಮಮತಾ ಬ್ಯಾನರ್ಜಿ

Published On - 11:03 am, Wed, 5 May 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ