Coronavirus India Update: ಕಳೆದ 24 ಗಂಟೆಗಳಲ್ಲಿ 3.82 ಲಕ್ಷ ಹೊಸ ಕೊರೊನಾ ಪ್ರಕರಣ ಪತ್ತೆ, 3780 ಮಂದಿ ಸಾವು
Covid 19 India: ಕೇೆಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿ ಅಂಗಳ ಪ್ರಕಾರ ದೇಶದಲ್ಲಿ ಒಟ್ಟು ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 2,06,65,148 ಆಗಿದೆ. ಒಟ್ಟು 1,69,51,731 ಮಂದಿ ಚೇತರಿಸಿಕೊಂಡಿದ್ದಾರೆ. ಲಸಿಕೆ ಪಡೆದವರ ಸಂಖ್ಯೆ 16,04,94,188 ಆಗಿದೆ.
ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,780 ಮಂದಿ ಸಾವಿಗೀಡಾಗಿದ್ದಾರೆ. ಮಹಾರಾಷ್ಟ್ರದಲ್ಲಿ 900 ಕ್ಕಿಂತಲೂ ಹೆಚ್ಚು ಮಂದಿ ಮೃತಪಟ್ಟಿದ್ದು ದೆಹಲಿಯಲ್ಲಿ 338 ಮತ್ತು ಉತ್ತರಪ್ರದೇಶದಲ್ಲಿ 351ಮಂದಿ ಮೃತ ಪಟ್ಟಿದ್ದಾರೆ. ಕನಿಷ್ಠ 13 ರಾಜ್ಯಗಳಲ್ಲಿ 100ಕ್ಕಿಂತ ಹೆಚ್ಚು ಸಾವು ಸಂಭವಿಸಿದೆ. ದೇಶದಲ್ಲಿ 3.82 ಲಕ್ಷ ಹೊಸ ಕೊವಿಡ್ ಪ್ರಕರಣಗಳು ವರದಿ ಆಗಿದ್ದು ಸಕ್ರಿಯ ಪ್ರಕರಣಗಳಸಂಖ್ಯೆ 34. 87ಲಕ್ಷಕ್ಕೇರಿದೆ. ಮಹಾರಾಷ್ಟ್ರದಲ್ಲಿ 51,880 ಪ್ರಕರಣ ಪತ್ತೆಯಾಗಿದ್ದು ಕರ್ನಾಟಕದಲ್ಲಿ 44,631 ಪ್ರಕರಣಗಳು ವರದಿ ಆಗಿವೆ. ಭಾರತದಲ್ಲಿ ಪ್ರತಿ ದಿನ ಮೂರು ಲಕ್ಷ ಕೊವಿಡ್ -19 ಪ್ರಕರಣಗಳನ್ನು ವರದಿಯಾಗುತ್ತಿದ್ದು ಹಲವಾರು ರಾಜ್ಯಗಳು ಇನ್ನೂ ಆಮ್ಲಜನಕದ ಪೂರೈಕೆಯ ಕೊರತೆ ಇದೆ . ಸಮಯಕ್ಕೆ ಸರಿಯಾಗಿ ಆಮ್ಲಜನಕವನ್ನು ಪೂರೈಸದಿದ್ದಲ್ಲಿ ಹಲವಾರು ಜೀವಗಳು ನಷ್ಟವಾಗುತ್ತವೆ ಎಂದು ಹರ್ಯಾಣ ಸರ್ಕಾರ ಮಂಗಳವಾರ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗೆ ತಿಳಿಸಿದೆ. ಮಹಾರಾಷ್ಟ್ರ ಸರ್ಕಾರ ಮತ್ತು ಬಿಎಂಸಿ ಕೇಂದ್ರ ಸರ್ಕಾರಕ್ಕೆಪ್ರತ್ಯೇಕವಾಗಿ ಪತ್ರ ಬರೆದಿದ್ದು, ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಪೂರೈಕೆಗೆ ಒತ್ತಾಯಿಸಿದೆ. ಮೇ 3 ರಂದು ಒಂದೇ ದಿನ ದೆಹಲಿಯ 41 ಆಸ್ಪತ್ರೆಗಳಲ್ಲಿ 7,000 ರೋಗಿಗಳ ದಾಖಲಾತಿ ಆಗಿದೆ.
India reports 3,82,315 new #COVID19 cases, 3,38,439 discharges and 3,780 deaths in the last 24 hours, as per Union Health Ministry
Total cases: 2,06,65,148 Total recoveries: 1,69,51,731 Death toll: 2,26,188 Active cases: 34,87,229
Total vaccination: 16,04,94,188 pic.twitter.com/8ojDDAjfq7
— ANI (@ANI) May 5, 2021
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿ ಅಂಗಳ ಪ್ರಕಾರ ದೇಶದಲ್ಲಿ ಒಟ್ಟು ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 2,06,65,148 ಆಗಿದೆ. ಒಟ್ಟು 1,69,51,731 ಮಂದಿ ಚೇತರಿಸಿಕೊಂಡಿದ್ದಾರೆ. ಲಸಿಕೆ ಪಡೆದವರ ಸಂಖ್ಯೆ 16,04,94,188 ಆಗಿದೆ.
31 ರಾಜ್ಯಗಳ 38 ಸಂಸ್ಥೆಗಳಿಗೆ ವಿದೇಶಿ ನೆರವು ಕಳುಹಿಸಲಾಗಿದೆ: ಕೇಂದ್ರ ಔಷಧಗಳು, ಆಮ್ಲಜನಕ ಸಾಂದ್ರಕಗಳು ಮತ್ತು ವೆಂಟಿಲೇಟರ್‌ಗಳ ರೂಪದಲ್ಲಿ ಸಹಾಯವನ್ನು ಕಳುಹಿಸುವ ಮೂಲಕ ಜಾಗತಿಕ ಸಮುದಾಯವು ಭಾರತದ ಕೋವಿಡ್ ಬಿಕ್ಕಟ್ಟಿಗೆ ಸ್ಪಂದಿಸುವುದರೊಂದಿಗೆ, ಕೇಂದ್ರವು ಈಗ ಇವುಗಳನ್ನು ವಿತರಿಸಲು ಪ್ರಾರಂಭಿಸಿದೆ. 31 ರಾಜ್ಯಗಳಲ್ಲಿ 38 ಸಂಸ್ಥೆಗಳಿಗೆ ಮಂಗಳವಾರ 40 ಲಕ್ಷ ವಸ್ತುಗಳನ್ನು ಕಳುಹಿಸಲಾಗಿದೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.
“ಜಾಗತಿಕ COVID-19 ಸಾಂಕ್ರಾಮಿಕ ರೋಗದ ವಿರುದ್ಧದ ಈ ಸಾಮೂಹಿಕ ಹೋರಾಟದಲ್ಲಿ ಭಾರತ ಸರ್ಕಾರದ ಪ್ರಯತ್ನಗಳನ್ನು ಬೆಂಬಲಿಸುವಲ್ಲಿ ಜಾಗತಿಕ ಸಮುದಾಯವು ಸಹಾಯ ಹಸ್ತ ಚಾಚಿದೆ. ದೇಶದ ವಿವಿಧ ಭಾಗಗಳಲ್ಲಿ ತಕ್ಷಣದ ಮತ್ತು ತುರ್ತು ಅವಶ್ಯಕತೆಗಳಿಂದಾಗಿ ದೇಶಗಳು ಈ ವಸ್ತುಗಳನ್ನು ನೀಡುತ್ತಿವೆ. ಈ ಸಹಾಯವು ಭಾರತ ಸರ್ಕಾರವು ಈಗಾಗಲೇ ಒದಗಿಸುತ್ತಿರುವುದಕ್ಕಿಂತ ಹೆಚ್ಚಿನದಾಗಿದೆ ಮತ್ತು ಇದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚಿಗೆ ಇರುತ್ತದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ರೈಲಿನಲ್ಲಿ ಕೊವಿಡ್ ಬೋಗಿ ರೈಲ್ವೆಯ ಐಸೊಲೇಷನ್ ಬೋಗಿಗಳಲ್ಲಿ 146 ಕೊವಿಡ್ -19 ರೋಗಿಗಳನ್ನು ದಾಖಲಿಸಲಾಗಿದೆ, 80 ಜನರನ್ನು ಬಿಡುಗಡೆ ಮಾಡಿದ್ದಾರೆ. ಪ್ರಸ್ತುತ 66 ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ರೈಲ್ವೆ ಸಚಿವಾಲಯ ಮಂಗಳವಾರ ತಿಳಿಸಿದೆ. ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ ಪ್ರತ್ಯೇಕ ಘಟಕಗಳಾಗಿ ಕಾರ್ಯನಿರ್ವಹಿಸಲು ರೈಲ್ವೆ ಸುಮಾರು 64,000 ಹಾಸಿಗೆಗಳನ್ನು ಹೊಂದಿರುವ ಸುಮಾರು 4,000 ಪ್ರತ್ಯೇಕ ಬೋಗಿಗಳನ್ನು ಸಜ್ಜು ಮಾಡಲಾಗಿದೆ
ಇದನ್ನೂ ಓದಿ: Karnataka Covid 19 update: ರಾಜ್ಯದಲ್ಲಿ ಇಂದು 44,631 ಕೊರೊನಾ ಕೇಸ್ಗಳು ದಾಖಲು; ಇದರಲ್ಲಿ ಅರ್ಧದಷ್ಟು ಬೆಂಗಳೂರಿನಲ್ಲೇ !
ಕೊರೊನಾ ಸೋಂಕಿಗೆ ಇಬ್ಬರು ಪೊಲೀಸರು ಬಲಿ; ಜಿಲ್ಲೆಯಾದ್ಯಂತ 25 ಸಿಬ್ಬಂದಿಗಳಿಗೆ ಕೊವಿಡ್ ಧೃಡ
Published On - 10:48 am, Wed, 5 May 21