ಕೋವಿಡ್- 19 ಎದುರಿಸಲು ಶೇ 4ರ ಬಡ್ಡಿ ದರದಲ್ಲಿ 3 ವರ್ಷಗಳ ಅವಧಿಗೆ ಸಾಲ ಘೋಷಣೆ

ಕೋವಿಡ್- 19 ಸಂದರ್ಭದಲ್ಲಿ ಜನರಿಗೆ ನಗದು ಬೆಂಬಲ ನೀಡಬೇಕು ಹಾಗೂ ವೈದ್ಯಕೀಯ ವಲಯಕ್ಕೆ ನೆರವಾಗಬೇಕು ಎಂಬ ಕಾರಣಕ್ಕೆ ಆರ್​ಬಿಐ ಶೇ 4ರ ಬಡ್ಡಿ ದರದಲ್ಲಿ 3 ವರ್ಷಗಳ ಅವಧಿಗೆ ಸಾಲ ನೀಡುವ ಘೋಷಣೆ ಮಾಡಿದೆ.

ಕೋವಿಡ್- 19 ಎದುರಿಸಲು ಶೇ 4ರ ಬಡ್ಡಿ ದರದಲ್ಲಿ 3 ವರ್ಷಗಳ ಅವಧಿಗೆ ಸಾಲ ಘೋಷಣೆ
ರಿಸರ್ವ್​ ಬ್ಯಾಂಕ್​ ಆಫ್ ಇಂಡಿಯಾ (ಸಾಂದರ್ಭಿಕ ಚಿತ್ರ)
Follow us
Srinivas Mata
|

Updated on:May 05, 2021 | 12:23 PM

ನಗದು ಬೆಂಬಲ ನೀಡಬೇಕು ಹಾಗೂ ಕೋವಿಡ್- 19 ವಿರುದ್ಧದ ಹೋರಾಟದಲ್ಲಿ ಸಾರ್ವಜನಿಕರಿಗೆ ಬಲ ತುಂಬಬೇಕು ಎಂಬ ಕಾರಣಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ ದಾಸ್ ಸಾರ್ವಜನಿಕರಿಗೂ ಸೇರಿದಂತೆ ನಗದು ವ್ಯವಸ್ಥೆ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ. ಆರ್​ಬಿಐನ ರೆಪೋದರದಲ್ಲಿ ಸಾಲವನ್ನು ನೀಡಲಾಗುವುದು. ಅಂದರೆ ಶೇ 4ರ ಬಡ್ಡಿ ದರದಲ್ಲಿ ಮೂರು ವರ್ಷಗಳ ಅವಧಿಗೆ ಸಾಲ ದೊರೆಯಲಿದೆ. ಅಂದ ಹಾಗೆ ಈ ಸಾಲವು ಮಾರ್ಚ್ 31, 2022ರ ತನಕ ದೊರೆಯುತ್ತದೆ.

ವರ್ಚುವಲ್ ಭಾಷಣದ ವೇಳೆ ಬುಧವಾರ ಅವರು ಈ ವಿಚಾರ ಪ್ರಸ್ತಾವ ಮಾಡಿದರು. ಜಾಗತಿಕ ಆರ್ಥಿಕ ಸ್ಥಿತಿ ಅನಿಶ್ಚಿತತೆಯಿಂದ ಕೂಡಿದೆ. ಆದರೆ ರಾಷ್ಟ್ರೀಯ ಹಣದುಬ್ಬರದ ಮೇಲೆ ಕೋವಿಡ್- 19 ಪರಿಣಾಮ ಮೊದಲ ಅಲೆಗಿಂತಲೂ ಕಡಿಮೆ ಇದೆ. ಭಾರತದ ಉತ್ಪಾದನಾ ವಲಯ ಅತ್ಯಂತ ಕಡಿಮೆ ಪರಿಣಾಮಕ್ಕೆ ಗುರಿಯಾದ ವಲಯ. ಒಂದು ಸಲ ಕೊರೊನಾ ಬಿಕ್ಕಟ್ಟು ಸ್ಥಿರತೆ ಕಾಣಿಸಿಕೊಂಡಲ್ಲಿ ಶೀಘ್ರವಾಗಿ ಚೇತರಿಕೆ ಕಂಡುಕೊಳ್ಳುತ್ತದೆ ಎಂದು ಅವರು ಹೇಳಿದರು.

ಇಂದಿನ ಭಾಷಣಕ್ಕೂ ಪೂರ್ವಭಾವಿಯಾಗಿ ಶಕ್ತಿಕಾಂತ ದಾಸ್ ಅವರು ವಿವಿಧ ಬ್ಯಾಂಕರ್​ಗಳು ಮತ್ತು ಸಾಲ ನೀಡುವವರ ಜತೆಗೆ ಚರ್ಚೆ ನಡೆಸಿರುವ ಬಗ್ಗೆ ವರದಿ ಆಗಿದೆ. ಸದ್ಯದ ಆರ್ಥಿಕ ಪರಿಸ್ಥಿತಿ, ಬ್ಯಾಲೆನ್ಸ್​ ಶೀಟ್​ಗಳ ಮೇಲೆ ಇರುವ ಒತ್ತಡ, ಸಾಲದ ಹರಿವು ಮತ್ತು ನಗದು ಪ್ರಮಾಣ ಇತ್ಯಾದಿ ವಿಚಾರಗಳನ್ನು ಚರ್ಚೆ ನಡೆಸಿದ್ದಾರೆ.

ಕೋವಿಡ್-19 ಎರಡನೇ ಅಲೆ ಭಾರತದಲ್ಲಿ ಬಹಳ ಗಂಭೀರವಾದ ಪರಿಣಾಮ ಬೀರಿದೆ. ಪರಿಸ್ಥಿತಿ ಇನ್ನಷ್ಟು ಹದಗೆಡದಂತೆ ಏನೆಲ್ಲ ಕ್ರಮ ಕೈಗೊಳ್ಳಬೇಕು ಅವೆಲ್ಲಕ್ಕೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಕೊರೊನಾ ಪ್ರಕರಣಗಳು ಇನ್ನಷ್ಟು ಹರಡದಂತೆ ಲಾಕ್​ಡೌನ್​ ಹೇರಬೇಕು ಎಂಬ ಒತ್ತಾಯ ವಿವಿಧ ಕೈಗಾರಿಕೆ ಕ್ಷೇತ್ರಗಳಿಂದ ಬಂದಿದೆ. ದೇಶದಾದ್ಯಂತ ಲಾಕ್​ಡೌನ್ ಮಾಡುವುದರಿಂದ ಎಲ್ಲಿ ಕಳೆದ ವರ್ಷದಂತೆಯೇ ಈ ಬಾರಿಯೂ ಆರ್ಥಿಕ ಹೊಡೆತ ಬೀಳುತ್ತದೋ ಎಂಬ ಕಾರಣಕ್ಕೆ ಆ ನಿರ್ಧಾರ ಕೈಗೊಳ್ಳುವುದಕ್ಕೆ ಕೇಂದ್ರ ಸರ್ಕಾರ ಆಲೋಚನೆ ಮಾಡುತ್ತಿದೆ.

ಅಂದ ಹಾಗೆ, ಈ ಯೋಜನೆಯ ಸಾಲದ ಮೊತ್ತವು ಲಸಿಕೆ ತಯಾರಕರಿಗೆ, ವೈದ್ಯಕೀಯ ಸೌಲಭ್ಯ ವ್ಯವಸ್ಥೆ ಮಾಡಿಕೊಡುವ ಸಂಸ್ಥೆಗಳಿಗೆ ಹಾಗೂ ಸಾರ್ವಜನಿಕರಿಗೆ ಅನ್ವಯ ಆಗುತ್ತದೆ ಎಂಬುದು ಗಮನಿಸಬೇಕಾದ ಅಂಶ. ಇದಕ್ಕಾಗಿಯೇ 50,000 ಕೋಟಿ ರೂಪಾಯಿಯನ್ನು ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: Shaktikanta Das Speech: ಕೊರೊನಾ ಲಸಿಕೆ ತಯಾರಕರು, ವೈದ್ಯಕೀಯ ಸೌಲಭ್ಯಕ್ಕಾಗಿ ಸಾಲ ನೀಡಲು 50 ಸಾವಿರ ಕೋಟಿ ರೂ.

(RBI governor Shaktikanta Das announced repo rate based loan to general in public to fight against covid- 19 situation)

Published On - 12:16 pm, Wed, 5 May 21