AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2 ಹನಿ ಲಿಂಬೆ ರಸ ಮೂಗಿನಲ್ಲಿ ಹಾಕಿದರೆ ಕೊರೊನಾ ನಿವಾರಣೆ?- ಫ್ಯಾಕ್ಟ್​ಚೆಕ್​ನಲ್ಲಿ ಬಯಲಾಯ್ತು ಸತ್ಯ.. ದಯವಿಟ್ಟು ಇಂಥದ್ದು ಮಾಡ್ಬೇಡಿ ಎಂದ ವೈದ್ಯರು

ಹಾಗಂತ ಲಿಂಬೆಯಿಂದ ಆರೋಗ್ಯಕ್ಕೆ ತುಂಬ ಉಪಯೋಗ ಇದೆ. ಆದರೆ ಕೊವಿಡ್​ 19 ಸೋಂಕಿತರಿಗೆ ಲಿಂಬುವನ್ನು ಅತ್ಯುತ್ತಮ ಔಷಧವಾಗಿ ಯಾವುದೇ ವೈದ್ಯರೂ ಇದುವರೆಗೆ ಪರಿಗಣಿಸಿಲ್ಲ.

2 ಹನಿ ಲಿಂಬೆ ರಸ ಮೂಗಿನಲ್ಲಿ ಹಾಕಿದರೆ ಕೊರೊನಾ ನಿವಾರಣೆ?- ಫ್ಯಾಕ್ಟ್​ಚೆಕ್​ನಲ್ಲಿ ಬಯಲಾಯ್ತು ಸತ್ಯ.. ದಯವಿಟ್ಟು ಇಂಥದ್ದು ಮಾಡ್ಬೇಡಿ ಎಂದ ವೈದ್ಯರು
ಲಿಂಬೆರಸದ ಪ್ರಾತಿನಿಧಿಕ ಚಿತ್ರ
Lakshmi Hegde
|

Updated on: May 05, 2021 | 12:59 PM

Share

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಷಯ ಹರಿದಾಡುತ್ತಿದೆ. ಎರಡು ಹನಿ ಲಿಂಬೆ ರಸವನ್ನು ಮೂಗಿನ ಹೊಳ್ಳೆಗೆ ಹಾಕಿದರೆ ಕೊರೊನಾ ಸೋಂಕಿನಿಂದ ಪಾರಾಗಬಹುದು ಎಂಬ ಸಂದೇಶ ಅದು. ಹೀಗೆ ಮೂಗಿನಲ್ಲಿ ಎರಡು ಹನಿ ಲಿಂಬೆ ರಸ ಹಾಕಿಕೊಳ್ಳುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ದೇಹದಲ್ಲಿ ಆಕ್ಸಿಜನ್ ಪ್ರಮಾಣವೂ ಹೆಚ್ಚುತ್ತದೆ. ಈ ಮೂಲಕ ಕೊರೊನಾದಿಂದ ಬೇಗನೇ ಪಾರಾಗಬಹುದು ಎಂಬ ವಿವರಗಳುಳ್ಳ ಪೋಸ್ಟ್ ತುಂಬ ವೈರಲ್ ಆಗುತ್ತಿದೆ. ಅದರಲ್ಲೂ ವ್ಯಕ್ತಿಯೋರ್ವ ತಾನು ಲಿಂಬೆ ರಸವನ್ನು ಮೂಗಿಗೆ ಬಿಟ್ಟುಕೊಂಡೇ ಕೊರೊನಾದಿಂದ ಪಾರಾಗಿದ್ದೇನೆ ಎಂದು ಹೇಳುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ. ಇನ್ನು ಈ ವಿಚಾರದ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದರೂ ಒಂದು ಸ್ಪಷ್ಟತೆಯಿಲ್ಲ. ಮೂಗಿನ ಹೊಳ್ಳೆಗೆ ಲಿಂಬೆ ರಸ ಹಾಕುವುದು ಎಷ್ಟು ಪರಿಣಾಮಕಾರಿ ಎಂಬುದು ಗೊತ್ತಿಲ್ಲ .

ಹಾಗಂತ ಲಿಂಬೆಯಿಂದ ಆರೋಗ್ಯಕ್ಕೆ ತುಂಬ ಉಪಯೋಗ ಇದೆ. ಆದರೆ ಕೊವಿಡ್​ 19 ಸೋಂಕಿತರಿಗೆ ಲಿಂಬುವನ್ನು ಅತ್ಯುತ್ತಮ ಔಷಧವಾಗಿ ಯಾವುದೇ ವೈದ್ಯರೂ ಇದುವರೆಗೆ ಪರಿಗಣಿಸಿಲ್ಲ. ಈ ರೋಗಕ್ಕೆ ವೈದ್ಯಕೀಯ ಲೋಕ ಬೇರೆಯದ್ದೇ ಸ್ವರೂಪದ ಔಷಧಗಳನ್ನು ಕೊಡುತ್ತದೆ. ಹೀಗೆ ಸೋಷಿಯಲ್ ಮೀಡಿಯಾಗಳಲ್ಲಿ ಲಿಂಬೆರಸದ ಬಗ್ಗೆ ಚರ್ಚೆ ಹೆಚ್ಚಾದ ಬೆನ್ನಲ್ಲೇ ಪಿಐಬಿ ಫ್ಯಾಕ್ಟ್​ಚೆಕ್​ ನಡೆಸಿದೆ. ಲಿಂಬೆ ರಸ ಮೂಗಿನಹೊಳ್ಳೆಗೆ ಹಾಕಿಕೊಂಡರೆ ಕೊರೊನಾ ಸೋಂಕು ಕಡಿಮೆಯಾಗುತ್ತದೆ ಎಂಬುದಕ್ಕೆ ವೈಜ್ಞಾನಿಕವಾಗಿ ಯಾವುದೇ ಪುರಾವೆ ಇಲ್ಲ ಎಂದು ಹೇಳಿದೆ. ಹಾಗೇ ಲಿಂಬೆ ರಸವನ್ನು ಮೂಗಿನ ಹೊಳ್ಳೆಗೆ ಬಿಟ್ಟಾಕ್ಷಣ ಕೊರೊನಾ ಸೋಂಕು ನಿವಾರಣೆಯಾಗುವುದಿಲ್ಲ. ಇದು ಕೊವಿಡ್ 19ಗೆ ಚಿಕಿತ್ಸೆ ಅಲ್ಲ ಎಂದು ಸ್ಪಷ್ಟಪಡಿಸಿದೆ.

ಪಿಐಬಿಯ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಈ ಫ್ಯಾಕ್ಟ್​​ಚೆಕ್​ ಪೋಸ್ಟ್​​ ಮಾಡಲಾಗಿದೆ. ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಎರಡು ಹನಿ ಲಿಂಬೆರಸ ಕೊರೊನಾ ವೈರಸ್​ನ್ನು ಕೊಲ್ಲುತ್ತದೆ ಎಂದು ಹೇಳಲಾಗಿದೆ. ಆದರೆ ಇದೊಂದು ಫೇಕ್​ ವಿಡಿಯೋ. ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಟ್ವೀಟ್ ಮಾಡಿದೆ.

ಇಂಥ ಪ್ರಯೋಗಗಳನ್ನು ಮಾಡಬೇಡಿ ಇನ್ನು ಕೊರೊನಾ ಸೋಂಕಿತರು ಮನೆಯಲ್ಲಿ ಯಾವುದೇ ರೀತಿಯ ಪ್ರಯೋಗಗಳನ್ನು ಮಾಡಬಾರದು ಎಂದು ಮುಂಬೈನ ಆಸ್ಪತ್ರೆಯೊಂದರ ವೈದ್ಯ ಡಾ. ಚಂದ್ರವೀರ್ ಸಿಂಗ್ ಹೇಳಿದ್ದಾರೆ. ಲಿಂಬೆಯಲ್ಲಿ ವಿಟಮಿನ್ ಸಿ ಇರುತ್ತದೆ. ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಹಾಗಂತ ಅದರ ಹನಿಯನ್ನು ಮೂಗಿನಲ್ಲಿ ಬಿಡಬಾರದು. ಇದು ಮೂಗಿನ ಲೋಳೆಪೊರೆಯನ್ನು ಹಾನಿಮಾಡುತ್ತದೆ ಮತ್ತು ಸೈನಟೈಸ್​ಗೆ ಕಾರಣವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ