ಸೋನಿಯಾ ಗಾಂಧಿ ಭಾರತದ ಪೌರತ್ವ ಪಡೆಯುವ ಮುನ್ನವೇ ವೋಟರ್ ಲಿಸ್ಟ್ ಅಲ್ಲಿ ಅವರ ಹೆಸರಿತ್ತು: ಬಿಜೆಪಿ ಆರೋಪ
ಎಸ್‌ಐಆರ್ ಬಗ್ಗೆ ಗಲಾಟೆ ಮಾಡುತ್ತಿರುವ ರಾಹುಲ್ ಗಾಂಧಿ ಅವರ ತಾಯಿ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಭಾರತದ ನಾಗರಿಕರಾಗುವ ಮೊದಲೇ ಇಲ್ಲಿ ಮತದಾರರಾಗಿದ್ದರು ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಆರೋಪಿಸಿದ್ದಾರೆ. ಭಾರತದ ಮತದಾರರ ಪಟ್ಟಿಗೆ ಸೋನಿಯಾ ಗಾಂಧಿಯವರ ಹೆಸರು ಸೇರ್ಪಡೆಯಾಗಿರುವುದು ಚುನಾವಣಾ ಕಾನೂನುಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ಬಹುಶಃ ಇದೇ ಕಾರಣಕ್ಕೆ ರಾಹುಲ್ ಗಾಂಧಿ ಅನರ್ಹ ಮತ್ತು ಅಕ್ರಮ ಮತದಾರರನ್ನು ಕ್ರಮಬದ್ಧಗೊಳಿಸುವುದರ ಪರವಾಗಿದ್ದಾರೆ ಮತ್ತು ವಿಶೇಷ ತೀವ್ರ ಪರಿಷ್ಕರಣೆ (SIR)ಯನ್ನು ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನವದೆಹಲಿ, ಆಗಸ್ಟ್ 13: ಕಾಂಗ್ರೆಸ್ ಹಿರಿಯ ನಾಯಕಿ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi) ಭಾರತದ ಪೌರತ್ವ ಪಡೆಯುವ ಮುನ್ನವೇ ಮತದಾರರ ಪಟ್ಟಿ(Voter List)ಯಲ್ಲಿ ಅವರ ಹೆಸರಿತ್ತು ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. 45 ವರ್ಷಗಳ ಹಿಂದೆ ಅವರು ಭಾರತೀಯ ಪ್ರಜೆಯಾಗುವ ಮುನ್ನವೇ ಮತದಾರರ ಪಟ್ಟಿಗೆ ಅವರ ಹೆಸರನ್ನು ಸೇರ್ಪಡೆ ಮಾಡಲಾಗಿತ್ತು ಎಂದು ಬಿಜೆಪಿ ಹೇಳಿದೆ.
ಬಿಹಾರದ ಮತದಾರರ ಪಟ್ಟಿ ತೀವ್ರ ವಿಶೇಷ ಪರಿಷ್ಕರಣೆ, ಮತ ಕಳವು ಸೇರಿದಂತೆ ಇಂತಹ ಹಲವು ವಿಚಾರಗಳನ್ನಿಟ್ಟುಕೊಂಡು ಕಾಂಗ್ರೆಸ್ ಲೋಕಸಭೆ ಹಾಗೂ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದೆ. ಈ ಸಮಯದಲ್ಲಿ ಕಾಂಗ್ರೆಸ್ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಬಗ್ಗೆ ಆರೋಪ ಕೇಳಿಬಂದಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಳೆದ ವಾರ ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿದ್ದರು.
ಬಿಜೆಪಿ ಸಂಸದ, ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾತನಾಡಿ, 1946 ರಲ್ಲಿ ಇಟಲಿಯಲ್ಲಿ ಜನಿಸಿದ ಸೋನಿಯಾ ಮೈನೊ ಅವರನ್ನು ಭಾರತೀಯ ನಾಗರಿಕರಾಗುವ ಒಂದು ವರ್ಷದ ಮೊದಲು 1980 ರಿಂದ 1982 ರವರೆಗೆ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಹೇಳಿದ್ದಾರೆ. ಬಿಜೆಪಿಯ ಅಮಿತ್ ಮಾಳವೀಯ ಕೂಡ ಇದೇ ವಿಚಾರವಾಗಿ ಪೋಸ್ಟ್ ಮಾಡಿದ್ದಾರೆ.
ಮತ್ತಷ್ಟು ಓದಿ: ಟಿ-ಶರ್ಟ್ ಮೇಲೆ ನನ್ನ ಫೋಟೊ ಹಾಕೋಕೆ ಯಾರ್ರೀ ಪರ್ಮಿಷನ್ ಕೊಟ್ಟೋರು? ಪ್ರಿಯಾಂಕಾ ವಿರುದ್ಧ ಮಿಂಟಾ ದೇವಿ ವಾಗ್ದಾಳಿ
ಅದರಲ್ಲಿ 1980ರ ಮತದಾರರ ಪಟ್ಟಿಯಿಂದ ತೆಗೆದ ಫೋಟೊವನ್ನು ಪೋಸ್ಟ್ ಮಾಡಿದ್ದ ಅವರು, ಇದು ಸೋನಿಯಾ ಗಾಂಧಿ ಅವರು ಭಾರತದ ಪೌರತ್ವವನ್ನು ಪಡೆಯದಿರುವಾಗ ಮತದಾರರಾಗಿದ್ದರು ಎಂಬುದನ್ನು ಸೂಚಿಸುತ್ತದೆ.ಇದು ಸ್ಪಷ್ಟ ಚುನಾವಣಾ ದುಷ್ಕೃತ್ಯವಲ್ಲದಿದ್ದರೆ, ಏನು ಎಂದಿದ್ದರು.
ಅಮಿತ್ ಮಾಳವೀಯ ಪೋಸ್ಟ್
Sonia Gandhi’s tryst with India’s voters’ list is riddled with glaring violations of electoral law. This perhaps explains Rahul Gandhi’s fondness for regularising ineligible and illegal voters, and his opposition to the Special Intensive Revision (SIR).
Her name first appeared… pic.twitter.com/upl1LM8Xhl
— Amit Malviya (@amitmalviya) August 13, 2025
1968 ರಲ್ಲಿ ರಾಜೀವ್ ಗಾಂಧಿ ಅವರನ್ನು ವಿವಾಹವಾದ ಸೋನಿಯಾ, ಗಾಂಧಿ ಕುಟುಂಬವು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಅಧಿಕೃತ ನಿವಾಸದಲ್ಲಿ ವಾಸಿಸುತ್ತಿದ್ದಾಗ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
1980 ರ ಲೋಕಸಭಾ ಚುನಾವಣೆಗೆ ಮುನ್ನ ನವದೆಹಲಿ ಸಂಸದೀಯ ಕ್ಷೇತ್ರದ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಸೋನಿಯಾ ಗಾಂಧಿಯವರ ಹೆಸರನ್ನು ಸೇರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ನಮೂದು ಭಾರತೀಯ ಪ್ರಜೆಯಾಗಿರಬೇಕಾದ ವ್ಯಕ್ತಿಯು ಮತದಾರರಾಗಿ ನೋಂದಾಯಿಸಿಕೊಳ್ಳಬೇಕೆಂಬ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. 1982 ರಲ್ಲಿ ವ್ಯಾಪಕ ಆಕ್ರೋಶದ ನಂತರ, ಅವರ ಹೆಸರನ್ನು ಪಟ್ಟಿಯಿಂದ ಅಳಿಸಲಾಗಿತ್ತು.
1983 ರಲ್ಲಿ ಭಾರತೀಯ ಪೌರತ್ವ ಪಡೆದ ನಂತರ ತಮ್ಮನ್ನು ಮತ್ತೆ ಸೇರಿಸಿಕೊಂಡಿದ್ದು ಕೂಡ ಮೋಸದ ಕೃತ್ಯ ಎಂದು ಮಾಳವೀಯ ಹೇಳಿಕೊಂಡಿದ್ದಾರೆ. ಕಟ್-ಆಫ್ ದಿನಾಂಕ ಜನವರಿ 1 ಎಂದು ಅವರು ಹೇಳಿಕೊಂಡರು, ಆದರೆ ಸೋನಿಯಾ ಗಾಂಧಿ ಏಪ್ರಿಲ್‌ನಲ್ಲಿ ಪೌರತ್ವ ಪಡೆದರು.
ಕಳೆದ ವರ್ಷ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಮತದಾರರಿಗೆ ವಂಚನೆ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ ಹಿನ್ನೆಲೆಯಲ್ಲಿ ಠಾಕೂರ್ ಕೂಡ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದರು. ಆರೋಪಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನ ತಾರಿಕ್ ಅನ್ವರ್, ಸೋನಿಯಾ ಗಾಂಧಿ ಅವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಲು ಕೇಳಿರಲಿಲ್ಲ ಮತ್ತು ಹಾಗೆ ಮಾಡಿದ್ದು ಆ ಕಾಲದ ಚುನಾವಣಾ ಸಂಸ್ಥೆಯ ಅಧಿಕಾರಿಗಳೇ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




