ಅನಾಮಿಕ ವ್ಯಕ್ತಿ ಹೆಣ ಹೂಳುವುದನ್ನು ನೋಡಿದ್ದೇವೆ ಎನ್ನುತ್ತಿರುವ ಇಬ್ಬರು; ಮೈಕಟ್ಟಿನಿಂದ ಅನಾಮಿಕನ ಗುರುತು?
ಅಂಗಡಿಯನ್ನು ಸುಮಾರು 40 ವರ್ಷಗಳ ಕಾಲ ಅಂಗಡಿ ನಡೆಸಿದ್ದು 2016-17ರಲ್ಲಿ ಡೆಮಾಲಿಷ್ ಮಾಡಲಾಯಿತು, ಅನಾಮಿಕ ಹಣ ಹೂತಿಡುವುದನ್ನು ತಾನು 2003ರಿಂದ 2010ರವರೆಗೆ ನೋಡಿದ್ದಾಗಿ ಹೇಳುವ ಪುರಂದರ ಗೌಡರು, ಅಗೆಲ್ಲ ಇದರ ಬಗ್ಗೆ ಮಾತಾಡಲು ಭಯವಾಗುತಿತ್ತು, ಈಗ ಎಸ್ಐಟಿ ರಚನೆಯಾಗಿರುವುದರಿಂದ ಭಯವಿಲ್ಲ, ಹಾಗಾಗಿ ದೂರು ನೀಡಿದ್ದೇವೆ ಎಂದು ಹೇಳುತ್ತಾರೆ.
ದಕ್ಷಿಣ ಕನ್ನಡ, ಆಗಸ್ಟ್ 13: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿರುವ ಬಗ್ಗೆ ಅನಾಮಿಕ ವ್ಯಕ್ತಿಯೊಬ್ಬ ಹೇಳಿದ ಬಳಿಕ ಎಸ್ಐಟಿ ರಚನೆಯಾಗಿ ಅವನು ತೋರಿಸುತ್ತಿರುವ ಜಾಗದಲ್ಲೆಲ್ಲ ಭೂಮಿಯನ್ನು ಅಗೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅನಾಮಿಕ ನೀಡಿದ ಹೇಳಿಕೆಯನ್ನು ಪುಷ್ಠೀಕರಿಸುವ ಇಬ್ಬರು ವ್ಯಕ್ತಿಗಳು ಎಸ್ಐಟಿ ಕಚೇರಿಗೆ (SIT office) ಬಂದು ಅನಾಮಿಕ ಹೆಣ ಹೂತಿಡುವುದನ್ನು ತಾವು ನೋಡಿದ್ದಾಗಿ ಹೇಳುತ್ತಿದ್ದಾರೆ. ನಮ್ಮ ವರದಿಗಾರರ ಪುರಂದರ ಗೌಡ ಎನ್ನುವವರ ಜೊತೆ ಮಾತಾಡಿದ್ದು ಹೆಣಗಳನ್ನು ಹೂತ ಜಾಗದಿಂದ ಕೊಂಚ ದೂರದಲ್ಲಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರಂತೆ. ಇದೇ ವ್ಯಕ್ತಿ ಹೆಣಗಳನ್ನು ಹೂತಿಡುತ್ತಿದ್ದ ಅಂತ ಹೇಗೆ ಗುರುತು ಹಿಡಿದಿರಿ ಅಂತ ಕೇಳಿದರೆ ಮೈಕಟ್ಟನ್ನು ನೋಡಿ ಗುರುತು ಹಿಡಿದಿದ್ದೇವೆ ಎಂದು ಪುರಂದರ ಗೌಡರು ಹೇಳುತ್ತಾರೆ.
ಇದನ್ನೂ ಓದಿ: ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ಎಸ್ಐಟಿ ತಂಡದ ದಿನದ ಖರ್ಚು ಎಷ್ಟು ಗೊತ್ತಾ?
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

