Shaktikanta Das Speech: ಕೊರೊನಾ ಲಸಿಕೆ ತಯಾರಕರು, ವೈದ್ಯಕೀಯ ಸೌಲಭ್ಯಕ್ಕಾಗಿ ಸಾಲ ನೀಡಲು 50 ಸಾವಿರ ಕೋಟಿ ರೂ.

RBI Governor Speech Today: ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಬುಧವಾರ ದಿಢೀರ್ ಪತ್ರಿಕಾಗೋಷ್ಠಿ ನಡೆಸಿ, ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ವಿವಿಧ ಘೋಷಣೆ ಮಾಡಿದ್ದಾರೆ.

  • TV9 Web Team
  • Published On - 11:18 AM, 5 May 2021
Shaktikanta Das Speech: ಕೊರೊನಾ ಲಸಿಕೆ ತಯಾರಕರು, ವೈದ್ಯಕೀಯ ಸೌಲಭ್ಯಕ್ಕಾಗಿ ಸಾಲ ನೀಡಲು 50 ಸಾವಿರ ಕೋಟಿ ರೂ.
ಆರ್​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ್

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಾರೆ ಎಂದು ದಿಢೀರನೆ ಬಂದ ಮಾಹಿತಿ ಹಲವು ಕುತೂಹಲಗಳಿಗೆ ಬುಧವಾರ ಕಾರಣ ಆಯಿತು. ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ವಿವಿಧ ವಲಯಗಳಿಂದ ನಿರೀಕ್ಷೆಗಳು ಸಹ ಎತ್ತರಕ್ಕೇರಿದವು. ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಭಾಷಣದ ಪ್ರಮುಖಾಂಶಗಳು ಇಲ್ಲಿವೆ:

* ರಾಜ್ಯ ಸರ್ಕಾರಗಳಿಗೆ ಓವರ್​ಡ್ರಾಫ್ಟ್ ಪಡೆಯುವ ನಿಯಮವನ್ನು ಸೆಪ್ಟೆಂಬರ್ 30, 2021ರ ತನಕ ಸಡಿಲಿಸಿದ ಆರ್​ಬಿಐ.

* ಡಿಸೆಂಬರ್ 1, 2021ರ ತನಕ ಸೀಮಿತವಾದ ಕೆವೈಸಿ (ನೋ ಯುವರ್ ಕಸ್ಟಮರ್) ಬಳಸುವುದಕ್ಕೆ ಅನುಮತಿ.

* ಆರ್​ಬಿಐನಿಂದ ಮತ್ತೊಮ್ಮೆ ಒಂದು ಸಲದ ರೀಸ್ಟ್ರಕ್ಷರಿಂಗ್ (ಮರು ಹೊಂದಾಣಿಕೆ) ಆರಂಭ. ಎಂಎಸ್​ಎಂಇಗಳು ಹಾಗೂ ವೈಯಕ್ತಿಕ ಸಾಲಗಾರರಿಗೆ ಅವಕಾಶ. ವೈಯಕ್ತಿಕ, ಎಂಎಸ್​ಎಂಇಗಳಿಗೆ ಅವಕಾಶ. ಒಂದು ಸಲದ ಮರು ಹೊಂದಾಣಿಕೆಗೆ ಸೆಪ್ಟೆಂಬರ್ 30, 2021ರ ತನಕ ಅವಕಾಶ ಇದೆ. ರೀಸ್ಟ್ರಕ್ಚರಿಂಗ್ 1.0ದಲ್ಲಿ ಮರುಪಾವತಿ ವಿನಾಯಿ ಒಟ್ಟಾರೆ 2 ವರ್ಷದ ತನಕ ವಿಸ್ತರಣೆ.

* 500 ಕೋಟಿ ರೂಪಾಯಿಯೊಳಗೆ ಆಸ್ತಿ ಇರುವ ಕಿರುಸಾಲ ಹಣಕಾಸು ಬ್ಯಾಂಕ್​ಗಳಿಗೆ ಸಾಲ ನೀಡುವುದಕ್ಕೆ ಸಣ್ಣ ಹಣಕಾಸು ಬ್ಯಾಂಕ್​ಗಳಿಗೆ ಅವಕಾಶ

* ದೀರ್ಘಾವಧಿಯ ರೆಪೋ ಕಾರ್ಯಾಚರಣೆಗೆ ಸಣ್ಣ ಹಣಕಾಸು ಬ್ಯಾಂಕ್​ಗಳಿಗೆ 10,000 ಕೋಟಿ ತನಕ ಘೋಷಣೆ ಮಾಡಿದೆ. ಈ ಹಣವನ್ನು ಬಳಸಿಕೊಂಡು ಒಬ್ಬ ಸಾಲಗಾರರಿಗೆ 10 ಲಕ್ಷ ರೂಪಾಯಿ ತನಕ ಸಾಲ ನೀಡಬಹುದು.

* 50,000 ಕೋಟಿ ರೂಪಾಯಿ ನಗದು ಒದಗಿಸುತ್ತಿದ್ದು, ಅದರ ಮೂಲಕವಾಗಿ ಲಸಿಕೆ ತಯಾರಕರು, ವೈದ್ಯಕೀಯ ವ್ಯವಸ್ಥೆ, ಆಸ್ಪತ್ರೆಗಳು ಮತ್ತು ರೋಗಿಗಳಿಗೆ ಈ ಯೋಜನೆ ಅಡಿ ಬೆಂಬಲ ದೊರೆಯುತ್ತದೆ. ರೆಪೋ ದರವಯ ಮಾರ್ಚ್ 31, 2022ರ ತನಕ ಮುಕ್ತವಾಗಿರುತ್ತದೆ.

* ಹವಾಮಾನ ಇಲಾಖೆಯಿಂದ ಸಾಮಾನ್ಯ ಮುಂಗಾರು ಅಂದಾಜಿಸಿದ್ದು, ಗ್ರಾಮೀಣ ಪ್ರದೇಶದಲ್ಲಿನ ಬೇಡಿಕೆ ಮತ್ತು 2021-22ನೇ ಸಾಲಿನ ಒಟ್ಟಾರೆ ಉತ್ಪಾದನೆ ಹಾಗೇ ಉಳಿಯಲಿದೆ. ಇದರ ಅನುಕೂಲಕರ ಪರಿಣಾಮ ಹಣದುಬ್ಬರ ಒತ್ತಡದ ಮೇಲೆ ಆಗುತ್ತದೆ.

* ಪ್ರಬಲವಾದ ಆರ್ಥಿಕ ಚೇತರಿಕೆ ಹಂತದ ಸ್ಥಿತಿಯಲ್ಲಿದ್ದ ಪರಿಸ್ಥಿತಿ ಈಗ ಹೊಸದಾಗಿ ಬಿಕ್ಕಟ್ಟನ್ನು ಎದುರಿಸುತ್ತಿದೆ.

* ಎರಡನೇ ಹಂತದ ಸರ್ಕಾರಿ ಸೆಕ್ಯೂರಿಟಿಗಳ ಖರೀದಿ 35,000 ಕೋಟಿ ರೂಪಾಯಿ G-SAP 1.0 ಅಡಿಯಲ್ಲಿ ಮೇ 20ರಂದು ಕೈಗೊಳ್ಳಲಾಗುವುದು.

* ಅದ್ಯಾವ ವೇಗದಲ್ಲಿ ಹಬ್ಬುತ್ತಾ ಕೊರೊನಾ ವೈರಸ್ ಪರಿಣಾಮ ಬೀರುತ್ತಿದೆಯೋ ಅಷ್ಟೇ ವೇಗದಲ್ಲಿ ಮತ್ತು ವಿಶಾಲವಾಗಿ ಕ್ರಮ ಕೈಗೊಳ್ಳಬೇಕು, ಒಂದಾದ ನಂತರ ಒಂದು, ಹೊಂದಾಣಿಕೆ ಆಗುವಂತೆ ಹಾಗೂ ಸರಿಯಾದ ಸಮಯಕ್ಕೆ ಕೈಗೊಳ್ಳಬೇಕು. ದುರ್ಬಲವರ್ಗದವರೂ ಸೇರಿದಂತೆ ವಿವಿಧ ವರ್ಗದವರಿಗಾಗಿ ಕ್ರಮ ಕೈಗೊಳ್ಳಬೇಕು.

* ಆರ್​ಬಿಐನ ಏಪ್ರಿಲ್ ತಿಂಗಳ ಹಣಕಾಸು ನೀತಿ ಸಮಿತಿಯ ಅಂದಾಜಿಗಿಂತ ಹೆಚ್ಚು ವಿಚಲಿತ ಆಗುವುದಿಲ್ಲ.

* ಕೋವಿಡ್ ನಿರ್ಬಂಧ ಮತ್ತು ಕಂಟೇನ್​ಮೆಂಟ್​ಗಳ ಹೊರತಾಗಿಯೂ ಹೇಗೆ ಅಸ್ತಿತ್ವ ಉಳಿಸಿಕೊಳ್ಳಬೇಕು ಎಂಬುದನ್ನು ಉದ್ಯಮಗಳು ಕಲಿತಿವೆ.

* ಉತ್ತಮ ಮುಂಗಾರು ನಿರೀಕ್ಷೆಯಿದ್ದು, ಗ್ರಾಮೀಣ ಪ್ರದೇಶದಲ್ಲಿನ ಬೇಡಿಕೆ ಪ್ರಬಲವಾಗಿರಲಿದೆ.

* ಸರಾಸರಿ ಪೂರೈಕೆ ಪರಿಸ್ಥಿತಿಯು ಕೃಷಿ ವಲಯದ ಮೇಲೆ ಆಧಾರವಾಗಿದೆ.

* ಕೋವಿಡ್- 19 ಬಿಕ್ಕಟ್ಟಿನಿಂದ ಆಚೆ ಬರುವ ಭಾರತದ ಸಾಮರ್ಥ್ಯದ ಬಗ್ಗೆ ನಂಬಿಕೆ ಇಡಿ. ಕೋವಿಡ್-19 ಸನ್ನಿವೇಶದ ಮೇಳೆ ನಿಗಾ ಇಡುವುದನ್ನು ಆರ್​ಬಿಐ ಮುಂದುವರಿಸಿದೆ. ತನ್ನ ಎಲ್ಲ ಸಂಪನ್ಮೂಲವನ್ನು ಇದಕ್ಕಾಗಿ ನಿಯೋಜಿಸಲಿದೆ.

ಇದನ್ನೂ ಓದಿ: RBI guidelines | ಖಾಸಗಿ ಬ್ಯಾಂಕ್​ಗಳ MD, CEOಗಳ ಗರಿಷ್ಠ ಅಧಿಕಾರಾವಧಿ 15 ವರ್ಷಕ್ಕೆ ನಿಗದಿ

( RBI Guv Shaktikanta Das announced various measures to support covid- 19 second wave situation)