RBI guidelines | ಖಾಸಗಿ ಬ್ಯಾಂಕ್​ಗಳ MD, CEOಗಳ ಗರಿಷ್ಠ ಅಧಿಕಾರಾವಧಿ 15 ವರ್ಷಕ್ಕೆ ನಿಗದಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ಮಾರ್ಗದರ್ಶಿ ಸೂತ್ರದ ಪ್ರಕಾರ, ಖಾಸಗಿ ಬ್ಯಾಂಕ್​ಗಳ ಸಿಇಒ, ಎಂ.ಡಿ.ಗಳ ಅಧಿಕಾರಾವಧಿ 15 ವರ್ಷಕ್ಕಿಂತ ಹೆಚ್ಚಿಗೆ ಇರುವಂತಿಲ್ಲ.

RBI guidelines | ಖಾಸಗಿ ಬ್ಯಾಂಕ್​ಗಳ MD, CEOಗಳ ಗರಿಷ್ಠ ಅಧಿಕಾರಾವಧಿ 15 ವರ್ಷಕ್ಕೆ ನಿಗದಿ
ಆರ್​ಬಿಐ (ಸಾಂದರ್ಭಿಕ ಚಿತ್ರ)
Follow us
Srinivas Mata
|

Updated on: Apr 27, 2021 | 1:51 PM

ಖಾಸಗಿ ಬ್ಯಾಂಕ್​ಗಳ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು (MD) ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಅಧಿಕಾರಾವಧಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು 15 ವರ್ಷಗಳಿಗೆ ಮಿತಿಗೊಳಿಸಿದೆ. ಪ್ರವರ್ತಕರು (ಪ್ರಮೋಟರ್ಸ್) ಅಥವಾ ಪ್ರಮುಖ ಷೇರುದಾರರು ಈ ಹುದ್ದೆಯನ್ನು 12 ವರ್ಷಕ್ಕಿಂತ ಹೆಚ್ಚಿನ ಅವಧಿ ಹೊಂದಿರುವುದಕ್ಕೆ ಅವಕಾಶ ಇಲ್ಲ. ಅಪರೂಪದ ಸನ್ನಿವೇಶದಲ್ಲಿ 3 ವರ್ಷಗಳ ಅವಧಿಗೆ ವಿಸ್ತರಣೆ ಮಾಡುವುದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಯ್ಕೆ ಮಾಡಿಕೊಳ್ಳಬಹುದು. ಕಳೆದ ವರ್ಷ ಸಿದ್ಧಪಡಿಸಿದ ಕರಡಿನಲ್ಲಿ, ಪ್ರವರ್ತಕರಿಗೆ ಎಂ.ಡಿ. ಮತ್ತು ಸಿಇಒ ಹುದ್ದೆಯಲ್ಲಿ 10 ವರ್ಷಗಳ ಗರಿಷ್ಠ ಅವಧಿಯನ್ನು ಪ್ರಸ್ತಾವ ಮಾಡಿತ್ತು.

ಬ್ಯಾಂಕ್​ಗಳ ಕಾರ್ಪೊರೇಟ್ ಆಡಳಿತಕ್ಕೆ ಸಂಬಂಧಿಸಿದಂತೆ ಆರ್​ಬಿಐನ ಹೊಸ ಮಾರ್ಗದರ್ಶಿ ಸೂತ್ರದ ಪ್ರಕಾರ, ವೃತ್ತಿಪರ ಎಂ.ಡಿ.ಗಳು ಮತ್ತು ಸಿಇಒಗಳು ಅಥವಾ ಪೂರ್ಣಾವಧಿ ನಿರ್ದೇಶಕರು ಮತ್ತೆ ಅದೇ ಬ್ಯಾಂಕ್​ನಲ್ಲಿ ನೇಮಕಗೊಳ್ಳಲು ಅರ್ಹರು. ಆದರೆ ಆ ಮಧ್ಯೆ ಮೂರು ವರ್ಷಗಳ ಅಂತರ ಇರಬೇಕು. ಈ ಅಂತರ ಕಾಯ್ದುಕೊಳ್ಳುವ ಸಂದರ್ಭದಲ್ಲಿ ಆ ಬ್ಯಾಂಕ್ ಅಥವಾ ಅದರ ಸಮೂಹ ಸಂಸ್ಥೆಗಳಲ್ಲಿ ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಯಾವುದೇ ಹುದ್ದೆಯನ್ನು ಹೊಂದಿರುವಂತಿಲ್ಲ. ಖಾಸಗಿ ಬ್ಯಾಂಕ್​ಗಳು, ಸಣ್ಣ ಹಣಕಾಸು ಬ್ಯಾಂಕ್​ಗಳು, ವಿದೇಶೀ ಬ್ಯಾಂಕ್​ಗಳ ಸಂಪೂರ್ಣ ಮಾಲೀಕತ್ವ ಹೊಂದಿರುವ ಅಂಗಸಂಸ್ಥೆಗಳಿಗೆ ಈ ನಿಯಮವು ಅನ್ವಯ ಆಗುತ್ತದೆ.

ಇತರ ಬ್ಯಾಂಕ್​ಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಪ್ರತ್ಯೇಕವಾಗಿ ನಿಯಮಾವಳಿಗಳನ್ನು ನೀಡಲಾಗಿದೆ. ಈಗಿನ ಹೊಸ ನಿಯಮಗಳಿಗೆ ಬ್ಯಾಂಕ್​ಗಳು ಅಕ್ಟೋಬರ್ 1ರಿಂದ ಬದ್ಧವಾಗಿರಬೇಕು. ಹೊಸ ಮಾರ್ಗದರ್ಶಿ ಸೂತ್ರದ ಪ್ರಮುಖಾಂಶಗಳು ಹೀಗಿವೆ:

* ಎಂ.ಡಿ.ಗಳು, ಸಿಇಒಗಳು ಮತ್ತು ಪೂರ್ಣಾವಧಿ ನಿರ್ದೇಶಕರಿಗೆ ಗರಿಷ್ಠ ವಯೋಮಿತಿ 70 ವರ್ಷ. ಆಡಳಿತ ಮಂಡಳಿಯು ವಯೋಮಿತಿ ಕಡಿಮೆ ಮಾಡಿಕೊಳ್ಳಬಹುದು ಎಂದು ಆರ್​ಬಿಐ ಹೇಳಿದೆ.

* ಬೆಳವಣಿಗೆ ಹಾಗೂ ಪ್ರವರ್ತಕರ ಷೇರಿನ ಪಾಲು ಹೊಂದಿರುವ ಪ್ರಮಾಣವನ್ನು ಸಹ ಆರ್​ಬಿಐ ಗಣನೆಗೆ ತೆಗೆದುಕೊಳ್ಳುತ್ತದೆ.

* ಬ್ಯಾಂಕ್​ನ ಅಧ್ಯಕ್ಷರು ಸ್ವತಂತ್ರ ನಿರ್ದೇಶಕರಾಗಿರಬೇಕು. ಆಡಳಿತ ಮಂಡಳಿಯ ಸಭೆಯಲ್ಲಿ ಭಾಗವಹಿಸುವ ನಿರ್ದೇಶಕರ ಪೈಕಿ ಅರ್ಧದಷ್ಟು ಸ್ವತಂತ್ರ ನಿರ್ದೇಶಕರಾಗಿರಬೇಕು.

* ಅದಾಗಲೇ ಅನುಮತಿ ಪಡೆದ ಪ್ರಸ್ತುತ ಅಧ್ಯಕ್ಷರು, ಎಂಡಿ ಮತ್ತು ಸಿಇಒ ಅಥವಾ ಪೂರ್ಣಾವಧಿ ನಿರ್ದೇಶಕರ ಕಾರ್ಯ ನಿರ್ವಹಣೆ ಅವಧಿಯನ್ನು ಪೂರ್ಣಗೊಳಿಸಲು ಆರ್​ಬಿಐ ಅನುಮತಿ ನೀಡುತ್ತದೆ.

* ಅದರರ್ಥ ಏನೆಂದರೆ, ಕೊಟಕ್ ಮಹೀಂದ್ರಾ ಬ್ಯಾಂಕ್​ನ ಉದಯ್ ಕೊಟಕ್ ಎಂ.ಡಿ. ಮತ್ತು ಸಿಇಒ ಆಗಿ 17 ವರ್ಷ ಪೂರ್ಣಗೊಳಿಸುತ್ತಿದ್ದಾರೆ. ಜನವರಿ 1, 2021ರಿಂದ ಮೂರು ವರ್ಷಗಳ ಅವಧಿಗೆ ಅವರ ಪುನರ್ ನೇಮಕಕ್ಕೆ ಆರ್​ಬಿಐ ಅನುಮತಿ ನೀಡಿದೆ.

* ಇತರ ಕ್ರಮದ ವಿಚಾರಕ್ಕೆ ಬಂದರೆ, ಆಡಳಿತ ಮಂಡಳಿಯ ಲೆಕ್ಕಪರಿಶೋಧನಾ ಸಮಿತಿ (ACB) ಮತ್ತು ನಾಮಿನೇಷನ್ ಹಾಗೂ ರೆಮ್ಯುನರೇಷನ್ ಕಮಿಟಿ (NRC)ಯನ್ನು ಅಧಿಕಾರೇತರ ನಿರ್ದೇಶಕರು ಒಳಗೊಂಡಂತೆ ಮಾತ್ರ ರಚಿಸಬೇಕು. ಆದರೆ ಆಡಳಿತ ಮಂಡಳಿ ಅಧ್ಯಕ್ಷರು ಲೆಕ್ಕಪರಿಶೋಧನಾ ಸಮಿತಿಯ ಭಾಗವಾಗಲು ಸಾಧ್ಯವಿಲ್ಲ. ಇನ್ನು ಲೆಕ್ಕಪರಿಶೋಧನಾ ಸಮಿತಿ ಕನಿಷ್ಠ 3 ತಿಂಗಳಿಗೊಮ್ಮೆ ಭೇಟಿ ಆಗಬೇಕು.

* ಎಸಿಬಿಯ ಸಭೆ ಅಧ್ಯಕ್ಷತೆಯನ್ನು ಸ್ವತಂತ್ರ ನಿರ್ದೇಶಕರು ವಹಿಸಿಕೊಳ್ಳಬಹುದು ಮತ್ತು ಅವರು ಮಂಡಳಿಯ ಬೇರೆ ಯಾವುದೇ ಸಮಿತಿ ಅಧ್ಯಕ್ಷರಾಗಿರಬಾರದು. ಸಾಲ ಮಂಜೂರು ಮಾಡುವ ಸಮಿತಿಯಲ್ಲಿ ಎಸಿಬಿಯ ಅಧ್ಯಕ್ಷರು ಸದಸ್ಯರಾಗಿರಬಾರದು.

* ಅಧಿಕಾರೇತರ ನಿರ್ದೇಶಕರಿಗೆ ಗರಿಷ್ಠ ವಯೋಮಿತಿ 75 ಮತ್ತು ಅಂಥ ನಿರ್ದೇಶಕರ ಒಟ್ಟು ಅಧಿಕಾರಾವಧಿ ನಿರಂತರವಾಗಿ ಅಥವಾ ಬೇರೆ ಯಾವುದೇ ರೀತಿಯಲ್ಲಿ 8 ವರ್ಷ ಮೀರಬಾರದು. ಆದರೆ 3 ವರ್ಷಗಳ ಅಂತರ ನೀಡಿದ ನಂತರ ಪುನರಾಯ್ಕೆ ಮಾಡಬಹುದು. ಅಧ್ಯಕ್ಷರನ್ನು ಹೊರತುಪಡಿಸಿದಂತೆ ಅಧಿಕಾರೇತರ ಸ್ವತಂತ್ರ ನಿರ್ದೇಶಕರ ವೇತನವು ವರ್ಷಕ್ಕೆ 20 ಲಕ್ಷ ರೂಪಾಯಿಯನ್ನು ದಾಟಬಾರದು.

* ಈಗಿನ ಹೊಸ ಸುತ್ತೋಲೆಯ ಅನ್ವಯ, ಹೆಚ್ಚುವರಿ ಸ್ವತಂತ್ರ ನಿರ್ದೇಶಕ ಅಭ್ಯರ್ಥಿಗಳಿಗೆ ಬೇಡಿಕೆ ಜಾಸ್ತಿ ಮಾಡುತ್ತದೆ. ಇನ್ನು ಅವರಿಗೆ ಆಡಿಟ್, ತಂತ್ರಜ್ಞಾನ, ಸಾಲ, ರಿಸ್ಕ್ ಮ್ಯಾನೇಜ್​ಮೆಂಟ್​ ಬಗ್ಗೆ ಜ್ಞಾನ, ತಿಳಿವಳಿಕೆ ಇರಬೇಕಾಗುತ್ತದೆ ಎನ್ನುತ್ತಾರೆ ವಿಶ್ಲೇಷಕರು.

ಇದನ್ನೂ ಓದಿ: ಅಮೆರಿಕನ್ ಎಕ್ಸ್​ಪ್ರೆಸ್, ಡೈನರ್ಸ್ ಕ್ಲಬ್​ನಿಂದ ಮೇ 1ರಿಂದ ಹೊಸ ಸದಸ್ಯರನ್ನು ಮಾಡಿಕೊಳ್ಳಲು ಆರ್​ಬಿಐ ನಿರ್ಬಂಧ

(Private banks MD’s, CEO’s maximum tenure fixed at 15 years, compliance from October 1, 2021, according to RBI new guidelines)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್