ಅಮೆರಿಕನ್ ಎಕ್ಸ್ಪ್ರೆಸ್, ಡೈನರ್ಸ್ ಕ್ಲಬ್ನಿಂದ ಮೇ 1ರಿಂದ ಹೊಸ ಸದಸ್ಯರನ್ನು ಮಾಡಿಳ್ಳಲು ಆರ್ಬಿಐ ನಿರ್ಬಂಧ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಡೇಟಾ ಸಂಗ್ರಹ ನಿಯಮಾವಳಿಗಳಿಗೆ ಬದ್ಧವಾಗಿಲ್ಲ ಎಂಬ ಕಾರಣಕ್ಕೆ ಅಮೆರಿಕನ್ ಎಕ್ಸ್ಪ್ರೆಸ್ ಬ್ಯಾಂಕಿಂಗ್ ಕಾರ್ಪ್ ಹಾಗೂ ಡೈನರ್ಸ್ ಕ್ಲಬ್ ಮೇಲೆ ಹೊಸ ಕಾರ್ಡ್ ಸದಸ್ಯರನ್ನು ಮಾಡಿಕೊಳ್ಳದಂತೆ ನಿರ್ಬಂಧಿಸಲಾಗಿದೆ.
ಮುಂಬೈ: ಡೇಟಾ ಸಂಗ್ರಹ ನಿಯಮಾವಳಿಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಅಮೆರಿಕನ್ ಎಕ್ಸ್ಪ್ರೆಸ್ ಬ್ಯಾಂಕಿಂಗ್ ಕಾರ್ಪೊರೇಷನ್ ಮತ್ತು ಡೈನರ್ಸ್ ಕ್ಲಬ್ ಇಂಟರ್ನ್ಯಾಷನಲ್ ಲಿಮಿಟೆಡ್ ಮೇ 1ನೇ ತಾರೀಕಿನಿಂದ ಹೊಸದಾಗಿ ದೇಶೀಯ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳುವಂತಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ನಿರ್ಬಂಧ ಹೇರಲಾಗಿದೆ. ಈಗಿನ ಆದೇಶದಿಂದ ಈಗಾಗಲೇ ಇರುವ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ಶುಕ್ರವಾರದಂದು ಆರ್ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಅಮೆರಿಕನ್ ಎಕ್ಸ್ಪ್ರೆಸ್ ಬ್ಯಾಂಕಿಂಗ್ ಕಾರ್ಪೊರೇಷನ್ ಮತ್ತು ಡೈನರ್ಸ್ ಕಾರ್ಪೊರೇಷನ್ ಮತ್ತು ಡೈನರ್ಸ್ ಕ್ಲಬ್ ಇಂಟರ್ನ್ಯಾಷನಲ್ ಲಿಮಿಟೆಡ್ ಇವೆರಡು ಪೇಮೆಂಟ್ ಆಪರೇಟರ್ಗಳು ದೇಶದಲ್ಲಿ ಪೇಮೆಂಟ್ ಅಂಡ್ ಸೆಟ್ಲ್ಮೆಂಟ್ ಸಿಸ್ಟಮ್ ಆ್ಯಕ್ಟ್, 2007 (PSS Act) ಅಡಿಯಲ್ಲಿ ಕಾರ್ಯ ನಿರ್ವಹಿಸುವುದಕ್ಕೆ ಅಧಿಕೃತ ಮುದ್ರೆ ಬಿದ್ದಿತ್ತು. ಏಪ್ರಿಲ್ 23, 2021ರ ದಿನಾಂಕದ ಆದೇಶದ ಅನ್ವಯ ಆರ್ಬಿಐನಿಂದ ಅಮೆರಿಕನ್ ಎಕ್ಸ್ಪ್ರೆಸ್ ಬ್ಯಾಂಕಿಂಗ್ ಕಾರ್ಪೊರೇಷನ್ ಮತ್ತು ಡೈನರ್ಸ್ ಕ್ಲಬ್ ಇಂಟರ್ನ್ಯಾಷನಲ್ ವಿರುದ್ಧ ನಿರ್ಬಂಧವನ್ನು ಹೇರಿದೆ.
ಪೇಮೆಂಟ್ ಸಿಸ್ಟಮ್ ದತ್ತಾಂಶದ ಸಂಗ್ರಹ ವಿಚಾರದಲ್ಲಿ ನಿರ್ದೇಶನಕ್ಕೆ ತಕ್ಕಂತೆ ಈ ಸಂಸ್ಥೆಗಳು ನಡೆದುಕೊಂಡಿಲ್ಲ ಎಂದು ಆರ್ಬಿಐ ಹೇಳಿದೆ. ಪಿಎಸ್ಎಸ್ ಕಾಯ್ದೆ ಅಡಿಯಲ್ಲಿ ಆರ್ಬಿಐಗೆ ಇರುವ ಅಧಿಕಾರವನ್ನು ಬಳಸಿ ಈ ಮೇಲ್ವಿಚಾರಣೆ ಕ್ರಮವನ್ನು ತೆಗೆದುಕೊಂಡಿರುವುದಾಗಿ ಹೇಳಲಾಗಿದೆ.
2018ರ ಏಪ್ರಿಲ್ನಲ್ಲಿ ಎಲ್ಲ ಪೇಮೆಂಟ್ ಸಿಸ್ಟಮ್ ಒದಗಿಸುವವರಿಗೆ ಸೂಚನೆ ನೀಡಿ, ಆರು ತಿಂಗಳ ಒಳಗಾಗಿ ಅವರು ಸಂಗ್ರಹಿಸಿರುವ ಸಂಪೂರ್ಣ ಡೇಟಾ (ಪೂರ್ತಿಯಾಗಿ ಮೊದಲಿಂದ ಕೊನೆ ತನಕ ವಹಿವಾಟಿನ ಮಾಹಿತಿ/ಸಂಗ್ರಹಿಸಿದ ವಿವರಗಳು/ಪಾವತಿ ಸೂಚನೆಗಳು) ಭಾರತದಲ್ಲಿ ಮಾತ್ರ ಇದೆಯೇ ಎಂಬುದನ್ನು ಖಾತ್ರಿ ಪಡಿಸುವಂತೆ ಹೇಳಿತ್ತು.
ಇದರ ಜತೆಗೆ ಆರ್ಬಿಐ ನಿಯಮಾವಳಿಗಳಿಗೆ ಈ ಸಂಸ್ಥೆಗಳು ಬದ್ಧವಾಗಿರಬೇಕು ಮತ್ತು ಆಡಳಿತ ಮಂಡಳಿಯಿಂದ ಒಪ್ಪಿಗೆ ಪಡೆದ, CERT- ಆಡಿಟರ್ ಸಮಿತಿ ಆಯೋಜಿಸಿದ ಸಿಸ್ಟಮ್ ಆಡಿಟ್ ರಿಪೋರ್ಟ್ (SAR) ಅನ್ನು ನಿರ್ದಿಷ್ಟ ಕಾಲಾವಧಿಯೊಳಗೆ ನೀಡಬೇಕಿತ್ತು.
ಇದನ್ನೂ ಓದಿ: RBI new rules: ಆನ್ಲೈನ್ ವಹಿವಾಟಿಗೆ ಆರ್ಬಿಐ ಹೊಸ ನಿಯಮ; ಇಲ್ಲಿದೆ ನೀವು ತಿಳಿಯಬೇಕಾದ ಸಂಗತಿಗಳು
(Due to non compliance American Express and Diners Club ban from new card membership effectively from May 1st by Reserve Bank Of India)