ಆರೋಗ್ಯ ವಿಮೆ ಪಾಲಿಸಿದಾರರಿಗೆ ನೆಟ್​ವರ್ಕ್ ಆಸ್ಪತ್ರೆಗಳಲ್ಲಿ ಕ್ಯಾಶ್​ಲೆಸ್ ಸೇವೆ ನಿರಾಕರಿಸುವಂತಿಲ್ಲ: ಐಆರ್​ಡಿಎಐ

ನೆಟ್​ವರ್ಕ್ ಆಸ್ಪತ್ರೆಗಳಲ್ಲಿ ಆರೋಗ್ಯ ವಿಮೆದಾರರಿಗೆ ನಗದುರಹಿತ ಚಿಕಿತ್ಸೆಯನ್ನು ನಿರಾಕರಿಸುವಂತಿಲ್ಲ ಎಂದು ಐಆರ್​ಡಿಎಐ ಹೇಳಿದೆ.

ಆರೋಗ್ಯ ವಿಮೆ ಪಾಲಿಸಿದಾರರಿಗೆ ನೆಟ್​ವರ್ಕ್ ಆಸ್ಪತ್ರೆಗಳಲ್ಲಿ ಕ್ಯಾಶ್​ಲೆಸ್ ಸೇವೆ ನಿರಾಕರಿಸುವಂತಿಲ್ಲ: ಐಆರ್​ಡಿಎಐ
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on: Apr 23, 2021 | 3:36 PM

ನವದೆಹಲಿ: ಇನ್ಷೂರೆನ್ಸ್ ಮಾಡಿಸಿಕೊಂಡಂಥವರಿಗೆ ನೆಟ್​ವರ್ಕ್ ಆಸ್ಪತ್ರೆಗಳಲ್ಲಿ ಕ್ಯಾಶ್​ಲೆಸ್ ಸೇವೆ ಒದಗಿಸುವಂತೆ ಸೂಚಿಸಿ ಎಂದು ಇನ್ಷೂರೆನ್ಸ್ ಕಂಪೆನಿಗಳಿಗೆ ಇನ್ಷೂರೆನ್ಸ್ ರೆಗ್ಯುಲೇಟರಿ ಅಂಡ್ ಡೆವಲಪ್​ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐಆರ್​ಡಿಎಐ) ಹೇಳಿದೆ. ಒಂದು ವೇಳೆ ನೆಟ್​ವರ್ಕ್ ಆಸ್ಪತ್ರೆಗಳು ಕ್ಯಾಶ್​ಲೆಸ್ ವ್ಯವಸ್ಥೆ ಒದಗಿಸುವುದಕ್ಕೆ ನಿರಾಕರಿಸಿದಲ್ಲಿ ಮತ್ತು ಈಗಾಗಲೇ ಒಪ್ಪಿಕೊಂಡಿರುವಂಥ ಷರತ್ತು, ನಿಬಂಧನೆಗಳಿಂದ ದೂರ ಸರಿದಲ್ಲಿ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಟ್ವೀಟ್ ಮಾಡಿ, ಕೆಲವು ಆಸ್ಪತ್ರೆಗಳು ಕ್ಯಾಶ್​ಲೆಸ್​ ಚಿಕಿತ್ಸೆಗೆ ನಿರಾಕರಿಸುತ್ತಿರುವ ಬಗ್ಗೆ ವರದಿಗಳು ಬಂದಿವೆ. ಐಆರ್​ಡಿಎಐ ಅಧ್ಯಕ್ಷ ಎಸ್​.ಸಿ.ಕುಂಠಿಯಾ ಜತೆ ಮಾತನಾಡಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಹೇಳಿದ್ದೇನೆ. 2020ರ ಮಾರ್ಚ್​ನಲ್ಲಿ ಕೋವಿಡ್​ ಅನ್ನು ಕಾಂಪ್ರಹೆನ್ಸಿವ್ ಆರೋಗ್ಯ ವಿಮೆಯಲ್ಲಿ ಸೇರಿಸಲಾಗಿದೆ. ನೆಟ್​ವರ್ಕ್ ಅಥವಾ ತಾತ್ಕಾಲಿಕ ಆಸ್ಪತ್ರೆಗಳಲ್ಲೂ ಕ್ಯಾಶ್​ಲೆಸ್ ದೊರೆಯುತ್ತದೆ ಎಂದಿದ್ದರು.

ಎಲ್ಲಿ ಇನ್ಷೂರೆನ್ಸ್ ಮಾಡಿಸಿಕೊಂಡವರಿಗೆ ಆಸ್ಪತ್ರೆಯಲ್ಲಿ ಕ್ಯಾಶ್​ಲೆಸ್ ವ್ಯವಸ್ಥೆಗೆ ಅನುಕೂಲ ಇರುತ್ತದೋ, ಅಂಥ ನೆಟ್​ವರ್ಕ್ ಆಸ್ಪತ್ರೆಗಳು ಕೋವಿಡ್- 19 ಸೇರಿದಂತೆ ಎಲ್ಲ ಚಿಕಿತ್ಸೆಗೂ ಕ್ಯಾಶ್​ಲೆಸ್ ವ್ಯವಸ್ಥೆ ಒದಗಿಸಬೇಕು. ಎಂದು ಐಆರ್​ಡಿಎಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅಂದಹಾಗೆ, ನೆಟ್​ವರ್ಕ್ ಆಸ್ಪತ್ರೆಗಳು ಅಂದರೆ, ಜನರಲ್ ಮತ್ತು ಹೆಲ್ತ್ ಇನ್ಷೂರೆನ್ಸ್ ಕಂಪೆನಿಗಳ ಜತೆಗೆ ಸರ್ವೀಸ್ ಲೆವೆಲ್ ಅಗ್ರಿಮೆಂಟ್ಸ್ (SLA)ಸಹಿ ಮಾಡಿದ ಆಸ್ಪತ್ರೆಗಳು ಎಂದರ್ಥ. ಇವುಗಳು ಒಪ್ಪಂದದ ಪ್ರಕಾರವಾಗಿ, ಪಾಲಿಸಿದಾರರಿಗೆ ಕೋವಿಡ್​- 19 ಸೇರಿದಂತೆ ಇತರ ಕಾಯಿಲೆಗಳಿಗೆ ಕಡ್ಡಾಯವಾಗಿ ಕ್ಯಾಶ್​ಲೆಸ್ ವ್ಯವಸ್ಥೆ ಒದಗಿಸಬೇಕು ಎಂದು ಐಆರ್​ಡಿಎಐ ಹೇಳಿದೆ.

ಎಲ್ಲ ನೆಟ್​ವರ್ಕ್ ಆಸ್ಪತ್ರೆಗಳಿಂದಲೂ ಪ್ರಾಮಾಣಿಕವಾಗಿ ನಗದುರಹಿತ ಸೇವೆ ಖಾತ್ರಿಯಾಗುವಂತೆ ನಿರ್ದೇಶನ ನೀಡಬೇಕು ಎಂದು ಇನ್ಷೂರೆನ್ಸ್ ಕಂಪೆನಿಗಳಿಗೆ ಸೂಚಿಸಲಾಗಿದೆ. ಜತೆಗೆ ಆಸ್ಪತ್ರೆಗಳ ಜತೆಗೆ ಸಂವಹನ ನಡೆಸುವುದಕ್ಕೆ ಸೂಕ್ತ ಸಂವಹನ ಚಾನೆಲ್ ರಚಿಸಬೇಕು ಅಂತಲೂ ತಿಳಿಸಲಾಗಿದೆ. ಒಂದು ವೇಳೆ ಯಾವುದೇ ಲಿಸ್ಟೆಡ್ ನೆಟ್​ವರ್ಕ್ ಆಸ್ಪತ್ರೆಯು ನಗದುರಹಿತ ವ್ಯವಸ್ಥೆಯನ್ನು ಒದಗಿಸುವುದಕ್ಕೆ ನಿರಾಕರಿಸಿದಲ್ಲಿ ಪಾಲಿಸಿದಾರರು ಈ ಬಗ್ಗೆ ಸಂಬಂಧಪಟ್ಟ ಇನ್ಷೂರೆನ್ಸ್ ಕಂಪೆನಿಗಳಿಗೆ ದೂರು ನೀಡಬಹುದು.

ಇದನ್ನೂ ಓದಿ: ಕೋವಿಡ್- 19 ಕ್ಲೇಮ್​ಗೆ ಆದ್ಯತೆ ನೀಡುವಂತೆ ನಿರ್ದೇಶಿಸಲು ಐಆರ್​ಡಿಎಐಗೆ ಸೂಚಿಸಿದ ನಿರ್ಮಲಾ ಸೀತಾರಾಮನ್

ಇದನ್ನೂ ಓದಿ: Health insurance: ಹೆಚ್ಚಿನ ಮೊತ್ತದ ಹೆಲ್ತ್ ಇನ್ಷೂರೆನ್ಸ್ ಖರೀದಿಯೋ ಅಥವಾ ರೀಸ್ಟೋರ್ ಮಾಡಿಸಬೇಕೋ?

(Network hospitals should not deny cashless facility to policyholders, said IRDAI)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್