Health insurance: ಹೆಚ್ಚಿನ ಮೊತ್ತದ ಹೆಲ್ತ್ ಇನ್ಷೂರೆನ್ಸ್ ಖರೀದಿಯೋ ಅಥವಾ ರೀಸ್ಟೋರ್ ಮಾಡಿಸಬೇಕೋ?

ಆರೋಗ್ಯ ವಿಮೆ ಖರೀದಿ ಬಗ್ಗೆ ಮಾರ್ಗದರ್ಶನ ನೀಡುವಂತಹ ಲೇಖನ ಇದು. ಅಯ್ಯೋ, ಹೆಲ್ತ್ ಇನ್ಷೂರೆನ್ಸ್ ಮೊತ್ತ ಪೂರ್ತಿ ಬಳಸಿಕೊಂಡಿವಿ, ಮುಂದೇನು ದಾರಿ ಅಂತ ಗೊತ್ತಾಗ್ತಿಲ್ಲ ಅನ್ನುವವರಂತೂ ಈ ಲೇಖನ ಕಡ್ಡಾಯವಾಗಿ ಓದಬೇಕು.

Health insurance: ಹೆಚ್ಚಿನ ಮೊತ್ತದ ಹೆಲ್ತ್ ಇನ್ಷೂರೆನ್ಸ್ ಖರೀದಿಯೋ ಅಥವಾ ರೀಸ್ಟೋರ್ ಮಾಡಿಸಬೇಕೋ?
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: Apr 09, 2021 | 12:52 PM

ಒಂದು ವರ್ಷದ ಕೆಲವೇ ತಿಂಗಳಲ್ಲಿ ಪೂರ್ಣವಾಗಿ ಬಳಸಲಾದ ಆರೋಗ್ಯ ವಿಮೆ ಪಾಲಿಸಿಯ ಮೊತ್ತವನ್ನು ಮತ್ತೆ ಅದೇ ಸಮವಾದ ಮೊತ್ತಕ್ಕೆ ಪಡೆದುಕೊಳ್ಳುವ ವೈಶಿಷ್ಟ್ಯವು ಈಗ ಹಲವರನ್ನು ಸೆಳೆಯುತ್ತಿದೆ. ಈ ಫೀಚರ್ ಅಡಿಯಲ್ಲಿ, ಇನ್ಷೂರೆನ್ಸ್ ಮೊತ್ತ ಪೂರ್ಣವಾಗಿ ಬಳಸಿಕೊಂಡ ಮೇಲೂ ಮತ್ತೆ ಆ ಮೊತ್ತದ ಆರೋಗ್ಯ ವಿಮೆಯು ದೊರೆಯುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ಫ್ಯಾಮಿಲಿ ಫ್ಲೋಟರ್ ಪಾಲಿಸಿ ಮಾಡಿಸಿದ್ದಾರೆ ಅಂತಿಟ್ಟುಕೊಳ್ಳಿ. ಕುಟುಂಬ ಸದಸ್ಯರ ಪೈಕಿ ಒಬ್ಬರಿಗೆ ಅನಾರೋಗ್ಯವಾಗಿ, ಪಾಲಿಸಿ ವರ್ಷದ ಶುರುವಿನಲ್ಲೇ ಪೂರ್ಣ ಮೊತ್ತವನ್ನು ಬಳಸಿಕೊಂಡಿರುತ್ತಾರೆ. ಒಂದು ವೇಳೆ ಕುಟುಂಬದ ಮತ್ತೊಬ್ಬ ಸದಸ್ಯರು ಅನಾರೋಗ್ಯಪೀಡಿತರಾಗಿ ಆಸ್ಪತ್ರೆ ಸೇರುವಂತಾದರೆ ಸಂಪೂರ್ಣ ಮೊತ್ತವನ್ನು ಸ್ವಂತವಾಗಿ ಭರಿಸಬೇಕಾಗುತ್ತದೆ.

ಈ ಮೇಲ್ಕಂಡ ಸನ್ನಿವೇಶದಲ್ಲಿ “ರೀಸ್ಟೋರ್” ವೈಶಿಷ್ಟ್ಯವು ನೆರವಿಗೆ ಬರುತ್ತದೆ. ಈ ಫೀಚರ್ ಆಯ್ಕೆ ಮಾಡಿಕೊಂಡಲ್ಲಿ ಇನ್ಷೂರೆನ್ಸ್ ಮಾಡಿಸಿಕೊಂಡವರಿಗೆ ಬ್ಯಾಕ್​ಅಪ್ ಪ್ಲ್ಯಾನ್​ನಂತೆ ಬಳಕೆಯಾಗುತ್ತದೆ. ಈ ಅನುಕೂಲ ಪಡೆಯುವುದಕ್ಕೆ ಮುಂಚೆ ಕೆಲವು ಪೂರ್ವ ಷರತ್ತುಗಳನ್ನು ತಿಳಿದುಕೊಂಡಿರಬೇಕು. ಆಗಷ್ಟೇ ಈ ಅನುಕೂಲ ಪಡೆಯುವುದಕ್ಕೆ ಸಾಧ್ಯ. ಉದಾಹರಣೆಗೆ, ಕೆಲವು ಪಾಲಿಸಿಗಳ ಪ್ರಕಾರವಾಗಿ, ಅನುಕೂಲ ಪಡೆಯಬೇಕು ಎಂದಾದಲ್ಲಿ ಇನ್ಷೂರ್ಡ್ ಮೊತ್ತ ಸಂಪೂರ್ಣವಾಗಿ ಬಳಸಿಕೊಂಡಿರಬೇಕು. ಈಗ 10 ಲಕ್ಷ ಮೊತ್ತಕ್ಕೆ ಆರೋಗ್ಯ ವಿಮೆ ಮಾಡಿಸಿದ ವ್ಯಕ್ತಿಯು ಆ ಪೈಕಿ 9 ಲಕ್ಷ ರೂಪಾಯಿಯನ್ನು ಆಸ್ಪತ್ರೆ ವೆಚ್ಚಕ್ಕಾಗಿ ಬಳಕೆ ಮಾಡಿದ್ದಾರೆ ಎಂದಾದರೆ ಅಂಥವರಿಗೆ ಈ ಅನುಕೂಲ ಸಿಗಲ್ಲ. ಈ ಪ್ರಕರಣದಲ್ಲಿ ಮತ್ತೊಂದು ಸಲ ಆಸ್ಪತ್ರೆಗೆ ಆ ವ್ಯಕ್ತಿ ಸೇರುವಂತಾದರೆ 1 ಲಕ್ಷ ರೂಪಾಯಿ ಮೇಲ್ಪಟ್ಟ ವೆಚ್ಚವನ್ನು ಪಾಲಿಸಿ ಮೂಲಕ ಪಾವತಿಸುವುದಿಲ್ಲ, ಅಷ್ಟೇ.

ಇನ್ನು, ಮುಂಚಿತವಾಗಿ ಯಾವ ಕಾಯಿಲೆಗಾಗಿ ಕ್ಲೇಮ್ ಮಾಡಲಾಗಿರುತ್ತದೋ ಅದೇ ಉದ್ದೇಶಕ್ಕೆ ಈ ರೀಸ್ಟೋರ್ ಅನುಕೂಲ ಪಡೆಯುವುದಕ್ಕೆ ಸಾಧ್ಯವಿಲ್ಲ. ಈ ಬಗ್ಗೆ ಪಾಲಿಸಿಬಜಾರ್.ಕಾಮ್ ಹೆಲ್ತ್ ಇನ್ಷೂರೆನ್ಸ್ ವಿಭಾಗದ ಮುಖ್ಯಸ್ಥ ಅಮಿತ್ ಛಬ್ರಾ ಮಾತನಾಡಿ, ಮೂಲ ಆರೋಗ್ಯ ವಿಮೆ ಜತೆಗೆ ರೀಸ್ಟೋರೇಷನ್ ಪಾಲಿಸಿ ಖರೀದಿ ಮಾಡುವುದರಿಂದ ದೊಡ್ಡ ಮಟ್ಟದಲ್ಲಿ ಆರೋಗ್ಯ ವಿಮೆ ಮೊತ್ತದ ವಿಸ್ತರಣೆಗೆ ಸಹಾಯ ಮಾಡುತ್ತದೆ. ಈ ರೀಸ್ಟೋರೇಷನ್ ಅನುಕೂಲ ದೊರೆಯುವುದು ಸಹ ಬೇರೆ ಕಾಯಿಲೆಗೆ ಮಾತ್ರ ಮತ್ತು ಪಾಲಿಸಿ ಅವಧಿಯ ಅದೇ ಕಾಯಿಲೆ ಅಥವಾ ಗಾಯಕ್ಕೆ ಅಲ್ಲ. ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದು ಯಾವಾಗ ಬೇಕಾದರೂ ಯಾರನ್ನಾದರೂ ಬಾಧಿಸಬಹುದು. ಆದ್ದರಿಂದ ಸೂಕ್ತ ಪ್ರಮಾಣದಲ್ಲಿ ಇನ್ಷೂರೆನ್ಸ್ ಹೊಂದಿರುವುದು ಉತ್ತಮ. ಕಡಿಮೆ ಮೊತ್ತದ ಇನ್ಷೂರ್ಡ್ ಮೊತ್ತ ಹೊಂದಿರುವ ಕೆಲವರಲ್ಲಿ ಕೋವಿಡ್ ಕ್ಲೇಮ್​ಗಳು 15ರಿಂದ 20 ಲಕ್ಷ ರೂಪಾಯಿ ಆಗಿರುವುದು ಸಹ ನೋಡಿದ್ದೇವೆ. ಈಚೆಗಂತೂ ಕಡಿಮೆ ಮೊತ್ತದ ಇನ್ಷೂರೆನ್ಸ್​ನಿಂದ ಹೆಚ್ಚಿನ ಮೊತ್ತಕ್ಕೆ ಬದಲಿಸಿಕೊಳ್ಳುತ್ತಿರುವ ಪ್ರಮಾಣ ಶೇಕಡಾ 150ರಷ್ಟು ಕಾಣುತ್ತಿದ್ದೇವೆ ಎನ್ನುತ್ತಾರೆ.

ಇನ್ಷೂರೆನ್ಸ್ ರೀಸ್ಟೋರ್ ಮಾಡಬೇಕಾ ಅಥವಾ ಹೆಚ್ಚಿನ ಮೊತ್ತದ ಇನ್ಷೂರೆನ್ಸ್ ಖರೀದಿಸಬೇಕಾ? ಇನ್ಷೂರೆನ್ಸ್ ಖರೀದಿ ಮಾಡುತ್ತಿರುವವರ ವಯಸ್ಸು ಹಾಗೂ ಯಾವ ನಗರದಲ್ಲಿ ವಾಸವಿದ್ದಾರೆ ಎಂಬುದರ ಆಧಾರದ ಮೇಲೆ ಅಗತ್ಯ ಪ್ರಮಾಣದಲ್ಲಿ ಇನ್ಷೂರ್ಡ್ ಮೊತ್ತ ಆರಿಸಿಕೊಳ್ಳಬೇಕು. ರೀಸ್ಟೋರ್ ಅನುಕೂಲ ಉತ್ತಮ ಆಯ್ಕೆ ಎಂಬುದೇನೋ ನಿಜ. ಆದರೆ ಅದರ ಜತೆಗೆ ಕೆಲವು ಷರತ್ತುಗಳು ಇರುತ್ತವೆ. ಆದ್ದರಿಂದ ಇಡೀ ಕುಟುಂಬದ ಸುರಕ್ಷತೆಗೆ ರೀಸ್ಟೋರ್ ಅನುಕೂಲದ ಮೇಲೆ ಅವಲಂಬನೆ ಆಗುವುದು ಸರಿಯಲ್ಲ. ಇನ್ನು ಹೆಚ್ಚಿನ ಕವರ್​​ಗೆ ಹೆಚ್ಚುವರಿಯಾಗಿ ಎಷ್ಟು ಮೊತ್ತ ಆಗುತ್ತದೆ ಎಂಬುದನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ, ಹೆಚ್ಚಿನ ಮೊತ್ತದ ಇನ್ಷೂರೆನ್ಸ್ ಪಾಲಿಸಿಗಳು ದುಬಾರಿ ಆಗಿರಲೇಬೇಕು ಎಂದೇನೂ ಇಲ್ಲ.

1 ಕೋಟಿ ರೂಪಾಯಿ ಮೊತ್ತದ ಇನ್ಷೂರೆನ್ಸ್​ಗೂ ಹಾಗೂ 10 ಲಕ್ಷ ರೂಪಾಯಿ ಇನ್ಷೂರ್ಡ್ ಮೊತ್ತಕ್ಕೂ 500ರಿಂದ 1000 ರೂಪಾಯಿ ಹೆಚ್ಚಾಗಬಹುದು, ಅಷ್ಟೇ. ಈ 1 ಕೋಟಿ ರೂಪಾಯಿ ಕವರೇಜ್ ಇರುವ ಪಾಲಿಸಿಗಳು ಸೂಪರ್ ಟಾಪ್-ಅಪ್ ಅನುಕೂಲ ಒದಗಿಸುತ್ತದೆ. ಈ ಟಾಪ್-ಅಪ್ ಪ್ಲ್ಯಾನ್ ಅಡಿಯಲ್ಲಿ ಒಂದು ನಿರ್ದಿಷ್ಟ ಮೊತ್ತವನ್ನು ವಿಮಾದಾರರು ಬಳಕೆ ಮಾಡಿಕೊಂಡ ನಂತರವಷ್ಟೇ ಹೆಚ್ಚಿನ ಮೊತ್ತವು ನೆರವಿಗೆ ಬರುತ್ತದೆ.

ಇದನ್ನೂ ಓದಿ: Income tax deductions: ಆರೋಗ್ಯ ವಿಮೆ ಮೂಲಕ ಎಷ್ಟು ಆದಾಯ ತೆರಿಗೆಯನ್ನು ಉಳಿತಾಯ ಮಾಡಬಹುದು?

(Whether you should purchase higher sum health insurance or restore sum assured? Here is the explainer.)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್