Income tax deductions: ಆರೋಗ್ಯ ವಿಮೆ ಮೂಲಕ ಎಷ್ಟು ಆದಾಯ ತೆರಿಗೆಯನ್ನು ಉಳಿತಾಯ ಮಾಡಬಹುದು?

ಆರೋಗ್ಯ ವಿಮೆ ಖರೀದಿ ಮಾಡುವ ಮೂಲಕ ಆದಾಯ ತೆರಿಗೆಯಲ್ಲಿ ಎಷ್ಟು ಉಳಿತಾಯ ಮಾಡಬಹುದು ಗೊತ್ತೆ? ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80D ಅಡಿಯಲ್ಲಿ ಎಷ್ಟು ವಿನಾಯಿತಿ ಪಡೆಯಬಹುದು ಎಂಬುದನ್ನು ತಿಳಿಯಿರಿ.

Income tax deductions: ಆರೋಗ್ಯ ವಿಮೆ ಮೂಲಕ ಎಷ್ಟು ಆದಾಯ ತೆರಿಗೆಯನ್ನು ಉಳಿತಾಯ ಮಾಡಬಹುದು?
ಪ್ರಾತಿನಿಧಿಕ ಚಿತ್ರ
Follow us
Srinivas Mata
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 23, 2021 | 5:40 PM

ಆರೋಗ್ಯ ವಿಮೆ (ಹೆಲ್ತ್ ಇನ್ಷೂರೆನ್ಸ್) ಎಂಬುದು ಅಗತ್ಯ. ಇದರ ಮೂಲಕವಾಗಿ ತೆರಿಗೆ ಕೂಡ ಉಳಿತಾಯ ಮಾಡಬಹುದು. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80D ಮೂಲಕ ವೈಯಕ್ತಿಕ ತೆರಿಗೆದಾರರು ಆರೋಗ್ಯ ಇನ್ಷೂರೆನ್ಸ್ ಪ್ರೀಮಿಯಂ ಪಾವತಿ ಮೇಲೆ ವಿನಾಯಿತಿ ಕ್ಲೇಮ್ ಮಾಡುವುದಕ್ಕೆ ಅವಕಾಶ ನೀಡುತ್ತದೆ. ತಮ್ಮದು ಹಾಗೂ ಕುಟುಂಬ ಸದಸ್ಯರ ಆರೋಗ್ಯ ರಕ್ಷಣೆಗಾಗಿ ಪಾವತಿ ಮಾಡಿದ ಇನ್ಷೂರೆನ್ಸ್ ಪ್ರೀಮಿಯಂಗೆ ವಿನಾಯಿತಿ ಕ್ಲೇಮ್ ಮಾಡಬಹುದಾಗಿದೆ. ಪೋಷಕರು ಆರ್ಥಿಕವಾಗಿ ಅವಲಂಬಿತರಾಗಿದ್ದಾರೋ ಇಲ್ಲವೋ ಒಟ್ಟಿನಲ್ಲಿ ಸೆಕ್ಷನ್ 80D ಅಡಿಯಲ್ಲಿ ವಿನಾಯಿತಿಯಂತೂ ಸಿಗುತ್ತದೆ. ಆದರೆ ಯಾರಾದರೂ ತಮ್ಮ ಪೋಷಕರಿಗೆ ವಿನಾಯಿತಿ ಕ್ಲೇಮ್ ಮಾಡಬಹುದೇ ವಿನಾ ಅತ್ತೆ- ಮಾವನಿಗೆ ಆಗಲ್ಲ.

ಒಂದು ವೇಳೆ ಒಬ್ಬ ವ್ಯಕ್ತಿಯ ಪತ್ನಿ ಕೂಡ ಉದ್ಯೋಗ ಮಾಡುತ್ತಿದ್ದ ಪಕ್ಷದಲ್ಲಿ ಅವರು ತಮ್ಮ ಪೋಷಕರಿಗೆ ಆರೋಗ್ಯ ವಿಮೆಯನ್ನು ಖರೀದಿಸುವ ಮೂಲಕ 50 ಸಾವಿರ ರೂಪಾಯಿ ತನಕ ವಿನಾಯಿತಿ ಕ್ಲೇಮ್ ಮಾಡಬಹುದು. ಈ ರೀತಿಯಾಗಿ ಕುಟುಂಬದ ಒಟ್ಟಾರೆ ಆದಾಯದಲ್ಲಿ ಗರಿಷ್ಠ ಮಟ್ಟದ ತೆರಿಗೆ ಉಳಿತಾಯ ವಿನಾಯಿತಿ ಪಡೆಯಬಹುದು.

ತಂದೆ ಅಥವಾ ತಾಯಿ ಅಥವಾ ಪೋಷಕರಿಬ್ಬರಿಗೂ ಇನ್ಷೂರೆನ್ಸ್ ಪ್ರೀಮಿಯಂ ಪಾವತಿ ಮಾಡುವ ಮೂಲಕ ಗರಿಷ್ಠ 25,000 ರೂಪಾಯಿ ವಿನಾಯಿತಿ ಕ್ಲೇಮ್ ಮಾಡಬಹುದು. ಒಂದು ವೇಳೆ ಪೋಷಕರು ಹಿರಿಯ ನಾಗರಿಕರಾಗಿದ್ದಲ್ಲಿ (60 ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನವರು) ಗರಿಷ್ಠ 50,000 ರೂಪಾಯಿ ತನಕ ಹೆಚ್ಚಿಸಬಹುದು ಎಂದು ತಜ್ಞರು ಹೇಳುತ್ತಾರೆ. ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳಿಗೆ ಗರಿಷ್ಠ ವಿನಾಯಿತಿ ಪಡೆಯುವ ಬಗೆ ಹೇಗೆ ಎಂಬ ಮಾಹಿತಿ ಇಲ್ಲಿದೆ:

– ಸ್ವಂತಕ್ಕೆ, ಸಂಗಾತಿಗೆ ಮತ್ತು ಅವಲಂಬಿತ ಮಕ್ಕಳಿಗೆ ಕವರ್ ಆಗುವಂತೆ ಕಟ್ಟಿದ ಪ್ರೀಮಿಂ ರೂ. 25,000 – ಹೆಚ್ಚುವರಿಯಾಗಿ 25,000 ರೂಪಾಯಿ ಪ್ರೀಮಿಯಂ ಪಾವತಿಗೂ ಅವಕಾಶ ಇದೆ. ಆದರೆ ಅವಲಂಬಿತ ಪೋಷಕರ ವಯಸ್ಸು 60 ವರ್ಷದೊಳಗಿರಬೇಕು; ಅಥವಾ – ಹೆಚ್ಚುವರಿ ರೂ. 50,000: ಅವಲಂಬಿತ ಪೋಷಕರಿಗೆ 60 ವರ್ಷ ಅಥವಾ ಮೇಲ್ಪಟ್ಟಿದ್ದಲ್ಲಿ (ಹಿರಿಯ ನಾಗರಿಕರು);

ಆರೋಗ್ಯ ವಿಮೆ ಪ್ರೀಮಿಯಂ ಪಾವತಿಯನ್ನು ಗದು ಹೊರತುಪಡಿಸಿದಂತೆ ಬೇರೆ ಯಾವುದಾದರೂ ವಿಧಾನದಲ್ಲಿ ಮಾಡಿರಬೇಕು. ಇಲ್ಲದಿದ್ದಲ್ಲಿ ವಿನಾಯಿತಿ ಸಿಗುವುದಿಲ್ಲ. ಆದರೆ ಆರೋಗ್ಯ ವಿಮೆಯನ್ನು ತೆರಿಗೆ ಉಳಿತಾಯ ಎಂಬಷ್ಟೇ ಕಾರಣಕ್ಕೆ ಖರೀದಿಸಬಾರದು. ವೈದ್ಯಕೀಯ ತುರ್ತಿನ ಸಂದರ್ಭದಲ್ಲಿ ಹಣಕಾಸು ಒತ್ತಡ ಕಡಿಮೆ ಮಾಡುತ್ತದೆ ಎಂಬ ಅಂಶವೂ ಗಮನದಲ್ಲಿರಬೇಕು.

ಇದನ್ನೂ ಓದಿ: Income Tax Return: ಆದಾಯ ತೆರಿಗೆ ಸಂಬಂಧಿತ ಈ 5 ಜವಾಬ್ದಾರಿಗಳನ್ನು ಮುಗಿಸಲು ಮಾರ್ಚ್ 31 ಗಡುವು

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್