ಯೋಧರು ತೆರಳುತ್ತಿದ್ದ ಬಸ್ ಸ್ಫೋಟಿಸಿದ ನಕ್ಸಲರು: ಮೂವರು ಹುತಾತ್ಮ, 21 ಯೋಧರಿಗೆ ಗಾಯ
ಛತ್ತೀಸ್ಗಢದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. ಯೋಧರು ತೆರಳುತ್ತಿದ್ದ ಬಸ್ ಒಂದನ್ನು ನಕ್ಸಲರು ಸ್ಫೋಟಿಸಿರುವ ಘಟನೆ ಛತ್ತೀಸ್ಗಢದ ನಾರಾಯಣಪುರದಲ್ಲಿ ವರದಿಯಾಗಿದೆ.
ರಾಯ್ಪುರ್: ಛತ್ತೀಸ್ಗಢದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. ಯೋಧರು ತೆರಳುತ್ತಿದ್ದ ಬಸ್ ಒಂದನ್ನು ನಕ್ಸಲರು ಸ್ಫೋಟಿಸಿರುವ ಘಟನೆ ಛತ್ತೀಸ್ಗಢದ ನಾರಾಯಣಪುರದಲ್ಲಿ ವರದಿಯಾಗಿದೆ. ಘಟನೆಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಇದಲ್ಲದೆ, 21 ಯೋಧರಿಗೆ ಗಾಯಗಳಾಗಿದೆ. ಸದ್ಯ, ಗಾಯಾಳು ಯೋಧರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೋಡಲಾಗುತ್ತಿದೆ. ನಕ್ಸಲರಿಂದ IED ಬಾಂಬ್ ಸ್ಫೋಟಿಸಲಾಗಿದೆ ಎಂದು ಬಸ್ತರ್ ಐಜಿ ಸುಂದರ್ ರಾಜ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸರ್ಕಾರ ರಚನೆಗೆ ಯೋಗೇಶ್ವರ್ 9 ಕೋಟಿ ಸಾಲ ಮಾಡಿದ್ದರು -ರಮೇಶ್ ಜಾರಕಿಹೊಳಿ ಅಂದು ಕೊಟ್ಟಿದ್ದ ಹೇಳಿಕೆ ಇಂದು ಕಂಟಕವಾಯ್ತಾ?
Published On - 6:12 pm, Tue, 23 March 21