AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pak stock market: ಗಡಗಡ ನಡುಗಿದ ಪಾಕಿಸ್ತಾನದ ಷೇರುಪೇಟೆ; ಅಟ್ಟಾರಿ ಗಡಿ, ಸಿಂಧೂ ಜಲ ಒಪ್ಪಂದ ಮುಚ್ಚಿದ್ದು ಶಾಕ್ ಕೊಟ್ಟಿತಾ?

Pakistan stock market plunges after Pahalgam terror attack: ಕಾಶ್ಮೀರದ ಪಹಲ್ಗಾಮ್​​ನಲ್ಲಿ ಪ್ರವಾಸಿಗರನ್ನು ಉಗ್ರರು ನರಮೇಧ ಮಾಡಿದ ಘಟನೆ ಬಳಿಕ ಪಾಕಿಸ್ತಾನದ ಷೇರು ಮಾರುಕಟ್ಟೆ ಕುಸಿದಿದೆ. ನಿನ್ನೆ ಶೇ. 1ರಷ್ಟು ಕುಸಿದಿದ್ದ ಬಜಾರು, ಇವತ್ತು ಗುರುವಾರ ಶೇ. 1.32ರಷ್ಟು ಹಿನ್ನಡೆ ಕಂಡಿದೆ. ಸಿಂಧೂ ಜಲ ಒಪ್ಪಂದ ರದ್ದು ಮಾಡಿರುವುದು, ಅಟ್ಟಾರಿ ಮಾರ್ಗವನ್ನು ಬಂದ್ ಮಾಡಿರುವುದು ಇದಕ್ಕೆ ಕಾರಣವಿರಬಹುದು ಎನ್ನಲಾಗಿದೆ.

Pak stock market: ಗಡಗಡ ನಡುಗಿದ ಪಾಕಿಸ್ತಾನದ ಷೇರುಪೇಟೆ; ಅಟ್ಟಾರಿ ಗಡಿ, ಸಿಂಧೂ ಜಲ ಒಪ್ಪಂದ ಮುಚ್ಚಿದ್ದು ಶಾಕ್ ಕೊಟ್ಟಿತಾ?
ಪಾಕಿಸ್ತಾನದ ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 24, 2025 | 4:26 PM

ನವದೆಹಲಿ, ಏಪ್ರಿಲ್ 24: ಪಹಲ್ಗಾಮ್​​ನಲ್ಲಿ ಉಗ್ರದಾಳಿ ಘಟನೆ ಸಂಭವಿಸಿದ ಬಳಿಕ ಪಾಕಿಸ್ತಾನದೊಳಗೆ ಗೊಂದಲದ ಸ್ಥಿತಿ ನಿರ್ಮಾಣವಾಗಿದೆ. ಪಾಕಿಸ್ತಾನದ ಷೇರು ಮಾರುಕಟ್ಟೆ (Pakistan Stock Market) ಸತತ ಎರಡನೇ ದಿನ ಗಡಗಡ ನಡುಗಿದೆ. ಪಾಕಿಸ್ತಾನ್ ಸ್ಟಾಕ್ ಎಕ್ಸ್​​ಚೇಂಜ್​​ನ ಪ್ರಮುಖ ಸೂಚ್ಯಂಕವಾದ ಕರಾಚಿ 100 ಇಂಡೆಕ್ಸ್ (KSE 100) ಎರಡು ದಿನದಲ್ಲಿ 2,754 ಅಂಕಗಳ ನಷ್ಟ ಮಾಡಿಕೊಂಡಿದೆ. ನಿನ್ನೆ ಬುಧವಾರ 1,204 ಅಂಕಗಳಷ್ಟು ಇಳಿಕೆ ಕಂಡಿದ್ದ ಕರಾಚಿ 100 ಇವತ್ತು 1,549 ಅಂಕ ಕಳೆದುಕೊಂಡಿದೆ. ಎರಡು ದಿನದಲ್ಲಿ ಒಟ್ಟಾರೆ ಶೇ. 3.34ರಷ್ಟು ಹಿನ್ನಡೆ ಕಂಡಿದೆ.

ಭಾರತದಿಂದ ಕಠಿಣ ನಿಲುವಿನಿಂದ ಪಾಕಿಸ್ತಾನದ ಆರ್ಥಿಕತೆಗೆ ಸಂಕಷ್ಟ?

ಕಾಶ್ಮೀರದ ಪಹಲ್ಗಾಮ್​​ನಲ್ಲಿ ಮೊನ್ನೆ ಮಂಗಳವಾರ ಉಗ್ರಗಾಮಿಗಳು 28 ಮಂದಿ ಪ್ರವಾಸಿಗರನ್ನು ಬಲಿ ತೆಗೆದುಕೊಂಡಿದ್ದರು. 2019ರಲ್ಲಿ ಪುಲ್ವಾಮದಲ್ಲಿ ಭಾರತೀಯ ಸೈನಿಕರ ವಾಹನದ ಮೇಲೆ ಉಗ್ರರು ಆತ್ಮಾಹುತಿ ದಾಳಿ ಎಸಗಿದ ಬಳಿಕ ಕಣಿವೆ ರಾಜ್ಯದಲ್ಲಿ ನಡೆದ ಪ್ರಮುಖ ದಾಳಿ ಘಟನೆ ಎನಿಸಿದೆ.

ಮೂರು ದಶಕಗಳ ಬಳಿಕ ಜಮ್ಮು ಕಾಶ್ಮೀರದಲ್ಲಿ ಉಗ್ರಗಾಮಿಗಳು ಪ್ರವಾಸಿಗರನ್ನು ಗುರಿಯಾಗಿಸಿ ನಡೆಸಿದ ಮೊದಲ ದೊಡ್ಡ ದಾಳಿ ಘಟನೆಯೂ ಇದಾಗಿದೆ. ರೆಸಿಸ್ಟೆನ್ಸ್ ಫ್ರಂಟ್ ಹೆಸರಿನ ಸಂಘಟನೆಯು ಘಟನೆಯ ಹೊಣೆ ಹೊತ್ತಿದೆ. ಇದು ಪಾಕಿಸ್ತಾನ ಮೂಲದ ಲಷ್ಕರೆ ತೈಯ್ಯಬಾದ ಮತ್ತೊಂದು ಅವತಾರ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ
Image
ಭಾರತ-ಪಾಕಿಸ್ತಾನದ ಮಿಲಿಟರಿ ಬಲ ಹೇಗಿದೆ?
Image
ನಿರೀಕ್ಷೆಯೇ ಮಾಡಿರದ ಸಾವು ಆ ಉಗ್ರರಿಗೆ ಬರಲಿದೆ: ಮೋದಿ
Image
ಪಹಲ್​​ಗಾಂ ಘಟನೆಯಿಂದ ಪಾಕ್ ಆರ್ಥಿಕತೆಗೆ ಎಷ್ಟು ಹಾನಿ?
Image
ಭಾರತದಿಂದ ಸಿಂಧೂ ನದಿ ನೀರು ಒಪ್ಪಂದ ಸ್ಥಗಿತ, ಪಾಕಿಸ್ತಾನಕ್ಕಾಗುವ ನಷ್ಟವೇನು?

ಇದನ್ನೂ ಓದಿ: ಯಾರ ಬಲ ಹೆಚ್ಚು? ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಶಕ್ತಿಗಳ ಒಂದು ಹೋಲಿಕೆ

ಅಟ್ಟಾರಿ ಗಡಿ ಬಂದ್, ಸಿಂಧೂ ನೀರು ಒಪ್ಪಂದ ಬಂದ್ ಆದ ಎಫೆಕ್ಟ್?

ಆ ಘಟನೆ ನಡೆದ ಬೆನ್ನಲ್ಲೇ ನಿನ್ನೆ ಪಾಕಿಸ್ತಾನದಲ್ಲಿ ಷೇರು ಮಾರುಕಟ್ಟೆ ಕುಸಿತ ಕಂಡಿತು. ನಿನ್ನೆ, ಭಾರತವು 1960ರಲ್ಲಿ ಪಾಕಿಸ್ತಾನದೊಂದಿಗೆ ಮಾಡಿಕೊಂಡಿದ್ದ ಇಂಡಸ್ ವಾಟರ್ ಟ್ರೀಟಿ ಅಥವಾ ಸಿಂಧೂ ನದಿನೀರು ಒಪ್ಪಂದವನ್ನು ಮುರಿದುಹಾಕಿದೆ. ಪಾಕಿಸ್ತಾನದೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಕಡಿತಗೊಳಿಸಿದೆ. ಅಟ್ಟಾರಿ ವಾಘಾ ಮಾರ್ಗವನ್ನು ಬಂದ್ ಮಾಡಿದೆ. ಇದರ ಪರಿಣಾಮವಾಗಿ ಇವತ್ತೂ ಕೂಡ ಪಾಕಿಸ್ತಾನದ ಷೇರು ಮಾರುಕಟ್ಟೆ ಕೆಳಗೆ ಧುಮುಕಿದೆ.

ಅಟ್ಟಾರಿ ರಸ್ತೆಯ ಮಹತ್ವವೇನು?

ಪಾಕಿಸ್ತಾನದ ಪ್ರಮುಖ ವಾಣಿಜ್ಯ ಚಟುವಟಿಕೆಗಳಿಗೆ ಮುಖ್ಯ ದಾರಿಗಳಲ್ಲಿ ಅಟ್ಟಾರಿಯೂ ಒಂದು. ವರ್ಷಕ್ಕೆ ನಾಲ್ಕು ಸಾವಿರ ಕೋಟಿ ರೂ ಮೌಲ್ಯದಷ್ಟು ಸರಕುಗಳು ಈ ಮಾರ್ಗದಲ್ಲಿ ಸಾಗಣೆ ಆಗುತ್ತವೆ. ಈಗ ಇದು ನಿಂತುಹೋದರೆ, ಪಾಕಿಸ್ತಾನದ ಹಲವು ಸರಕುಗಳಿಗೆ ಮಾರುಕಟ್ಟೆ ಕಡಿಮೆಗೊಳ್ಳಬಹುದು. ಇದರಿಂದ ಆರ್ಥಿಕತೆಗೆ ಮತ್ತಷ್ಟು ಹಿನ್ನಡೆಯಾಗಬಹುದು ಎನ್ನುವ ಭೀತಿ ಇದೆ. ಹೀಗಾಗಿ, ಷೇರು ಮಾರುಕಟ್ಟೆ ಸತತ ಎರಡು ದಿನ ಕುಸಿತ ಕಂಡಿದೆ.

ಇದನ್ನೂ ಓದಿ: ಭಾರತದ ಮೇಲೆ ಪಾಕಿಸ್ತಾನ ಅವಲಂಬನೆ ಎಷ್ಟು? ಸಂಬಂಧ ಪೂರ್ತಿ ಕಡಿತವಾದರೆ ಪಾಕ್​​ಗೆ ಆಗೋ ನಷ್ಟವೆಷ್ಟು?

ಐಎಂಎಫ್ ಅಂದಾಜು ಪ್ರಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಪಾಕಿಸ್ತಾನದ ಜಿಡಿಪಿ ಶೇ. 2.6, ಮುಂದಿನ ವರ್ಷ ಶೇ. 3.6ರಷ್ಟು ಬೆಳೆಯಬಹುದು ಎಂದಿತ್ತು. ಆದರೆ, ಚುರುಕು ಬೆಳವಣಿಗೆಯ ಆಶಯವು ಪಹಲ್ಗಾಂ ಘಟನೆಯಿಂದ ಮುರುಟಿಹೋದಂತಾಗಿದೆ.

ಪಾಕಿಸ್ತಾನದ ಷೇರು ಮಾರುಕಟ್ಟೆ ಗಾತ್ರ ಎಷ್ಟಿದೆ…?

ಪಾಕಿಸ್ತಾನದಲ್ಲಿ ಭಾರತದ ರೀತಿ ಉದ್ದಿಮೆಗಳ ಬೆಳವಣಿಗೆ ಆಗಿಲ್ಲ. ಅಲ್ಲಿಯ ಪಾಕಿಸ್ತಾನ್ ಸ್ಟಾಕ್ ಎಕ್ಸ್​​ಚೇಂಜ್​​ನಲ್ಲಿ 500ರಿಂದ 600 ಕಂಪನಿಗಳು ಮಾತ್ರವೇ ಲಿಸ್ಟ್ ಆಗಿರುವುದು. ಇವುಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯ 51 ಬಿಲಿಯನ್ ಡಾಲರ್ ಮಾತ್ರ. ಭಾರತೀಯ ರುಪಾಯಿ ಲೆಕ್ಕದಲ್ಲಿ 4.34 ಲಕ್ಷ ಕೋಟಿ ರೂನಷ್ಟಿದೆ ಅಲ್ಲಿಯ ಮಾರ್ಕೆಟ್ ಕ್ಯಾಪ್. ಭಾರತದ ಮಾರುಕಟ್ಟೆ ಸಂಪತ್ತು ಪಾಕಿಸ್ತಾನದಕ್ಕಿಂತ ನೂರು ಪಟ್ಟು ಹೆಚ್ಚಿದೆ ಎಂದು ಇಲ್ಲಿ ಉಲ್ಲೇಖಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ