MEIL: ಕರ್ನಾಟಕದ ಕೈಗಾದಲ್ಲಿ 2 ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ 12,800 ಕೋಟಿ ರೂ ಗುತ್ತಿಗೆ ಪಡೆದ ಎಂಇಐಎಲ್
Contracts for building Kaiga nuclear power units: ಹೈದರಾಬಾದ್ ಮೂಲದ ಎಂಇಐಎಲ್ ಸಂಸ್ಥೆ ಕರ್ನಾಟಕದ ಕೈಗಾದಲ್ಲಿ ಎರಡು ಪರಣಾಮ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ 12,800 ಕೋಟಿ ರೂ ಮೊತ್ತದ ಗುತ್ತಿಗೆ ಪಡೆದಿದೆ. ನ್ಯಾಷನಲ್ ಪವರ್ ಕಾರ್ಪೊರೇಶನ್ ಸಂಸ್ಥೆ ಈವರೆಗೆ ನೀಡಿದ ಅತಿದೊಡ್ಡ ಗುತ್ತಿಗೆ ಇದಾಗಿದೆ. ಮುಂಬೈನ ಎನ್ಪಿಸಿಐಎಲ್ ಕಚೇರಿಯಲ್ಲಿ ಗುತ್ತಿಗೆಯ ಪರ್ಚೇಸ್ ಆರ್ಡರ್ ಅನ್ನು ಎಂಇಐಎಲ್ನ ಅಧಿಕಾರಿಗಳಿಗೆ ನೀಡಲಾಗಿದೆ.

ಮುಂಬೈ, ಏಪ್ರಿಲ್ 23: ಮೇಘಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ (ಎಂಇಐಎಲ್) ಸಂಸ್ಥೆ ಕರ್ನಾಟಕದ ಕೈಗಾರದಲ್ಲಿ 700 ಎಂವಿ ಸಾಮರ್ಥ್ಯದ ಎರಡು ಅಣುಸ್ಥಾವರಗಳನ್ನು ನಿರ್ಮಿಸುವ ದೊಡ್ಡ ಗುತ್ತಿಗೆಯನ್ನು ಪಡೆದಿದೆ. ಕೈಗಾದಲ್ಲಿ 5 ಮತ್ತು 6ನೇ ಅಣು ವಿದ್ಯುತ್ ಘಟಕಗಳ ಸ್ಥಾಪನೆಗೆ ಎಂಇಐಎಲ್ಗಗೆ 12,800 ಕೋಟಿ ರೂ ಇಪಿಸಿ ಗುತ್ತಿಗೆ ಸಿಕ್ಕಿದೆ. ನ್ಯಾಷನಲ್ ಪವರ್ ಕಾರ್ಪೊರೇಶನ್ (ಎನ್ಪಿಸಿಐಎಲ್) ಈ ಗುತ್ತಿಗೆಗೆ ಅಧಿಕೃತವಾಗಿ ಎಂಇಐಎಲ್ಗೆ ಪರ್ಚೇಸ್ ಆರ್ಡರ್ ನೀಡಿದೆ. ಮುಂಬೈನಲ್ಲಿರುವ ಎನ್ಪಿಸಿಐಎಲ್ನ ಮುಖ್ಯಕಚೇರಿಯಲ್ಲಿ ಗುತ್ತಿಗೆಯ ಪರ್ಚೇಸ್ ಆರ್ಡರ್ ಅನ್ನು ಎಂಇಐಎಲ್ನ ಪ್ರಾಜೆಕ್ಟ್ ವಿಭಾಗದ ನಿರ್ದೇಶಕ ಸುಬ್ಬಯ್ಯ ಅವರಿಗೆ ಹಸ್ತಾಂತರಿಸಲಾಯಿತು.
ಎನ್ಪಿಸಿಎಲ್ ಸಂಸ್ಥೆ ಈವರೆಗೂ ನೀಡಿರುವ ಅತಿದೊಡ್ಡ ಗುತ್ತಿಗೆ ಇದು ಎಂದು ಹೇಳಲಾಗುತ್ತಿದೆ. ಎಂಜಿನಿಯರಿಂಗ್, ಕನ್ಸ್ಟ್ರಕ್ಷನ್, ವಾಹನ ಕ್ಷೇತ್ರದಲ್ಲಿ ಸಾಕಷ್ಟು ಹೆಸರುವಾಸಿಯಾಗಿರುವ ಮೇಘಾ ಎಂಜಿನಿಯರಿಂಗ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಗೆ ಇದು ಪರಮಾಣ ಶಕ್ತಿ ಕ್ಷೇತ್ರದತ್ತ ಮೊದಲ ದೊಡ್ಡ ಹೆಜ್ಜೆಯಾಗಿದೆ. ಭಾರತದ ಇಂಧನ ಭದ್ರತೆ ದೃಷ್ಟಿಯಿಂದ ಈ ಯೋಜನೆಗಳು ಬಹಳ ಮಹತ್ವದ್ದಾಗಿದೆ. ಮಾಲಿನ್ಯರಹಿತವಾಗಿ ವಿದ್ಯುತ್ ಉತ್ಪಾದನೆ ಮಾಡಲು ಸಹಾಯವಾಗುತ್ತದೆ.
ಇದನ್ನೂ ಓದಿ: ಲಕ್ಷುರಿ ವಸ್ತುಗಳಿಗೆ ಟಿಸಿಎಸ್: ಅಧಿಸೂಚನೆ ಪ್ರಕಟ; ಇಲ್ಲಿದೆ ಐಷಾರಾಮಿ ವಸ್ತುಗಳ ಪಟ್ಟಿ
ಬಿಎಚ್ಇಎಲ್, ಎಲ್ ಅಂಡ್ ಟಿಯಂತಹ ಬಲಿಷ್ಠ ಸಂಸ್ಥೆಗಳನ್ನು ಸೋಲಿಸಿದ ಮೇಘಾ
ಕೈಗಾದಲ್ಲಿ ಎರಡು ಅಣುಘಟಕಗಳ ಸ್ಥಾಪನೆಯ ಯೋಜನೆಯನ್ನು ನೀಡಲು ಎನ್ಪಿಸಿಐಎಲ್ ಈ ಬಾರಿ ಬೇರೆಯೇ ವಿಧಾನ ಅನುಸರಿಸಿದೆ. ಗುಣಮಟ್ಟ ಮತ್ತು ವೆಚ್ಚ ಆಧಾರಿತವಾದ ಆಯ್ಕೆ ವಿಧಾನ (ಕ್ಯುಸಿಬಿಎಸ್) ಇದು. ಬಿಎಚ್ಇಎಲ್, ಎಲ್ ಅಂಡ್ ಟಿ ಮುಂತಾದ ದೊಡ್ಡ ಕಂಪನಿಗಳು ಈ ಯೋಜನೆ ಪಡೆಯಲು ಯತ್ನಿಸಿದ್ದವು. ಆದರೆ, ಮೇಘಾ ಇಂಜಿನಿಯರಿಂಗ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ ಈ ಯೋಜನೆಗೆ ಪ್ರಸ್ತಾಪಿಸಿದ ತಾಂತ್ರಿಕ ಅಂಶಗಳು ಹಾಗೂ ಸ್ಪರ್ಧಾತ್ಮಕ ಬೆಲೆಗಳು ಅದಕ್ಕೆ ಗೆಲುವು ತಂದುಕೊಟ್ಟಿವೆ.
ದೇಶದ ಇಂಧನ ಭದ್ರತೆಗೆ ಮಹತ್ವದ ಹೆಜ್ಜೆ ಇದು…
ಬೆಳೆಯುತ್ತಿರುವ ಭಾರತದ ಆರ್ಥಿಕತೆಗೆ ಮುಂದಿನ ದಿನಗಳಲ್ಲಿ ವಿದ್ಯುತ್ಗೆ ಬೇಡಿಕೆ ತೀವ್ರವಾಗಿ ಹೆಚ್ಚಲಿದೆ. ಅದರಲ್ಲೂ ಮಾಲಿನ್ಯರಹಿತ ವಿದ್ಯುತ್ನ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ. ಸ್ವಚ್ಛ ಇಂಧನಗಳಲ್ಲಿ ಪರಮಾಣ ವಿದ್ಯುತ್ ಕೂಡ ಒಂದು. ಹೀಗಾಗಿ, ಕೈಗಾ ಸೇರಿದಂತೆ ದೇಶದ ವಿವಿಧೆಡೆ ಮತ್ತಷ್ಟು ಪರಮಾಣು ವಿದ್ಯುತ್ ಉತ್ಪಾದಕ ಘಟಕಗಳನ್ನು ಸರ್ಕಾರ ನಿರ್ಮಿಸುತ್ತಿದೆ. ಈ ಬಾಗವಾಗಿ ಕೈಗಾದಲ್ಲಿ 5 ಮತ್ತು 6ನೇ ಘಟಕವನ್ನು ನಿರ್ಮಿಸುವ ಗುತ್ತಿಗೆಯು ಮೇಘಾ ಎಂಜಿನಿಯರಿಂಗ್ಗೆ ಲಭಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:03 pm, Wed, 23 April 25