AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Income Tax: ಲಕ್ಷುರಿ ವಸ್ತುಗಳಿಗೆ ಟಿಸಿಎಸ್: ಅಧಿಸೂಚನೆ ಪ್ರಕಟ; ಇಲ್ಲಿದೆ ಐಷಾರಾಮಿ ವಸ್ತುಗಳ ಪಟ್ಟಿ

TCS on luxury goods: ಹತ್ತು ಲಕ್ಷ ರೂ ಮೇಲ್ಪಟ್ಟ ಬೆಲೆಯ ನಿಗದಿತ ಐಷಾರಾಮಿ ವಸ್ತುಗಳಿಗೆ ಶೇ. 1ರಷ್ಟು ಟಿಸಿಎಸ್ ಅನ್ವಯ ಆಗಲಿದೆ. ನಿನ್ನೆ, ಏಪ್ರಿಲ್ 22ರಂದು ಸಿಬಿಡಿಟಿ ಎರಡು ಅಧಿಸೂಚನೆಗಳನ್ನು ಹೊರಡಿಸಿದೆ. ಜನವರಿ 1ರಿಂದ ಟಿಸಿಎಸ್ ಜಾರಿಯಾಗಬೇಕಿತ್ತು. ಆದರೆ, ಅಧಿಸೂಚನೆ ಹೊರಡಿಸಲಾಗಿರಲಿಲ್ಲ. ಏಪ್ರಿಲ್ 22ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ.

Income Tax: ಲಕ್ಷುರಿ ವಸ್ತುಗಳಿಗೆ ಟಿಸಿಎಸ್: ಅಧಿಸೂಚನೆ ಪ್ರಕಟ; ಇಲ್ಲಿದೆ ಐಷಾರಾಮಿ ವಸ್ತುಗಳ ಪಟ್ಟಿ
ಆದಾಯ ತೆರಿಗೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 23, 2025 | 2:27 PM

Share

ನವದೆಹಲಿ, ಏಪ್ರಿಲ್ 23: ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚು ಬೆಲೆಯ ನಿರ್ದಿಷ್ಟ ಐಷಾರಾಮಿ ವಸ್ತುಗಳ ಮೇಲೆ ಶೇ. 1ರಷ್ಟು ಟಿಸಿಎಸ್ ಆದಾಯ ತೆರಿಗೆ (TCS) ವಿಧಿಸುವ ಕ್ರಮವನ್ನು ಜಾರಿಗೊಳಿಸಲಾಗುತ್ತದೆ. ಈ ಸಂಬಂಧ ಕೇಂದ್ರೀಯ ನೇರ ತೆರಿಗೆ ಮಂಡಳಿಯಾದ ಸಿಬಿಡಿಟಿ ಎರಡು ಅಧಿಸೂಚನೆಗಳನ್ನು ನೀಡಿದೆ. ಮೊದಲ ಅಧಿಸೂಚನೆಯಲ್ಲಿ, ಟಿಸಿಎಸ್ ತೆರಿಗೆ ವಿಧಿಸಲಾಗುವ ಐಷಾರಾಮಿ ವಸ್ತುಗಳ ಪಟ್ಟಿ ಇದೆ. ಎರಡನೇ ಅಧಿಸೂಚನೆಯಲ್ಲಿ, ಈ ಐಷಾರಾಮಿ ವಸ್ತುಗಳ ಮೇಲೆ ಟಿಸಿಎಸ್ ವಿಧಿಸಲು ಕನಿಷ್ಠ ಬೆಲೆ ಮಟ್ಟವನ್ನು ನಮೂದಿಸಲಾಗಿದೆ.

ಕಳೆದ ವರ್ಷದ ಬಜೆಟ್​​ನಲ್ಲೇ (2024ರ ಜುಲೈ) ಲಕ್ಷುರಿ ವಸ್ತುಗಳ ಮೇಲೆ ಟಿಸಿಎಸ್ ವಿಧಿಸುವ ಕ್ರಮವನ್ನು ಘೋಷಿಸಲಾಗಿತ್ತು. 2025ರ ಜನವರಿ 1ರಿಂದಲೇ ಈ ಕ್ರಮ ಜಾರಿಗೊಳಿಸುವ ನಿರೀಕ್ಷೆ ಇತ್ತು. ಆದರೆ, ಇನ್ನೂ ಕೂಡ ಅಧಿಸೂಚನೆ ಪ್ರಕಟಿಸಿರಲಾಗಲಿಲ್ಲ. ಇದೀಗ ನಿನ್ನೆ (ಏಪ್ರಿಲ್ 22) ಅಧಿಸೂಚನೆ ಹೊರಡಿಸಲಾಗಿದೆ. ಇದರೊಂದಿಗೆ, ಲಕ್ಷುರಿ ವಸ್ತುಗಳ ಮೇಲೆ ಶೇ. 1ರಷ್ಟು ಟಿಸಿಎಸ್ ವಿಧಿಸುವ ನಿಯಮ ನಿನ್ನೆಯಿಂದ ಜಾರಿಗೆ ಬಂದಿದೆ. ಬಜೆಟ್​​ನಲ್ಲಿ ಘೋಷಣೆಯಾದಂತೆ 2025ರ ಜನವರಿ 1ರಿಂದ ಅದು ಜಾರಿ ಇರುವುದಿಲ್ಲ. ಏಪ್ರಿಲ್ 22ಕ್ಕೆ ಮುನ್ನ ಖರೀದಿಸಲಾದ ಐಷಾರಾಮಿ ವಸ್ತುಗಳಿಗೆ ಟಿಸಿಎಸ್ ಅನ್ವಯ ಆಗೋದಿಲ್ಲ. ಏಪ್ರಿಲ್ 22ರಿಂದ ಅದು ಚಾಲನೆಯಲ್ಲಿರುತ್ತದೆ.

ಇದನ್ನೂ ಓದಿ: ಆಸ್ತಿ ಮಾರಲ್ಲ, ಸಾಲ ಬಿಡಲ್ಲ… ಶ್ರೀಮಂತರ ಟ್ರಿಕ್ಸ್ ಹೀಗಿರುತ್ತೆ ನೋಡಿ

ಇದನ್ನೂ ಓದಿ
Image
ಸಾಲ ಉಪಯೋಗಿಸಿ ಶ್ರೀಮಂತರಾಗೋದು ಹೇಗೆ?
Image
ಷೇರುಪೇಟೆಯಲ್ಲಿ ಗೆಲ್ಲೋದು ಹೇಗೆ? ಶ್ರೀಮಂತರಾಗುವ 7 ಟ್ರಿಕ್ಸ್
Image
ಹಳೆಯ ಬ್ಯಾಂಕ್ ಅಕೌಂಟ್ ಮುಚ್ಚಿದರೆ ಸಮಸ್ಯೆಯಾ?
Image
ಕ್ರೆಡಿಟ್ ಸ್ಕೋರ್ ಇಲ್ಲದವರಿಗೆ ಸಿಗಲ್ವಾ ಸಾಲ?

ಟಿಸಿಎಸ್ ಅನ್ವಯ ಆಗುವ ಐಷಾರಾಮಿ ವಸ್ತುಗಳ ಪಟ್ಟಿ

ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಕಾರ, ಲಕ್ಷುರಿ ವಸ್ತುಗಳ ಮೇಲಿನ ಟಿಸಿಎಸ್ ಅನ್ನು ಗ್ರಾಹಕರಿಂದ ಮಾರಾಟಗಾರರೇ ನೇರವಾಗಿ ಸಂಗ್ರಹಿಸುತ್ತಾರೆ. ಈ ಐಷಾರಾಮಿ ವಸ್ತುಗಳ ಪಟ್ಟಿ ಇಲ್ಲಿದೆ:

  • ಕೈಗಡಿಯಾರ (ವಾಚು)
  • ಪೇಂಟಿಂಗ್, ಶಿಲ್ಪ ಇತ್ಯಾದಿ ಕಲಾ ವಸ್ತು
  • ಕಾಯಿನ್, ಸ್ಟ್ಯಾಂಪ್ ಇತ್ಯಾದಿ ಸಂಗ್ರಹಯೋಗ್ಯ ವಸ್ತು
  • ಯಾಚ್, ರೋವಿಂಗ್ ಬೋಟ್, ಹೆಲಿಕಾಪ್ಟರ್
  • ಸನ್​ಗ್ಲಾಸ್
  • ಹ್ಯಾಂಡ್​ಬ್ಯಾಗ್, ಪರ್ಸ್
  • ಶೂ
  • ಗೋಲ್ಫ್ ಕಿಟ್, ಸ್ಕೈವೇರ್ ಇತ್ಯಾದಿ ಉಪಕರಣ, ಸ್ಪೋರ್ಟ್ಸ್​​ವೇರ್​ಗಳು
  • ಹೋಮ್ ಥಿಯೇಟರ್ ಸಿಸ್ಟಂ
  • ಪೋಲೋ ಕ್ರೀಡೆ ಮತ್ತು ಹಾರ್ಸ್ ರೇಸಿಂಗ್​​ಗೆ ಉಪಯೋಗಿಸುವ ಕುದುರೆ

ಈ ಮೇಲಿನ ವಸ್ತುಗಳ ಖರೀದಿಸಿದಾಗ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 206ಸಿ ಅಡಿ ಟಿಸಿಎಸ್ ಅನ್ವಯ ಆಗುತ್ತದೆ.

10 ಲಕ್ಷ ರೂ ಒಳಗಿನ ವಸ್ತುಗಳಿಗೆ ಟಿಸಿಎಸ್ ಇರುವುದಿಲ್ಲ…

ಟಿಸಿಎಸ್ ಎಂಬುದು ಮೂಲದಲ್ಲೇ ಕಡಿತ ಮಾಡಲಾಗುವ ತೆರಿಗೆಯಾಗಿದೆ. ಇದು ಜಿಎಸ್​​ಟಿಗೆ ಹೆಚ್ಚುವರಿಯಾಗಿ ವಿಧಿಸಲಾಗುವ ಆದಾಯ ತೆರಿಗೆಯಾಗಿದೆ. ಮೇಲೆ ತಿಳಿಸಲಾದ ಐಷಾರಾಮಿ ವಸ್ತುವಿನ ಬೆಲೆ 10 ಲಕ್ಷ ರೂ ಹಾಗೂ ಮೇಲ್ಪಟ್ಟು ಇದ್ದರೆ ಮಾತ್ರವೇ ಟಿಸಿಎಸ್ ವಿಧಿಸಲಾಗುತ್ತದೆ. 10 ಲಕ್ಷ ರೂ ಒಳಗಿನ ವಸ್ತುಗಳಿಗೆ ಟಿಸಿಎಸ್ ಇರುವುದಿಲ್ಲ.

ಇದನ್ನೂ ಓದಿ:  ನೀವು ಒಡವೆ ಇಟ್ಟರೆ ಶೇ. 90 ಅಲ್ಲ, ಶೇ. 75 ಸಾಲ ಸಿಗುವುದೂ ಕಷ್ಟವಾಗಬಹುದು

ನೀವು 10 ಲಕ್ಷ ರೂ ಮೇಲ್ಪಟ್ಟ ಬೆಲೆಯ ಹೋಮ್ ಥಿಯೇಟರ್ ಖರೀದಿಸಿದರೆ ಶೇ. 1 ಟಿಸಿಎಸ್ ಅನ್ವಯ ಆಗುತ್ತದೆ. 20 ಲಕ್ಷ ರೂ ಮೌಲ್ಯದ ಐಷಾರಾಮಿ ವಸ್ತು ಖರೀದಿಸಿದರೆ 20,000 ರೂ ಟಿಸಿಎಸ್ ಪಾವತಿಸಬೇಕಾಗುತ್ತದೆ. ಅಂದರೆ, ಮಾರಾಟಗಾರರು ನಿಮ್ಮಿಂದ 20 ಲಕ್ಷ ರೂ ಬದಲು 20,20,000 ರೂ ಪಡೆಯುತ್ತಾರೆ.

ಐಟಿಆರ್ ಮೂಲಕ ರೀಫಂಡ್ ಅವಕಾಶ…

ನೀವು ಐಷಾರಾಮಿ ವಸ್ತುವನ್ನು ಖರೀದಿಸಿದಾಗ ಮಾರಾಟಗಾರರು ನಿಮ್ಮಿಂದ ಟಿಸಿಎಸ್ ಸಂಗ್ರಹಿಸುತ್ತಾರೆ. ನಿಮ್ಮ ಪ್ಯಾನ್ ನಂಬರ್​​ಗೆ ಈ ಟಿಸಿಎಸ್ ಪಾವತಿಯನ್ನು ಸೇರಿಸುತ್ತಾರೆ. ವರ್ಷದ ಕೊನೆಯಲ್ಲಿ ಸಲ್ಲಿಸಲಾಗುವ ಐಟಿ ರಿಟರ್ನ್ಸ್ ವೇಳೆ, ಸಾಧ್ಯವಾದರೆ ರೀಫಂಡ್ ಪಡೆಯುವ ಅವಕಾಶ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ