IPL 2025: ‘ಅದ್ಭುತ ಆತ್ಮವಿಶ್ವಾಸ’; ಲೈವ್ನಲ್ಲೇ ರಾಜಸ್ಥಾನ್ ತಂಡವನ್ನು ಟ್ರೋಲ್ ಮಾಡಿದ ರೈನಾ
Rajasthan Royals IPL 2025 Slump: ರಾಜಸ್ಥಾನ್ ರಾಯಲ್ಸ್ ತಂಡವು ಐಪಿಎಲ್ 2025ರಲ್ಲಿ ನಿರೀಕ್ಷೆಯಂತೆ ಆಡದಿರುವುದು ಎಲ್ಲರನ್ನೂ ಆಶ್ಚರ್ಯಗೊಳಿಸಿದೆ. ಕಳೆದ ಎರಡು ಪಂದ್ಯಗಳಲ್ಲಿ ಗೆಲ್ಲುವ ಅವಕಾಶವಿದ್ದರೂ ಸೋತಿದೆ. ಈ ಸೋಲುಗಳಿಗೆ ಸುರೇಶ್ ರೈನಾ ಕಾಮೆಂಟರಿಯಲ್ಲಿ ವ್ಯಂಗ್ಯವಾಡಿದ್ದಾರೆ. ರಾಜಸ್ಥಾನ್ ತಂಡದ ಆತ್ಮವಿಶ್ವಾಸದ ಕೊರತೆ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿನ ದೌರ್ಬಲ್ಯಗಳನ್ನು ರೈನಾ ಟೀಕಿಸಿದ್ದಾರೆ.

ಐಪಿಎಲ್ 2025 (IPL 2025) ರಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡದ ಪ್ರದರ್ಶನ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಕಳೆದ ಸೀಸನ್ವರೆಗೂ ಅತ್ಯುತ್ತಮ ಪ್ರದರ್ಶನ ನೀಡಿದ ತಂಡಗಳಲ್ಲಿ ಒಂದಾಗಿದ್ದ ರಾಜಸ್ಥಾನ ಈ ಬಾರಿ ನಿರಂತರವಾಗಿ ವೈಫಲ್ಯ ಅನುಭವಿಸುತ್ತಿದೆ. ಅದರಲ್ಲೂ ಕೊನೆಯ 2 ಪಂದ್ಯಗಳಲ್ಲಿ ತಂಡದ ಪ್ರದರ್ಶನ ಎಲ್ಲರಲ್ಲೂ ಅಚ್ಚರಿ ತರಿಸಿದೆ. ಏಕೆಂದರೆ ಆ ಎರಡು ಪಂದ್ಯಗಳಲ್ಲಿ ಗೆಲ್ಲುವ ಸ್ಥಿತಿಯಲ್ಲಿದ್ದರೂ ರಾಜಸ್ಥಾನ್ ಸೋತಿತು. ತಂಡದ ಈ ಸ್ಥಿತಿಯನ್ನು ನೋಡಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದ ವೇಳೆ, ಮಾಜಿ ಶ್ರೇಷ್ಠ ಬ್ಯಾಟ್ಸ್‌ಮನ್ ಸುರೇಶ್ ರೈನಾ (Suresh Raina), ಕಾಮೆಂಟರಿಯಲ್ಲಿಯೇ ರಾಜಸ್ಥಾನ ರಾಯಲ್ಸ್ ತಂಡವನ್ನು ಟ್ರೋಲ್ ಮಾಡಿದ್ದಾರೆ.
ಟ್ರೋಲ್ ಮಾಡಿದ ರೈನಾ
ಏಪ್ರಿಲ್ 24, ಗುರುವಾರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ 42 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾದವು. ಈ ಪಂದ್ಯದಲ್ಲಿ ಖಾಯಂ ನಾಯಕ ಸಂಜು ಸ್ಯಾಮ್ಸನ್ ಆಡದ ಕಾರಣ ಮತ್ತೊಮ್ಮೆ ರಿಯಾನ್ ಪರಾಗ್ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಈ ಪಂದ್ಯದಲ್ಲಿ ಟಾಸ್ ಗೆದ್ದ ಪರಾಗ್, ಈ ಮೈದಾನದಲ್ಲಿ ಎಲ್ಲಾ ತಂಡಗಳು ತೆಗೆದುಕೊಳ್ಳುತ್ತಿದ್ದ ನಿರ್ಧಾರವನ್ನೇ ತೆಗೆದುಕೊಂಡು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಈ ನಿರ್ಧಾರವು ಕಾಮೆಂಟರಿ ಮಾಡುತ್ತಿದ್ದ ಸುರೇಶ್ ರೈನಾ ಅವರನ್ನು ಅಚ್ಚರಿಗೊಳಿಸಿತು.
ಬೆಂಗಳೂರು ತಂಡ ಬ್ಯಾಟಿಂಗ್ ಆರಂಭಿಸಿದ ತಕ್ಷಣ, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹಿಂದಿಯಲ್ಲಿ ಕಾಮೆಂಟ್ ಮಾಡುತ್ತಿದ್ದ ಸುರೇಶ್ ರೈನಾ, ರಾಜಸ್ಥಾನ್ ರಾಯಲ್ಸ್ ತಂಡವನ್ನು ಅಣಕಿಸಿದರು. ರಾಜಸ್ಥಾನದ ನಿರ್ಧಾರದ ಬಗ್ಗೆ ಮಾತನಾಡಿದ ರೈನಾ, ‘ರಾಜಸ್ಥಾನ್ ತಂಡ ಅದ್ಭುತ ಆತ್ಮವಿಶ್ವಾಸವನ್ನು ಹೊಂದಿದೆ. ಕಳೆದ ಎರಡು ಪಂದ್ಯಗಳಲ್ಲಿ ಅವರು ಚೇಸಿಂಗ್ ಮಾಡುವಾಗ ಸತತವಾಗಿ ಸೋತಿದ್ದಾರೆ. ಇದರ ನಂತರವೂ ಇಂದಿನ ಪಂದ್ಯದಲ್ಲಿ ಅವರು ಚೇಸಿಂಗ್ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಿದರು.
RCB vs RR Live Score, IPL 2025: ಅರ್ಧಶತಕ ಪೂರೈಸಿದ ವಿರಾಟ್ ಕೊಹ್ಲಿ
ರೈನಾ ಗೇಲಿ ಮಾಡಲು ಕಾರಣವೇನು?
ವಾಸ್ತವವಾಗಿ, ಈ ಪಂದ್ಯಕ್ಕೂ ಮೊದಲು, ರಾಜಸ್ಥಾನ ರಾಯಲ್ಸ್ ಕಳೆದ 4 ಸತತ ಪಂದ್ಯಗಳಲ್ಲಿ ಸೋಲನ್ನು ಎದುರಿಸಬೇಕಾಯಿತು. ಇವುಗಳಲ್ಲಿ, ಕೊನೆಯ 2 ಪಂದ್ಯಗಳು ಅತ್ಯಂತ ಆಶ್ಚರ್ಯಕರವಾಗಿದ್ದವು ಏಕೆಂದರೆ ಈ ಎರಡೂ ಪಂದ್ಯಗಳಲ್ಲಿ ತಂಡವು ಗೆಲ್ಲುವ ಸ್ಥಿತಿಯಲ್ಲಿದ್ದರೂ ಸೋತಿತು. ಮೊದಲು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕೊನೆಯ ಓವರ್‌ನಲ್ಲಿ ತಂಡವು ಗೆಲ್ಲಲು 9 ರನ್ ಗಳಿಸಲು ಸಾಧ್ಯವಾಗಲಿಲ್ಲ. ನಂತರ ಸೂಪರ್ ಓವರ್‌ನಲ್ಲಿ ಸೋತಿತು. ಇದಾದ ನಂತರ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಮುಂದಿನ ಪಂದ್ಯದಲ್ಲಿಯೂ ಕೊನೆಯ ಓವರ್‌ನಲ್ಲಿ 9 ರನ್ ಬಾರಿಸಲು ಸಾಧ್ಯವಾಗದೆ ಸೋಲೊಪ್ಪಿಕೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ