AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs RR Highlights, IPL 2025: ತವರಿನಲ್ಲಿ ಕೊನೆಗೂ ಗೆದ್ದ ಆರ್​ಸಿಬಿ

ಪೃಥ್ವಿಶಂಕರ
|

Updated on:Apr 24, 2025 | 11:42 PM

Royal Challengers Bengaluru vs Rajasthan Royals Highlights in Kannada: ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡವು ರಾಜಸ್ಥಾನ ತಂಡವನ್ನು 11 ರನ್‌ಗಳಿಂದ ಸೋಲಿಸಿ ಈ ಸೀಸನ್​ನಲ್ಲಿ ಮೊದಲ ಬಾರಿಗೆ ತವರಿನಲ್ಲಿ ಗೆಲುವು ಸಾಧಿಸಿತು. ಆರನೇ ಗೆಲುವಿನೊಂದಿಗೆ ಆರ್‌ಸಿಬಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತಲುಪಿದೆ. ವಿರಾಟ್ ಕೊಹ್ಲಿ 70 ರನ್ ಗಳಿಸಿದರೆ, ಪಡಿಕ್ಕಲ್ 50 ರನ್ ಗಳಿಸಿದರು. ಬೌಲಿಂಗ್‌ನಲ್ಲಿ ಹ್ಯಾಜಲ್‌ವುಡ್ 4 ವಿಕೆಟ್‌ಗಳನ್ನು ಪಡೆಯುವ ಮೂಲಕ ಗೆಲುವಿಗೆ ನೆರವಾದರು.

RCB vs RR Highlights, IPL 2025: ತವರಿನಲ್ಲಿ ಕೊನೆಗೂ ಗೆದ್ದ ಆರ್​ಸಿಬಿ
Rcb Win

ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರಿನಲ್ಲಿ ಸೋಲಿನ ಸರಣಿಗೆ ಕೊನೆಗೂ ಅಂತ್ಯ ಹಾಡಿತು. ಈ ಮೈದಾನದಲ್ಲಿ ಕಳೆದ 3 ಸತತ ಪಂದ್ಯಗಳಲ್ಲಿ ಸೋತಿದ್ದ ರಜತ್ ಪಟಿದಾರ್ ನೇತೃತ್ವದ ತಂಡವು ರೋಮಾಂಚಕ ಪಂದ್ಯದಲ್ಲಿ ಬಲಿಷ್ಠ ಪುನರಾಗಮನ ಮಾಡಿ ರಾಜಸ್ಥಾನ ರಾಯಲ್ಸ್ ತಂಡವನ್ನು 11 ರನ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರ ಅರ್ಧಶತಕಗಳ ನೆರವಿನಿಂದ 205 ರನ್ ಗಳಿಸಿತು. ಇದಾದ ನಂತರ, ಯಶಸ್ವಿ ಜೈಸ್ವಾಲ್ ಮತ್ತು ಧ್ರುವ್ ಜುರೆಲ್ ಅವರ ಬಲವಾದ ಇನ್ನಿಂಗ್ಸ್ ರಾಜಸ್ಥಾನಕ್ಕೆ ಗೆಲುವಿನ ಭರವಸೆ ನೀಡಿತು. ಆದರೆ ಜೋಶ್ ಹ್ಯಾಜಲ್‌ವುಡ್ ಮತ್ತು ಕೃನಾಲ್ ಪಾಂಡ್ಯ ತಮ್ಮ ಅತ್ಯುತ್ತಮ ಬೌಲಿಂಗ್ ಮೂಲಕ ಪಂದ್ಯವನ್ನು ತಿರುಗಿಸಿ ಬೆಂಗಳೂರಿಗೆ ಸ್ಮರಣೀಯ ಗೆಲುವು ತಂದುಕೊಟ್ಟರು.

LIVE NEWS & UPDATES

The liveblog has ended.
  • 24 Apr 2025 11:32 PM (IST)

    ಆರ್​ಸಿಬಿಗೆ ಗೆಲುವು

    ಬೆಂಗಳೂರು ತಂಡವು ರಾಜಸ್ಥಾನವನ್ನು 11 ರನ್‌ಗಳಿಂದ ಸೋಲಿಸಿ ತವರಿನಲ್ಲಿ ಮೊದಲ ಪಂದ್ಯವನ್ನು ಗೆದ್ದುಕೊಂಡಿದೆ. ಈ ಆರನೇ ಗೆಲುವಿನೊಂದಿಗೆ ಆರ್‌ಸಿಬಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತಲುಪಿದೆ. ವಿರಾಟ್ ಕೊಹ್ಲಿ 70 ರನ್ ಗಳಿಸಿದರೆ, ಪಡಿಕ್ಕಲ್ 50 ರನ್ ಗಳಿಸಿದರು. ಬೌಲಿಂಗ್‌ನಲ್ಲಿ ಹ್ಯಾಜಲ್‌ವುಡ್ 4 ವಿಕೆಟ್‌ಗಳನ್ನು ಪಡೆಯುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

  • 24 Apr 2025 11:31 PM (IST)

    ಕೊನೆಯ ಓವರ್‌ನಲ್ಲಿ 17 ರನ್‌ ಬೇಕು

    ಕೊನೆಯ ಓವರ್‌ನಲ್ಲಿ ರಾಜಸ್ಥಾನ್ ರಾಯಲ್ಸ್‌ಗೆ 17 ರನ್‌ಗಳು ಬೇಕಾಗಿದ್ದವು. ಶುಭಂ ದುಬೆ ಮತ್ತು ಹಸರಂಗ ಕ್ರೀಸ್‌ನಲ್ಲಿದ್ದಾರೆ. ಕೊನೆಯ ಓವರ್ ಅನ್ನು ಯಶ್ ದಯಾಳ್ ಬೌಲ್ ಮಾಡಲಿದ್ದಾರೆ.

  • 24 Apr 2025 11:31 PM (IST)

    ಹ್ಯಾಝಲ್‌ವುಡ್‌ ಅದ್ಭುತ ಬೌಲಿಂಗ್

    ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆಯುವ ಮೂಲಕ ಹ್ಯಾಜಲ್‌ವುಡ್ ಪಂದ್ಯವನ್ನು ಆರ್‌ಸಿಬಿ ಪರವಾಗಿ ತಿರುಗಿಸಿದರು. 2 ಓವರ್‌ಗಳಲ್ಲಿ 18 ರನ್‌ಗಳು ಬೇಕಾಗಿದ್ದವು, ಈಗ 8 ಎಸೆತಗಳಲ್ಲಿ 17 ರನ್‌ಗಳು ಬೇಕಾಗಿವೆ. ಎರಡು ವಿಕೆಟ್‌ಗಳು ಕೂಡ ಬಿದ್ದಿವೆ.

  • 24 Apr 2025 11:31 PM (IST)

    ಜುರೆಲ್ ಔಟ್

    ಧ್ರುವ್ ಜುರೆಲ್ 47 ರನ್ ಗಳಿಸಿ ಔಟಾದರು, ರಾಜಸ್ಥಾನಕ್ಕೆ ಆರನೇ ಹೊಡೆತ. ಜೋಶ್ ಹ್ಯಾಜಲ್‌ವುಡ್ ವಿಕೆಟ್ ಪಡೆದರು.

  • 24 Apr 2025 11:19 PM (IST)

    ಭುವಿ ದುಬಾರಿ

    18ನೇ ಓವರ್- ಭುವನೇಶ್ವರ್ ಕುಮಾರ್ ಎಸೆದ ಮೊದಲ ಎಸೆತದಲ್ಲಿ ಧ್ರುವ್ ಜುರೆಲ್ ಸಿಕ್ಸರ್ ಬಾರಿಸಿದರು. ಮೂರನೇ ಎಸೆತದಲ್ಲೂ ಸಿಕ್ಸರ್ ಬಂತು. ಐದನೇ ಮತ್ತು ಕೊನೆಯ ಎಸೆತದಲ್ಲಿ ಜುರೇಲ್ ಬೌಂಡರಿ ಬಾರಿಸಿದರು. ಈ ಓವರ್‌ನಲ್ಲಿ 22 ರನ್‌ ಬಂದವು.

  • 24 Apr 2025 11:09 PM (IST)

    4 ಓವರ್‌ ಬಾಕಿ

    16ನೇ ಓವರ್- ಕೃನಾಲ್ ಪಾಂಡ್ಯ ಅವರ ಕೊನೆಯ ಓವರ್ ದುಬಾರಿಯಾಗಿ ಪರಿಣಮಿಸಿತು. 12 ರನ್‌ಗಳು ಬಂದವು. ಧ್ರುವ್ ಜುರೆಲ್ ಅದ್ಭುತ ಸಿಕ್ಸರ್ ಬಾರಿಸಿದರು. 16 ಓವರ್‌ಗಳ ನಂತರ ರಾಜಸ್ಥಾನದ ಸ್ಕೋರ್ 160 ರನ್‌ಗಳು.

  • 24 Apr 2025 11:07 PM (IST)

    ರಾಣಾ ಔಟ್

    ನಿತೀಶ್ ರಾಣಾ 28 ರನ್ ಗಳಿಸಿ ಔಟಾದರು. ಕೃನಾಲ್ ಪಾಂಡ್ಯ ಮತ್ತೊಂದು ವಿಕೆಟ್ ಪಡೆದರು. ಭುವಿ ಅದ್ಭುತ ಕ್ಯಾಚ್ ಹಿಡಿದರು. ರಾಜಸ್ಥಾನ ತಂಡ ಸಂಕಷ್ಟದಲ್ಲಿದೆ.

  • 24 Apr 2025 10:46 PM (IST)

    12 ಓವರ್‌ಗಳಲ್ಲಿ 128

    ರಾಜಸ್ಥಾನದ ಸ್ಕೋರ್ 12 ಓವರ್‌ಗಳಲ್ಲಿ 128 ರನ್‌ ಆಗಿದೆ. ಕೃನಾಲ್ ಪಾಂಡ್ಯ ಅವರ ಓವರ್‌ನಲ್ಲಿ 8 ರನ್‌ಗಳು ಬಂದವು. 2 ಓವರ್‌ಗಳಲ್ಲಿ ಕೇವಲ 11 ರನ್‌ಗಳನ್ನು ನೀಡಲಾಗಿದೆ. ಉತ್ತಮ ಬೌಲಿಂಗ್.

  • 24 Apr 2025 10:46 PM (IST)

    ನಾಯಕ ಔಟ್

    ರಿಯಾನ್ ಪರಾಗ್ ಔಟಾಗಿದ್ದಾರೆ. ಕೃನಾಲ್ ಪಾಂಡ್ಯ ಬಂದ ತಕ್ಷಣ ಮೊದಲ ಎಸೆತದಲ್ಲೇ ವಿಕೆಟ್ ಪಡೆದರು. ಜಿತೇಶ್ ಶರ್ಮಾಗೆ ಸುಲಭ ಕ್ಯಾಚ್.

  • 24 Apr 2025 10:36 PM (IST)

    9 ಓವರ್‌ಗಳಲ್ಲಿ 110 ರನ್‌

    ರಾಜಸ್ಥಾನ್ ರಾಯಲ್ಸ್ 9 ಓವರ್‌ಗಳಲ್ಲಿ 110 ರನ್ ಗಳಿಸಿದೆ. ಯಶ್ ದಯಾಳ್ ಸಾಕಷ್ಟು ದುಬಾರಿ ಎಂದು ಸಾಬೀತಾಗುತ್ತಿದೆ. ಎರಡನೇ ಓವರ್‌ನಲ್ಲಿ 11 ರನ್‌ಗಳನ್ನು ನೀಡಿದರು. ಈ ಆರ್‌ಸಿಬಿ ವೇಗಿ 2 ಓವರ್‌ಗಳಲ್ಲಿ 29 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ.

  • 24 Apr 2025 10:36 PM (IST)

    ಪವರ್‌ಪ್ಲೇನಲ್ಲಿ 72 ರನ್‌

    ರಾಜಸ್ಥಾನಕ್ಕೆ ಪವರ್ ಪ್ಲೇ ಉತ್ತಮವಾಗಿತ್ತು. ರಾಜಸ್ಥಾನ ತಂಡ 72 ರನ್ ಗಳಿಸಿದ್ದರೂ, ಎರಡು ವಿಕೆಟ್‌ಗಳು ಬಿದ್ದಿವೆ.

  • 24 Apr 2025 10:06 PM (IST)

    ಜೈಸ್ವಾಲ್ ಔಟ್

    ಯಶಸ್ವಿ ಜೈಸ್ವಾಲ್ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದರು. ಅವರು ಹ್ಯಾಝೆಲ್‌ವುಡ್ ಓವರ್‌ನಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು ಆದರೆ ಐದನೇ ಎಸೆತದಲ್ಲಿ ಕ್ಯಾಚ್ ನೀಡಿದರು. 19 ಎಸೆತಗಳಲ್ಲಿ 49 ರನ್ ಗಳಿಸಿ ಜೈಸ್ವಾಲ್ ಔಟಾದರು.

  • 24 Apr 2025 10:01 PM (IST)

    5 ಓವರ್‌ಗಳು 58 ರನ್‌

    ರಾಜಸ್ಥಾನ್ ರಾಯಲ್ಸ್ ತಂಡದ ರನ್ ರೇಟ್ ಪ್ರತಿ ಓವರ್‌ಗೆ ಸರಿಸುಮಾರು 12 ರನ್‌ಗಳು. ಬಂದ ಕೂಡಲೇ ನಿತೀಶ್ ರಾಣಾ ಕೂಡ ಸಿಕ್ಸರ್ ಹೊಡೆದರು. ಮತ್ತೊಂದೆಡೆ, ಯಶಸ್ವಿ ಜೈಸ್ವಾಲ್ 35 ರನ್ ಗಳಿಸಿದ್ದಾರೆ.

  • 24 Apr 2025 10:01 PM (IST)

    ವೈಭವ್ ಔಟ್

    ರಾಜಸ್ಥಾನ್ ರಾಯಲ್ಸ್ 4.1 ಓವರ್‌ಗಳಲ್ಲಿ ಅರ್ಧಶತಕ ಪೂರೈಸಿದೆ. ವೈಭವ್ ಸೂರ್ಯವಂಶಿ ಸಿಕ್ಸರ್ ಬಾರಿಸಿದರು. ಆದರೆ ಮುಂದಿನ ಎಸೆತದಲ್ಲೇ ಅವರು ಬೌಲ್ಡ್ ಆದರು.

  • 24 Apr 2025 09:46 PM (IST)

    ಮೊದಲ ಎಸೆತದಲ್ಲೇ ಸಿಕ್ಸ್

    ಭುವಿ ಮೊದಲ ಎಸೆತದಲ್ಲೇ ಸಿಕ್ಸ್ ಬಾರಿಸಿದ ಯಶಸ್ವಿ ಜೈಸ್ವಾಲ್ ಅವರ ಆರಂಭ ಅದ್ಭುತವಾಗಿತ್ತು. ಯಶಸ್ವಿ ಜೈಸ್ವಾಲ್ ಅವರಿಂದ ಅದ್ಭುತ ಸ್ಟ್ರೋಕ್

  • 24 Apr 2025 09:24 PM (IST)

    205 ರನ್ ಟಾರ್ಗೆಟ್

    ಆರ್‌ಸಿಬಿ 205 ರನ್ ಗಳಿಸಿತು. ತಂಡದ ಪರ ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ 70 ರನ್ ಮತ್ತು ದೇವದತ್ ಪಡಿಕಲ್ 27 ಎಸೆತಗಳಲ್ಲಿ 50 ರನ್ ಗಳಿಸಿದರು. ಟಿಮ್ ಡೇವಿಡ್ 23 ರನ್ ಗಳಿಸಿದರೆ ಜಿತೇಶ್ ಶರ್ಮಾ 20 ರನ್ ಗಳಿಸಿ ಅಜೇಯರಾಗಿ ಉಳಿದರು.

  • 24 Apr 2025 09:19 PM (IST)

    ಸಂದೀಪ್ ದುಬಾರಿ

    ಸಂದೀಪ್ ಶರ್ಮಾ ಓವರ್​ನಲ್ಲಿ 16 ರನ್‌ ಬಂದವು. ಆ ಓವರ್‌ನಲ್ಲಿ ಸಂದೀಪ್ ಮೂರು ವೈಡ್‌ಗಳನ್ನು ಎಸೆದರೆ ಜಿತೇಶ್ ಒಂದು ಬೌಂಡರಿ ಮತ್ತು ಟಿಮ್ ಡೇವಿಡ್ ಒಂದು ಸಿಕ್ಸರ್ ಬಾರಿಸಿದರು.

  • 24 Apr 2025 09:05 PM (IST)

    ಪಾಟಿದಾರ್ ಔಟ್

    ಆರ್‌ಸಿಬಿ ನಾಲ್ಕನೇ ವಿಕೆಟ್ ಕಳೆದುಕೊಂಡಿತು. ಕ್ಯಾಪ್ಟನ್ ರಜತ್ ಪಾಟಿದಾರ್ ಕೂಡ ಸಂದೀಪ್ ಶರ್ಮಾಗೆ ಬಲಿಯಾದರು. ಕೇವಲ 1 ರನ್ ಗಳಿಸಲು ಸಾಧ್ಯವಾಯಿತು.

  • 24 Apr 2025 09:04 PM (IST)

    ಪಡಿಕ್ಕಲ್ ಔಟ್

    17ನೇ ಓವರ್‌ನ ಮೊದಲ ಎಸೆತದಲ್ಲಿ ಆರ್‌ಸಿಬಿಗೆ ದೊಡ್ಡ ಹೊಡೆತ ಬಿದ್ದಿತು, ಸಂದೀಪ್ ಶರ್ಮಾ ಎಸೆತದಲ್ಲಿ ಪಡಿಕ್ಕಲ್ ಔಟಾದರು. 27 ಎಸೆತಗಳಲ್ಲಿ ಐವತ್ತು ರನ್ ಗಳಿಸಿದರು.

  • 24 Apr 2025 08:58 PM (IST)

    ವಿರಾಟ್ 70 ರನ್ ಗಳಿಸಿ ಔಟ್

    ವಿರಾಟ್ ಕೊಹ್ಲಿ 70 ರನ್ ಗಳಿಸಿ ಆರ್ಚರ್ ಅವರ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ದೊಡ್ಡ ಹೊಡೆತ ಹೊಡೆಯಲು ಪ್ರಯತ್ನಿಸಿ ವಿಫಲರಾದರು.

  • 24 Apr 2025 08:47 PM (IST)

    ಪಡಿಕ್ಕಲ್ ಅರ್ಧಶತಕ

    ಪಡಿಕಲ್ 26 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. 15 ಓವರ್‌ಗಳ ನಂತರ ಆರ್‌ಸಿಬಿಯ ಸ್ಕೋರ್ 156 ರನ್‌.

  • 24 Apr 2025 08:41 PM (IST)

    ಕ್ಯಾಚ್ ಮಿಸ್

    ವನಿಂದು ಹಸರಂಗ ಅವರ ಓವರ್‌ನಲ್ಲಿ ಸುಲಭವಾದ ಕ್ಯಾಚ್ ತಪ್ಪಿಸಿಕೊಂಡರು. ದೇಶಪಾಂಡೆ ಪಡಿಕ್ಕಲ್ ಅವರ ಕ್ಯಾಚ್ ಕೈಬಿಟ್ಟರು. ಹಸರಂಗ 4 ಓವರ್‌ಗಳಲ್ಲಿ 30 ರನ್‌ಗಳನ್ನು ಬಿಟ್ಟುಕೊಟ್ಟರು.

  • 24 Apr 2025 08:41 PM (IST)

    ವಿರಾಟ್ ಕೊಹ್ಲಿ ಅರ್ಧಶತಕ

    ವಿರಾಟ್ ಕೊಹ್ಲಿ 32 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಐಪಿಎಲ್ ವೃತ್ತಿಜೀವನದ 60ನೇ ಅರ್ಧಶತಕ, ಈ ಋತುವಿನಲ್ಲಿ ಬೆಂಗಳೂರಿನಲ್ಲಿ ಮೊದಲ ಅರ್ಧಶತಕ.

  • 24 Apr 2025 08:33 PM (IST)

    10 ಓವರ್‌ಗಳಲ್ಲಿ 83

    ಆರ್‌ಸಿಬಿ 10 ಓವರ್‌ಗಳಲ್ಲಿ ಕೇವಲ 83 ರನ್‌ಗಳನ್ನು ಮಾತ್ರ ಗಳಿಸಿದೆ. ಮೊದಲ 6 ಓವರ್‌ಗಳಲ್ಲಿ 59 ರನ್‌ಗಳು ಬಂದವು, ಮುಂದಿನ 4 ಓವರ್‌ಗಳಲ್ಲಿ ಕೇವಲ 24 ರನ್‌ಗಳು ಬಂದವು.

  • 24 Apr 2025 08:25 PM (IST)

    ಕೊನೆಯ 5 ಓವರ್‌ಗಳಲ್ಲಿ 38 ರನ್‌

    ಕೊನೆಯ 5 ಓವರ್‌ಗಳಲ್ಲಿ ಕೇವಲ 38 ರನ್‌ಗಳು ಮಾತ್ರ ಬಂದಿವೆ, ರಾಜಸ್ಥಾನದ ಸ್ಪಿನ್ನರ್‌ಗಳು ಬಂದ ತಕ್ಷಣ ರನ್ ರೇಟ್ ಕುಸಿದಿದೆ.

  • 24 Apr 2025 08:13 PM (IST)

    ಸಾಲ್ಟ್ ಔಟ್

    ಪವರ್‌ಪ್ಲೇ ಮುಗಿದ ಕೂಡಲೇ ಆರ್‌ಸಿಬಿ ಒಂದು ವಿಕೆಟ್ ಕಳೆದುಕೊಂಡಿತು. ಹಸರಂಗ ಅವರ ಓವರ್‌ನಲ್ಲಿ ದೊಡ್ಡ ಶಾಟ್ ಆಡಲು ಪ್ರಯತ್ನಿಸುವಾಗ ಸಾಲ್ಟ್ ಔಟಾದರು. 26 ರನ್ ಗಳಿಸಿದ ನಂತರ ಪೆವಿಲಿಯನ್‌ಗೆ ಮರಳಿದರು.

  • 24 Apr 2025 08:13 PM (IST)

    50 ರನ್ ಪೂರ್ಣ

    5 ಓವರ್‌ಗಳ ನಂತರ ಆರ್‌ಸಿಬಿ ಸ್ಕೋರ್ ಐವತ್ತು ದಾಟಿದೆ. ವಿರಾಟ್ ಮತ್ತು ಸಾಲ್ಟ್ ವಿಭಿನ್ನ ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ತುಷಾರ್ ದೇಶಪಾಂಡೆ ಅವರ ಓವರ್​ನಲ್ಲಿ 14 ರನ್‌ ಬಂದವು

  • 24 Apr 2025 07:59 PM (IST)

    ನಾಲ್ಕನೇ ಓವರ್‌ನಲ್ಲಿ 9 ರನ್‌

    ಫಜಲ್ಹಕ್ ಫಾರೂಕಿ 9 ರನ್ ನೀಡಿದರು. ಫಿಲ್ ಸಾಲ್ಟ್ ಐದನೇ ಎಸೆತದಲ್ಲಿ ಬೌಂಡರಿ ಬಾರಿಸಿದರು.

  • 24 Apr 2025 07:55 PM (IST)

    ಆರ್‌ಸಿಬಿಗೆ ವೇಗದ ಆರಂಭ

    RCBಗೆ ವೇಗದ ಆರಂಭ. 3 ಓವರ್‌ಗಳ ನಂತರ 28 ರನ್‌ಗಳನ್ನು ಗಳಿಸಿದೆ. ಆರ್ಚರ್ ಅವರ ಕೊನೆಯ ಎರಡು ಎಸೆತಗಳಲ್ಲಿ ವಿರಾಟ್ ಕೊಹ್ಲಿ ಬೌಂಡರಿ ಬಾರಿಸಿದರು. ಕೊಹ್ಲಿ ಬೇರೆಯದೇ ಮನಸ್ಥಿತಿಯಲ್ಲಿ ಕಾಣುತ್ತಿದ್ದಾರೆ.

  • 24 Apr 2025 07:43 PM (IST)

    ವಿರಾಟ್ ಫೋರ್

    ಆರ್‌ಸಿಬಿ ಇನ್ನಿಂಗ್ಸ್ ಆರಂಭವಾಗಿದೆ. ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಕ್ರೀಸ್‌ನಲ್ಲಿದ್ದಾರೆ. ಮೊದಲ ಓವರ್​ನಲ್ಲಿ 11 ರನ್ ಬಂದವು

  • 24 Apr 2025 07:12 PM (IST)

    ರಾಜಸ್ಥಾನ್ ರಾಯಲ್ಸ್

    ಯಶಸ್ವಿ ಜೈಸ್ವಾಲ್, ಶುಭಂ ದುಬೆ, ನಿತೀಶ್ ರಾಣಾ, ರಿಯಾನ್ ಪರಾಗ್ (ನಾಯಕ), ಧ್ರುವ ಜುರೆಲ್ (ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಫಜಲ್ಹಕ್ ಫಾರೂಕಿ, ತುಷಾರ್ ದೇಶಪಾಂಡೆ, ಸಂದೀಪ್ ಶರ್ಮಾ.

  • 24 Apr 2025 07:12 PM (IST)

    ರಾಯಲ್ ಚಾಲೆಂಜರ್ಸ್ ಬೆಂಗಳೂರು

    ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ದೇವದತ್ ಪಡಿಕ್ಕಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್.

  • 24 Apr 2025 07:02 PM (IST)

    ಮತ್ತೆ ಟಾಸ್ ಸೋತ ಆರ್​ಸಿಬಿ

    ತವರಿನಲ್ಲಿ ಸತತ 4ನೇ ಪಂದ್ಯದಲ್ಲೂ ಟಾಸ್ ಸೋತ ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡಲಿದೆ.

Published On - Apr 24,2025 7:01 PM

Follow us
ಪಾಟ್ನಾದಲ್ಲಿ 1,200 ಕೋಟಿ ವೆಚ್ಚದ ಟರ್ಮಿನಲ್ ಉದ್ಘಾಟಿಸಿದ ಮೋದಿ
ಪಾಟ್ನಾದಲ್ಲಿ 1,200 ಕೋಟಿ ವೆಚ್ಚದ ಟರ್ಮಿನಲ್ ಉದ್ಘಾಟಿಸಿದ ಮೋದಿ
ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು