ಕೋವಿಡ್- 19 ಕ್ಲೇಮ್​ಗೆ ಆದ್ಯತೆ ನೀಡುವಂತೆ ನಿರ್ದೇಶಿಸಲು ಐಆರ್​ಡಿಎಐಗೆ ಸೂಚಿಸಿದ ನಿರ್ಮಲಾ ಸೀತಾರಾಮನ್

ಕೋವಿಡ್- 19 ಕ್ಲೇಮ್ ವಿಲೇವಾರಿಗೆ ಆದ್ಯತೆ ನೀಡಬೇಕು ಎಂದು ಇನ್ಷೂರೆನ್ಸ್ ಕಂಪೆನಿಗಳಿಗೆ ನಿರ್ದೇಶಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಐಆರ್​ಡಿಎಐ ಅಧ್ಯಕ್ಷರಿಗೆ ಸೂಚಿಸಿದ್ದಾರೆ

ಕೋವಿಡ್- 19 ಕ್ಲೇಮ್​ಗೆ ಆದ್ಯತೆ ನೀಡುವಂತೆ ನಿರ್ದೇಶಿಸಲು ಐಆರ್​ಡಿಎಐಗೆ ಸೂಚಿಸಿದ ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Follow us
Srinivas Mata
|

Updated on: Apr 22, 2021 | 11:55 PM

ಕೋವಿಡ್- 19ಗೆ ಸಂಬಂಧಿಸಿದ ಕ್ಲೇಮ್​ಗಳನ್ನು ಆದ್ಯತೆ ಮೇಲೆ ಅನುಮತಿ ನೀಡಿ, ವಿಲೇವಾರಿ ಮಾಡಬೇಕು ಎಂದು ಕಂಪೆನಿಗಳಿಗೆ ಇನ್ಷೂರೆನ್ಸ್ ನಿಯಂತ್ರಕರು ನಿರ್ದೇಶನ ನೀಡಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದಾರೆ. ಕೆಲವು ಆಸ್ಪತ್ರೆಗಳಲ್ಲಿ ಕ್ಯಾಶ್​ಲೆಸ್ ಇನ್ಷೂರೆನ್ಸ್​ಗಳನ್ನು ನಿರಾಕರಿಸಲಾಗುತ್ತಿದೆ ಎಂಬ ವರದಿಗಳು ಬರುತ್ತಿವೆ. ಇಂಥ ಸನ್ನಿವೇಶವನ್ನು ನಿಭಾಯಿಸುವ ನಿಟ್ಟಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇನ್ಷೂರೆನ್ಸ್ ರೆಗ್ಯುಲೇಟರಿ ಅಂಡ್ ಡೆವಲಪ್​ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐಆರ್​ಡಿಎಐ) ಅಧ್ಯಕ್ಷ ಎಸ್. ಕುಂಠಿಯಾ ಅವರೊಂದಿಗೆ ಮಾತನಾಡಿ, ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

2020ರ ಮಾರ್ಚ್​ನಲ್ಲಿ ಕಾಂಪ್ರಹೆನ್ಸಿವ್ ಹೆಲ್ತ್ ಇನ್ಷೂರೆನ್ಸ್​ನಲ್ಲಿ ಕೋವಿಡ್​-19 ಅನ್ನು ಕೂಡ ಸೇರಿಸಲಾಯಿತು. ಕ್ಯಾಶ್​ಲೆಸ್ ಚಿಕಿತ್ಸೆಯು ನೆಟ್​ವರ್ಕ್ ಅಥವಾ ತಾತ್ಕಾಲಿಕ ಆಸ್ಪತ್ರೆಗಳಲ್ಲೂ ಸಿಗುತ್ತದೆ ಎಂದು ಅವರು ಹೇಳಿದ್ದಾರೆ. ಏಪ್ರಿಲ್ 20ನೇ ತಾರೀಕಿನವರೆಗೆ 9,00,000 ಕೋವಿಡ್- 19 ಆರೋಗ್ಯ ವಿಮೆ ಕ್ಲೇಮ್​ಗಳು, 8,642 ಕೋಟಿ ರೂಪಾಯಿಯನ್ನು ವಿಲೇವಾರಿ ಮಾಡಲಾಗಿದೆ. ಜನರಲ್ ಇನ್ಷೂರರ್​ಗಳಿಗೆ ಹತ್ತಿರ ಹತ್ತಿರ 15,000 ಕೋಟಿ ರೂಪಾಯಿ ಆರೋಗ್ಯ ವಿಮೆ ಕ್ಲೇಮ್​ಗಳು ಕೊರೊನಾವೈರಸ್ ಚಿಕಿತ್ಸೆಗೆ ಸಂಬಂಧಿಸಿದಂತೆಯೇ ಬಂದಿವೆ.

2020ರ ಜುಲೈನಲ್ಲಿ ಐಆರ್​ಡಿಎಐ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿತ್ತು. ಸರ್ಕಾರದಿಂದ ಮಾನ್ಯತೆ ಪಡೆದ ತಾತ್ಕಾಲಿಕ ಆಸ್ಪತ್ರೆಗಳ ಕೋವಿಡ್- 19 ಕ್ಲೇಮ್ ಕೂಡ ಎಲ್ಲ ಜನರಲ್ ಮತ್ತು ಆರೋಗ್ಯ ವಿಮೆ ಒದಗಿಸುವ ಕಂಪೆನಿಗಳು ಪರಿಗಣಿಸಬೇಕು ಎಂದಿತ್ತು. ಅಷ್ಟೇ ಅಲ್ಲ, ಟೆಲಿ- ಕನ್ಸಲ್ಟೇಷನ್​ಗಳನ್ನು ಸಹ ಆರೋಗ್ಯ ವಿಮೆ ಅಡಿ ಪರಿಗಣಿಸುವಂತೆ ಸೂಚಿಸಲಾಗಿತ್ತು. ಆದರೆ ಈ ಹಿಂದೆಯೇ ಹಲವು ಬಾರಿ ಮಾಧ್ಯಮಗಳಲ್ಲಿ ವರದಿ ಆದಂತೆ, ಕೋವಿಡ್-19 ಚಿಕಿತ್ಸಾ ವೆಚ್ಚದ ವಿಚಾರವಾಗಿ ಆಸ್ಪತ್ರೆಗಳು ಮತ್ತು ಇನ್ಷೂರೆನ್ಸ್ ಕಂಪೆನಿಗಳ ಮಧ್ಯೆ ತಿಕ್ಕಾಟಗಳಾಗಿವೆ.

ಆಸ್ಪತ್ರೆಗಳು ಸ್ಟ್ಯಾಂಡರ್ಡ್ ರೇಟ್ ಕಾರ್ಡ್​ಗಳನ್ನು ಅನುಸರಿಸುತ್ತಿಲ್ಲ ಎಂಬುದು ಇನ್ಷೂರೆನ್ಸ್ ಕಂಪೆನಿಗಳ ಆರೋಪ. ಅದನ್ನು 2020ರ ಜೂನ್​ನಲ್ಲಿ ಜನರಲ್ ಇನ್ಷೂರೆನ್ಸ್ ಕೌನ್ಸಿಲ್ ವಿತರಿಸಿತ್ತು. ಇತ್ತ ಆಸ್ಪತ್ರೆಗಳು ಸಹ, ಎಲ್ಲ ರೋಗಿಗಳನ್ನೂ ಮಿತಿ ಹಾಕಿದ ದರದೊಳಗೆ ಗುಣಪಡಿಸುವುದಕ್ಕೆ ಸಾಧ್ಯವಿಲ್ಲ ಎಂದಿದ್ದವು. ಇನ್ನು ಕೋವಿಡ್- 19 ಬಿಕ್ಕಟ್ಟು ಕಾಣಿಸಿಕೊಂಡ ಮೇಲೆ ಆಸ್ಪತ್ರೆಗಳು ಹೇಗೆ ದರಗಳನ್ನು ಏರಿಕೆ ಮಾಡಿವೆ ಎಂಬ ಬಗ್ಗೆಯೂ ಮಾಧ್ಯಮಗಳಲ್ಲಿ ವರದಿ ಆಗಿವೆ. ಇದರಿಂದ ಹೆಚ್ಚಿನ ದರ ಪಾವತಿಸುವಂತಾಗುತ್ತಿದೆ. ಇನ್ಷೂರೆನ್ಸ್ ಪಡೆದವರಿಗೆ ಸಿಕ್ಕಾಪಟ್ಟೆ ದರ ಹಾಕಲಾಗುತ್ತಿದೆ ಎಂಬ ಆರೋಪವೂ ಇದೆ.

ಇದನ್ನೂ ಓದಿ: Health insurance: ಹೆಚ್ಚಿನ ಮೊತ್ತದ ಹೆಲ್ತ್ ಇನ್ಷೂರೆನ್ಸ್ ಖರೀದಿಯೋ ಅಥವಾ ರೀಸ್ಟೋರ್ ಮಾಡಿಸಬೇಕೋ?

(Union finance minister said IRDAI chairman to direct insured company to prioritize covid 19 claim settlement)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್