AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 3ರ ದಿನಭವಿಷ್ಯ

Daily Numerology March 03: ಜನ್ಮಸಂಖ್ಯೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಮಾರ್ಚ್ 3ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 3ರ ದಿನಭವಿಷ್ಯ
ದಿನ ಭವಿಷ್ಯ
ಸ್ವಾತಿ ಎನ್​ಕೆ
| Edited By: |

Updated on:Mar 03, 2026 | 11:26 AM

Share

ಕಾಳಿಕಾ ದೇವಿ ದೇವಸ್ಥಾನಕ್ಕೆ ತೆರಳಿ ದರ್ಶನ ಹಾಗೂ ನಿಮ್ಮಿಂದ ಏನು ಸೇವೆ ಮಾಡಲು ಸಾಧ್ಯವೋ ಅದು ಮಾಡಿಸಿದಲ್ಲಿ ಅಣ್ಣ-ತಮ್ಮ, ಅಕ್ಕ-ತಂಗಿಯರು ಸೋದರ ಸಂಬಂಧಿಗಳ ಮಧ್ಯೆ ವಿರಸ ಏರ್ಪಟ್ಟಿದ್ದಲ್ಲಿ ಅದು ನಿವಾರಣೆ ಆಗಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಕೆಲಸಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಒತ್ತಡ ನಿಮ್ಮ ಮೇಲೆ ಬೀಳಲಿದೆ. ಮೇಲಿಂದ ಮೇಲೆ ಫೋನ್ ಕಾಲ್ ಗಳು, ಕೆಲವು ತಾಂತ್ರಿಕ ಸಮಸ್ಯೆಗಳನ್ನು ನೀವೇ ಬಗೆಹರಿಸಬೇಕು ಎಂದು ಕೇಳಿಕೊಳ್ಳುವುದು ಬಿಡುವಿಲ್ಲದಷ್ಟು ಕೆಲಸಗಳು ಮೈ ಮೇಲೆ ಬರುವಂತೆ ಮಾಡಲಿದೆ. ಹೂಡಿಕೆ ವಿಚಾರಗಳಲ್ಲಿ ದಿಢೀರ್ ನಿರ್ಧಾರಗಳನ್ನು ಮಾಡುವುದಕ್ಕೆ ಹೋಗಬೇಡಿ. ಸ್ವಲ್ಪ ಹಣವನ್ನು ಕೈಯಿಂದ ಕಳೆದುಕೊಳ್ಳುವಂತೆ ಆಗುತ್ತದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ನಿಮಗೆ ಕುಟುಂಬ ಸದಸ್ಯರ ಪೈಕಿ ಯಾರ ಮೇಲಾದರೂ ಆಕ್ಷೇಪ ಇದ್ದಲ್ಲಿ ಅದನ್ನು ನಯವಾಗಿ ಹೇಳಿ ಮುಗಿಸುವುದಕ್ಕೆ ಪ್ರಯತ್ನಿಸಿ. ನಿಮ್ಮ ಕೆಲವು ಸ್ನೇಹಿತರು ಅನಿರೀಕ್ಷಿತವಾಗಿ ದೊಡ್ಡ ಸಹಾಯವನ್ನು ಮಾಡಲಿದ್ದಾರೆ. ಸಂಗಾತಿಯ ಆರೋಗ್ಯ ವಿಚಾರ ಪ್ರಾಮುಖ್ಯವನ್ನು ಪಡೆಯಲಿದೆ. ಆರಂಭದ ಕೆಲವು ಬೆಳವಣಿಗೆಗಳು ಚಿಂತೆಗೆ ಕಾರಣ ಆಗಲಿವೆ. ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್- ಅಸೈನ್ ಮೆಂಟ್ ಗಳನ್ನು ಏಕಾಗ್ರತೆಯಿಂದ ಪೂರ್ಣಗೊಳಿಸುವ ಕಡೆಗೆ ಲಕ್ಷ್ಯ ನೀಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಒಂದು ವೇಳೆ ನೀವೇನಾದರೂ ಪ್ರೀತಿಯಲ್ಲಿ ಇದ್ದೀರಿ ಅಂತಾದಲ್ಲಿ ಸಂಗಾತಿಯ ಕಾಳಜಿಯ ಮಾತುಗಳಿಂದ ಸಂತೋಷ ಆಗಲಿದೆ. ಉದ್ಯೋಗದಲ್ಲಿ ಹಿರಿಯ ಸಹೋದ್ಯೋಗಿಗಳ ಮೆಚ್ಚುಗೆ ಮಾತುಗಳನ್ನು ಕೇಳಿಸಿಕೊಳ್ಳುವ ಯೋಗ ಇದೆ. ವ್ಯಾಪಾರಿಗಳಿಗೆ ಹೊಸ ಒಪ್ಪಂದದ ಚರ್ಚೆ ಯಶಸ್ವಿ ಆಗಲಿದೆ. ಸ್ನೇಹಿತರ ಜೊತೆಗೆ ಅನವಶ್ಯಕ ವಾದ- ವಿವಾದ ಮಾಡಿಕೊಳ್ಳಬೇಡಿ. ಆಹಾರದಲ್ಲಿ ವಿಪರೀತ ಸಿಹಿ– ವಿಪರೀತ ಕಾರದ ಪದಾರ್ಥ ಎರಡೂ ಬೇಡ.

ಲೇಖನ- ಸ್ವಾತಿ ಎನ್.ಕೆ.

Published On - 11:23 am, Tue, 3 March 26

Follow Us
ವ್ಯಾನ್​ಗೆ ಗುದ್ದಿದ ಸ್ಲೀಪರ್ ಬಸ್, 6 ಮಂದಿ ಸಾವು
ವ್ಯಾನ್​ಗೆ ಗುದ್ದಿದ ಸ್ಲೀಪರ್ ಬಸ್, 6 ಮಂದಿ ಸಾವು
ಹೋಳಿ ಆಚರಣೆ ವೇಳೆ ಹೊತ್ತಿಸಿದ್ದ ಬೆಂಕಿ ಮೇಲೆ ನಡೆದ ಕಲಿಯುಗದ ಪ್ರಹ್ಲಾದ
ಹೋಳಿ ಆಚರಣೆ ವೇಳೆ ಹೊತ್ತಿಸಿದ್ದ ಬೆಂಕಿ ಮೇಲೆ ನಡೆದ ಕಲಿಯುಗದ ಪ್ರಹ್ಲಾದ
ರವಿ ಬೆಳೆಗೆರೆ ಕಥೆಗೂ ಇದಕ್ಕೂ ಸಂಬಂಧವಿಲ್ಲ ಎಂದ ಓಂ ಪ್ರಕಾಶ್ ರಾವ್
ರವಿ ಬೆಳೆಗೆರೆ ಕಥೆಗೂ ಇದಕ್ಕೂ ಸಂಬಂಧವಿಲ್ಲ ಎಂದ ಓಂ ಪ್ರಕಾಶ್ ರಾವ್
ಎಂಜಾಯ್ ಮಾಡ್ತಿರುವಾಗ್ಲೇ ದಾಳಿ: ಯುದ್ಧದ ಭಯಾನಕತೆ ಬಿಚ್ಚಿಟ್ಟ ಕನ್ನಡಿಗ
ಎಂಜಾಯ್ ಮಾಡ್ತಿರುವಾಗ್ಲೇ ದಾಳಿ: ಯುದ್ಧದ ಭಯಾನಕತೆ ಬಿಚ್ಚಿಟ್ಟ ಕನ್ನಡಿಗ
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ
ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?
ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?
‘ಜೂನ್, ಜುಲೈ ಒಳಗೆ ದರ್ಶನ್ ರಿಲೀಸ್’: ಭವಿಷ್ಯ ನುಡಿದ ಓಂ ಪ್ರಕಾಶ್ ರಾವ್
‘ಜೂನ್, ಜುಲೈ ಒಳಗೆ ದರ್ಶನ್ ರಿಲೀಸ್’: ಭವಿಷ್ಯ ನುಡಿದ ಓಂ ಪ್ರಕಾಶ್ ರಾವ್
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ