Petrol Diesel Rate: ಭಾನುವಾರ ಪೆಟ್ರೋಲ್​, ಡೀಸೆಲ್​ ಬೆಲೆಯಲ್ಲಿ ಬದಲಾವಣೆಗಳಿಲ್ಲ; ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿನ ದರ ವಿವರ ಹೀಗಿದೆ!

Petrol Diesel Price Today: ಮೇ 8ನೇ ತಾರೀಕಿನ ಮೊದಲು ತೈಲ ಮಾರುಕಟ್ಟೆ ಕಂಪನಿಗಳು ಸತತ ನಾಲ್ಕು ದಿನಗಳವರೆಗೆ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯನ್ನು ಹೆಚ್ಚಿಸಿದ್ದವು. ಮೇ 4ರಿಂದ ಇಲ್ಲಿಯವರೆಗೆ ತೈಲ ಬೆಲೆಗಳು ಗಮನಾರ್ಹವಾಗಿ ಏರಿಕೆಯಾಗಿದೆ.

Petrol Diesel Rate: ಭಾನುವಾರ ಪೆಟ್ರೋಲ್​, ಡೀಸೆಲ್​ ಬೆಲೆಯಲ್ಲಿ ಬದಲಾವಣೆಗಳಿಲ್ಲ; ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿನ ದರ ವಿವರ ಹೀಗಿದೆ!
ಸಾಂದರ್ಭಿಕ ಚಿತ್ರ
Follow us
| Updated By: ಆಯೇಷಾ ಬಾನು

Updated on:May 09, 2021 | 9:17 AM

ದೆಹಲಿ: ಪೆಟ್ರೋಲ್​ ಮತ್ತು ಡೀಸೆಲ್​ ದರದಲ್ಲಿ ಇಂದು (ಮೆ 9) ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ಏಕೆಂದರೆ ಸತತ ಎರಡನೇ ದಿನವೂ ತೈಲ ಮಾರುಕಟ್ಟೆ ಕಂಪನಿಗಳು ಬೆಲೆಯನ್ನು ಹೆಚ್ಚಿಸಿಲ್ಲ. ಮೇ 8ನೇ ತಾರೀಕಿನ ಮೊದಲು ತೈಲ ಮಾರುಕಟ್ಟೆ ಕಂಪನಿಗಳು ಸತತ ನಾಲ್ಕು ದಿನಗಳವರೆಗೆ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯನ್ನು ಹೆಚ್ಚಿಸಿದ್ದವು. ಮೇ 4ರಿಂದ ಇಲ್ಲಿಯವರೆಗೆ ತೈಲ ಬೆಲೆಗಳು ಗಮನಾರ್ಹವಾಗಿ ಏರಿಕೆಯಾಗಿದೆ. ಈ ಸಮಯದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರದಲ್ಲಿ 72 ಪೈಸೆಯಷ್ಟು ದುಬಾರಿಯಾಗಿದೆ. ಹಾಗೆಯೇ ಪ್ರತಿ ಲೀಟರ್​ ಡೀಸೆಲ್​ ದರದಲ್ಲಿ 82 ಪೈಸೆಯಷ್ಟು ಏರಿಕೆಯಾಗಿದೆ. ಕಳೆದ ಶುಕ್ರವಾರ ಪ್ರತಿ ಲೀಟರ್​ ಪೆಟ್ರೋಲ್​ ದರದಲ್ಲಿ 28 ಪೈಸೆ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರದಲ್ಲಿ 31 ಪೈಸೆ ಹೆಚ್ಚಳ ಮಾಡಲಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 91.27 ರೂಪಾಯಿ ಮತ್ತು ಪ್ರತಿ ಲೀಟರ್​ ಡೀಸೆಲ್​ ದರ 81.73 ರೂಪಾಯಿ ಇದೆ. ಅದೇ ರೀತಿ ಬೆಂಗಳೂರಿನಲ್ಲಿ ಇಂದು ಪ್ರತಿ ಲೀಟರ್​ ಪೆಟ್ರೋಲ್​ 94.30 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 86.64 ರೂಪಾಯಿ ಇದೆ. ಮುಂಬೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 97.61 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 88.82 ರೂಪಾಯಿ ಇದೆ. ಇನ್ನು, ಕೋಲ್ಕತ್ತಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 91.41 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 84.57 ರೂಪಾಯಿ ಇದೆ. ಚೆನ್ನೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 93.15 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 86.65 ರೂಪಾಯಿ ಇದೆ.

ಪೆಟ್ರೋಲ್​ ಮತ್ತು ಡೀಸೆಲ್​ ದರವನ್ನು ಪ್ರತಿನಿತ್ಯ 6 ಗಂಟೆಗೆ ಪರಿಷ್ಕರಿಸಲಾಗುತ್ತದೆ. ವಿದೇಶಿ ಮಿನಿಮಯ ದರಗಳ ಜೊತೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳ ಆಧಾರದ ಮೇಲೆ ಆ ದಿನದ ಪೆಟ್ರೋಲ್​, ಡೀಸೆಲ್ ದರ ನಿರ್ಧಾರವಾಗುತ್ತದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಪೆಟ್ರೋಲ್​, ಡೀಸೆಲ್​ ದರ ಗರಿಷ್ಠ ಮಟ್ಟದಲ್ಲಿದೆ. ರಾಜಸ್ಥಾನದ ಶ್ರೀಗಂಗನಗರದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 101.43 ರೂಪಾಯಿ ಇದೆ. ಪ್ರತಿ ಲೀಟರ್​ ಡೀಸೆಲ್​ ದರ 93.54 ರೂಪಾಯಿ ಇದೆ. ಹಾಗೂ ಮಧ್ಯಪ್ರದೇಶದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 101.15 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 91.56 ರೂಪಾಯಿ ಇದೆ.

ವಿವಿಧ ನಗರದಲ್ಲಿ ಪೆಟ್ರೋಲ್​ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:

https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.html

Published On - 9:16 am, Sun, 9 May 21

ಗಣ್ಯರ ಅಗಮನದಿಂದ ಮತ್ತಷ್ಟು ಹೆಚ್ಚಲಿದೆ ನೂಕುನುಗ್ಗಲು, ಪೊಲೀಸರಿಗೆ ಸವಾಲು
ಗಣ್ಯರ ಅಗಮನದಿಂದ ಮತ್ತಷ್ಟು ಹೆಚ್ಚಲಿದೆ ನೂಕುನುಗ್ಗಲು, ಪೊಲೀಸರಿಗೆ ಸವಾಲು
ಹೇಗಿತ್ತು ನೋಡಿ ‘ಟಾಕ್ಸಿಕ್’ ಸೆಟ್​ ಹಾಕಿದ ಪ್ರದೇಶ; ಇಲ್ಲಿದೆ ವಿಡಿಯೋ
ಹೇಗಿತ್ತು ನೋಡಿ ‘ಟಾಕ್ಸಿಕ್’ ಸೆಟ್​ ಹಾಕಿದ ಪ್ರದೇಶ; ಇಲ್ಲಿದೆ ವಿಡಿಯೋ
ಕೆಎಸ್​ಆರ್​ಟಿಸಿ ಐರಾವತ ಕ್ಲಬ್ ಕ್ಲಾಸ್ 2.0: ಹೊಸ ವೋಲ್ವೋ ವಿಶೇಷಗಳೇನು?
ಕೆಎಸ್​ಆರ್​ಟಿಸಿ ಐರಾವತ ಕ್ಲಬ್ ಕ್ಲಾಸ್ 2.0: ಹೊಸ ವೋಲ್ವೋ ವಿಶೇಷಗಳೇನು?
ಪಕ್ಕಾ ಪ್ಲ್ಯಾನ್ ಮಾಡಿ ಎಲ್ಲರನ್ನೂ ಹೊಡೆದ ಹನುಮಂತ; ತಂತ್ರಕ್ಕೆ ಎಲ್ಲರೂ ಶಾಕ್
ಪಕ್ಕಾ ಪ್ಲ್ಯಾನ್ ಮಾಡಿ ಎಲ್ಲರನ್ನೂ ಹೊಡೆದ ಹನುಮಂತ; ತಂತ್ರಕ್ಕೆ ಎಲ್ಲರೂ ಶಾಕ್
ಸಾಲಿಗ್ರಾಮ ಮನೆಯಲ್ಲಿದ್ದರೆ ಪೂಜಿಸುವುದು ಹೇಗೆಂದು ತಿಳಿಯಿರಿ
ಸಾಲಿಗ್ರಾಮ ಮನೆಯಲ್ಲಿದ್ದರೆ ಪೂಜಿಸುವುದು ಹೇಗೆಂದು ತಿಳಿಯಿರಿ
Nithya Bhavishya: ಜಲಪೂರ್ಣ ದಿನದಂದು ಯಾವ ರಾಶಿಗೆಲ್ಲಾ ಶುಭ, ಅಶುಭ
Nithya Bhavishya: ಜಲಪೂರ್ಣ ದಿನದಂದು ಯಾವ ರಾಶಿಗೆಲ್ಲಾ ಶುಭ, ಅಶುಭ
ವಿಡಿಯೋ: ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ
ವಿಡಿಯೋ: ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ
ಬಿಗ್ ಬಾಸ್ ಶೋನಿಂದ ಒಳ್ಳೆಯ ಪೇಮೆಂಟ್ ಸಿಕ್ತಾ? ಉತ್ತರ ನೀಡಿದ ಹಂಸಾ
ಬಿಗ್ ಬಾಸ್ ಶೋನಿಂದ ಒಳ್ಳೆಯ ಪೇಮೆಂಟ್ ಸಿಕ್ತಾ? ಉತ್ತರ ನೀಡಿದ ಹಂಸಾ
ಅಗಲಿದ ಪ್ರೀತಿಯ ಸಹೋದರನ ಸಮಾಧಿಗೆ ಶಿವಣ್ಣ ದಂಪತಿ ಪೂಜೆ
ಅಗಲಿದ ಪ್ರೀತಿಯ ಸಹೋದರನ ಸಮಾಧಿಗೆ ಶಿವಣ್ಣ ದಂಪತಿ ಪೂಜೆ
ಚನ್ನಪಟ್ಟಣ ಟಿಕೆಟ್ ತಪ್ಪಿತು ಯಾಕೆ ಅನ್ನೋದನ್ನು ವಿವರಿಸಿದ ರಘುನಂದನ್ ರಾಮಣ್ಣ
ಚನ್ನಪಟ್ಟಣ ಟಿಕೆಟ್ ತಪ್ಪಿತು ಯಾಕೆ ಅನ್ನೋದನ್ನು ವಿವರಿಸಿದ ರಘುನಂದನ್ ರಾಮಣ್ಣ